ಜನರಿಗೆ ಇಷ್ಟ ಆಗಿಲ್ಲ ಎಂದರೆ ನಾನೇ ಬಿಗ್ ಬಾಸ್ ಬಿಡ್ತೀನಿ ಎಂದಿದ್ದ ಸುದೀಪ್

| Updated By: ರಾಜೇಶ್ ದುಗ್ಗುಮನೆ

Updated on: Aug 22, 2024 | 7:46 AM

ಈ ಬಾರಿ ‘ಬಿಗ್ ಬಾಸ್ ಕನ್ನಡ ಸೀಸನ್ 11’ ಕಲರ್ಸ್ ಕನ್ನಡದಲ್ಲಿ ಪ್ರಸಾರ ಕಾಣಲಿದೆ. ಈ ರಿಯಾಲಿಟಿ ಶೋಗಾಗಿ ಫ್ಯಾನ್ಸ್ ಕಾದು ಕುಳಿತಿದ್ದಾರೆ. ಈ ಶೋ ಯಾವಾಗ ಪ್ರಸಾರ ಕಾಣಲಿದೆ ಎಂಬ ಕುತೂಹಲ ಪ್ರೇಕ್ಷಕರನ್ನು ಬಲವಾಗಿ ಕಾಡುತ್ತಿದೆ. ಈ ಮಧ್ಯೆ ಸುದೀಪ್ ಹೇಳಿದ್ದ ಹೇಳಿಕೆ ವೈರಲ್ ಆಗುತ್ತಿದೆ.

ಜನರಿಗೆ ಇಷ್ಟ ಆಗಿಲ್ಲ ಎಂದರೆ ನಾನೇ ಬಿಗ್ ಬಾಸ್ ಬಿಡ್ತೀನಿ ಎಂದಿದ್ದ ಸುದೀಪ್
ಸುದೀಪ್
Follow us on

ಕಿಚ್ಚ ಸುದೀಪ್ ಅವರು ‘ಬಿಗ್ ಬಾಸ್ ಕನ್ನಡ’ ತೊರೆಯುತ್ತಾರೆ ಎನ್ನುವ ಸುದ್ದಿ ಇತ್ತೀಚೆಗೆ ವೈರಲ್ ಆಗಿತ್ತು. ಈ ವಿಚಾರ ಕೇಳಿ ಅನೇಕರಿಗೆ ಶಾಕಿಂಗ್ ಎನಿಸಿತ್ತು. ಸುದೀಪ್ ಅವರು ಬಿಗ್ ಬಾಸ್ ತೊರೆಯುವ ನಿರ್ಧಾರ ಏಕೆ ಕೈಗೊಂಡರು ಎನ್ನುವ ಪ್ರಶ್ನೆ ಅನೇಕರನ್ನು ಕಾಡಿತ್ತು. ಆದರೆ, ಸುದೀಪ್ ಅವರು ಈ ಶೋನ ತೊರೆಯುತ್ತಿಲ್ಲ ಎಂದು ಹೇಳಲಾಗುತ್ತಿದೆ. ಹೀಗಿರುವಾಗಲೇ ಅವರು ಈ ಮೊದಲು ನೀಡಿದ ಹೇಳಿಕೆ ಒಂದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಅದರಲ್ಲಿ ಸುದೀಪ್ ಅವರು ಬಿಗ್ ಬಾಸ್ ತೊರೆಯೋದು ಯಾವಾಗ ಎಂದು ಹೇಳಿದ್ದರು.

ಬೇರೆ ಬೇರೆ ಭಾಷೆಗಳಲ್ಲಿ ‘ಬಿಗ್ ಬಾಸ್’ ಪ್ರಸಾರ ಕಂಡಿದೆ. ಬೇರೆ ಬೇರೆ ಹೀರೋಗಳು ಬೇರೆ ಬೇರೆ ಭಾಷೆಗಳಲ್ಲಿ ಶೋ ನಡೆಸಿಕೊಟ್ಟಿದ್ದಾರೆ. ಆದರೆ, ಸುದೀಪ್ ರೀತಿಯ ಸಾಧನೆಯನ್ನು ಯಾರೆಂದರೆ ಯಾರೂ ಮಾಡಿಲ್ಲ. ಸುದೀಪ್ ಅವರು ಈವರೆಗೆ 10 ಟಿವಿ ಸೀಸನ್, ಒಂದು ಒಟಿಟಿ ಸೀಸನ್ ಹಾಗೂ ಒಂದು ಮಿನಿ ಸೀಸನ್ ನಡೆಸಿಕೊಟ್ಟಿದ್ದಾರೆ. ಬೇರೆ ಭಾಷೆಗಳಲ್ಲಿ ಈ ರೀತಿಯ ಸಾಧನೆ ಆಗಿಲ್ಲ.

‘ಬಿಗ್ ಬಾಸ್​ನಲ್ಲಿ ಜನರು ನನ್ನನ್ನು ನೋಡೋಕೆ ಇಷ್ಟಪಡ್ತಾರಾ, ಮಾಡ್ತೀನಿ. ಇಷ್ಟ ಇಲ್ಲವೇ ಬೇರೆ ಯಾರೂ ಹೇಳಬೇಕಿಲ್ಲ. ನನಗೆ ಹಿಂಟ್ ಬರುತ್ತದೆ. ಪ್ರತಿ ಶನಿವಾರ ಹಾಗೂ ಭಾನುವಾರ ಜನರು ನೋಡ್ತಿದಾರೆ ಎಂದರೆ ಅದನ್ನು ನಾನು ಸಂಪಾದಿಸಿಕೊಂಡು ಬಂದಿದ್ದು. ನೋಡಿ ಎಂದು ನಾನು ಬಲವಂತ ಮಾಡಿಲ್ಲ, ಹೆದರಿಸಿಲ್ಲ. ಪ್ರೀತಿಯಿಂದ ಜನರು ನೋಡುತ್ತಾ ಇದಾರೆ. ನಾನು ಕಷ್ಟಪಟ್ಟು ಮಾಡಿದ ಸಂಪಾದನೆ ಮಾಡಿದ ಆಸ್ತಿ ಅದು. ನನಗೆ ಅದು ಇರೋವರೆಗೆ ನಾನು ಮಾಡ್ತೀನೀ’ ಎಂದು ಸುದೀಪ್ ಹೇಳಿದ್ದರು.

ಕಳೆದ ಸೀಸನ್ ಬಿಗ್ ಬಾಸ್ ಸಖತ್ ಜನಪ್ರಿಯತೆ ಪಡೆಯಿತು. ಸಾಕಷ್ಟು ವಿವಾದಗಳು ನಡೆದವು. ಇವುಗಳನ್ನು ಸುದೀಪ್ ಅವರು ಯಶಸ್ವಿಯಾಗಿ ನಿರ್ವಹಿಸಿದ್ದರು. ಸುದೀಪ್ ಅವರು ಖಡಕ್ ಆಗಿ ಪರಿಸ್ಥಿತಿಗಳನ್ನು ನಿಭಾಯಿಸಿದ್ದರು. ಈ ಮೂಲಕ ಅವರು ಅನೇಕರಿಗೆ ಇಷ್ಟ ಆಗಿದ್ದಾರೆ.

ಇದನ್ನೂ ಓದಿ: ‘ಬಿಗ್ ಬಾಸ್’ ಆರಂಭಕ್ಕೂ ಮುನ್ನ ಕಲರ್ಸ್​ನಲ್ಲಿ ಹೊಸ ಧಾರಾವಾಹಿ; ಮುಗಿಯೋ ಸೀರಿಯಲ್​ಗಳೆಷ್ಟು?

ಸದ್ಯ ಬಿಗ್ ಬಾಸ್ ಕನ್ನಡ ಸೀಸನ್ 11ರ ಪ್ರೋಮೋಶೂಟ್ ಪೂರ್ಣಗೊಂಡಿದೆ ಎಂದು ವರದಿ ಆಗಿದೆ. ಸುದೀಪ್ ಅವರು ಹೈದರಾಬಾದ್​ಗೆ ತೆರಳಿ ಅಲ್ಲಿ ಪ್ರೋಮೋಶೂಟ್ ಮಾಡಿಸಿದ್ದಾರಂತೆ. ಈ ಬಗ್ಗೆ ಕಲರ್ಸ್ ಕನ್ನಡದ ಕಡೆಯಿಂದ ಅಧಿಕೃತ ಅಪ್​ಡೇಟ್ ಸಿಗಲಿ ಎಂದು ಫ್ಯಾನ್ಸ್ ಕಾಯುತ್ತಿದ್ದಾರೆ. ಸುದೀಪ್ ಅವರು ‘ಮ್ಯಾಕ್ಸ್’ ಸಿನಿಮಾ ಶೂಟ್​ನಲ್ಲಿ ಬ್ಯುಸಿ ಇದ್ದಾರೆ. ಈ ಚಿತ್ರದ ಶೂಟಿಂಗ್ ಮುಗಿದು, ಪೋಸ್ಟ್ ಪ್ರೊಡಕ್ಷನ್​ ಕೆಲಸಗಳು ಅಂತ್ಯಗೊಂಡಿವೆ. ಇದರ ರಿಲೀಸ್ ಡೇಟ್ ರಿವೀಲ್ ಆಗಬೇಕಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.