AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮುಂದವರೆದ ನಟ ಕಿರಣ್ ರಾಜ್ ಸಾಮಾಜಿಕ ಕಾರ್ಯ: ಆಗ ಶಾಲೆ, ಈಗ ಆಶ್ರಮ

Kiran Raj: ನಟ ಕಿರಣ್ ರಾಜ್ ತಮ್ಮ ಸಾಮಾಜಿಕ ಕಾರ್ಯ ಮುಂದುವರೆಸಿದ್ದಾರೆ. ಈ ಹಿಂದೆ ಶಾಲೆಗಳ ದುರಸ್ತಿ, ಕೋವಿಡ್ ಸಮಯದಲ್ಲಿ ಹಲವರಿಗೆ ಸಹಾಯ ಮಾಡಿದ್ದ ಕಿರಣ್, ಈಗ ಆಶ್ರಮ ನಿರ್ಮಾಣಕ್ಕೆ ಕೈಲಾದ ಸಹಾಯ ಮಾಡಿದ್ದಾರೆ.

ಮುಂದವರೆದ ನಟ ಕಿರಣ್ ರಾಜ್ ಸಾಮಾಜಿಕ ಕಾರ್ಯ: ಆಗ ಶಾಲೆ, ಈಗ ಆಶ್ರಮ
ಕಿರಣ್ ರಾಜ್
ಮಂಜುನಾಥ ಸಿ.
|

Updated on: Jun 02, 2023 | 6:14 PM

Share

ಧಾರಾವಾಹಿ (Seirla) ನಟನಾಗಿ ಕನ್ನಡಿಗರ ಮನಗೆದ್ದು ಸಿನಿಮಾಗಳಲ್ಲಿಯೂ ನಟಿಸುತ್ತಿರುವ ನಟ ಕಿರಣ್ ರಾಜ್ (Kiran Raj) ಕೇವಲ ನಟನೆ ಮೂಲಕವೇ ಮಾತ್ರವಲ್ಲದೆ ತಮ್ಮ ಸಾಮಾಜಿಕ ಕಾರ್ಯಗಳ ಮೂಲಕವೂ ಗಮನ ಸೆಳೆಯುತ್ತಿದ್ದಾರೆ. ಪ್ರಸ್ತುತ ಅವರು ನಾಯಕನಾಗಿ ನಟಿಸುತ್ತಿರುವ “ರಾನಿ” ಚಿತ್ರದ ಚಿತ್ರೀಕರಣ (Shooting) ಬಿರುಸಿನಿಂದ ಸಾಗಿದೆ. ಈ ನಡುವೆ ಆಶ್ರಮವೊಂದರ ನಿರ್ಮಾಣಕ್ಕೆ ತಮ್ಮ ಕೈಲಾದ ಮಟ್ಟಿಗೆ ಸಹಾಯ ಮಾಡಿದ್ದು, ಸಹಾಯ ಸ್ವೀಕರಿಸಿದವರು ಕಿರಣ್ ರಾಜ್ ಸೇವೆಯನ್ನು ಮನಸಾರೆ ಹೊಗಳಿದ್ದಾರೆ.

ಪ್ರಸ್ತುತ ನಕ್ಷತ್ರ ಅವರ ನೇತೃತ್ವದಲ್ಲಿ ನಿರ್ಮಾಣವಾಗುತ್ತಿರುವ “ನಮ್ಮನೆ ಸುಮ್ಮನೆ ನಿರಾಶ್ರಿತರ ಆಶ್ರಮ” ಕ್ಕೆ ಕಿರಣ್ ರಾಜ್ ನೂರು ಮೂಟ್ಟೆ ಸಿಮೆಂಟ್ ನೀಡಿದ್ದಾರೆ. ಕಿರಣ್ ರಾಜ್ ಅವರ ಈ ಕಾರ್ಯಕ್ಕೆ ನಕ್ಷತ್ರ ಧನ್ಯವಾದ ತಿಳಿಸಿದ್ದಾರೆ. ಸುಮಾರು ಅರ್ಧ ಎಕರೆ ಪ್ರದೇಶದಲ್ಲಿ “ನಮ್ಮನೆ ಸುಮ್ಮನೆ ನಿರಾಶ್ರಿತರ ಆಶ್ರಮ” ಹೆಸರಿನ ಆಶ್ರಮವನ್ನು ನಕ್ಷತ್ರ ಅವರು ನಿರ್ಮಾಣ ಮಾಡುತ್ತಿದ್ದಾರೆ. ದೊಡ್ಡ ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ ಆಶ್ರಮಕ್ಕೆ ಹಲವು ವಸ್ತುಗಳ ಅಗತ್ಯವಿದೆ. ಇತ್ತೀಚೆಗೆ ಕಿರಣ್ ರಾಜ್ ಅವರನ್ನು ಭೇಟಿಯಾಗಿದ್ದ ನಕ್ಷತ್ರ, ಆಶ್ರಮ ನಿರ್ಮಾಣಕ್ಕೆ 100 ಮೂಟೆ ಸಿಮೆಂಟ್ ಕಡಿಮೆ ಆಗುತ್ತಿದೆ ಸಹಾಯ ಮಾಡಿ ಎಂದು ಕೇಳಿಕೊಂಡಿದ್ದರಂತೆ. ಕೂಡಲೇ ಸ್ಪಂದಿಸಿರುವ ಕಿರಣ್ ರಾಜ್, ನೂರು ಮೂಟೆ ಸಿಮೆಂಟ್ ಅನ್ನು ಒದಗಿಸಿದ್ದಾರೆ.

”ಕಿರಣ್ ರಾಜ್ ಅವರದ್ದು ದೊಡ್ಡ ಮನಸ್ಸು, ಕೇಳಿದ ಕೂಡಲೇ ನೂರು ಮೂಟೆ ಸಿಮೆಂಟ್ ಮೂಟೆ ಕೊಡಿಸಿದ್ದಾರೆ. ಪ್ರಚಾರ ಬೇಡ ಎಂದು ಅವರು ಹೇಳಿದ್ದರೂ ಆದರೆ ಅವರ ಸಹಾಯವನ್ನು ನೆನಯಬೇಕಿದೆ. ಈಗ ಸಿಮೆಂಟ್ ಮೂಟೆ ಕೊಡಿಸಿರುವುದು ಮಾತ್ರವೇ ಅಲ್ಲದೆ ಯಾವುದೇ ಸಮಯದಲ್ಲಿ ಸಹಾಯ ಬೇಕಿದ್ದರೂ ಸಂಪರ್ಕಿಸಿ ಕೈಲಾದ ಮಟ್ಟಿಗೆ ಸಹಾಯ ಮಾಡುತ್ತೇನೆ ಎಂದಿದ್ದಾರೆ. ಅವರ ರೀತಿಯ ವಿಶಾಲ ಮನಸ್ಸು ಎಲ್ಲರದ್ದೂ ಆಗಲಿ. ಬಡಜನರಿಗಾಗಿ, ನಿರ್ಗತಿಕರಿಗಾಗಿ ಮಾಡುತ್ತಿರುವ ಈ ಕಾರ್ಯಕ್ಕೆ ಇನ್ನೂ ಹಲವು ಕೈಗಳು ಜೊತೆಗೂಡಲಿ” ಎಂದಿದ್ದಾರೆ ನಕ್ಷತ್ರ.

ಇದನ್ನೂ ಓದಿ: ‘ಕನ್ನಡತಿ’ ಹೀರೋ ಕಿರಣ್​ ರಾಜ್​ ದುಡಿಮೆಯ ಶೇ.40ರಷ್ಟು ಹಣ ಬಡವರಿಗೆ ಮೀಸಲು

ಕಿರಣ್ ರಾಜ್ ಈ ಮೊದಲು ಸಹ ಅನೇಕ ಸಾಮಾಜಿಕ ಕಾರ್ಯಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ತಮ್ಮದೇ ಹೆಸರಿನ ಫೌಂಡೇಶನ್ ಹೊಂದಿರುವ ಅವರು, ಈ ಹಿಂದೆ ರಾಮಸಂದ್ರದ ಹಿರಿಯ ಪ್ರಾಥಮಿಕ ಪಾಠಶಾಲೆಯ ದುರಸ್ತಿ ಕಾರ್ಯ ಹಾಗೂ ಶಾಲೆಗೆ ಸುಣ್ಣ-ಬಣ್ಣ ಹೊಡೆಸಿದ್ದರು. ಅದಾದ ಬಳಿಕ ಕೋವಿಡ್ ಸಮಯದಲ್ಲಿ ಸಹ ಹಲವರಿಗೆ ಕಿರಣ್ ರಾಜ್ ತಮ್ಮದೇ ರೀತಿಯಲ್ಲಿ ನೆರವಾಗಿದ್ದರು. ಆಹಾರ ಸರಬರಾಜು, ಅಗತ್ಯ ವಸ್ತುಗಳ ವಿತರಣೆ, ಔಷಧ ವಿತರಣೆಗಳನ್ನು ಕಿರಣ್ ರಾಜ್ ಮಾಡಿದ್ದರು.

ಕಿರಣ್​ ರಾಜ್​ ತಮ್ಮ ಒಟ್ಟು ಆದಾಯದಲ್ಲಿ ಶೇ.40ರಷ್ಟು ಗಳಿಕೆಯನ್ನು ಕಷ್ಟದಲ್ಲಿರುವವರ ಸಹಾಯಕ್ಕೆ ಬಳಕೆ ಮಾಡಿಕೊಳ್ಳುತ್ತಿದ್ದಾರೆ. ವಿಶೇಷ ಎಂದರೆ, ತಮ್ಮ ಫೌಂಡೇಷನ್​ಗೆ ಬೇರೆಯವರಿಂದ ಹಣ ಪಡೆದಿಲ್ಲ. ತಮ್ಮ ದುಡಿಮೆಯ ಹಣವನ್ನೇ ಅವರು ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಆದರೆ, ಕೊರೊನಾ ಸಂಕಷ್ಟ ಹೆಚ್ಚಿದ ನಂತರದಲ್ಲಿ ಸಾಕಷ್ಟು ಜನರು ಧನಸಹಾಯ ಮಾಡೋಕೆ ಮುಂದೆ ಬಂದಿದ್ದರಂತೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us
ಮಂಜುನಾಥ ಸಿ.
ಮಂಜುನಾಥ ಸಿ.

ಮಂಜುನಾಥ ಸಿ, ಬೆಂಗಳೂರು ಗ್ರಾಮಾಂತರ, ವಿಜಯರಪುರ ಪಟ್ಟಣ ನಿವಾಸಿ. ಕಳೆದ ಏಳು ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಸಕ್ರಿಯನಾಗಿದ್ದೇನೆ. ಕಳೆದ ಐದು ವರ್ಷದಿಂದ ಡಿಜಿಟಲ್ ಪತ್ರಿಕೋದ್ಯಮದಲ್ಲಿ ತೊಡಗಿಕೊಂಡಿದ್ದೇನೆ. ಈ ಹಿಂದೆ ಪ್ರಜಾವಾಣಿ, ಒನ್ ಇಂಡಿಯಾ ಕನ್ನಡ ಸಂಸ್ಥೆಗಳ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡಿದ್ದೇನೆ. ಪ್ರಸ್ತುತ ಟಿವಿ9 ಕನ್ನಡ ಡಿಜಿಟಲ್​ನ ಸಿನಿಮಾ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಮೆಚ್ಚಿನ ಹವ್ಯಾಸ ಸಿನಿಮಾ ವೀಕ್ಷಣೆ, ಪುಸ್ತಕಗಳನ್ನು ಓದುವುದು.

Read More
ಸೌಜನ್ಯ ಕೇಸ್​​ ತನಿಖೆಗೆ SIT ಚಾಲನೆ: ಮೊದಲ ಸಭೆ, ಇನ್​ ಸೈಡ್​ ಮಾಹಿತಿ
ಸೌಜನ್ಯ ಕೇಸ್​​ ತನಿಖೆಗೆ SIT ಚಾಲನೆ: ಮೊದಲ ಸಭೆ, ಇನ್​ ಸೈಡ್​ ಮಾಹಿತಿ
ಸ್ಮಿತ್ ದೀರ್ಘಾಯುಷ್ಯಕ್ಕಾಗಿ ಸೋಮನಾಥ ದೇವಸ್ಥಾನದಲ್ಲಿ ಮಹಾಮೃತ್ಯುಂಜಯ ಜಪ
ಸ್ಮಿತ್ ದೀರ್ಘಾಯುಷ್ಯಕ್ಕಾಗಿ ಸೋಮನಾಥ ದೇವಸ್ಥಾನದಲ್ಲಿ ಮಹಾಮೃತ್ಯುಂಜಯ ಜಪ
ವಿಶೇಷಚೇತನರ ಪ್ರತಿಭಟನೆ: ಮಳೆಯಲ್ಲೇ ಸಮಸ್ಯೆ ಆಲಿಸಿದ ಆರ್​ ಅಶೋಕ್​​
ವಿಶೇಷಚೇತನರ ಪ್ರತಿಭಟನೆ: ಮಳೆಯಲ್ಲೇ ಸಮಸ್ಯೆ ಆಲಿಸಿದ ಆರ್​ ಅಶೋಕ್​​
ಸ್ಮಿತ್ ಮಚ್ಛಾರ್ ಚೇತರಿಕೆಗೆ ಕಾಶಿ ವಿಶ್ವನಾಥ ದೇವಸ್ಥಾನದಲ್ಲಿ ವಿಶೇಷ ಪೂಜೆ
ಸ್ಮಿತ್ ಮಚ್ಛಾರ್ ಚೇತರಿಕೆಗೆ ಕಾಶಿ ವಿಶ್ವನಾಥ ದೇವಸ್ಥಾನದಲ್ಲಿ ವಿಶೇಷ ಪೂಜೆ
ಸೆಷನ್ಸ್ ಕೋರ್ಟ್‌ಗೆ ಮರು ಅರ್ಜಿ ಸಲ್ಲಿಸಲು ಪ್ರಿಯಾಂಕ್, ನಲಪಾಡ್‌ಗೆ ಸೂಚನೆ
ಸೆಷನ್ಸ್ ಕೋರ್ಟ್‌ಗೆ ಮರು ಅರ್ಜಿ ಸಲ್ಲಿಸಲು ಪ್ರಿಯಾಂಕ್, ನಲಪಾಡ್‌ಗೆ ಸೂಚನೆ
ಯೋಗೇಶ್​​ ಗೌಡ ಕೊಲೆ ಕೇಸ್​​: ವಿನಯ್​​ ಕುಲಕರ್ಣಿಗೆ 'ಸುಪ್ರೀಂ' ಸಂಕಷ್ಟ?
ಯೋಗೇಶ್​​ ಗೌಡ ಕೊಲೆ ಕೇಸ್​​: ವಿನಯ್​​ ಕುಲಕರ್ಣಿಗೆ 'ಸುಪ್ರೀಂ' ಸಂಕಷ್ಟ?
ಬೋಗಸ್ ಫಾರ್ಮ್ ನೀಡಿ ಮತದಾರರ ಹೆಸರು ಡಿಲೀಟ್ ಆರೋಪ:  25 ಜನರ ವಿರುದ್ಧ FIR
ಬೋಗಸ್ ಫಾರ್ಮ್ ನೀಡಿ ಮತದಾರರ ಹೆಸರು ಡಿಲೀಟ್ ಆರೋಪ:  25 ಜನರ ವಿರುದ್ಧ FIR
ಉತ್ತರಾಖಂಡದಲ್ಲಿ ಭಾರೀ ಭೂಕುಸಿತ; ಗುಡ್ಡ ಕುಸಿಯುವ ಭಯಾನಕ ವಿಡಿಯೋ ವೈರಲ್
ಉತ್ತರಾಖಂಡದಲ್ಲಿ ಭಾರೀ ಭೂಕುಸಿತ; ಗುಡ್ಡ ಕುಸಿಯುವ ಭಯಾನಕ ವಿಡಿಯೋ ವೈರಲ್
ಸೌಜನ್ಯ ಕೇಸ್​ ತನಿಖೆಗೆ ಮಂಗಳೂರಲ್ಲಿ ಎಸ್​ಐಟಿ ಕಚೇರಿ ಓಪನ್: ಮೊದಲ ಸಭೆ
ಸೌಜನ್ಯ ಕೇಸ್​ ತನಿಖೆಗೆ ಮಂಗಳೂರಲ್ಲಿ ಎಸ್​ಐಟಿ ಕಚೇರಿ ಓಪನ್: ಮೊದಲ ಸಭೆ
ಕುರುಡುಮಲೆ ವಿನಾಯಕ ದೇಗುಲದಲ್ಲಿ ಮೋದಿ ಹೆಸರಲ್ಲಿ ಬಿ.ವೈ.ವಿಜಯೇಂದ್ರ ಪೂಜೆ
ಕುರುಡುಮಲೆ ವಿನಾಯಕ ದೇಗುಲದಲ್ಲಿ ಮೋದಿ ಹೆಸರಲ್ಲಿ ಬಿ.ವೈ.ವಿಜಯೇಂದ್ರ ಪೂಜೆ