ಮತ್ತೆ ಒಂದಾದ ಮಂಜು, ಮೋಕ್ಷಿತಾ, ಗೌತಮಿ; ಇದೇನು ಹೊಸ ಡ್ರಾಮಾ?

ಬಿಗ್ ಬಾಸ್ ಎಂದರೆ ಕೇವಲ ಟಾಸ್ಕ್​ಗಳ ಆಟ ಅಲ್ಲ. ಎಮೋಷನ್​ಗಳು ಕೂಡ ಇದರಲ್ಲಿ ಮಹತ್ವದ ಪಾತ್ರ ವಹಿಸುತ್ತವೆ. ಯಾರು ಯಾರ ಜೊತೆಗೆ ಕ್ಲೋಸ್ ಆಗಿದ್ದಾರೆ ಎಂಬುದು ಕೂಡ ವೋಟಿಂಗ್ ಮೇಲೆ ಪರಿಣಾಮ ಬೀರಬಹುದು. ಇಷ್ಟು ದಿನ ಕಿತ್ತಾಡಿಕೊಂಡಿದ್ದ ಮೋಕ್ಷಿತಾ ಅವರು ಈಗ ಮತ್ತೆ ಮಂಜು ಮತ್ತು ಗೌತಮಿ ಜೊತೆ ಕೈ ಜೋಡಿಸಿದ್ದಾರೆ.

ಮತ್ತೆ ಒಂದಾದ ಮಂಜು, ಮೋಕ್ಷಿತಾ, ಗೌತಮಿ; ಇದೇನು ಹೊಸ ಡ್ರಾಮಾ?
Bigg Boss Kannada Season 11
Follow us
ಮದನ್​ ಕುಮಾರ್​
|

Updated on: Jan 14, 2025 | 10:31 PM

ಸಾಕಷ್ಟು ಟ್ವಿಸ್ಟ್​ಗಳನ್ನು ಕಂಡ ‘ಬಿಗ್ ಬಾಸ್​ ಕನ್ನಡ ಸೀಸನ್​ 11’ ರಿಯಾಲಿಟಿ ಶೋ ಈಗ ಫಿನಾಲೆಯ ಹಂತಕ್ಕೆ ತಲುಪುತ್ತಿದೆ. ಆರಂಭದಿಂದಲೂ ಗೌತಮಿ ಜಾದವ್, ಮೋಕ್ಷಿತಾ ಪೈ ಹಾಗೂ ಉಗ್ರಂ ಮಂಜು ಅವರು ಆಪ್ತವಾಗಿದ್ದರು. ಆದರೆ ಒಂದಷ್ಟು ದಿನಗಳು ಕಳೆದ ಬಳಿಕ ಮೋಕ್ಷಿತಾ ಅವರು ರೆಬೆಲ್ ಆದರು. ಉಗ್ರಂ ಮಂಜು ಮತ್ತು ಗೌತಮಿ ಜಾದವ್ ಜೊತೆ ಮನಸ್ತಾಪ ಮಾಡಿಕೊಂಡು ಆ ಗುಂಪಿನಿಂದ ಹೊರಗೆ ಬಂದಿದ್ದರು. ಎಷ್ಟೋ ಸಂದರ್ಭಗಳಲ್ಲಿ ಮೋಕ್ಷಿತಾ ಅವರು ಗೌತಮಿ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದರು. ಆದರೆ ಈಗ ಗೇಮ್ ಬದಲಾಗಿದೆ.

ಮೋಕ್ಷಿತಾ ಪೈ ಅವರು ನಿಧಾನಕ್ಕೆ ಬದಲಾಗಿದ್ದಾರೆ. ಸ್ವಾಭಿಮಾನದ ಕಾರಣದಿಂದ ಗೌತಮಿ ಜೊತೆ ಕೈ ಜೋಡಿಸುವುದೇ ಇಲ್ಲ ಎಂದು ಹಠ ಮಾಡುತ್ತಿದ್ದ ಅವರು ಈಗ ಗೌತಮಿ ಜೊತೆ ಮತ್ತೆ ಆಪ್ತವಾಗಿದ್ದಾರೆ. ಉಗ್ರಂ ಮಂಜು ಕಂಡರೆ ಉರಿದುಬೀಳುತ್ತಿದ್ದ ಅವರು ಈಗ ಮಂಜು ಜೊತೆಗೆ ಎಮೋಷನಲ್ ಬಾಂಧವ್ಯ ಬೆಳೆಸಿಕೊಂಡಿದ್ದಾರೆ. ಹಾಗಾಗಿ ಮೊದಲಿನ ದಿನಗಳು ಮರುಕಳಿಸಿವೆ.

ಕೊನೇ ಹಂತದಲ್ಲಿ ಒಂದಾಗಿಯೇ ಆಡೋಣ ಎಂದು ಉಗ್ರಂ ಮಂಜು ಅವರು ಗೌತಮಿ ಮತ್ತು ಮೋಕ್ಷಿತಾಗೆ ಹೇಳಿದ್ದಾರೆ. ಮಿಡ್​ ಮೀಕ್ ಎಲಿಮಿನೇಷನ್ ಇರುವುದರಿಂದ ಒಬ್ಬರು ಹೊರಗೆ ಹೋಗುವುದು ಖಚಿತ. ಅದನ್ನು ನೆನಪಿಸಿಕೊಂಡು ಮೋಕ್ಷಿತಾ ಅವರು ಬಿಕ್ಕಿ ಬಿಕ್ಕಿ ಅತ್ತಿದ್ದಾರೆ. ಗೌತಮಿ ಮತ್ತು ಉಗ್ರಂ ಮಂಜು ಎದುರು ಮೋಕ್ಷಿತಾ ಸಿಕ್ಕಾಪಟ್ಟೆ ಎಮೋಷನಲ್ ಆಗಿದ್ದಾರೆ. ಇದೇನಿದು ಹೊಸ ಡ್ರಾಮಾ ಎಂಬ ಅನುಮಾನ ಕೆಲವರಿಗೆ ಮೂಡಿದರೂ ಅಚ್ಚರಿ ಏನಿಲ್ಲ.

ಇದನ್ನೂ ಓದಿ: ಬಿಗ್ ಬಾಸ್ ಮನೆಯೊಳಗೆ ಸಿದ್ಧವಾಯ್ತು ‘ಬಾಯ್ಸ್ Vs ಗರ್ಲ್ಸ್​’ ಪ್ರೋಮೋ

ಬಿಗ್ ಬಾಸ್ ಆಟದಲ್ಲಿ ಇನ್ನು ಉಳಿದಿರುವುದು ಕೆಲವೇ ದಿನಗಳು ಮಾತ್ರ. ಒಟ್ಟು 8 ಜನರ ನಡುವೆ ಪೈಪೋಟಿ ನಡೆಯುತ್ತಿದೆ. ಎಲ್ಲ ಸ್ಪರ್ಧಿಗಳಿಗೂ ಅವರದ್ದೇ ಆದಂತಹ ಅಭಿಮಾನಿಗಳ ಬಳಗ ಇದೆ. ವೀಕ್ಷಕರಿಂದ ವೋಟ್​ ಬ​ರಬೇಕು ಎಂದರೆ ಹಲವಾರು ಬಗೆಯ ಸರ್ಕಸ್ ಮಾಡಬೇಕಾಗುತ್ತದೆ. ಯಾರ ಜೊತೆಗೆ ಯಾರು ಆಪ್ತವಾಗಿದ್ದಾರೆ ಎಂಬುದು ಕೂಡ ವೀಕ್ಷಕರ ಮೇಲೆ ಪ್ರಭಾವ ಬೀರಬಹುದು. ಮೋಕ್ಷಿತಾ, ಗೌತಮಿ, ಮಂಜು ಒಂದಾಗಬೇಕು ಎಂದು ಬಹುತೇಕ ವೀಕ್ಷಕರು ಬಯಸಿದ್ದರು. ಅಂಥ ವೀಕ್ಷಕರನ್ನು ಸೆಳೆಯಬೇಕು ಎಂಬ ಕಾರಣದಿಂದಲೇ ಮೋಕ್ಷಿತಾ ಅವರು ಗೌತಮಿ ಮತ್ತು ಉಗ್ರಂ ಮಂಜು ಜೊತೆ ಕೈ ಜೋಡಿಸಿದ್ದರೂ ಅಚ್ಚರಿ ಏನಿಲ್ಲ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ಸರ್ಕಾರದ ಅಸ್ಥಿಪಂಜರ ಮಾತ್ರ ಉಳಿದಿದೆ, ಸುಟ್ಟುಹೋಗೋದು ನಿಶ್ಚಿತ: ಸೋಮಣ್ಣ
ಸರ್ಕಾರದ ಅಸ್ಥಿಪಂಜರ ಮಾತ್ರ ಉಳಿದಿದೆ, ಸುಟ್ಟುಹೋಗೋದು ನಿಶ್ಚಿತ: ಸೋಮಣ್ಣ
ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಮನೆಗೆ ನುಗ್ಗಿದ ಚಿರತೆ, ವಿಡಿಯೋ ನೋಡಿ
ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಮನೆಗೆ ನುಗ್ಗಿದ ಚಿರತೆ, ವಿಡಿಯೋ ನೋಡಿ
ತ್ರಿವೇಣಿ ಸಂಗಮ ರಸ್ತೆಯಲ್ಲಿ ನಂದಿನಿ ಹಾಲಿಂದ ತಯಾರಾಗುವ ಬಿಸಿಬಿಸಿ ಚಹಾ ಲಭ್ಯ
ತ್ರಿವೇಣಿ ಸಂಗಮ ರಸ್ತೆಯಲ್ಲಿ ನಂದಿನಿ ಹಾಲಿಂದ ತಯಾರಾಗುವ ಬಿಸಿಬಿಸಿ ಚಹಾ ಲಭ್ಯ
ಅಹಮದಾಬಾದ್‌ನಲ್ಲಿ ಮಕರ ಸಂಕ್ರಾಂತಿ ಹಬ್ಬಕ್ಕೆ ಗಾಳಿಪಟ ಹಾರಿಸಿದ ಅಮಿತ್ ಶಾ
ಅಹಮದಾಬಾದ್‌ನಲ್ಲಿ ಮಕರ ಸಂಕ್ರಾಂತಿ ಹಬ್ಬಕ್ಕೆ ಗಾಳಿಪಟ ಹಾರಿಸಿದ ಅಮಿತ್ ಶಾ
ಹಿಂದಿನ ಸರ್ಕಾರ ಸಾಲಗಳನ್ನು ನಮ್ಮ ಸರ್ಕಾರ ತೀರಿಸುತ್ತಿದೆ: ಪ್ರಿಯಾಂಕ್ ಖರ್ಗೆ
ಹಿಂದಿನ ಸರ್ಕಾರ ಸಾಲಗಳನ್ನು ನಮ್ಮ ಸರ್ಕಾರ ತೀರಿಸುತ್ತಿದೆ: ಪ್ರಿಯಾಂಕ್ ಖರ್ಗೆ
ನಾಳೆ ದೆಹಲಿಗೆ ತೆರಳುವ ಮೊದಲು ಎಲ್ಲವನ್ನೂ ಮಾತಾಡುವೆ: ಕುಮಾರಸ್ವಾಮಿ
ನಾಳೆ ದೆಹಲಿಗೆ ತೆರಳುವ ಮೊದಲು ಎಲ್ಲವನ್ನೂ ಮಾತಾಡುವೆ: ಕುಮಾರಸ್ವಾಮಿ
ಮಹಾಕುಂಭದಲ್ಲಿ ಸಂಕ್ರಾಂತಿಯ ದಿನವಾದ ಇಂದು 2.5 ಕೋಟಿ ಭಕ್ತರಿಂದ ತೀರ್ಥ ಸ್ನಾನ
ಮಹಾಕುಂಭದಲ್ಲಿ ಸಂಕ್ರಾಂತಿಯ ದಿನವಾದ ಇಂದು 2.5 ಕೋಟಿ ಭಕ್ತರಿಂದ ತೀರ್ಥ ಸ್ನಾನ
ಮಿಡ್ ವೀಕ್ ಎಲಿನಿಮೇಷನ್ ಟಾಸ್ಕ್, ಗೆದ್ದವರ್ಯಾರು? ಸೋತವರ್ಯಾರು?
ಮಿಡ್ ವೀಕ್ ಎಲಿನಿಮೇಷನ್ ಟಾಸ್ಕ್, ಗೆದ್ದವರ್ಯಾರು? ಸೋತವರ್ಯಾರು?
ವೇದಿಕೆ ಮೇಲೆ ಚರ್ಚೆಯಲ್ಲಿ ಮಗ್ನರಾದ ಕುಮಾರಸ್ವಾಮಿ ಮತ್ತು ವಿಜಯೇಂದ್ರ
ವೇದಿಕೆ ಮೇಲೆ ಚರ್ಚೆಯಲ್ಲಿ ಮಗ್ನರಾದ ಕುಮಾರಸ್ವಾಮಿ ಮತ್ತು ವಿಜಯೇಂದ್ರ
ಸಚಿವೆ ಚೇತರಿಸಿಕೊಳ್ಳುತ್ತಿದ್ದಾರೆ, ಅವರಿಗೆ ವಿಶ್ರಾಂತಿಯ ಅಗತ್ಯವಿದೆ:ಶಶಿಕಲಾ
ಸಚಿವೆ ಚೇತರಿಸಿಕೊಳ್ಳುತ್ತಿದ್ದಾರೆ, ಅವರಿಗೆ ವಿಶ್ರಾಂತಿಯ ಅಗತ್ಯವಿದೆ:ಶಶಿಕಲಾ