Bigg Boss Kannada: ‘ಬಿಗ್​ ಬಾಸ್​’ ಮನೆಗೆ ಬಂದ ‘ಲಕ್ಷಣ’ ಧಾರಾವಾಹಿ ನಟಿ ಭಾಗ್ಯಶ್ರೀ; ವೀಕ್ಷಕರಿಂದ ಸಖತ್​ ಮೆಚ್ಚುಗೆ

| Updated By: ರಾಜೇಶ್ ದುಗ್ಗುಮನೆ

Updated on: Oct 09, 2023 | 9:04 AM

ಕನ್ನಡದ ಬಿಗ್ ಬಾಸ್​ ಕಾರ್ಯಕ್ರಮಕ್ಕೆ ಈ ವರ್ಷ 10ರ ಸಂಭ್ರಮ. ಹತ್ತನೇ ಸೀಸನ್​ ಆದ್ದರಿಂದ ಸಂಭ್ರಮ ಜೋರಾಗಿದೆ. ಕಿಚ್ಚ ಸುದೀಪ್​ ಅವರು ಎಂದಿನ ಹುಮ್ಮಸ್ಸಿನಲ್ಲಿ ಕಾರ್ಯಕ್ರಮ ನಡೆಸಿಕೊಡುತ್ತಿದ್ದಾರೆ. ‘ಲಕ್ಷಣ’ ಧಾರಾವಾಹಿ ನಟಿ ಭಾಗ್ಯಶ್ರೀ ಅವರು ಈ ರಿಯಾಲಿಟಿ ಶೋಗೆ ಬಂದಿದ್ದಾರೆ. ಅದ್ದೂರಿಯಾಗಿ ಶೋಗೆ ಚಾಲನೆ ಸಿಕ್ಕಿದೆ.

Bigg Boss Kannada: ‘ಬಿಗ್​ ಬಾಸ್​’ ಮನೆಗೆ ಬಂದ ‘ಲಕ್ಷಣ’ ಧಾರಾವಾಹಿ ನಟಿ ಭಾಗ್ಯಶ್ರೀ; ವೀಕ್ಷಕರಿಂದ ಸಖತ್​ ಮೆಚ್ಚುಗೆ
ಭಾಗ್ಯಶ್ರೀ
Follow us on

ಡಿಫರೆಂಟ್​ ಸ್ವಭಾವದ ವ್ಯಕ್ತಿಗಳು ಬಿಗ್​ ಬಾಸ್​ ಮನೆಗೆ ಪ್ರವೇಶ ಪಡೆದಿದ್ದಾರೆ. ವಿನಯ್​, ನೀತು ವನಜಾಕ್ಷಿ, ನಮ್ರತಾ ಗೌಡ, ಸ್ನೇಹಿತ್​ ಗೌಡ, ಈಶಾನಿ, ತುಕಾಲಿ ಸಂತೋಷ್​, ಸಿರಿ ಸೇರಿದಂತೆ ಹಲವು ಸೆಲೆಬ್ರಿಟಿಗಳು ದೊಡ್ಮನೆ ಒಳಗೆ ಬಂದಿದ್ದಾರೆ. 9ನೇ ಸ್ಪರ್ಧಿಯಾಗಿ ಕಿರುತೆರೆಯ ‘ಲಕ್ಷಣ’ ಧಾರಾವಾಹಿ (Lakshana Serial) ನಟಿ ಭಾಗ್ಯಶ್ರೀ ಅವರು ಈ ರಿಯಾಲಿಟಿ ಶೋಗೆ ಬಂದಿದ್ದಾರೆ. ಝಗಮಗಿಸುವ ವೇದಿಕೆಯಲ್ಲಿ ‘ಬಿಗ್​ ಬಾಸ್​ ಕನ್ನಡ ಸೀಸನ್​ 10’ (Bigg Boss Kannada Season 10) ಕಾರ್ಯಕ್ರಮಕ್ಕೆ ಚಾಲನೆ ಸಿಕ್ಕಿದೆ. ಸಮಾಜಸೇವೆ, ಕಿರುತೆರೆ, ಸಿನಿಮಾ ಮುಂತಾದ ಕ್ಷೇತ್ರಗಳಲ್ಲಿ ಗುರುತಿಸಿಕೊಂಡವರು ಮಾತ್ರವಲ್ಲದೇ ಒಂದಷ್ಟು ವಿವಾದ ಮಾಡಿಕೊಂಡವರು ಕೂಡ ಬಿಗ್​ ಬಾಸ್​ (Bigg Boss Kannada) ಶೋಗೆ ಕಾಲಿಟ್ಟಿದ್ದಾರೆ. ಎಲ್ಲರನ್ನೂ ಸುದೀಪ್​ ಅವರು ಆಡಿಯನ್ಸ್​ ವೋಟಿಂಗ್​ ಮೂಲಕ ಆಯ್ಕೆ ಮಾಡಿ ಒಳಗೆ ಕಳಿಸಿದ್ದಾರೆ. ಈ ರಿಯಾಲಿಟಿ ಶೋ ‘ಜಿಯೋ ಸಿನಿಮಾ’ ಒಟಿಟಿಯಲ್ಲಿ 24 ಗಂಟೆಯೂ ಉಚಿತವಾಗಿ ಪ್ರಸಾರ ಆಗಲಿದೆ.

ಕನ್ನಡದ ಬಿಗ್ ಬಾಸ್​ ಕಾರ್ಯಕ್ರಮಕ್ಕೆ ಈ ವರ್ಷ 10ರ ಸಂಭ್ರಮ. ಹತ್ತನೇ ಸೀಸನ್​ ಆದ್ದರಿಂದ ಸಂಭ್ರಮ ಜೋರಾಗಿದೆ. ಕಿಚ್ಚ ಸುದೀಪ್​ ಅವರು ಎಂದಿನ ಹುಮ್ಮಸ್ಸಿನಲ್ಲಿ ಕಾರ್ಯಕ್ರಮ ನಡೆಸಿಕೊಡುತ್ತಿದ್ದಾರೆ. ಹೊಸದಾಗಿ ನಿರ್ಮಾಣ ಆಗಿರುವ ದೊಡ್ಮನೆಯ ವಿನ್ಯಾಸ ಬಹಳ ವಿಶೇಷವಾಗಿದೆ. ಹೊಸ ನಿಯಮಗಳನ್ನು ಕೂಡ ಸೇರ್ಪಡೆ ಮಾಡಲಾಗಿದೆ. ಈ ಎಲ್ಲ ಕಾರಣಗಳಿಂದಾಗಿ ‘ಬಿಗ್​ ಬಾಸ್​ ಕನ್ನಡ ಸೀಸನ್​ 10’ ಮೇಲಿನ ಹೈಪ್​ ಹೆಚ್ಚಾಗಿದೆ.

Bigg Boss Kannada: ‘ರಂಗೋಲಿ’ ನಟಿ ಸಿರಿ ಈಗ ಬಿಗ್​ ಬಾಸ್​ ಸ್ಪರ್ಧಿ; 7ನೇ ಕಂಟೆಸ್ಟೆಂಟ್​ ಆಗಿ ದೊಡ್ಮನೆ ಪ್ರವೇಶ

ಕನ್ನಡ ಕಿರುತೆರೆಯ ಫೇಮಸ್​ ನಟಿ:

‘ಲಕ್ಷಣ’ ಧಾರಾವಾಹಿಯಲ್ಲಿ ನಟಿಸಿರುವ ಭಾಗ್ಯಶ್ರೀ ಅವರಿಗೆ ಕಿರುತೆರೆಯಲ್ಲಿ ಹಲವು ವರ್ಷಗಳ ಅನುಭವ ಇದೆ. ‘ಇದು ದೊಡ್ಡ ಚಾಲೆಂಜಿಂಗ್​. ಇದನ್ನು ನಾನು ಸ್ವೀಕರಿಸಬೇಕು. ಹಾಗಾಗಿ ಬಿಗ್​ ಬಾಸ್​ ಆಯೋಜಕರಿಂದ ಕರೆ ಬಂದಾಗ ನೋ ಎನ್ನಲಿಲ್ಲ. ಬದುಕು ನನಗೆ ಸಾಕಷ್ಟು ಪಾಠಗಳನ್ನು ಕಲಿಸಿದೆ. ಪ್ರೇಕ್ಷಕರಿಗೆ ನಾನು ಇಷ್ಟ ಆಗುತ್ತೇನೆ ಎಂಬ ಭರವಸೆ ನನಗಿದೆ. ಯಾವಾಗಲೂ ಖುಷಿಯಾಗಿ ಇರುವುದು ಹೇಗೆ ಎಂಬುದನ್ನು ತಿಳಿಸಿಕೊಡಲು ನಾನು ಬಂದಿದ್ದೇನೆ’ ಎಂದಿದ್ದಾರೆ ಭಾಗ್ಯಶ್ರೀ.

ನಿರೀಕ್ಷಿತ ಪ್ರಮಾಣದಲ್ಲಿ ಆಡಿಯನ್ಸ್​ ವೋಟಿಂಗ್​ ಪಡೆಯದೇ ರಕ್ಷತ್​, ವರ್ತೂರು ಸಂತೋಷ್​, ಚಿತ್ರಾಲ್​, ಸಂಗೀತಾ ಶೃಂಗೇರಿ, ಡ್ರೋನ್​ ಪ್ರತಾಪ್​ ಅವರು ಹೋಲ್ಡ್​ನಲ್ಲಿ ಇದ್ದಾರೆ. ಆದರೆ ಈ ವಿಚಾರದಲ್ಲಿ ಭಾಗ್ಯಶ್ರೀ ಅವರು ವೀಕ್ಷಕರಿಂದ ಮೆಚ್ಚುಗೆ ಪಡೆದಿದ್ದಾರೆ. ಆಡಿಯನ್ಸ್​ ವೋಟಿಂಗ್​ನಲ್ಲಿ ಶೇಕಡ 80 ಬಂದಿರಬಹುದು ಎಂದು ಭಾಗ್ಯಶ್ರೀ ಊಹಿಸಿದರು. ನಿರೀಕ್ಷೆಯಂತೆಯೇ 81 ಪರ್ಸೆಂಟ್​ ವೋಟ್​ ಪಡೆದು ಅವರು ಬಿಗ್​ ಬಾಸ್​ ಮನೆಗೆ ಎಂಟ್ರಿ ನೀಡಿದರು.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Published On - 10:47 pm, Sun, 8 October 23