AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬಿಎಸ್ಸೆನ್ನೆಲ್ ವೈಫೈ ಯೋಜನೆ ನೀರಲ್ಲಿ ಹೋಮ; ಸಾವಿರಾರು ಕೋಟಿ ರೂ ವೆಚ್ಚಕ್ಕೆ ಬದಲಾಗಿ ಸಿಕ್ಕ ಆದಾಯ ಸೊನ್ನೆ?

Parliamentary panel finds BSNL's 25,000 wi-fi hotspot in rural regions producing negligible revenue: ಬಿಎಸ್​ಎನ್​ಎಲ್ ಸಂಸ್ಥೆ ಗ್ರಾಮೀಣ ಭಾಗಗಳಲ್ಲಿ ಸ್ಥಾಪಿಸಿದ ವೈಫೈಗಳಿಂದ ನಯಾಪೈಸೆಯೂ ಆದಾಯ ಗೀಟುತ್ತಿಲ್ಲ. ವರ್ಷಕ್ಕೆ 75 ಲಕ್ಷ ರೂ ಗುರಿಯಲ್ಲಿ ಆದಾಯ ಸಿಕ್ಕಿರುವುದು 3 ಲಕ್ಷ ರೂ ಮಾತ್ರ ಎಂದು ಸಂಸದೀಯ ಸಮಿತಿಯೊಂದು ವರದಿ ಮಾಡಿದೆ. ಸರಿಯಾಗಿ ಮಾರುಕಟ್ಟೆ ಸಮೀಕ್ಷೆ ಮಾಡದಿರುವುದು ಸೇರಿದಂತೆ ವಿವಿಧ ಕಾರಣಗಳನ್ನು ಈ ವರದಿಯಲ್ಲಿ ಪ್ರಸ್ತಾಪಿಸಲಾಗಿದೆ.

ಬಿಎಸ್ಸೆನ್ನೆಲ್ ವೈಫೈ ಯೋಜನೆ ನೀರಲ್ಲಿ ಹೋಮ; ಸಾವಿರಾರು ಕೋಟಿ ರೂ ವೆಚ್ಚಕ್ಕೆ ಬದಲಾಗಿ ಸಿಕ್ಕ ಆದಾಯ ಸೊನ್ನೆ?
ಬಿಎಸ್ಸೆನ್ನೆಲ್Image Credit source: Getty Images
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Aug 07, 2026 | 12:57 PM

Share

ನವದೆಹಲಿ, ಆಗಸ್ಟ್ 7: ಬಿಎಸ್ಸೆನ್ನೆಲ್ (BSNL- ಭಾರತೀಯ ಸಂಚಾರ ನಿಗಮ ನಿಯಮಿತ) ಗ್ರಾಮೀಣ ಪ್ರದೇಶಗಳಲ್ಲಿ ಸ್ಥಾಪಿಸಿದ 25,000 ವೈ-ಫೈ ಹಾಟ್‌ಸ್ಪಾಟ್‌ಗಳ ಯೋಜನೆಯಲ್ಲಿ ತೀವ್ರ ಆರ್ಥಿಕ ನಷ್ಟ ಮತ್ತು ಯೋಜನಾ ಲೋಪಗಳು ಕಂಡುಬಂದಿವೆ ಎಂದು ಸಂಸದೀಯ ಸಮಿತಿಯು ಲೋಕಸಭೆಯಲ್ಲಿ ಸಲ್ಲಿಸಿದ ವರದಿಯಲ್ಲಿ ತಿಳಿಸಿದೆ. ನೂರಾರು ಕೋಟಿ ರೂ ವೆಚ್ಚ ಮಾಡಿ ಜಾರಿಗೊಳಿಸಿದ ಈ ಯೋಜನೆ ಬಹುತೇಕ ನೀರಿನಲ್ಲಿ ಹೋಮ ಮಾಡಿದಂತಾಗಿದೆ. ವರ್ಷಕ್ಕೆ ₹75 ಕೋಟಿ ಆದಾಯ ಬರುವ ಗುರಿ ಇಟ್ಟಿದ್ದರೂ, ಸಿಕ್ಕಿದ್ದು ಕೇವಲ ₹3 ಲಕ್ಷ ಮಾತ್ರವೇ ಎಂದು ಸಂಸದೀಯ ಸಮಿತಿಯ ವರದಿಯಲ್ಲಿ ವಾಸ್ತವ ಸಂಗತಿ ತೆರೆದಿಡಲಾಗಿದೆ.

ವರದಿ ಪ್ರಕಾರ, 2018-19ರ ಸಾಲಿನಲ್ಲಿ ವರ್ಷಕ್ಕೆ ₹75 ಕೋಟಿ ಆದಾಯ ಗಳಿಸುವ ಗುರಿ ಹೊಂದಲಾಗಿತ್ತು. ಆದರೆ, 2017-18 ರಿಂದ 2021-22ರ ನಡುವೆ ಬಿಎಸ್‌ಎನ್‌ಎಲ್ ಗಳಿಸಿದ್ದು ಕೇವಲ ₹3.09 ಲಕ್ಷ ಮಾತ್ರ. ಬಿಎಸ್ಸೆನ್ನೆಲ್ ₹6,000 ಕೋಟಿ ವೆಚ್ಚದಲ್ಲಿ ದೇಶಾದ್ಯಂತ ಸಾರ್ವಜನಿಕ ಸ್ಥಳಗಳಲ್ಲಿ ಒಂದು ಲಕ್ಷದಷ್ಟು ವೈಫೈ ಹಾಟ್​ಸ್ಪಾಟ್​ಗಳನ್ನು ಸ್ಥಾಪಿಸುವ ಬೃಹತ್ ಯೋಜನೆಯ ಭಾಗ ಇದು.

ಇದನ್ನೂ ಓದಿ: ನಂದನ್ ನಿಲೇಕಣಿ ಪ್ರಕಾರ ಎಐ ಪರಿಣಾಮದಲ್ಲಿ ಕೆಲಸಗಳು ಎಲ್ಲಿ ಹೆಚ್ಚು ನಷ್ಟ, ಎಲ್ಲಿ ಹೆಚ್ಚು ಸೃಷ್ಟಿ?

₹1.15 ಕೋಟಿ ಸಬ್ಸಿಡಿ ನಷ್ಟ

ಯುಎಸ್‌ಒಎಫ್ (USOF) ಬೆಂಬಲಿತ ಯೋಜನೆಯಡಿ ಸ್ಥಾಪಿಸಲಾದ 24,333 ಹಾಟ್‌ಸ್ಪಾಟ್‌ಗಳಲ್ಲಿ 700 ಹಾಟ್‌ಸ್ಪಾಟ್‌ಗಳು ಸಬ್ಸಿಡಿ ಅವಧಿ ಮುಗಿದ ನಂತರ ಚಾಲನೆಗೆ ಬಂದವು ಮತ್ತು 8 ಹಾಟ್‌ಸ್ಪಾಟ್‌ಗಳನ್ನು ಎಂದಿಗೂ ಪ್ರಾರಂಭಿಸಲೇ ಇಲ್ಲ. ಇದರಿಂದಾಗಿ ಸಂಸ್ಥೆಗೆ ₹1.15 ಕೋಟಿ ಕಾರ್ಯಚರಣಾ (OPEX) ಸಬ್ಸಿಡಿ ನಷ್ಟವಾಯಿತು.

ವೈಫಲ್ಯಕ್ಕೆ ಪ್ರಮುಖ ಕಾರಣಗಳು

  • ಉಚಿತ ವೈ-ಫೈ ಸೇವೆಯನ್ನು ನಿಗದಿಗಿಂತ ಹೆಚ್ಚಿನ ಅವಧಿಗೆ ಮುಂದುವರಿಸಿದ್ದು.
  • ಸರಿಯಾದ ಮಾರುಕಟ್ಟೆ ಸಮೀಕ್ಷೆ ನಡೆಸದಿರುವುದು.
  • ಉಚಿತ ಬಳಕೆದಾರರನ್ನು ಪಾವತಿಸುವ ಗ್ರಾಹಕರನ್ನಾಗಿ (paying subscribers) ಪರಿವರ್ತಿಸುವಲ್ಲಿ ವಿಫಲವಾಗಿದ್ದು.

ಇದನ್ನೂ ಓದಿ: ಆಭರಣದಂಗಡಿಗಳಿಗೆ ಭರ್ಜರಿ ಸುದ್ದಿ; ಜಿಎಂಎಸ್ ಸ್ಕೀಮ್​ನಲ್ಲಿ ಶೇ. 1 ಕಮಿಷನ್ ಕೊಡಲು ಸರ್ಕಾರದ ಮುಂದೆ ಪ್ರಸ್ತಾವ

ಸಂಸದೀಯ ಸಮಿತಿಯ ಶಿಫಾರಸುಗಳು

ಬಿಜೆಪಿ ಸಂಸದ ಬೈಜಯಂತ್ ಜೈ ಪಾಂಡಾ ಅವರ ನೇತೃತ್ವದ ಸಾರ್ವಜನಿಕ ಉದ್ದಿಮೆಗಳ ಸಮಿತಿಯು (CoPU), ಭವಿಷ್ಯದಲ್ಲಿ ಸಾರ್ವಜನಿಕ ಹಣದಿಂದ ಕೈಗೊಳ್ಳುವ ಟೆಲಿಕಾಂ ಯೋಜನೆಗಳಲ್ಲಿ ಹೊಣೆಗಾರಿಕೆ ನಿಗದಿಪಡಿಸಲು, ನಷ್ಟಕ್ಕೆ ಕಾರಣರಾದವರ ವಿರುದ್ಧ ಆಂತರಿಕ ಪರಿಶೀಲನೆ ನಡೆಸಲು ಮತ್ತು ಕಾಲಮಿತಿಯ ಹೊಣೆಗಾರಿಕೆ ಚೌಕಟ್ಟನ್ನು (accountability framework) ರೂಪಿಸಲು ಸೂಚಿಸಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Follow Us
ಸುಗ್ಗನಹಳ್ಳಿ ವಿಜಯಸಾರಥಿ
ಸುಗ್ಗನಹಳ್ಳಿ ವಿಜಯಸಾರಥಿ

ಹುಟ್ಟೂರು ಹಾಸನ ಜಿಲ್ಲೆಯ ಶ್ರವಣಬೆಳಗೊಳ ಸಮೀಪದ ಒಂದು ಪುಟ್ಟ ಹಳ್ಳಿ. ಬೆಳದದ್ದು ಬೆಂಗಳೂರು ನಗರದಲ್ಲಿ. ಹಲವು ವರ್ಷಗಳಿಂದ ಪತ್ರಿಕಾ ರಂಗದಲ್ಲಿ ನೆಲೆ. ಬರವಣಿಗೆಯ ಆಸಕ್ತಿ ಮತ್ತು ಪರಿಣಿತಿಯ ಕ್ಷೇತ್ರಗಳು ಆರ್ಥಿಕತೆ, ಹಣಕಾಸು, ಅಂತರರಾಷ್ಟ್ರೀಯ ವಿದ್ಯಮಾನ, ಜನಕ್ರಾಂತಿ, ರಾಷ್ಟ್ರೀಯತೆ, ಸಂಸ್ಕೃತಿ, ಮಾನವ ಸಂಬಂಧ, ಕ್ರೀಡೆ ಮೊದಲಾದವು ಇವೆ. ಓದುಗರಿಗೆ ಸುಲಭವಾಗಿ ಅರ್ಥವಾಗುವಂತೆ ಸಾಧ್ಯವಾದಷ್ಟೂ ಸ್ಫುಟವಾಗಿ, ಸರಳವಾಗಿ ಬರೆಯುವ ಇಚ್ಛೆ.

Read More
ಅವಧಿಗೂ ಮುನ್ನ SIR ಅಂತ್ಯ: 2.01 ಲಕ್ಷ ಮತದಾರರ ಹೆಸರು ಡಿಲೀಟ್​
ಅವಧಿಗೂ ಮುನ್ನ SIR ಅಂತ್ಯ: 2.01 ಲಕ್ಷ ಮತದಾರರ ಹೆಸರು ಡಿಲೀಟ್​
ಕಾಂಗ್ರೆಸ್​​​ನ 25 ಶಾಸಕರು ಬಿಜೆಪಿ ಸೇರಲು ರೆಡಿ ಇದ್ದಾರೆ: ವಿಜಯೇಂದ್ರ
ಕಾಂಗ್ರೆಸ್​​​ನ 25 ಶಾಸಕರು ಬಿಜೆಪಿ ಸೇರಲು ರೆಡಿ ಇದ್ದಾರೆ: ವಿಜಯೇಂದ್ರ
ಹಿಂಡಲಗಾ ಜೈಲಿಗೆ ಹೋಗ್ತಿದ್ದ ಪ್ರಜ್ವಲ್ ಇದ್ದ ವಾಹನ ಅರ್ಧಕ್ಕೆ ವಾಪಸ್
ಹಿಂಡಲಗಾ ಜೈಲಿಗೆ ಹೋಗ್ತಿದ್ದ ಪ್ರಜ್ವಲ್ ಇದ್ದ ವಾಹನ ಅರ್ಧಕ್ಕೆ ವಾಪಸ್
ಬೃಹತ್ ಪ್ರತಿಭಟನೆ ಬಳಿಕ ಸುಪ್ರೀಂ ಕೋರ್ಟ್ ತಲುಪಿದ ರಾಹುಲ್ ಗಾಂಧಿ, ಖರ್ಗೆ
ಬೃಹತ್ ಪ್ರತಿಭಟನೆ ಬಳಿಕ ಸುಪ್ರೀಂ ಕೋರ್ಟ್ ತಲುಪಿದ ರಾಹುಲ್ ಗಾಂಧಿ, ಖರ್ಗೆ
ಮಂಜನಿಗೆ ಮುಂದೆ ಒಳ್ಳೆಯ ಭವಿಷ್ಯ ಇದೆ: ಸಂಗೀತಾ ಭಟ್ ಅಚ್ಚರಿಯ ಹೇಳಿಕೆ
ಮಂಜನಿಗೆ ಮುಂದೆ ಒಳ್ಳೆಯ ಭವಿಷ್ಯ ಇದೆ: ಸಂಗೀತಾ ಭಟ್ ಅಚ್ಚರಿಯ ಹೇಳಿಕೆ
ಸಿಎಂ ಡಿಕೆಶಿ​​ ಕುರ್ತಾ ಹಿಡಿದು ತಳ್ಳಿದ ರಾಹುಲ್ ಗಾಂಧಿ! ಕನ್ನಡಿಗರ ಆಕ್ರೋಶ
ಸಿಎಂ ಡಿಕೆಶಿ​​ ಕುರ್ತಾ ಹಿಡಿದು ತಳ್ಳಿದ ರಾಹುಲ್ ಗಾಂಧಿ! ಕನ್ನಡಿಗರ ಆಕ್ರೋಶ
ಕಿತ್ತೂರು ರಾಜಗುರುಗಳ ವಂಶಸ್ಥರಿಂದ ತಲೆಮಾರುಗಳ ಪರಂಪರೆ ಮುಂದುವರಿಕೆ
ಕಿತ್ತೂರು ರಾಜಗುರುಗಳ ವಂಶಸ್ಥರಿಂದ ತಲೆಮಾರುಗಳ ಪರಂಪರೆ ಮುಂದುವರಿಕೆ
ಪ್ರತಿಭಟನೆ ವೇಳೆ ಎಬಿವಿಪಿ ಕಾರ್ಯಕರ್ತನಿಗೆ ಎಸಿಪಿ ಕಪಾಳಮೋಕ್ಷ
ಪ್ರತಿಭಟನೆ ವೇಳೆ ಎಬಿವಿಪಿ ಕಾರ್ಯಕರ್ತನಿಗೆ ಎಸಿಪಿ ಕಪಾಳಮೋಕ್ಷ
ಬಿಗ್ ಬಾಸ್: ಸಂಗೀತಾ ಭಟ್ ಆರೋಗ್ಯ ಕೈಕೊಟ್ಟಿದ್ದಕ್ಕೆ ಇಲ್ಲಿದೆ ಅಸಲಿ ಕಾರಣ
ಬಿಗ್ ಬಾಸ್: ಸಂಗೀತಾ ಭಟ್ ಆರೋಗ್ಯ ಕೈಕೊಟ್ಟಿದ್ದಕ್ಕೆ ಇಲ್ಲಿದೆ ಅಸಲಿ ಕಾರಣ
ಕಳೆದ 10 ವರ್ಷಗಳಿಂದ ಹದಗೆಟ್ಟಿದ್ದ ಪೀಣ್ಯ ಔಟರ್ ರಿಂಗ್ ರಸ್ತೆಗೆ ಡಾಂಬರ್ ಭಾಗ
ಕಳೆದ 10 ವರ್ಷಗಳಿಂದ ಹದಗೆಟ್ಟಿದ್ದ ಪೀಣ್ಯ ಔಟರ್ ರಿಂಗ್ ರಸ್ತೆಗೆ ಡಾಂಬರ್ ಭಾಗ