AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಚೈತ್ರಾ ವಿರುದ್ಧ ಕೆರಳಿ ಕೆಂಡವಾದ ಕಿಚ್ಚ ಸುದೀಪ್: ಕಾರಣವೇನು?

Bigg Boss Kannada: 11 ವರ್ಷದಿಂದಲೂ ಬಿಗ್​ಬಾಸ್ ಕನ್ನಡ ನಿರೂಪಣೆ ಮಾಡುತ್ತಿದ್ದಾರೆ. ಆದರೆ ಅವರು ಬಿಗ್​ಬಾಸ್ ವೇದಿಕೆಯಲ್ಲಿ ತಾಳ್ಮೆ ಕಳೆದುಕೊಂಡಿರುವುದು ಬಹಳ ಕಡಿಮೆ. ಅದರಲ್ಲೂ ಮಹಿಳಾ ಸ್ಪರ್ಧಿಗಳ ಮೇಲೆ ಸಿಟ್ಟಿನಿಂದ ಮಾತನಾಡಿದ್ದು ಬಹುತೇಕ ಇಲ್ಲವೆಂದೇ ಹೇಳಬಹುದು. ಆದರೆ ಇಂದು ಸುದೀಪ್ ಸಿಟ್ಟಾದರು ಅಥವಾ ಅವರಿಗೆ ಸಿಟ್ಟು ಬರುವಂಥಹಾ ಸನ್ನಿವೇಶ ಮನೆಯಲ್ಲಿ ನಡೆಯಿತು. 

ಚೈತ್ರಾ ವಿರುದ್ಧ ಕೆರಳಿ ಕೆಂಡವಾದ ಕಿಚ್ಚ ಸುದೀಪ್: ಕಾರಣವೇನು?
Follow us
ಮಂಜುನಾಥ ಸಿ.
|

Updated on:Nov 16, 2024 | 11:31 PM

ಸುದೀಪ್, ಕಳೆದ 11 ವರ್ಷದಿಂದಲೂ ಬಿಗ್​ಬಾಸ್ ಕನ್ನಡ ನಿರೂಪಣೆ ಮಾಡುತ್ತಿದ್ದಾರೆ. ಆದರೆ ಅವರು ಬಿಗ್​ಬಾಸ್ ವೇದಿಕೆಯಲ್ಲಿ ತಾಳ್ಮೆ ಕಳೆದುಕೊಂಡಿರುವುದು ಬಹಳ ಕಡಿಮೆ. ತೀರ ಅಪರೂಪಕ್ಕೆ ಅವರು ಯಾರ ಮೇಲಾದರೂ ಸಿಟ್ಟು ಮಾಡಿಕೊಳ್ಳುತ್ತಾರೆ. ಅದರಲ್ಲೂ ಮಹಿಳಾ ಸ್ಪರ್ಧಿಗಳ ಮೇಲೆ ಸಿಟ್ಟಿನಿಂದ ಮಾತನಾಡಿದ್ದು ಬಹುತೇಕ ಇಲ್ಲವೆಂದೇ ಹೇಳಬಹುದು. ಆದರೆ ಇಂದು ಸುದೀಪ್ ಸಿಟ್ಟಾದರು ಅಥವಾ ಅವರಿಗೆ ಸಿಟ್ಟು ಬರುವಂಥಹಾ ಸನ್ನಿವೇಶ ಮನೆಯಲ್ಲಿ ನಡೆಯಿತು. ಸುದೀಪ್ ಸಿಟ್ಟಿಗೆ ಗುರಿಯಾಗಿದ್ದು ಚೈತ್ರಾ ಕುಂದಾಪುರ.

ಚೈತ್ರಾ ಕುಂದಾಪುರ, ಅನಾರೋಗ್ಯದ ಕಾರಣಕ್ಕೆ ಮನೆಯಿಂದ ಹೊರಗೆ ಹೋಗಿದ್ದರು. ಹೊರಗೆ ವೈದ್ಯರ ಬಳಿ ಚಿಕಿತ್ಸೆ ತೆಗೆದುಕೊಂಡು ಮರಳಿ ಬಂದರು. ಆದರೆ ಮರಳಿ ಬಂದ ಮೇಲೆ ಹೊರಗೆ ತಾನಗೆ ಹೊರಗಡೆ ಕೆಲವು ಹಿಂಟ್​ಗಳು ಸಿಕ್ಕಿವೆ, ಯಾರು ಹೇಗೆ ಆಟ ಆಡುತ್ತಿದ್ದಾರೆ ಎಂದು ಆಸ್ಪತ್ರೆಯ ಕೆಲ ಸಿಬ್ಬಂದಿ ನನಗೆ ಹೇಳಿದ್ದಾರೆ ಎಂದು ಹೇಳಿದ ಚೈತ್ರಾ ಕೆಲವು ಕತೆಗಳ ಮೂಲಕ, ಸಂಜ್ಞೆಗಳ ಮೂಲಕ ಮನೆಯವರಿಗೆ ಅದನ್ನು ಹೇಳಿದರು.

ಇದನ್ನೂ ಓದಿ:‘ನಿಮ್ಮ ಕ್ಷಮೆ ಯಾರಿಗೆ ಬೇಕು?’; ಕ್ಷಮೆಗೆ ಸ್ಪಂದಿಸದ ಚೈತ್ರಾಗೆ ಜೀವನ ಪರ್ಯಂತ ನೆನಪಿಟ್ಟುಕೊಳ್ಳುವ ಪಾಠ ಹೇಳಿದ ಸುದೀಪ್

ಸುದೀಪ್ ಇದೇ ವಿಷಯದ ಬಗ್ಗೆ ಚೈತ್ರಾ ಬಳಿ ಮಾತನಾಡುತ್ತಿದ್ದರು. ಇಂದಿನ ಎಪಿಸೋಡ್​ನಲ್ಲಿ ಬಹುತೇಕ ಚೈತ್ರಾ ಅವರ ಆಸ್ಪತ್ರೆ ವಿಷಯವೇ ಚರ್ಚೆ ಆಯಿತು. ಪ್ರತಿ ಬಾರಿ ಸುದೀಪ್ ಮಾತನಾಡುವಾಗಲೂ, ಅಥವಾ ಬೇರೊಬ್ಬರ ಅಭಿಪ್ರಾಯ ಕೇಳುವಾಗಲೂ ಸಹ ಚೈತ್ರಾ ಪದೇ ಪದೇ ಕೈ ಎತ್ತುವುದು, ಮಧ್ಯ ಮಾತನಾಡುವುದು ಮಾಡುತ್ತಲೇ ಇದ್ದರು. ಸುದೀಪ್ ಸಹ ಹೀಗೆ ಮಾಡೋದು ಬೇಡ, ಕೈ ಎತ್ತಿ ಮಾತನಾಡಿ ಎಂದು ಹೇಳಿದ್ದರು. ಆದರೆ ಚೈತ್ರಾ ಸುದೀಪ್ ಹೇಳಿದ ಮಾತು ಗಮನಕ್ಕೆ ತೆಗೆದುಕೊಳ್ಳದೆ ಮಧ್ಯೆ ಬಾಯಿ ಹಾಕಿದರು.

ಇದು ಸುದೀಪ್ ಅವರನ್ನು ಕೆರಳಿಸಿತು, ಒಂದೇ ಬಾರಿ ಸಿಟ್ಟಿನಿಂದ ಮಾತನಾಡಿದ ಸುದೀಪ್, ಚೈತ್ರಾಗೆ ಎಚ್ಚರಿಕೆ ನೀಡಿದರು. ಆದರೆ ಅದರ ಜೊತೆಗೆ ಸಮಾಧಾನಗೊಂಡು ‘ನಿಮ್ಮೊಡನೆ ಮಾನವೀಯತೆಯಿಂದ, ಪ್ರೀತಿಯಿಂದ ನಡೆದುಕೊಳ್ಳಲು ಅವಕಾಶ ಮಾಡಿಕೊಡಿ, ನನಗೆ ಅಗೌರವ ಮಾಡಬೇಡಿ, ನಾನು ಹೊರಗಡೆ ಜನರ ಪ್ರೀತಿಯನ್ನು ಸಂಪಾದಿಸಿದ್ದೇನೆ ಅದನ್ನು ಡಿಮ್ಯಾಂಡ್ ಮಾಡಿ ಸಂಪಾದಿಸಿಲ್ಲ, ಕಮಾಂಡ್ ಮಾಡಿ ಸಂಪಾದಿಸಿರೋದು, ಸಾಧ್ಯವಾದರೆ ನೀವು ಅದರಲ್ಲಿ ಸ್ವಲ್ಪ ಹಂಚಿಕೊಳ್ಳಿ’ ಎಂದರು. ಐದು ನಿಮಿಷದ ಮುಂಚೆ ನಾನು ನಿಮ್ಮ ಬಳಿ ದನಿ ಎತ್ತಿ ಮಾತನಾಡಿದೆ ಅದಕ್ಕೆ ನಾನು ಕ್ಷಮೆ ಕೇಳುತ್ತೀನಿ ಎಂದರು ಸುದೀಪ್, ಆದರೆ ಅದಕ್ಕೆ ಚೈತ್ರಾ ಕುಂದಾಪುರ ಯಾವುದೇ ಪ್ರತಿಕ್ರಿಯೆ ನೀಡಲಿಲ್ಲ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 11:11 pm, Sat, 16 November 24