ಕಬಡ್ಡಿ, ಕಬಡ್ಡಿ… ಸಚಿವ ಶಿವಲಿಂಗೇಗೌಡ ಅಖಾಡಕ್ಕಿಳಿದು ರೈಡ್ ಮಾಡಿದ ಸ್ಟೈಲ್ ನೋಡಿ
ಹಾಸನಾಂಬೆ ದರ್ಶನೋತ್ಸವದ ಹಿನ್ನೆಲೆಯಲ್ಲಿ ಆಯೋಜಿಸಲಾಗಿದ್ದ ರಾಷ್ಟ್ರಮಟ್ಟದ ಕಬಡ್ಡಿ ಪಂದ್ಯಾವಳಿಗೆ ಉಸ್ತುವಾರಿ ಸಚಿವ ಕೆ.ಎಂ. ಶಿವಲಿಂಗೇಗೌಡರು ಅಖಾಡಕ್ಕಿಳಿದು ರೈಡ್ ಮಾಡುವ ಮೂಲಕ ಚಾಲನೆ ನೀಡಿದರು. ಸ್ವತಃ ರೈಡರ್ ಆಗಿ ಕಣಕ್ಕಿಳಿದು ಆಟಗಾರರನ್ನು ಹುರಿದುಂಬಿಸಿದ ಸಚಿವರನ್ನು ಜನ ಚಪ್ಪಾಳೆ, ಸಿಳ್ಳೆಗಳ ಮೂಲಕ ಸ್ವಾಗತಿಸಿದರು. ಹಾಸನಾಂಬೆ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಇಂತಹ ಕ್ರೀಡಾಕೂಟ ಆಯೋಜಿಸಲಾಗಿದೆ.
ಹಾಸನ, ನವೆಂಬರ್ 2: ಹಾಸನದಲ್ಲಿ ನಡೆಯುತ್ತಿರುವ ಐತಿಹಾಸಿಕ ಹಾಸನಾಂಬೆ ದರ್ಶನೋತ್ಸವದ ಹಿನ್ನೆಲೆಯಲ್ಲಿ, ಇದೇ ಮೊದಲ ಬಾರಿಗೆ ರಾಷ್ಟ್ರಮಟ್ಟದ ಕಬಡ್ಡಿ ಪಂದ್ಯಾವಳಿಯನ್ನು ಆಯೋಜಿಸಲಾಗಿದೆ. ಈ ಕ್ರೀಡಾಕೂಟಕ್ಕೆ ಉಸ್ತುವಾರಿ ಸಚಿವ ಕೆ.ಎಂ. ಶಿವಲಿಂಗೇಗೌಡರು ಅಖಾಡಕ್ಕಿಳಿದು ವೈಶಿಷ್ಟ್ಯಪೂರ್ಣವಾಗಿ ಚಾಲನೆ ನೀಡಿದರು. ಸಚಿವರು ಸ್ವತಃ ರೈಡರ್ ಆಗಿ ಕಬಡ್ಡಿ ಕಣಕ್ಕಿಳಿದು, ಕ್ರೀಡಾಪಟುಗಳಿಗೆ ಮತ್ತು ಸಾರ್ವಜನಿಕರಿಗೆ ಸ್ಫೂರ್ತಿ ತುಂಬಿದರು. ಸಚಿವರ ಈ ಸಾಹಸಕ್ಕೆ ನೆರೆದಿದ್ದ ಜನಸ್ತೋಮ ಸಿಳ್ಳೆ ಹಾಗೂ ಚಪ್ಪಾಳೆಗಳ ಮೂಲಕ ಅಭೂತಪೂರ್ವ ಬೆಂಬಲ ಸೂಚಿಸಿತು. ಜಿಲ್ಲಾಧಿಕಾರಿ ಲತಾಕುಮಾರಿ ಅವರೂ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಹಾಸನಾಂಬೆ ದರ್ಶನೋತ್ಸವದ ಇತಿಹಾಸದಲ್ಲೇ ರಾಜ್ಯ ಮತ್ತು ರಾಷ್ಟ್ರಮಟ್ಟದ ಕ್ರೀಡಾಕೂಟಗಳನ್ನು ಆಯೋಜಿಸಿರುವುದು ಇದೇ ಮೊದಲು. ಈ ಕಬಡ್ಡಿ ಪಂದ್ಯಾವಳಿಯು ಜಾತ್ರೆಯ ಸಡಗರಕ್ಕೆ ಮತ್ತಷ್ಟು ಮೆರುಗು ನೀಡಿದೆ. ಕ್ರೀಡಾ ಮನೋಭಾವ ಬೆಳೆಸುವ ನಿಟ್ಟಿನಲ್ಲಿ ಸಚಿವರ ಈ ಕಾರ್ಯ ಶ್ಲಾಘನೀಯವಾಗಿದೆ ಎಂದು ಸ್ಥಳೀಯರು ಅಭಿಪ್ರಾಯಪಟ್ಟಿದ್ದಾರೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

