ಜಗದೀಶ್ ಅವರು ಬಿಗ್ ಬಾಸ್ ಮನೆಯಲ್ಲಿ ಪದೇ ಪದೇ ತಪ್ಪು ಮಾಡುತ್ತಿದ್ದಾರೆ. ಅವರು ಸ್ಯಾಡಿಸಂ ತೋರಿಸೋ ಕೆಲಸ ಮಾಡುತ್ತಿದ್ದಾರೆ. ಈ ಬಾರಿ ಸ್ವರ್ಗ ಹಾಗೂ ನರಕ ಎನ್ನುವ ಕಾನ್ಸೆಪ್ಟ್ನ ತರಲಾಗಿದೆ. ಸ್ವರ್ಗದಲ್ಲಿರುವ ಎಲ್ಲರಿಗೂ ಮನೆಯ ಸೌಲಭ್ಯಗಳು ಇರುತ್ತವೆ. ಆದರೆ, ನರಕದಲ್ಲಿ ಇರುವವರು ಮಾತ್ರ ಹಾಗಿಲ್ಲ. ಅವರಿಗೆ ಯಾವ ಸೌಲಭ್ಯವೂ ಇರುವುದಿಲ್ಲ. ಇದರ ಮಧ್ಯೆ ಉದ್ದೇಶ ಪೂರ್ವಕವಾಗಿ ಜಗದೀಶ್ ಅವರು ಸ್ವರ್ಗವನ್ನು ನರಕ ಮಾಡಿದ್ದಾರೆ.
ಸ್ವರ್ಗದಲ್ಲಿರುವ ಸ್ಪರ್ಧಿಗಳಿಗೆ ಲಕ್ಷುರಿ ಐಟಂಗಳನ್ನು ನೀಡಲಾಗಿತ್ತು. ಇದನ್ನು ಬಿಗ್ ಬಾಸ್ ಹಿಂಪಡೆದಿದ್ದಾರೆ. ಜಗದೀಶ್ ಅವರು ನರಕದಲ್ಲಿ ಇರುವವರಿಗೆ ಬಿಸಿ ನೀರನ್ನು ಕೊಟ್ಟ ಕಾರಣದಿಂದ ಈ ರೀತಿ ಮಾಡಲಾಗಿದೆ. ಈ ಘಟನೆ ಬಳಿಕ ಅವರು ಮತ್ತೊಮ್ಮೆ ಬಿಸಿ ನೀರು ನೀಡಿದ್ದಾರೆ. ಇಷ್ಟಕ್ಕೆ ನಿಂತಿಲ್ಲ. ಬಿಸ್ಕತ್, ಹಣ್ಣುಗಳನ್ನು ನರಕ ನಿವಾಸಿಗಳಿಗೆ ನೀಡಿದ್ದಾರೆ. ಇದನ್ನು ನೋಡಿದ ಬಿಗ್ ಬಾಸ್ ಇಡೀ ಮನೆಗೆ ಶಿಕ್ಷೆ ನೀಡಿದ್ದಾರೆ.
ಮನೆಯಲ್ಲಿ ಮಾಡಿದ ಅಡುಗೆ, ದಿನಸಿ ಸಾಮಗ್ರಿ, ಹಣ್ಣು-ಹಂಪಲುಗಳನ್ನು ಹಿಂದಿರುಗಿಸಿ ಕೊಡುವಂತೆ ಆದೇಶ ಕೊಟ್ಟಿದ್ದಾರೆ. ಇದೆಲ್ಲವೂ ಬಿಸಿ ನೀರು ಕೊಟ್ಟ ಕಾರಣಕ್ಕೆ ಆದ ಶಿಕ್ಷೆ ಎಂದು ಎಲ್ಲರೂ ಭಾವಿಸಿದ್ದಾರೆ. ಆದರೆ, ಅಸಲಿ ವಿಚಾರ ಏನು ಎಂಬುದು ಯಾರಿಗೂ ಇಲ್ಲಿ ತಿಳಿದಿಲ್ಲ.
ಜಗದೀಶ್ ಅವರು ವಕೀಲರು. ಅವರಿಗೆ ನಿಯಮಗಳ ಪರಿಪಾಲನೆ ಹೇಗೆ ಮಾಡಬೇಕು ಎಂಬುದು ಗೊತ್ತಿದೆ. ಜೊತೆಗೆ ಅದನ್ನು ಮಾಡೋದು ಅವರ ವೃತ್ತಿ ಧರ್ಮ ಕೂಡ ಹೌದು. ಆದರೆ, ಉದ್ದೇಶ ಪೂರ್ವಕವಾಗಿ ಅವರು ತಪ್ಪು ಮಾಡುತ್ತಿದ್ದಾರೆ. ತಮ್ಮಿಂದ ಮನೆಗೆ ಶಿಕ್ಷೆ ಸಿಕ್ಕಿದ್ದಕ್ಕೆ ಅವರು ಸಂತೋಷದಿಂದ ಕೇಕೆ ಹಾಕಿದ್ದಾರೆ. ಅವರು ನಕ್ಕಿದ್ದಾರೆ. ಇದನ್ನು ನೋಡಿ ಮನೆ ಮಂದಿ ಛೀಮಾರಿ ಹಾಕಿದ್ದಾರೆ.
ಇದನ್ನೂ ಓದಿ: ಬಿಗ್ ಬಾಸ್ ಮನೆಯಲ್ಲಿ ಮೊದಲ ದಿನವೇ ಕೂಗಾಟ, ಗೊಂದಲ; ರಿಪೀಟ್ ಆಗುತ್ತಾ ಕಳೆದ ಸೀಸನ್?
‘ಬಿಗ್ ಬಾಸ್ ಕನ್ನಡ ಸೀಸನ್ 11’ರಲ್ಲಿ 17 ಸ್ಪರ್ಧಿಗಳಿದ್ದಾರೆ. ಈ ವಾರ ಒಂದು ಎಲಿಮಿನೇಷನ್ ನಡೆಯಲಿದ್ದು ಯಾರು ಮನೆಯಿಂದ ಹೊರಕ್ಕೆ ಹೋಗುತ್ತಾರೆ ಎನ್ನುವ ಕುತೂಹಲ ಮೂಡಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.