ಬಿಗ್ ಬಾಸ್ ಫಾರ್ಮ್ಯಾಟ್ ಬಗ್ಗೆ ಭವ್ಯಾಗೆ ಅಸಮಾಧಾನ; ಕಿಚ್ಚನ ಕ್ಲಾಸ್ ಫಿಕ್ಸ್?

ಬಿಗ್ ಬಾಸ್ ಕನ್ನಡದಲ್ಲಿ ಭವ್ಯಾ ಗೌಡ ಅವರು ಆಟದ ಫಾರ್ಮ್ಯಾಟ್ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಒಂದು ಟಾಸ್ಕ್‌ನಲ್ಲಿ ಅವರ ಅಂಕಗಳನ್ನು ಇನ್ನೊಬ್ಬ ಸ್ಪರ್ಧಿ ಕಸಿದುಕೊಂಡಿದ್ದರಿಂದ ಈ ಅಸಮಾಧಾನ ಉಂಟಾಗಿದೆ. ಧನರಾಜ್ ಗೆದ್ದ ಟಾಸ್ಕ್‌ನಲ್ಲಿ ಭವ್ಯಾ ಅವರ ಅಂಕಗಳನ್ನು ಕಡಿಮೆ ಮಾಡಲಾಗಿದೆ ಎಂದು ಅವರು ಆಕ್ಷೇಪಿಸಿದ್ದಾರೆ. ಇದರಿಂದಾಗಿ ಅವರು ಬಿಗ್ ಬಾಸ್ ಫಾರ್ಮ್ಯಾಟ್ ಅನ್ಯಾಯವಾಗಿದೆ ಎಂದು ಹೇಳಿದ್ದಾರೆ.

ಬಿಗ್ ಬಾಸ್ ಫಾರ್ಮ್ಯಾಟ್ ಬಗ್ಗೆ ಭವ್ಯಾಗೆ ಅಸಮಾಧಾನ; ಕಿಚ್ಚನ ಕ್ಲಾಸ್ ಫಿಕ್ಸ್?
ಭವ್ಯಾ
Follow us
ರಾಜೇಶ್ ದುಗ್ಗುಮನೆ
|

Updated on: Jan 15, 2025 | 7:27 AM

ಬಿಗ್ ಬಾಸ್ ಫಾರ್ಮ್ಯಾಟ್ ಬಗ್ಗೆ ಹೊಸದಾಗಿ ಹೇಳಬೇಕಾಗಿಲ್ಲ. ಆಟ ಯಾವಾಗ ಹೇಗೆ ಬೇಕಾದರೂ ತಿರುಗಬಹುದು. ಆಟ ಇದೇ ರೀತಿ ಇರುತ್ತದೆ ಎಂದು ಊಹೀಸೋದು ಕಷ್ಟ. ಇದು ಆಡುವ ಆಟಗಾರರಿಗೆ ಹಾಗೂ ವೀಕ್ಷಕರಿಗೆ ಗೊತ್ತಿರುತ್ತದೆ. ಆದಾಗ್ಯೂ ಕೆಲವು ಸಂದರ್ಭದಲ್ಲಿ ಸ್ಪರ್ಧಿಗಳು ಬಿಗ್ ಬಾಸ್ ಬಗ್ಗೆ ಅಸಮಾಧಾನ ಹೊರಹಾಕಿದ ಉದಾಹರಣೆ ಇದೆ. ಈಗ ಭವ್ಯಾ ಗೌಡ ಅವರು ಇದಕ್ಕೆ ಹೊಸ ಸೇರ್ಪಡೆ.

ಈ ಮೊದಲು ಬಿಗ್ ಬಾಸ್​ಗೆ ಬಂದ ಅನೇಕ ಸ್ಪರ್ಧಿಗಳು ಆಟದ ವಿರುದ್ಧ ಅಸಮಾಧಾನ ಹೊರಹಾಕಿದ್ದು ಇದೆ. ಆರ್ಯವರ್ಧನ್ ಗುರೂಜಿ, ಈ ಸೀಸನ್​ನ ಲಾಯರ್ ಜಗದೀಶ್ ಹೀಗೆ ಅನೇಕರು ಈ ಸಾಲಿನಲ್ಲಿ ಇದ್ದಾರೆ. ಆದರೆ, ಭವ್ಯಾ ಕೂಡ ಈ ಸಾಲಿಗೆ ಸೇರಿಕೊಳ್ಳುತ್ತಾರೆ ಎಂದು ಯಾರೂ ಊಹಿಸಿರಲಿಲ್ಲ.

‘ಬಿಗ್ ಬಾಸ್’ ಮಧ್ಯವಾರದ ಎಲಿಮಿನೇಷ್​ನಿಂದ ಬಚಾವ್ ಆಗಲು ಸ್ಪರ್ಧಿಗಳಿಗೆ ಬಿಗ್ ಬಾಸ್ ವಿವಿಧ ಟಾಸ್ಕ್ ನೀಡಿದ್ದರು. ಗೆದ್ದ ಸ್ಪರ್ಧಿಗೆ 100 ಅಂಕ, ಎರಡನೇ ಬಂದ ಸ್ಪರ್ಧಿಗೆ 50 ಹಾಗೂ ಮೂರನೇ ಬಂದ ಸ್ಪರ್ಧಿಗೆ 25 ಅಂಕ ಸಿಕ್ಕಿತ್ತು. ಕೊನೆಯ ಟಾಸ್ಕ್​ನಲ್ಲಿ ಬಿಗ್ ಬಾಸ್ ಒಂದು ಅವಕಾಶ ನೀಡಿದರು. ಯಾರು ಕೊನೆಯ ಟಾಸ್ಕ್​ ಗೆಲ್ಲುತ್ತಾರೋ ಅವರಿಗೆ 100 ಅಂಕಗಳ ಜೊತೆ ಯಾವುದಾದರೂ ಒಂದು ಸ್ಪರ್ಧಿಯ ಅಂಕದಿಂದ ಶೇ.50 ಪಾಯಿಂಟ್ಸ್​ ಕಸಿದುಕೊಳ್ಳುವ ಅವಕಾಶ ಇತ್ತು.

ಆ ಟಾಸ್ಕ್​ನ ಧನರಾಜ್ ಅವರು ಗೆದ್ದರು. ಜೊತೆಗೆ ಭವ್ಯಾ ಅವರಿಂದ ಶೇ.50 ಪಾಯಿಂಟ್ಸ್ ಕಸಿದುಕೊಂಡರು. ಇದು ಭವ್ಯಾ ಅಸಮಾಧಾನಕ್ಕೆ ಕಾರಣ ಆಯಿತು. ಅವರು ಈ ಫಾರ್ಮ್ಯಾಟ್ ಬಗ್ಗೆ ತ್ರಿವಿಕ್ರಂ ಬಳಿ ಅಸಮಾಧಾನ ಹೊರಹಾಕಿದ್ದಾರೆ.

ಇದನ್ನೂ ಓದಿ: ಮತ್ತೆ ಒಂದಾದ ಮಂಜು, ಮೋಕ್ಷಿತಾ, ಗೌತಮಿ; ಇದೇನು ಹೊಸ ಡ್ರಾಮಾ? 

‘ಇವರ ಫಾರ್ಮ್ಯಾಟ್ ಇಷ್ಟ ಆಗಿಲ್ಲ. ಮೈ ಕೈ ಹರಿದುಕೊಂಡು ಆಡಿದ್ದು ನಾವು, ಇನ್ಯಾರಿಗೋ ಪಾಯಿಂಟ್ಸ್ ಹೋಯಿತು. ನನನಗೆ ಪೂರ್ತಿ ಪಾಯಿಂಟ್ಸ್ ಬೇಕು. ಕನ್​ಫ್ಯೂಸ್ ಮಾಡಿ ಬಿಡ್ತೀರಾ. ಆ ಮೇಲೆ ನೀವು ಕನ್​ಫ್ಯೂಸ್ ಆದ್ರಿ ಅಂತೀರಾ’ ಎಂದು ಭವ್ಯಾ ಬಿಗ್ ಬಾಸ್ ವಿರುದ್ಧವೇ ಅಸಮಾಧಾನ ಹೊರಹಾಕಿದ್ದಾರೆ. ಈ ವಾರಾಂತ್ಯದಲ್ಲಿ ಸುದೀಪ್ ಈ ವಿಚಾರ ಮಾತನಾಡುವ ಸಾಧ್ಯತೆ ಇದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ಜಾತ್ರೆಗೆ ನುಗ್ಗಿದ ಕಾರು: ಯುವತಿ ಸಾವು, 8 ಜನರಿಗೆ ಗಂಭೀರ ಗಾಯ..!
ಜಾತ್ರೆಗೆ ನುಗ್ಗಿದ ಕಾರು: ಯುವತಿ ಸಾವು, 8 ಜನರಿಗೆ ಗಂಭೀರ ಗಾಯ..!
ಸರ್ಕಾರದ ಅಸ್ಥಿಪಂಜರ ಮಾತ್ರ ಉಳಿದಿದೆ, ಸುಟ್ಟುಹೋಗೋದು ನಿಶ್ಚಿತ: ಸೋಮಣ್ಣ
ಸರ್ಕಾರದ ಅಸ್ಥಿಪಂಜರ ಮಾತ್ರ ಉಳಿದಿದೆ, ಸುಟ್ಟುಹೋಗೋದು ನಿಶ್ಚಿತ: ಸೋಮಣ್ಣ
ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಮನೆಗೆ ನುಗ್ಗಿದ ಚಿರತೆ, ವಿಡಿಯೋ ನೋಡಿ
ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಮನೆಗೆ ನುಗ್ಗಿದ ಚಿರತೆ, ವಿಡಿಯೋ ನೋಡಿ
ತ್ರಿವೇಣಿ ಸಂಗಮ ರಸ್ತೆಯಲ್ಲಿ ನಂದಿನಿ ಹಾಲಿಂದ ತಯಾರಾಗುವ ಬಿಸಿಬಿಸಿ ಚಹಾ ಲಭ್ಯ
ತ್ರಿವೇಣಿ ಸಂಗಮ ರಸ್ತೆಯಲ್ಲಿ ನಂದಿನಿ ಹಾಲಿಂದ ತಯಾರಾಗುವ ಬಿಸಿಬಿಸಿ ಚಹಾ ಲಭ್ಯ
ಅಹಮದಾಬಾದ್‌ನಲ್ಲಿ ಮಕರ ಸಂಕ್ರಾಂತಿ ಹಬ್ಬಕ್ಕೆ ಗಾಳಿಪಟ ಹಾರಿಸಿದ ಅಮಿತ್ ಶಾ
ಅಹಮದಾಬಾದ್‌ನಲ್ಲಿ ಮಕರ ಸಂಕ್ರಾಂತಿ ಹಬ್ಬಕ್ಕೆ ಗಾಳಿಪಟ ಹಾರಿಸಿದ ಅಮಿತ್ ಶಾ
ಹಿಂದಿನ ಸರ್ಕಾರ ಸಾಲಗಳನ್ನು ನಮ್ಮ ಸರ್ಕಾರ ತೀರಿಸುತ್ತಿದೆ: ಪ್ರಿಯಾಂಕ್ ಖರ್ಗೆ
ಹಿಂದಿನ ಸರ್ಕಾರ ಸಾಲಗಳನ್ನು ನಮ್ಮ ಸರ್ಕಾರ ತೀರಿಸುತ್ತಿದೆ: ಪ್ರಿಯಾಂಕ್ ಖರ್ಗೆ
ನಾಳೆ ದೆಹಲಿಗೆ ತೆರಳುವ ಮೊದಲು ಎಲ್ಲವನ್ನೂ ಮಾತಾಡುವೆ: ಕುಮಾರಸ್ವಾಮಿ
ನಾಳೆ ದೆಹಲಿಗೆ ತೆರಳುವ ಮೊದಲು ಎಲ್ಲವನ್ನೂ ಮಾತಾಡುವೆ: ಕುಮಾರಸ್ವಾಮಿ
ಮಹಾಕುಂಭದಲ್ಲಿ ಸಂಕ್ರಾಂತಿಯ ದಿನವಾದ ಇಂದು 2.5 ಕೋಟಿ ಭಕ್ತರಿಂದ ತೀರ್ಥ ಸ್ನಾನ
ಮಹಾಕುಂಭದಲ್ಲಿ ಸಂಕ್ರಾಂತಿಯ ದಿನವಾದ ಇಂದು 2.5 ಕೋಟಿ ಭಕ್ತರಿಂದ ತೀರ್ಥ ಸ್ನಾನ
ಮಿಡ್ ವೀಕ್ ಎಲಿನಿಮೇಷನ್ ಟಾಸ್ಕ್, ಗೆದ್ದವರ್ಯಾರು? ಸೋತವರ್ಯಾರು?
ಮಿಡ್ ವೀಕ್ ಎಲಿನಿಮೇಷನ್ ಟಾಸ್ಕ್, ಗೆದ್ದವರ್ಯಾರು? ಸೋತವರ್ಯಾರು?
ವೇದಿಕೆ ಮೇಲೆ ಚರ್ಚೆಯಲ್ಲಿ ಮಗ್ನರಾದ ಕುಮಾರಸ್ವಾಮಿ ಮತ್ತು ವಿಜಯೇಂದ್ರ
ವೇದಿಕೆ ಮೇಲೆ ಚರ್ಚೆಯಲ್ಲಿ ಮಗ್ನರಾದ ಕುಮಾರಸ್ವಾಮಿ ಮತ್ತು ವಿಜಯೇಂದ್ರ