‘ಬಿಗ್ ಬಾಸ್’ ಆರಂಭಕ್ಕೂ ಮುನ್ನ ಕಲರ್ಸ್ನಲ್ಲಿ ಹೊಸ ಧಾರಾವಾಹಿ; ಮುಗಿಯೋ ಸೀರಿಯಲ್ಗಳೆಷ್ಟು?
‘ಬಿಗ್ ಬಾಸ್ ಕನ್ನಡ ಸೀಸನ್ 11’ ಆರಂಭಕ್ಕೆ ಕ್ಷಣಗಣನೆ ಆರಂಭ ಆಗಿದೆ. ಈ ಬಗ್ಗೆ ಫ್ಯಾನ್ಸ್ಗೆ ದೊಡ್ಡ ಮಟ್ಟದ ನಿರೀಕ್ಷೆ ಇದೆ. ಈ ಮಧ್ಯೆ ‘ದೃಷ್ಟಿ ಬೊಟ್ಟು’ ಧಾರಾವಾಹಿ ಪ್ರಸಾರ ಕಾಣಲು ರೆಡಿ ಆಗಿದೆ. ಈ ಮಧ್ಯೆ ಕೆಲವು ಧಾರಾವಾಹಿಗಳು ಕೊನೆಗೊಳ್ಳಲಿದೆ ಎಂದು ಹೇಳಲಾಗುತ್ತಿದೆ.
ಈ ಬಾರಿ ‘ಬಿಗ್ ಬಾಸ್ ಕನ್ನಡ ಸೀಸನ್ 11’ ಕಲರ್ಸ್ ಕನ್ನಡದಲ್ಲಿ ಪ್ರಸಾರ ಕಾಣಲಿದೆ. ಈ ರಿಯಾಲಿಟಿ ಶೋಗಾಗಿ ಫ್ಯಾನ್ಸ್ ಕಾದು ಕುಳಿತಿದ್ದಾರೆ. ಈ ಶೋ ಯಾವಾಗ ಪ್ರಸಾರ ಕಾಣಲಿದೆ ಎಂಬ ಕುತೂಹಲ ಪ್ರೇಕ್ಷಕರನ್ನು ಬಲವಾಗಿ ಕಾಡುತ್ತಿದೆ. ಹೀಗಿರುವಾಗಲೇ ಕಲರ್ಸ್ ಕನ್ನಡದಲ್ಲಿ ಹೊಸ ಧಾರಾವಾಹಿ ಪ್ರಸಾರ ಕಾಣೋಕೆ ರೆಡಿ ಆಗಿದೆ. ಅದುವೇ ‘ದೃಷ್ಟಿಬೊಟ್ಟು’. ಇದರ ಜೊತೆಗೆ ಕೆಲವು ಧಾರಾವಾಹಿಗಳು ಪೂರ್ಣಗೊಳ್ಳಲಿವೆ ಎಂದು ಕೂಡ ಹೇಳಲಾಗುತ್ತಿದೆ.
‘ದೃಷ್ಟಿ ಬೊಟ್ಟು’ ಧಾರಾವಾಹಿಯಲ್ಲಿ ವಿಜಯ್ ಸೂರ್ಯ ಅವರು ನಟಿಸುತ್ತಿದ್ದಾರೆ. ಖಡಕ್ ಪಾತ್ರದಲ್ಲಿ ಅವರು ಕಾಣಿಸಿಕೊಂಡಿದ್ದಾರೆ. ಧಾರಾವಾಹಿಯಲ್ಲಿ ಅವರ ಹೆಸರು ದತ್ತಾ ಭಾಯ್. ಸಿನಿಮಾ ರೇಂಜ್ನ ಆ್ಯಕ್ಷನ್ ಈ ಧಾರಾವಾಹಿಯಲ್ಲಿ ಇದೆ. ವಿಜಯ್ ಸೂರ್ಯ ಫ್ಯಾನ್ಸ್ಗೆ ಈ ಧಾರಾವಾಹಿಯ ಪ್ರೋಮೋ ಸಖತ್ ಇಷ್ಟ ಆಗಿದೆ. ಈ ಧಾರಾವಾಹಿ ವೀಕ್ಷಕರಿಗೆ ಇಷ್ಟ ಆಗೋ ಸಾಧ್ಯತೆ ಇದೆ.
ಈ ಧಾರಾವಾಹಿ ಆರಂಭದ ಜೊತೆಗೆ ಒಂದಷ್ಟು ಧಾರಾವಾಹಿ ಪೂರ್ಣಗೊಳ್ಳೊಲಿದೆ ಎಂದು ಹೇಳಲಾಗುತ್ತಿದೆ. ಬಿಗ್ ಬಾಸ್ ಆರಂಭ ಆಗೋ ಸಂದರ್ಭದಲ್ಲಿ ಕಲರ್ಸ್ ಕನ್ನಡದ ಕೆಲವು ಧಾರಾವಾಹಿಗಳು ಕೊನೆಗೊಳ್ಳೋದು ವಾಡಿಕೆ. ಈ ಬಾರಿಯೂ ಅದೇ ರೀತಿ ಆಗಲಿದೆಯೇ ಎನ್ನುವ ಪ್ರಶ್ನೆ ವೀಕ್ಷಕರನ್ನು ಕಾಡಿದೆ. ಇದು ಸತ್ಯ ಎನ್ನುತ್ತಿವೆ ಮೂಲಗಳು.
ಇದನ್ನೂ ಓದಿ: ನೈಟ್ ಲೈಫ್ ಎಂಜಾಯ್ ಮಾಡಿದ ‘ಬಿಗ್ ಬಾಸ್’ ತನಿಷಾ ಕುಪ್ಪಂಡ
‘ಬಿಗ್ ಬಾಸ್ ಕನ್ನಡ ಸೀಸನ್ 11’ ಅನ್ನು ಸುದೀಪ್ ಅವರೇ ನಡೆಸಿಕೊಡುತ್ತಾರೆ ಎನ್ನಲಾಗಿದೆ. ಈ ಮೊದಲು ಸುದೀಪ್ ಅವರು ಬಿಗ್ ಬಾಸ್ನ ಭಾಗವಾಗಿ ಇರುವುದಿಲ್ಲ ಎಂದು ಕೆಲವರು ಹೇಳಿದ್ದರು. ಆದರೆ, ಆ ರೀತಿ ಇಲ್ಲ ಎಂದು ಕೆಲವು ಮೂಲಗಳು ಹೇಳುತ್ತಿವೆ. ಈಗಾಗಲೇ ಪ್ರೋಮೋಶೂಟ್ ಮುಗಿದಿದೆ ಎನ್ನಲಾಗಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.