ಹಿರಿದಾಯಿತು ‘ಮಜಾ ಟಾಕೀಸ್’ ಕುಟುಂಬ; ತಂಡದಲ್ಲಿ ಕುರಿ ಪ್ರತಾಪ್, ತುಕಾಲಿ ಸಂತೋಷ್, ಭಟ್ರು

|

Updated on: Jan 15, 2025 | 1:15 PM

ಕಲರ್ಸ್ ಕನ್ನಡದ ಜನಪ್ರಿಯ ಕಾಮಿಡಿ ಶೋ ‘ಮಜಾ ಟಾಕೀಸ್’ ಫೆಬ್ರವರಿ 1 ರಿಂದ ಆರಂಭ ಆಗುತ್ತಿದೆ. ಸೃಜನ್ ಲೋಕೇಶ್ ನೇತೃತ್ವದಲ್ಲಿ, ತುಕಾಲಿ ಸಂತೋಷ್, ಯೋಗರಾಜ್ ಭಟ್, ಕುರಿ ಪ್ರತಾಪ್, ಬಿಗ್ ಬಾಸ್ ಪ್ರಿಯಾಂಕಾ, ವಿನೋದ್ ಗೊಬ್ಬರಗಾಲ ಮುಂತಾದ ಪ್ರತಿಭಾವಂತ ಕಲಾವಿದರ ತಂಡ ಈ ಶೋನಲ್ಲಿದೆ. ಯೋಗರಾಜ್ ಭಟ್ ಈ ಬಾರಿ ಹೊಸ ಪಾತ್ರದಲ್ಲಿದ್ದಾರೆ.

ಹಿರಿದಾಯಿತು ‘ಮಜಾ ಟಾಕೀಸ್’ ಕುಟುಂಬ; ತಂಡದಲ್ಲಿ ಕುರಿ ಪ್ರತಾಪ್, ತುಕಾಲಿ ಸಂತೋಷ್, ಭಟ್ರು
ಮಜಾ ಟಾಕೀಸ್
Follow us on

‘ಮಜಾ ಟಾಕೀಸ್’ ಆರಂಭಕ್ಕೆ ದಿನಗಣನೆ ಶುರುವಾಗಿದೆ. ಫೆಬ್ರವರಿ 1ರಿಂದ ‘ಮಜಾ ಟಾಕೀಸ್’ ಆರಂಭ ಆಗಲಿದೆ ಎಂದು ಕಲರ್ಸ್ ಕನ್ನಡ ವಾಹಿನಿ ಪ್ರೋಮೋ ರಿಲೀಸ್ ಮಾಡಿದೆ. ಸೃಜನ್ ಲೋಕೇಶ್ ನೇತೃತ್ವದಲ್ಲಿ ಮೂಡಿ ಬರುತ್ತಿರುವ ಈ ಶೋನ ಪಾತ್ರವರ್ಗ ಕೂಡ ಹಿರಿದಾಗಿದೆ. ತುಕಾಲಿ ಸಂತೋಷ್, ಯೋಗರಾಜ್ ಭಟ್ ಮೊದಲಾದವರು ತಂಡ ಸೇರಿರೋದು ವಿಶೇಷ. ಈ ಮೊದಲನಿಂದಲೂ ಇದ್ದ ಕುರಿ ಪ್ರತಾಪ್ ಶೋನಲ್ಲಿ ಮುಂದುವರಿದಿದ್ದಾರೆ.

ಈ ಮೊದಲು ‘ಮಜಾ ಟಾಕೀಸ್​’ನಲ್ಲಿ ಇಂದ್ರಜಿತ್ ಲಂಕೇಶ್ ಅವರು ವೇದಿಕೆ ಮೇಲೆ ಕುಳಿತಿರುತ್ತಿದ್ದರು. ಎಲ್ಲ ಜೋಕ್​ಗೆ ನಗೋದು ಅವರ ಕೆಲಸ ಆಗಿತ್ತು. ಅಲ್ಲದೆ, ಆಗಾಗ ಕಮೆಂಟ್​ಗಳನ್ನು ಕೂಡ ಪಾಸ್ ಮಾಡುತ್ತಿದ್ದರು. ಈ ಬಾರಿ ಆ ಜಾಗವನ್ನು ಯೋಗರಾಜ್ ಭಟ್ ತುಂಬುವ ಸೂಚನೆ ಸಿಕ್ಕಿದೆ. ಇದಲ್ಲದೆ ಪಾತ್ರವರ್ಗ ಕೂಡ ಹಿರಿದಾಗಿದೆ.

ಈ ಬಾರಿ ಮಜಾ ಟಾಕೀಸ್​ನಲ್ಲಿ ತುಕಾಲಿ ಸಂತೋಷ್, ಕುರಿ ಪ್ರತಾಪ್, ಬಿಗ್ ಬಾಸ್ ಪ್ರಿಯಾಂಕಾ, ವಿನೋದ್ ಗೊಬ್ಬರಗಾಲ ಸೇರಿ ಅನೇಕರು ಇರಲಿದ್ದಾರೆ. ಈ ಮೂಲಕ ಮನರಂಜನೆ ಕೂಡ ಡಬಲ್ ಆಗುವ ಸೂಚನೆ ಸಿಕ್ಕಿದೆ. ಈ ಬಾರಿ ಯಾವ ರೀತಿಯ ಸ್ಕ್ರಿಪ್ಟ್​ಗಳೊಂದಿಗೆ ಸೃಜನ್ ಬರುತ್ತಾರೆ ಎಂಬ ಕುತೂಹಲ ಇದೆ.


ಈ ಮೊದಲು ಮಜಾ ಟಾಕೀಸ್ ಪ್ರಸಾರ ಕಂಡಿತ್ತು. ಆದರೆ, ಕೆಲ ವರ್ಷಗಳಿಂದ ಸೃಜನ್ ಬ್ರೇಕ್ ಪಡೆದಿದ್ದರು. ಅವರು ಕಲರ್ಸ್ ಕನ್ನಡ ಶೋಗಳಲ್ಲಿ ಜಡ್ಜ್​ ಆಗಿ ಕಾಣಿಸಿಕೊಳ್ಳುತ್ತಾ ಇದ್ದರು. ಈಗ ಮಜಾ ಟಾಕೀಸ್​ಗೆ ಅವರು ಮರಳಿರೋದು ಅಭಿಮಾನಿಗಳ ಖುಷಿ ಹೆಚ್ಚಿಸಿದೆ.

ಇದನ್ನೂ ಓದಿ: ‘ಮಜಾ ಟಾಕೀಸ್’ ಫ್ಯಾನ್ಸ್​ಗೆ ಗುಡ್ ನ್ಯೂಸ್; ಮತ್ತೆ ಬರ್ತಿದೆ ಸೃಜನ್ ಲೋಕೇಶ್ ಶೋ

ಸದ್ಯ ‘ಬಿಗ್ ಬಾಸ್ ಕನ್ನಡ ಸೀಸನ್ 11’ ನಡೆಯುತ್ತಿದೆ. ಈ ತಿಂಗಳಾಂತ್ಯಕ್ಕೆ (ಜನವರಿ 25-26) ಈ ಶೋನ ಫಿನಾಲೆ ನಡೆಯಲಿದೆ. ಇದಾದ ಬಳಿಕ ‘ಮಜಾ ಟಾಕೀಸ್’ ಆರಂಭ ಆಗಲಿದೆ. ಸಿನಿಮಾ ತಂಡದವರು ಬಂದು ತಮ್ಮ ಚಿತ್ರದ ಪ್ರಚಾರವನ್ನು ಈ ವೇದಿಕೆ ಮೇಲೆ ಮಾಡಬಹುದಾಗಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On - 1:14 pm, Wed, 15 January 25