AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬಿಗ್ ಬಾಸ್​​ನಲ್ಲಿ ಇವರ ಧ್ವನಿಯನ್ನು ಎಷ್ಟು ಜನ ಮಿಸ್ ಮಾಡಿಕೊಳ್ಳುತ್ತಿದ್ದೀರಿ?

ಪ್ರದೀಪ್ ಬಡೆಕ್ಕಿಲ ಅವರು ಬಿಗ್ ಬಾಸ್ ಕನ್ನಡಕ್ಕೆ ಈ ಮೊದಲು ಧ್ವನಿ ಕೊಟ್ಟವರು. ಅವರ ಧ್ವನಿ ಅನೇಕರಿಗೆ ಪ್ರಿಯವಾಗಿದೆ. ಅವರು ಕಲರ್ಸ್ ಕನ್ನಡ, ಜಾಹೀರಾತುಗಳು ಹಾಗೂ ಬೆಂಗಳೂರು ಮೆಟ್ರೋಗೆ ಬರುವ ಅನೌನ್ಸ್​​ಮೆಂಟ್​ಗೆ ಧ್ವನಿ ಆಗಿದ್ದಾರೆ. ವಾಯ್ಸ್ ಓವರ್ ಕ್ಷೇತ್ರದಲ್ಲಿ ಅವರು ಕೆಲಸ ಮಾಡುತ್ತಿದ್ದಾರೆ.

ಬಿಗ್ ಬಾಸ್​​ನಲ್ಲಿ ಇವರ ಧ್ವನಿಯನ್ನು ಎಷ್ಟು ಜನ ಮಿಸ್ ಮಾಡಿಕೊಳ್ಳುತ್ತಿದ್ದೀರಿ?
Bbk (13)
 ಶ್ರೀಲಕ್ಷ್ಮೀ ಎಚ್
| Edited By: |

Updated on:Jan 15, 2025 | 9:03 AM

Share

ಬಿಗ್ ಬಾಸ್​ನಲ್ಲಿ ಹಲವರು ಧ್ವನಿ ಆಗಿದ್ದಾರೆ. ಪ್ರತಿ ಬಾರಿಯೂ ಬೇರೆ ಬೇರೆ ಕಲಾವಿದರು ಧ್ವನಿ ನೀಡುತ್ತಾರೆ. ಈ ಪೈಕಿ ಹೆಚ್ಚು ಗಮನ ಸೆಳೆದಿದ್ದು ಪ್ರದೀಪ್ ಬಡೆಕ್ಕಿಲ ಅವರ ಧ್ವನಿ. ಈ ವಾಯ್ಸ್​ನ ಅನೇಕರು ಕೇಳಿರುತ್ತೀರಿ. ಈಗಲೂ ಇವರ ಧ್ವನಿಯನ್ನು ಅನೇಕರು ಮಿಸ್ ಮಾಡಿಕೊಳ್ಳುತ್ತಾರೆ. ಈಗ ಈ ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿವೆ. ಆ ಬಗ್ಗೆ ಇಲ್ಲಿದೆ ವಿವರ.

ಪ್ರದೀಪ್ ಬಡೆಕ್ಕಿಲ ಅವರು ಬಿಗ್ ಬಾಸ್​ಗೆ ಧ್ವನಿ ಆಗಿದ್ದರು. ಅವರ ಧ್ವನಿ ಎನೇಕರಿಗೆ ಇಷ್ಟ ಆಗಿದೆ. ಅವರ ಧ್ವನಿಗೆ ದೊಡ್ಡ ಮಟ್ಟದ ಅಭಿಮಾನಿ ಬಳಗ ಇದೆ. ಅದರಲ್ಲೂ ಬಿಗ್ ಬಾಸ್​ನಲ್ಲಿ ಇವರ ಧ್ವನಿ ಗಮನ ಸೆಳೆಯುತ್ತದೆ. ಕಲರ್ಸ್ ಜೊತೆ ಇವರು ಒಳ್ಳೆಯ ಒಡನಾಟ ಹೊಂದಿದ್ದು, ಧಾರಾವಾಹಿಗಳ ಸಮಯವನ್ನು ಹೇಳೋಕೆ ಹಾಕುವ ಜಾಹೀರಾತಿಗೆ ಇವರ ಧ್ವನಿ ಈಗಲೂ ಬಳಕೆಯಲ್ಲಿ ಇದೆ.

ಉದಾಹರಣೆಗೆ, ‘ಲಕ್ಷ್ಮೀ ಬಾರಮ್ಮ’ ಸೋಮವಾರದಿಂದ ಶನಿವಾರದವರೆಗೆ ಸಂಜೆ 7.30ಕ್ಕೆ ನಿಮ್ಮ ಕಲರ್ಸ್ ಕನ್ನಡ ವಾಹಿನಿಯಲ್ಲಿ’. ಈ ರೀತಿಯ ಧ್ವನಿಯನ್ನು ಪ್ರದೀಪ್ ಅವರು ಈಗಲೂ ನೀಡುತ್ತಾರೆ. ಇದಲ್ಲದೆ, ಹಲವು ಜಾಹೀರಾತುಗಳಿಗೆ, ಎಲ್ಲಕ್ಕಿಂತ ಮುಖ್ಯವಾಗಿ ಮೆಟ್ರೋದಲ್ಲಿ ಅವರ ಧ್ವನಿ ಯಾವಾಗಲೂ ಕೇಳುತ್ತದೆ. ‘ಮುಂದಿನ ನಿಲ್ದಾಣ ಜಯನಗರ’ ಎಂದು ಹೇಳುವಾಗ ಕೇಳಿ ಬರುವುದು ಅವರದ್ದೇ ಧ್ವನಿ. ಅವರು ಬಂಟ್ವಾಳ ತಾಲೂಕಿನವರು. ಸಣ್ಣ ಹಳ್ಳಿಯಿಂದ ಬಂದ ಅವರು ಕನ್ನಡ, ಹಿಂದಿ ಸೇರಿ ಹಲವು ಭಾಷೆಗಳಲ್ಲಿ ಅವರು ಧ್ವನಿ ಆಗುತ್ತಾರೆ.

v

ಪ್ರದೀಪ್ ಬಡೆಕ್ಕಿಲ ಅವರು ಟಿವಿ9 ಕನ್ನಡದಲ್ಲೂ ಕೆಲಸ ಮಾಡಿದ್ದಾರೆ. ವಾಯ್ಸ್​​ ಓವರ್​ಗಳನ್ನು ನೀಡಿ ಅವರು ಗಮನ ಸೆಳೆದರು. ಆರ್​​ಜೆ ಆಗಿಯೂ ಕೆಲಸ ಮಾಡಿದ್ದಾರೆ. ನಂತರ ಹಲವು ರಿಯಾಲಿಟಿ ಶೋಗಳಿಗೆ ಅವರು ನರೇಟರ್ ಆದರು. ಅವರು ಕೆಲವು ಧಾರಾವಾಹಿಗಳಲ್ಲಿ ಹೀರೋ ಆಗಿಯೂ ನಟಿಸಿದ್ದಾರೆ. ಕನ್ನಡ ಮಾತ್ರವಲ್ಲದೆ, ತಮಿಳಿನಲ್ಲೂ ಬಣ್ಣ ಹಚ್ಚಿದ್ದಾರೆ. ಅವರು ಈಗ ವಾಯ್ಸ್​ ಓವರ್​ಗಳನ್ನು ನೀಡುತ್ತಾರೆ. ಇದರಲ್ಲಿಯೆ ಅವರು ಬದುಕು ಕಟ್ಟಿಕೊಂಡಿದ್ದಾರೆ. ಹೊಸ ಹೊಸ ಕ್ಷೇತ್ರಗಳ ಅನ್ವೇಷಣೆಯನ್ನು ಮಾಡುತ್ತಾ ಸಾಗುತ್ತಾರೆ.

ಇದನ್ನೂ ಓದಿ: ಬಿಗ್ ಬಾಸ್ ಫಾರ್ಮ್ಯಾಟ್ ಬಗ್ಗೆ ಭವ್ಯಾಗೆ ಅಸಮಾಧಾನ; ಕಿಚ್ಚನ ಕ್ಲಾಸ್ ಫಿಕ್ಸ್?

ಬಿಗ್ ಬಾಸ್​ನಲ್ಲಿ ನರೇಟರ್​ ಆಗಿದ್ದ ಪ್ರದೀಪ್ ಅವರು, ಕೊನೆಯಲ್ಲಿ ಬರುವ ಕೆಲವು ಚೆಂದದ ಸಾಲುಗಳನ್ನು ಅವರು ಹೇಳುತ್ತಿದ್ದರು. ಅವರ ಧ್ವನಿಗೆ ದೊಡ್ಡ ಅಭಿಮಾನಿ ಬಳಗ ಈಗಲೂ ಇದೆ. ಈಗ ಅವರ ಧ್ವನಿಯನ್ನು ಎಲ್ಲರೂ ಮಿಸ್ ಮಾಡಿಕೊಳ್ಳುತ್ತಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On - 8:13 am, Wed, 15 January 25

Follow Us
ಇಂದು ಈ ರಾಶಿಯವರು ಹಣದ ವಿಚಾರದಲ್ಲಿ ಆತುರಪಡಬೇಡಿ!
ಇಂದು ಈ ರಾಶಿಯವರು ಹಣದ ವಿಚಾರದಲ್ಲಿ ಆತುರಪಡಬೇಡಿ!
ಖರ್ಗೆ ಭೇಟಿ ಬಳಿಕ ಅಚ್ಚರಿಯ ಹೇಳಿಕೆ ಕೊಟ್ಟ ಡಿಸಿಎಂ ಡಿಕೆಶಿ
ಖರ್ಗೆ ಭೇಟಿ ಬಳಿಕ ಅಚ್ಚರಿಯ ಹೇಳಿಕೆ ಕೊಟ್ಟ ಡಿಸಿಎಂ ಡಿಕೆಶಿ
ಕಾಶ್ಮೀರದ ಝೋಜಿಲಾ ಪಾಸ್‌ನಲ್ಲಿ ಭಾರೀ ಹಿಮಪಾತ
ಕಾಶ್ಮೀರದ ಝೋಜಿಲಾ ಪಾಸ್‌ನಲ್ಲಿ ಭಾರೀ ಹಿಮಪಾತ
ಬಿಎಂಟಿಸಿ ಚಾಲಕ ಹೃದಯಾಘಾತದಿಂದ ಸಾವು: ಪರಿಹಾರ ನೀಡುವವರೆಗೂ ಡ್ಯೂಟಿ ಮಾಡಲ್ಲ
ಬಿಎಂಟಿಸಿ ಚಾಲಕ ಹೃದಯಾಘಾತದಿಂದ ಸಾವು: ಪರಿಹಾರ ನೀಡುವವರೆಗೂ ಡ್ಯೂಟಿ ಮಾಡಲ್ಲ
ಮತ್ತೆ ಕುದಿಯುತ್ತಿದೆ ಮಣಿಪುರ; ಇಂಪಾಲ್​ನ ಘರ್ಷಣೆಯಲ್ಲಿ ಹಲವರಿಗೆ ಗಾಯ
ಮತ್ತೆ ಕುದಿಯುತ್ತಿದೆ ಮಣಿಪುರ; ಇಂಪಾಲ್​ನ ಘರ್ಷಣೆಯಲ್ಲಿ ಹಲವರಿಗೆ ಗಾಯ
ಕೇಜ್ರಿವಾಲ್ ಸಿಎಂ ಆದಮೇಲೆ 100 ಕೋಟಿ ಮನೆ ಕಟ್ಟಿದರು; ಸ್ವಾತಿ ಮಲಿವಾಲ್ ಟೀಕೆ
ಕೇಜ್ರಿವಾಲ್ ಸಿಎಂ ಆದಮೇಲೆ 100 ಕೋಟಿ ಮನೆ ಕಟ್ಟಿದರು; ಸ್ವಾತಿ ಮಲಿವಾಲ್ ಟೀಕೆ
ತುಂಗಭದ್ರಾದಿಂದ ಕದ್ದುಮುಚ್ಚಿ ಕಾರ್ಖಾನೆಗಳಿಗೆ ಹರಿಸಲಾಗುತ್ತಿದ್ದ ನೀರು ಬಂದ್
ತುಂಗಭದ್ರಾದಿಂದ ಕದ್ದುಮುಚ್ಚಿ ಕಾರ್ಖಾನೆಗಳಿಗೆ ಹರಿಸಲಾಗುತ್ತಿದ್ದ ನೀರು ಬಂದ್
ಸತತ 4 ಸಿಕ್ಸರ್; ಪ್ರಫುಲ್ ಹಿಂಗೆ ವಿರುದ್ಧ ಸೇಡು ತೀರಿಸಿಕೊಂಡ ವೈಭವ್
ಸತತ 4 ಸಿಕ್ಸರ್; ಪ್ರಫುಲ್ ಹಿಂಗೆ ವಿರುದ್ಧ ಸೇಡು ತೀರಿಸಿಕೊಂಡ ವೈಭವ್
ರಾಹುಲ್ ಗಾಂಧಿಯ ಪ್ರತಿಕೃತಿ ದಹನದ ವೇಳೆ ಬಿಜೆಪಿ ಶಾಸಕಿಗೆ ಗಾಯ
ರಾಹುಲ್ ಗಾಂಧಿಯ ಪ್ರತಿಕೃತಿ ದಹನದ ವೇಳೆ ಬಿಜೆಪಿ ಶಾಸಕಿಗೆ ಗಾಯ
ಸಚಿವ ಡಿ ಸುಧಾಕರ್ ಆರೋಗ್ಯದ ಬಗ್ಗೆ ಬಿಗ್ ಅಪ್ಡೇಟ್ ಕೊಟ್ಟ ಸಿದ್ದರಾಮಯ್ಯ
ಸಚಿವ ಡಿ ಸುಧಾಕರ್ ಆರೋಗ್ಯದ ಬಗ್ಗೆ ಬಿಗ್ ಅಪ್ಡೇಟ್ ಕೊಟ್ಟ ಸಿದ್ದರಾಮಯ್ಯ