
ಬಿಗ್ ಬಾಸ್ ಅಗ್ನಿಪರೀಕ್ಷೆಯ ಮೂಲಕ ಪರಿಚಯವಾದ ಯುವ ನಟ ಲಿಖಿತ್ ಹಾಗೂ ಅನನ್ಯಾ ಸದ್ಯ ಗೋಕರ್ಣದಲ್ಲಿ ಒಟ್ಟಿಗೆ ಸುತ್ತಾಟ ನಡೆಸುತ್ತಿದ್ದು, ಹಾಯಾಗಿ ಕಾಲ ಕಳೆಯುತ್ತಿದ್ದಾರೆ. ಇವರಿಬ್ಬರ ಜೊತೆಯಾಗಿರುವ ಸುಂದರವಾದ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ನೆಟ್ಟಿಗರ ವಲಯದಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿವೆ.
ಬಿಗ್ ಬಾಸ್ ಅಗ್ನಿಪರೀಕ್ಷೆ ಕಾರ್ಯಕ್ರಮದ ಮೂಲಕ ಈ ಇಬ್ಬರ ನಡುವೆ ಪರಿಚಯವಾಗಿತ್ತು. ಈ ಶೋನಲ್ಲಿ ಲಿಖಿತ್ ಅವರು ಬಿಗ್ ಬಾಸ್ ಮನೆಗೆ ಆಯ್ಕೆಯಾಗಿ ಸುಮಾರು ಒಂದು ತಿಂಗಳ ಕಾಲ ಮನೆಯೊಳಗೆ ಇದ್ದು ಬಂದಿದ್ದರು. ಆದರೆ, ಅನನ್ಯಾ ಅವರಿಗೆ ಬಿಗ್ ಬಾಸ್ ಮನೆಯೊಳಗೆ ಪ್ರವೇಶಿಸುವ ಅವಕಾಶ ಸಿಕ್ಕಿರಲಿಲ್ಲ. ಆದರೂ ಈ ಶೋ ಮೂಲಕ ಇವರ ನಡುವಿನ ಒಡನಾಟ ಮುಂದುವರೆದಿದೆ.
ಸದ್ಯ ಬಿಗ್ ಬಾಸ್ ಆಟದ ಹೊರತಾಗಿ ಇಬ್ಬರೂ ಒಟ್ಟಿಗೆ ಗೋಕರ್ಣದ ಕಡಲತೀರದಲ್ಲಿ ಸುತ್ತಾಡುತ್ತಾ ಮಜಾ ಮಾಡುತ್ತಿರುವ ಫೋಟೋಗಳು ಎಲ್ಲರ ಗಮನ ಸೆಳೆದಿವೆ. ಸೌಂದರ್ಯಯುತ ತಾಣದಲ್ಲಿ ಹಾಯಾಗಿ ಇರುವ ಇವರ ಈ ಹೊಸ ಗೆಳೆತನದ ಬಗ್ಗೆಯೂ ಸೋಶಿಯಲ್ ಮೀಡಿಯಾದಲ್ಲಿ ಹತ್ತು ಹಲವು ಚರ್ಚೆಗಳು ಆರಂಭವಾಗಿವೆ.
ಅಭಿಮಾನಿಗಳು ಈ ಜೋಡಿಯ ಫೋಟೋಗಳನ್ನು ಮೆಚ್ಚಿಕೊಳ್ಳುವುದರ ಜೊತೆಗೆ ವಿವಿಧ ರೀತಿಯಲ್ಲಿ ಕಾಮೆಂಟ್‌ಗಳನ್ನು ಮಾಡುತ್ತಿದ್ದಾರೆ. ಬಿಗ್ ಬಾಸ್ ವೇದಿಕೆಯಿಂದ ಆರಂಭವಾದ ಇವರ ಈ ಸ್ನೇಹ ಪ್ರವಾಸದ ಹಂತ ತಲುಪಿದ್ದು ಎಲ್ಲಿಗೆ ಕೊಂಡೊಯ್ಯಲಿದೆ ಎಂಬುದನ್ನು ಕಾದು ನೋಡಬೇಕಿದೆ.
ಇದನ್ನೂ ಓದಿ: ಆರನೇ ವಾರ ಬಿಗ್ ಬಾಸ್ ಮನೆಯಿಂದ ಪ್ರಮುಖರೇ ಔಟ್; ಇಲ್ಲಿದೆ ವಿವರ
ಬಿಗ್ ಬಾಸ್ ಮನೆಯಲ್ಲಿ ಇರುವಷ್ಟು ದಿನ ಲಿಖಿತ್ ಅವರು ಅಗ್ರೆಸ್ಸಿವ್ ತನವನ್ನು ತೋರಿಸಿದ್ದರು. ಇದು ಅವರ ಆಟದ ಮೇಲೆ ನೇರವಾಗಿ ಪರಿಣಾಮ ಬೀರಿತ್ತು ಎಂದು ಹೇಳಬಹುದು. ಅವರು ಬಿಗ್ ಬಾಸ್ ಮನೆಯಿಂದ ಹೊರ ಹೋಗಲು ಇದುವೇ ಕಾರಣ ಆಯಿತು ಎಂದರೂ ತಪ್ಪಾಗಲಾರದು.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published On - 8:18 am, Mon, 19 October 26