ಕಲರ್ಸ್ ಕನ್ನಡ ವಾಹಿನಿಯ ಲಕ್ಷಣ ಧಾರವಾಹಿ ವಿಶಿಷ್ಟ ಹಾಗೂ ಕುತೂಹಲಭರಿತ ಕಥೆಯಿಂದ ವಿಕ್ಷಕರಿಗೆ ತುಂಬಾನೇ ಹತ್ತಿರವಾಗಿದೆ. ಭೂಪತಿಯ ಮನೆ ಸೇರಿಕೊಳ್ಳಲು ಹೊಸ ಸಂಚು ರೂಪಿಸಿ ಎಲ್ಲರನ್ನೂ ಅಂದ್ರೆ ನಕ್ಷತ್ರ, ಶಕುಂತಳಾದೇವಿ, ಸೃಷ್ಠಿ ಹಾಗೂ ಮಿಲ್ಲಿಯನ್ನು ಕೂಡಾ ದೇವಸ್ಥಾನಕ್ಕೆ ಬರುವ ಹಾಗೆ ಮಾಡಿದ್ದಾಳೆ ಶ್ವೇತಾ. ಶಕುಂತಳಾದೇವಿಯನ್ನು ಬುಟ್ಟಿಗೆ ಹಾಕಿಕೊಳ್ಳುವ ಸಲುವಾಗಿ ಸರಿಯಾದ ಪ್ಲಾನ್ ಮಾಡಿಕೊಂಡೇ ಮಿಲ್ಲಿ ಹಾಗೂ ಸೃಷ್ಟಿಯನ್ನು ಬನಶಂಕರಿ ದೇವಸ್ಥಾನಕ್ಕೆ ಕರೆದುಕೊಂಡು ಬರುತ್ತಾಳೆ.
ಆದರೆ ಸೃಷ್ಟಿಗೆ ಶ್ವೇತಾಳ ಕುತಂತ್ರದ ಬಗ್ಗೆ ಒಂದು ಸಣ್ಣ ಸುಳಿವು ಕೂಡಾ ಗೊತ್ತಿರುವುದಿಲ್ಲ. ಅಂತೂ ಇಂತೂ ಇವರುಗಳು ದೇವಸ್ಥಾನಕ್ಕೆ ತಲುಪಿದಾಗ ಶ್ವೇತಾ ಅತ್ತೆ ಎಲ್ಲಿ ಅವರ ಕಾರ್ ಎಲ್ಲಿ ನಿಲ್ಲಿಸಿರಬಹುದೆಂದು ಹುಡುಕಾಡುತ್ತಿರುವಾಗ, ಬೇಗ ಬಾ ನನಗೆ ಮನೆಯಲ್ಲಿ ತುಂಬಾ ಕೆಲಸ ಇದೆ ಇದೆ ಎಂದು ಸೃಷ್ಟಿ ಅವಳನ್ನು ಪೂಜೆ ಮಾಡಲು ಬರುವಂತೆ ಹೇಳುತ್ತಾಳೆ. ಅತ್ತೆ ಬಂದ ಕೂಡಲೇ ನನಗೆ ತಿಳಿಸು ಎಂದು ಮಿಲ್ಲಿಯ ಬಳಿ ಹೇಳಿ ಶ್ವೇತಾ ಅಕ್ಕನ ಜೊತೆ ದೇವಾಲಯದ ಒಳಗಡೆ ಹೋಗುತ್ತಾಳೆ.
ಪೂಜೆ ಮಾಡಲು ಕರ್ಪೂರ ಹಾಗೂ ಅಗರಬತ್ತಿಯನ್ನು ತರಲು ಮರೆತಿದ್ದ ಸೃಷ್ಟಿ ಚಿಲ್ಲರೆ ಹಣ ಕೊಟ್ಟು ಅಗರಬತ್ತಿ ತರುವಂತೆ ಶ್ವೇತಾಳಿಗೆ ಹೇಳುತ್ತಾಳೆ. ನನಗೇನೆ ಚಿಲ್ಲರೆ ಹಣ ಕೊಡುತ್ತೀಯ ಎಂದು ಹೇಳಿ ಕೋಪದಿಂದ ಹೋಗುವಾಗ ಶಕುಂತಳಾದೇವಿ ಕಾರ್ ಇಳಿದು ದೇವಸ್ಥಾನಕ್ಕೆ ಬರುವ ದೃಶ್ಯ ಶ್ವೇತಾಳ ಕಣ್ಣಿಗೆ ಬೀಳುತ್ತದೆ. ತಕ್ಷಣ ಅಲರ್ಟ್ ಆದ ಆಕೆ ತನ್ನ ಮುಂದಿನ ಪ್ಲಾನ್ ಕಾರ್ಯ ರೂಪಕ್ಕೆ ತರಲು ಸೃಷ್ಟಿಯ ಬಳಿ ಓಡಿ ಹೋಗುತ್ತಾಳೆ. ಶ್ವೇತಾ ಖಾಲಿ ಕೈಯಲ್ಲಿ ಬಂದಿರುವುದನ್ನು ಕಂಡು ಅಗರಬತ್ತಿ ಎಲ್ಲಿ ಎಂದು ಕೇಳುತ್ತಾಳೆ.
ಅಲ್ಲಿಯವರೆಗೆ ಮೃದು ಮಾತುಗಳನ್ನಾಡುತ್ತಿದ್ದ ಶ್ವೇತಾ ಆಕೆ ಪ್ಲಾನ್ ಮಾಡಿದ ಪ್ರಕಾರ ಸೃಷ್ಟಿಗೆ ಬೈಯುತ್ತಾಳೆ. ಅಗರಬತ್ತಿ ತರಲ್ಲ ಏನು ಮಾಡುತ್ತಿಯಾ, ಎಂದು ಹೇಳಿ ಸೃಷ್ಟಿಯ ಕಪಾಳಕ್ಕೆ ಸರಿಯಾಗಿ ಬಾರಿಸುತ್ತಾಳೆ. ಇದಲ್ಲಾ ಚೆನ್ನಾಗಿರಲ್ಲಾ ಶ್ವೇತಾ ಸುಮ್ಮನಿರು ಎಂದು ಆಕೆಯ ಅಕ್ಕ ಹೇಳಿದರೂ ಹೊಡೆಯವುದನ್ನು ನಿಲ್ಲಿಸುವುದಿಲ್ಲ. ಇದರಿಂದ ಕೋಪಗೊಂಡ ಸೃಷ್ಟಿಯೇ ತಿರುಗಿಸಿ ಶ್ವೇತಾಳ ಕಪಾಳಕ್ಕೆ ಜೋರಾಗಿ ಹೊಡೆಯುತ್ತಾಳೆ.
ಇದನ್ನು ಓದಿ: Lakshana Serial: ಶ್ವೇತಾಳ ಮುಖಾಂತರ ನಕ್ಷತ್ರಳ ಸಂಸಾರ ನಾಶ ಮಾಡಲು ಹೊರಟಿದ್ದಾಳೆ ಭಾರ್ಗವಿ
ಅದೇ ಹೊತ್ತಿಗೆ ಶ್ವೇತಾಳ ಪ್ಲಾನ್ ಪ್ರಕಾರ ಶಕುಂತಳಾದೇವಿ ಅಲ್ಲಿಗೆ ಬರುತ್ತಾರೆ. ಸೃಷ್ಟಿ ಶ್ವೇತಾಳ ಮೇಲೆ ಕೈ ಮಾಡೋದನ್ನು ಕೂಡಾ ನೋಡಿ ಕೋಪಗೊಂಡು ಇಲ್ಲಿ ಏನು ನಡೆತಿದೆ, ಸ್ವಂತ ತಂಗಿಯ ಮೇಲೆನೇ ಕೈ ಮಾಡುತ್ತಿಯಾ ಎಂದು ಸೃಷ್ಟಿಗೆ ಒಂದೇ ಸಮನೇ ಬೈತಾರೆ. ಶ್ವೇತಾಳ ಮೇಲಿನ ಕುರುಡು ನಂಬಿಕೆಯಿಂದ ಸೃಷ್ಟಿಯ ಮಾತನ್ನು ಕೇಳಲು ತಯಾರಿರದ ಶಕುಂತಳಾದೇವಿ, ಶ್ವೇತಾಳಿಗೆ ಸಮಧಾನ ಮಾಡುತ್ತಾ ನನ್ನ ಮನೆಗೆ ನೀನು ಬಾ. ಅಲ್ಲಿ ನಿನಗೆ ಯಾರು ತೊಂದರೆ ಕೊಡುವವರು ಇರಲ್ಲ ಎಂದು ಹೇಳುತ್ತಾರೆ.
ಇದರಿಂದ ಸಂತೋಷಗೊಂಡ ಶ್ವೇತಾ, ತನ್ನ ಪ್ಲಾನ್ ಸರಿಯಾಗಿ ಕೆಲಸ ಮಾಡುತ್ತಿದೆ ಎಂದು ಅಂದಕೊಳ್ಳುತ್ತಾಳೆ. ಅಷ್ಟರಲ್ಲಿ ನಕ್ಷತ್ರ ಕೂಡಾ ದೇವಸ್ಥಾನಕ್ಕೆ ಬರುತ್ತಾಳೆ. ನಕ್ಷತ್ರಳ ಒಳ್ಳೆಯತನದ ಬಗ್ಗೆ ಕಿಂಚಿತ್ತು ಅರಿವಿಲ್ಲದ ಶಕುಂತಳಾದೇವಿ ಶ್ವೇತಾಳನ್ನು ವಹಿಸಿಕೊಂಡು ಮಾತನಾಡುತ್ತಾರೆ. ಅತ್ತೆ ಮನೆಗೆ ಕರೆದರೂ ನಾನು ನನ್ನ ಅಪ್ಪನ ಮನೆ ಬಿಟ್ಟು ಬರುವುದಿಲ್ಲ ಎಂದು ಶ್ವೇತಾ ನಾಟಕವಾಡುತ್ತಾಳೆ. ಈಕೆಯ ಈ ನಡೆಯಿಂದ ನಕ್ಷತ್ರಳಿಗೆ ಇವಳೇನೋ ಕುತಂತ್ರ ಮಾಡಿದ್ದಾಳೆ ಎನ್ನುವಂತಹದ್ದು ತಿಳಿಯುತ್ತದೆ. ಅಂತೂ ಇಂತೂ ಶ್ವೇತಾ ಪ್ಲಾನ್ ಫಲಿಸಿದೆ. ಮುಂದೆ ಅತ್ತೆಯ ಮಾತಿಗೆ ಬೆಲೆ ಕೊಟ್ಟು ಶ್ವೇತಾ ಭೂಪತಿ ಮನೆಗೆ ಸೇರಿಕೊಳ್ಳುತ್ತಾಳಾ ಎನ್ನುವುದನ್ನು ಮುಂದಿನ ಸಂಚಿಕೆಯಲ್ಲಿ ಕಾದು ನೋಡಬೇಕಾಗಿದೆ.
ಮಧುಶ್ರೀ