ಹೇಗಿದೆ ‘ಮಾರಿಗಲ್ಲು’ ವೆಬ್ ಸರಣಿ? ಇಲ್ಲಿದೆ ವಿಮರ್ಶೆ

‘ಮಾರಿಗಲ್ಲು’ ಏಳು ಎಪಿಸೋಡ್​ಗಳನ್ನು ಹೊಂದಿದೆ. ಇದರಲ್ಲಿ ಕೆಲವು 30 ನಿಮಿಷಗಳ ಎಪಿಸೋಡ್ ಇದ್ದರೆ ಇನ್ನೂ ಕೆಲವು 15 ನಿಮಿಷಿದ ಎಪಿಸೋಡ್ ಇದೆ. ಉತ್ತರ ಕನ್ನಡ ಜಿಲ್ಲೆಯ ಶಿರಸಿ ಸುತ್ತಮುತ್ತೆ ವೆಬ್ ಸರಣಿಯ ಕಥೆ ಸಾಗುತ್ತದೆ. ಎರಡು ಎಪಿಸೋಡ್ ಬಳಿಕ ಸರಣಿ ಮತ್ತಷ್ಟು ರೋಚಕ ಎನಿಸುತ್ತದೆ.

ಹೇಗಿದೆ ‘ಮಾರಿಗಲ್ಲು’ ವೆಬ್ ಸರಣಿ? ಇಲ್ಲಿದೆ ವಿಮರ್ಶೆ
ಮಾರಿಗಲ್ಲು

Updated on: Nov 01, 2025 | 5:17 PM

ಶಿರಸಿಯಿಂದ 20 ಕಿಮೀ ದೂರದಲ್ಲಿರುವ ಬನವಾಸಿಯಲ್ಲಿ ಕದಂಬರು ಆಳಿ ಹೋಗಿದ್ದಾರೆ. ಇದರ ಒಂದೆಳೆಯನ್ನು ಇಟ್ಟುಕೊಂಡು ಕಾಲ್ಪನಿಕ ಕಥೆ ಹೆಣೆದು ಮಾಡಲಾದ ಕಥೆಯೇ ‘ಮಾರಿಗಲ್ಲು’ ವೆಬ್ ಸರಣಿ. ಈ ಸರಣಿ ಜೀ5ನಲ್ಲಿ ಪ್ರಸಾರ ಆರಂಭಿಸಿದೆ. ‘ಅಯ್ಯನ ಮನೆ’ , ‘ಶೋಧ’ ಬಳಿಕ ಪ್ರಸಾರ ಕಂಡ ಸರಣಿ ಇದಾಗಿದೆ. ಪಿಆರ್​ಕೆ ಪ್ರೊಡಕ್ಷನ್ಸ್ (PRK Production) ಇದನ್ನು ನಿರ್ಮಾಣ ಮಾಡಿದೆ ಎಂಬುದು ವಿಶೇಷ.

ಮಾರಿಗಲ್ಲು ಎಂಬ ಕಾಲ್ಪನಿಕ ಊರಲ್ಲಿ ಸಾಗೋ ಕಥೆಯೇ ‘ಮಾರಿಗಲ್ಲು’ ವೆಬ್ ಸರಣಿ. ಆ ಊರಿನ ಕಾಡಲ್ಲಿ ಕದಂಬರು ನಿಧಿ ಹುಗಿದಿಟ್ಟಿದ್ದಾರೆ ಎಂಬ ಪ್ರತೀತಿ ಇರುತ್ತದೆ. ಆದರೆ, ಇದನ್ನು ಕದಿಯಲು ಹೋದರೆ ಅದನ್ನು ಕಾಯುತ್ತಿರುವ ಮಾರಿ ಕಾಲಿಗೆ ಗೆಜ್ಜೆ ಕಟ್ಟಿಕೊಂಡು ಬರುತ್ತಾಳೆ ಎಂಬುದು ಆ ಊರಿನವರ ನಂಬಿಕೆ. ಆ ಊರಿಗೆ ಪುರಾತತ್ವ ಇಲಾಖೆಯ ಸಿಬ್ಬಂದಿ (ರಂಗಾಯಣ ರಘು) ಬರುತ್ತಾನೆ. ಇದೇ ಸಮಯಕ್ಕೆ ವರದನಿಗೆ (ಪ್ರವೀಣ್ ತೇಜ್) ಹಣದ ಅವಶ್ಯಕತೆ ಬರುತ್ತದೆ. ಇಬ್ಬರೂ ಸೇರಿ ಕಾಡಿನಲ್ಲಿ ನಿಧಿ ಹುಡುಕಿ ಹೋಗುತ್ತಾರೆ. ಮುಂದೇನಾಗುತ್ತದೆ ಎಂಬುದೇ ವೆಬ್ ಸರಣಿಯ ಕಥೆ.


‘ಮಾರಿಗಲ್ಲು’ ಏಳು ಎಪಿಸೋಡ್​ಗಳನ್ನು ಹೊಂದಿದೆ. ಇದರಲ್ಲಿ ಕೆಲವು 30 ನಿಮಿಷಗಳ ಎಪಿಸೋಡ್ ಇದ್ದರೆ ಇನ್ನೂ ಕೆಲವು 15 ನಿಮಿಷಿದ ಎಪಿಸೋಡ್ ಇದೆ. ಉತ್ತರ ಕನ್ನಡ ಜಿಲ್ಲೆಯ ಶಿರಸಿ ಸುತ್ತಮುತ್ತೆ ವೆಬ್ ಸರಣಿಯ ಕಥೆ ಸಾಗುತ್ತದೆ. ಈ ಸರಣಿಯಲ್ಲಿ ಕಥೆ ತೆರೆದುಕೊಳ್ಳಲು ಮೊದಲ ಎರಡು ಎಪಿಸೋಡ್​ ಬಳಿಕವೇ. ಆ ಬಳಿಕ ಸರಣಿ ಮತ್ತಷ್ಟು ರೋಚಕ ಎನಿಸುತ್ತದೆ.

ಇದನ್ನೂ ಓದಿ
ಬಿಗ್ ಬಾಸ್​ನಲ್ಲಿ ಕನ್ನಡದ ಕಂಪು; ವಿಶ್ ತಿಳಿಸಿದ ಸುದೀಪ್
ಟಾಲಿವುಡ್​ಗೆ 50 ಕೆಜಿ ಚಿನ್ನ ಧರಿಸಿ ಬಂದ ನಟಿ ಸೋನಾಕ್ಷಿ ಸಿನ್ಹಾ
‘ಸಾವಿರ ಭಾಷೆ ನಾಲಿಗೆಯಲ್ಲಿರಲಿ, ಕನ್ನಡ ಭಾಷೆ ಹೃದಯದಲ್ಲಿರಲಿ’: ಯಶ್  
ಸುದೀಪ್ ಹೇಳಿದ ‘ಗೌರವ’ದ ಪಾಠ ಮರೆತು ಮತ್ತೆ ಕಿತ್ತಾಟಕ್ಕೆ ಇಳಿದ ಅಶ್ವಿನಿ

ಇದನ್ನೂ ಓದಿ: ಒಟಿಟಿ ಪ್ರಿಯರಿಗೆ ಹಬ್ಬ; ಒಂದೇ ದಿನ ಎರಡು ಸೂಪರ್ ಹಿಟ್ ಚಿತ್ರ, ಒಂದು ವೆಬ್ ಸೀರಿಸ್ ಒಟಿಟಿಗೆ

ಇಡೀ ಸರಣಿ ಸಾಗೋದು 90ರ ದಶಕದಲ್ಲಿ. ರಂಗಾಯಣ ರಘು, ಗೋಪಾಲ ಕೃಷ್ಣ ದೇಶಪಾಂಡೆ, ಪ್ರವೀಣ್ ತೇಜ್, ಸೂರಜ್ ಅವರ ನಟನೆ ಗಮನ ಸೆಳೆಯುವ ರೀತಿಯಲ್ಲಿ ಇದೆ. ದೈವ ಹಾಗೂ ನಿಧಿ ಎರಡು ವಿಚಾರಗಳ ಮಧ್ಯೆ ಕಥೆ ಸಾಗುತ್ತದೆ. ಪ್ರತಿ ಎಪಿಸೋಡ್ ಮುಗಿಯುತ್ತಿದ್ದಂತೆ ಕುತೂಹಲ ಮತ್ತಷ್ಟು ಹೆಚ್ಚುತ್ತದೆ. ಕ್ಲೈಮ್ಯಾಕ್ಸ್ ಅಲ್ಲಿ ಎಲ್ಲದಕ್ಕೂ ಉತ್ತರ ಸಿಗಲಿದೆ. ದೈವದ ವಿಚಾರವನ್ನೂ ಇಲ್ಲಿ ತೋರಿಸಿದ್ದು, ಇದು ‘ಕಾಂತಾರ’ ಚಿತ್ರವನ್ನು ನೆನಪಿಸುತ್ತದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On - 5:14 pm, Sat, 1 November 25