ಬಿಗ್​ಬಾಸ್ ವೇದಿಕೆ ಮೇಲೆ ವರ್ತೂರು ಸಂತೋಷ್ ಅನ್ನು ನೆನಪಿಸಿಕೊಂಡ ಸುದೀಪ್

|

Updated on: Nov 17, 2024 | 10:14 AM

Bigg Boss Kannada season 11: ಬಿಗ್​ಬಾಸ್ ಕನ್ನಡ ವೀಕೆಂಡ್ ಎಪಿಸೋಡ್​ನಲ್ಲಿ ಕಿಚ್ಚ ಸುದೀಪ್ ಅವರು ಹಿಂದಿನ ಸೀಸನ್​ನಲ್ಲಿ ಸಖತ್ ಆಗಿ ಆಡಿ ಫಿನಾಲೆ ವಾರದ ಬಂದಿದ್ದ ವರ್ತೂರು ಸಂತೋಷ್ ಅನ್ನು ನೆನಪು ಮಾಡಿಕೊಂಡಿದ್ದಾರೆ.

ಬಿಗ್​ಬಾಸ್ ವೇದಿಕೆ ಮೇಲೆ ವರ್ತೂರು ಸಂತೋಷ್ ಅನ್ನು ನೆನಪಿಸಿಕೊಂಡ ಸುದೀಪ್
Follow us on

ಬಿಗ್​ಬಾಸ್ ಕನ್ನಡ ಸೀಸನ್ 11 ರ ವೀಕೆಂಡ್ ಎಪಿಸೋಡ್​ನಲ್ಲಿ ಸುದೀಪ್ ಇಂದು ತುಸು ಅಸಮಾಧಾನ, ಸಿಟ್ಟಿನಿಂದಲೇ ಸ್ಪರ್ಧಿಗಳೊಟ್ಟಿಗೆ ಮಾತನಾಡಿದರು. ಚೈತ್ರಾ ಕುಂದಾಪುರ ಮಾಡಿದ ಕೆಲಸ ಸುದೀಪ್​ಗೆ ತೀವ್ರ ಅಸಮಾಧಾನ ಮೂಡಿಸಿತ್ತು. ಮಾತ್ರವಲ್ಲದೆ ನೋಡುಗರ ಕಣ್ಣಿನಲ್ಲಿಯೂ ಬಿಗ್​ಬಾಸ್ ಎಂದರೆ ಹೀಗೆಯೇ ಏನೋ? ಬಿಗ್​ಬಾಸ್ ಒಳಗಿರುವವರಿಗೆ ಹೊರಗಿನ ಸಂಗತಿ ಗೊತ್ತಾಗುತ್ತದೆಯೇನೋ? ಅದಕ್ಕೆ ತಕ್ಕಂತೆ ಅವರು ಆಟವನ್ನು ಬದಲಾಯಿಸಿಕೊಂಡು ಆಡಬಹುದು ಎಂಬ ಅನುಮಾನ ಮೂಡುವಂತಾಗಿತ್ತು.

ಅನಾರೋಗ್ಯ ನೆಪ ಒಡ್ಡಿ ಆಸ್ಪತ್ರೆಗೆ ಹೋಗಿದ್ದ ಚೈತ್ರಾ ಕುಂದಾಪುರ, ಆಸ್ಪತ್ರೆಯಲ್ಲಿ ದಿನ ಕಳೆದಿದ್ದರು. ಮಾರನೇಯ ದಿನ ಬಿಗ್​ಬಾಸ್​ಗೆ ಮರಳಿದಾಗ ಅವರು ಇತರೆ ಸ್ಪರ್ಧಿಗಳ ಬಗ್ಗೆ ಹೊರಗೆ ಏನು ಅಭಿಪ್ರಾಯ ಇದೆ ಎಂಬುದನ್ನು ಹೇಳಿದರು. ಉಗ್ರಂ ಮಂಜು, ಧನರಾಜ್, ಹನುಮಂತು, ಮೋಕ್ಷಿತಾ, ತ್ರಿವಿಕ್ರಮ್, ಶಿಶಿರ್ ಇನ್ನಿತರೆ ಎಲ್ಲರ ಬಗ್ಗೆ ಹೊರಗೆ ಏನು ಅಭಿಪ್ರಾಯ ಇದೆ ಎಂದು ಹೇಳಿದರು. ಮಾತ್ರವಲ್ಲದೆ, ಅದನ್ನೆಲ್ಲ ಕತೆಗಳ ರೂಪದಲ್ಲಿ ಹೇಳಿದರು. ಇದು ಸುದೀಪ್​ಗೆ ತೀವ್ರ ಅಸಮಾಧಾನ ತರಿಸಿತ್ತು.

ಸುದೀಪ್ ವಿಚಾರಣೆ ಮಾಡುವಾಗ, ತಮಗೆ ಆಸ್ಪತ್ರೆಯ ವೈದ್ಯರು, ನರ್ಸ್​ ಅವರುಗಳು ಇದನ್ನೆಲ್ಲ ಹೇಳಿದರು ಎಂದು ಚೈತ್ರಾ ಹೇಳಿದರು ಇದು ಇನ್ನಷ್ಟು ಸಿಟ್ಟಿಗೆ ಕಾರಣವಾಯ್ತು. ಅಲ್ಲದೆ ಚೈತ್ರಾ, ತಮ್ಮ ಜೊತೆ ಇದ್ದ ಕೇರ್ ಟೇಕರ್ ಔಷಧಿ ತರಲು ಹೊರಗೆ ಹೋದ ಸಮಯ ನೋಡಿಕೊಂಡು ಕೆಲ ಮಾಹಿತಿಗಳನ್ನು ಸಂಗ್ರಹಿಸಿಕೊಂಡು ಒಳಗೆ ಬಂದು ಹೇಳಿದ್ದರು. ಇದರ ಬಗ್ಗೆ ಮಾತನಾಡುತ್ತಾ, ಚೈತ್ರಾ ಕುಂದಾಪುರ ಹಾಗೂ ಮನೆಯ ಇತರರಿಗೆ ಬುದ್ಧಿವಾದ ಹೇಳುತ್ತಿದ್ದ ಸುದೀಪ್, ಮಾತಿನ ಮಧ್ಯದಲ್ಲಿ ವರ್ತೂರು ಸಂತೋಷ್ ಅವರನ್ನು ನೆನಪು ಮಾಡಿಕೊಂಡರು.

ಇದನ್ನೂ ಓದಿ:ಚೈತ್ರಾ ಮೇಲೆ ಕೆರಳಿ ಕೆಂಡವಾದ ಕಿಚ್ಚ ಸುದೀಪ್: ಕಾರಣವೇನು?

ಹಿಂದಿನ ಸೀಸನ್​ನಲ್ಲಿ ಒಬ್ಬ ಸ್ಪರ್ಧಿ ಇದ್ದರು ವರ್ತೂರು ಸಂತೋಷ್ ಎಂದು ಅವರ ಹೆಸರು, ಅವರು ಹೊರಗೆ ಹೋಗಿ ಒಂದು ವಾರ ಪೂರ್ತಿ ಜೈಲಿನಲ್ಲಿದ್ದು ವಾಪಸ್ ಬಂದರು. ಆದರೆ ವಾಪಸ್ ಬಂದ ಮೇಲೆ ಒಬ್ಬೇ ಒಬ್ಬ ವ್ಯಕ್ತಿಗೆ ಸಹ ಹೊರಗೆ ಏನಾಯ್ತು ಎಂದು ಹೇಳಲಿಲ್ಲ ಎಂದರು. ಅದು ನಿಯಮಕ್ಕೆ ಕೊಡುವ ಗೌರವ. ಜಿನ್ಯೂನ್ ಆಗಿರಬೇಕು’ ಎಂದು ಕೊಂಡಾಡಿದರು ಸುದೀಪ್.

ಹುಲಿ ಉಗುರು ಪ್ರಕರಣದಲ್ಲಿ ವರ್ತೂರು ಸಂತೋಷ್ ಜೈಲಿಗೆ ಹೋದರು. ಜೈಲಿನಿಂದ ನೇರವಾಗಿ ಬಿಗ್​ಬಾಸ್ ಮನೆಗೆ ಬಂದರು. ಫಿನಾಲೆ ವರೆಗೆ ವರ್ತೂರು ಸಂತೋಷ್ ಬಿಗ್​ಬಾಸ್ ಮನೆಯಲ್ಲಿ ಇದ್ದರು. ಅವರಿಗೆ ತುಕಾಲಿ ಸಂತು, ತನಿಷಾ ಇನ್ನೂ ಕೆಲವರು ಬಹಳ ಕ್ಲೋಸ್ ಆಗಿದ್ದರು. ಆದರೆ ಯಾರೊಂದಿಗೂ ಸಹ ಜೈಲಿನ ವಿಷಯವಾಗಿ, ಮನೆಯ ಹೊರಗೆ ಏನು ನಡೆಯುತ್ತಿದೆ. ಯಾರು ಏನು ಹೇಳಿದರು. ಜನ ಹೇಗೆ ಪ್ರತಿಕ್ರಿಯೆ ನೀಡುತ್ತಿದ್ದಾರೆ ಇದ್ಯಾವುದನ್ನೂ ಸಹ ಹೇಳಿರಲಿಲ್ಲ. ಫಿನಾಲೆಗೆ ಕೆಲವು ಗಂಟೆಗಳಿದ್ದಾಗ, ಸ್ವತಃ ಸುದೀಪ್ ಹೇಳು ಎಂದು ಹೇಳಿದಾಗಲಷ್ಟೆ ಅವರು ಜೈಲಿನ ವಿಷಯ ಹೇಳಿದರು.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 11:40 pm, Sat, 16 November 24