AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ನಾ ನಿನ್ನ ಬಿಡಲಾರೆ’ ಧಾರಾವಾಹಿಯಲ್ಲಿ ಮಹಾ ತಿರುವು; ಹೊಸ ಘಟ್ಟ ಆರಂಭ

 ಜೀ ಕನ್ನಡದ ಜನಪ್ರಿಯ ‘ನಾ ನಿನ್ನ ಬಿಡಲಾರೆ’ ಧಾರಾವಾಹಿಯಲ್ಲಿ ಮಹತ್ವದ ಬದಲಾವಣೆಯಾಗಿದ್ದು, ಹಿತಾ ಪಾತ್ರವು ಅಧಿಕೃತವಾಗಿ ಕೊನೆಗೊಂಡಿದೆ. ದುರ್ಗಾ ಬದುಕಿನಲ್ಲಿ ಖುಷಿ ತುಂಬಲು ಮುದ್ದಾದ ನಂದಿನಿ ಎಂಟ್ರಿ ಕೊಟ್ಟಿದ್ದು, ಧಾರಾವಾಹಿಯು ಹೊಸ ಘಟ್ಟದೊಂದಿಗೆ ರೋಚಕ ತಿರುವು ಪಡೆದುಕೊಂಡಿದೆ. ಆ ಬಗ್ಗೆ ಇಲ್ಲಿದೆ ವಿವರ.

‘ನಾ ನಿನ್ನ ಬಿಡಲಾರೆ’ ಧಾರಾವಾಹಿಯಲ್ಲಿ ಮಹಾ ತಿರುವು; ಹೊಸ ಘಟ್ಟ ಆರಂಭ
ನಾ ನಿನ್ನ ಬಿಡಲಾರೆ
 ಶ್ರೀಲಕ್ಷ್ಮೀ ಎಚ್
| Edited By: |

Updated on:Oct 15, 2026 | 8:12 AM

Share

ಮುಖ್ಯಾಂಶಗಳು

  • ‘ನಾ ನಿನ್ನ ಬಿಡಲಾರೆ’ ಧಾರಾವಾಹಿಯಲ್ಲಿ ಮಹತ್ವದ ಬದಲಾವಣೆ
  • ಹಿತಾ ಪಾತ್ರ ಅಂತ್ಯ
  • ದುರ್ಗಾ ಬಾಳಿಗೆ ಹೊಸ ಬೆಳಕು

ಜೀ ಕನ್ನಡದ ಜನಪ್ರಿಯ ‘ನಾ ನಿನ್ನ ಬಿಡಲಾರೆ’ ಧಾರಾವಾಹಿಯ ಹೊಸ ಪ್ರೋಮೋ ಬಿಡುಗಡೆಯಾಗಿದ್ದು, ಕಥೆಯಲ್ಲಿ ಅಚ್ಚರಿಯ ತಿರುವು ಸಿಕ್ಕಿದೆ. ಧಾರಾವಾಹಿಯಲ್ಲಿ ಈವರೆಗೆ ಗಮನ ಸೆಳೆದಿದ್ದ ಹಿತಾ ಪಾತ್ರವು ಕೊನೆಗೊಂಡಿದ್ದು, ದುರ್ಗಾ ಬದುಕಿಗೆ ಹೊಸ ನಗು ತರಲು ‘ನಂದಿನಿ’ ಎಂಟ್ರಿ ಕೊಟ್ಟಿದ್ದಾಳೆ. ಹಲವು ವರ್ಷಗಳ ಬಳಿಕ ಕಥೆ ಓಪನ್ ಆಗಿದೆ ಅನ್ನೋದು ವಿಶೇಷ.

ದೇಗುಲದ ಪ್ರಾಂಗಣ ಹಾಗೂ ಸುಂದರ ಪರಿಸರದಲ್ಲಿ ಮೂಡಿಬಂದಿರುವ ಈ ಹೊಸ ಪ್ರೋಮೋ ಪ್ರೇಕ್ಷಕರ ಗಮನ ಸೆಳೆದಿದೆ. ದುರ್ಗಾ ಜೀವನದಲ್ಲಿ ಹೊಸ ಘಟ್ಟ ಶುರುವಾಗಿದ್ದು, ನಂದಿನಿಯ ಆಗಮನದಿಂದ ಕಥೆ ಯಾವ ಹಾದಿ ಹಿಡಿಯಲಿದೆ ಎಂಬ ಕುತೂಹಲ ವೀಕ್ಷಕರಲ್ಲಿ ಮೂಡಿದೆ. ದುರ್ಗಾ ಮನೆ ಬಿಡುವಾಗ ಪ್ರೆಗ್ನೆಂಟ್ ಆಗಿದ್ದಳು. ಅವಳಿಗೆ ಈಗ ಮಗು ಹುಟ್ಟಿ, ದೊಡ್ಡವಳಾಗಿದ್ದಾಳೆ. ಅವಳೇ ನಂದಿನಿ.  ರಾತ್ರಿ 10:30ಕ್ಕೆ ಪ್ರಸಾರವಾಗುವ ಈ ಧಾರಾವಾಹಿಯ ಮೇಲಿನ ನಿರೀಕ್ಷೆ ಈಗ ಮತ್ತಷ್ಟು ಹೆಚ್ಚಾಗಿದೆ.

ಇದನ್ನೂ ಓದಿ: ‘ನಾ ನಿನ್ನ ಬಿಡಲಾರೆ’: ದುರ್ಗಾಗೆ ಗೊತ್ತಾಯ್ತು ಅಂಬಿಕಾ ತನ್ನ ಅಕ್ಕ ಅನ್ನೋ ಸತ್ಯ

ರಿಷಿಕಾ ಪೋಸ್ಟ್

‘ನಾ ನಿನ್ನ ಬಿಡಲಾರೆ’ ಧಾರಾವಾಹಿಯಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸಿ ಗಮನ ಸೆಳೆದಿದ್ದ ಮುದ್ದಾದ ಬಾಲನಟಿ ಮಹಿತಾ (ಹಿತಾ ಪಾತ್ರ) ಪಾತ್ರವು ಅಧಿಕೃತವಾಗಿ ಅಂತ್ಯಗೊಂಡಿದೆ. ಈ ಕುರಿತು ಧಾರಾವಾಹಿಯ ಸಹನಟಿ ರಿಷಿಕಾ ಅವರು (ದುರ್ಗಾ ಪಾತ್ರಧಾರಿ) ಸಾಮಾಜಿಕ ಜಾಲತಾಣದಲ್ಲಿ ತಮ್ಮ ಅಕ್ಕರೆ ಹಾಗೂ ವಿಶೇಷ ನಂಟನ್ನು ಭಾವುಕವಾಗಿ ಹಂಚಿಕೊಂಡಿದ್ದಾರೆ.

View this post on Instagram

A post shared by Zee Kannada (@zeekannada)

ರಿಷಿಕಾ ತಮ್ಮ ಪೋಸ್ಟ್‌ನಲ್ಲಿ, ‘ನಾನು ಇದುವರೆಗೆ ನೋಡಿದ ಅತ್ಯಂತ ಚತುರ, ಮುದ್ದಾದ, ಮಾತನಾಡುವ, ಪ್ರತಿಭಾವಂತ ಮತ್ತು ಕೆಲವೊಮ್ಮೆ ಕಿರಿಕಿರಿ ಮಾಡುವ ಮಗು ನೀನು. ನಮ್ಮಿಬ್ಬರ ಕಾಂಬಿನೇಷನ್ ಸೀನ್‌ಗಳು ತುಂಬಾ ಚೆನ್ನಾಗಿದ್ದವು. ಇಂದು ಟೆಲಿಕಾಸ್ಟ್‌ನಲ್ಲಿ ನಿನ್ನ ಪಾತ್ರ ಕೊನೆಗೊಳ್ಳಲಿದೆ, ಆದರೆ ಕೊನೆಯ ದೃಶ್ಯದ ಶೂಟಿಂಗ್ ಮಾಡುವಾಗ ನನಗೆ ತುಂಬ ನೋಯಿಸುವ ಅನುಭವವಾಯಿತು. ನಿನ್ನ ಪ್ರತಿಭೆಯನ್ನು ನೋಡಿ ನನಗೆ ತುಂಬಾ ಹೆಮ್ಮೆಯಾಗುತ್ತದೆ. ನಾನು ಹೊರಗೆ ತೋರಿಸಿಕೊಳ್ಳದಿದ್ದರೂ, ನೀನು ಯಾವಾಗಲೂ ನನ್ನ ನೆಚ್ಚಿನ ಮಗು. ಮುಂದಿನ ಭವಿಷ್ಯಕ್ಕೆ ಶುಭ ಹಾರೈಸುತ್ತೇನೆ, ನಿನ್ನ ಬಾಲ್ಯವನ್ನು ಆನಂದಿಸು, ಚೆನ್ನಾಗಿ ಅನ್ವೇಷಿಸು. ನಾನು ಈಗಾಗಲೇ ನಿನ್ನನ್ನು ಮಿಸ್ ಮಾಡಿಕೊಳ್ಳುತ್ತಿದ್ದೇನೆ ಮಹಿತಾ, ಲವ್ ಯು’ ಎಂದು ಬರೆದುಕೊಂಡು ತಮ್ಮ ಪ್ರೀತಿಯನ್ನು ವ್ಯಕ್ತಪಡಿಸಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On - 8:10 am, Thu, 15 October 26

Follow Us
 ಶ್ರೀಲಕ್ಷ್ಮೀ ಎಚ್
ಶ್ರೀಲಕ್ಷ್ಮೀ ಎಚ್

ಪತ್ರಕರ್ತೆ ಆಗಬೇಕು ಅಂದುಕೊಂಡವಳು. ಮನೆಯವರ ಒತ್ತಾಯಕ್ಕೆ ಅಕೌಂಟ್ ತೆಗೆದುಕೊಂಡೆ. ಈಗ ಬ್ಯಾಂಕ್ ಎಕ್ಸಾಂಗಳನ್ನು ಬರೆಯುತ್ತಿದ್ದೇನೆ. ಸಮಯ ಸಿಕ್ಕಾಗ ಸುತ್ತಾಡುತ್ತೇನೆ. ಓದಿನ ಬಗ್ಗೆ ಅತೀವ ಆಸಕ್ತಿ. ರವಿ ಬೆಳಗೆರೆ, ತೇಜಸ್ವಿ ನೆಚ್ಚಿನವರು. ಅವರ ಪುಸ್ತಕಗಳನ್ನು ಮತ್ತೆ ಮತ್ತೆ ಓದುತ್ತೇನೆ. ಸಮಯ ಸಿಕ್ಕಾಗ ಪತ್ರಿಕೆಗಳಿಗೆ ಕಥೆಗಳನ್ನು ಬರೆಯುತ್ತೇನೆ. ಸಿನಿಮಾ ಬಗ್ಗೆ ಅತೀವ ಆಸಕ್ತಿ. ಈಗ ಟಿವಿ9 ಕನ್ನಡಕ್ಕೆ ಸಿನಿಮಾ ಸುದ್ದಿಗಳನ್ನು ಬರೆಯುತ್ತಿದ್ದೇನೆ.

Read More
ಕೇಂದ್ರ ಸರ್ಕಾರದ ನಿರ್ಧಾರ ಸ್ವಾಗತಿಸಿದ ಕಬ್ಬು ಬೆಳೆಗಾರರು
ಕೇಂದ್ರ ಸರ್ಕಾರದ ನಿರ್ಧಾರ ಸ್ವಾಗತಿಸಿದ ಕಬ್ಬು ಬೆಳೆಗಾರರು
ಮಂಡ್ಯ ಎಳನೀರು ವ್ಯಾಪಾರಿಗಳಿಗೆ ಮಹಾ ದೋಖಾ: 25 ಲಕ್ಷಕ್ಕೂ ಹೆಚ್ಚು ಹಣ ವಂಚನೆ
ಮಂಡ್ಯ ಎಳನೀರು ವ್ಯಾಪಾರಿಗಳಿಗೆ ಮಹಾ ದೋಖಾ: 25 ಲಕ್ಷಕ್ಕೂ ಹೆಚ್ಚು ಹಣ ವಂಚನೆ
ಸಂಧಾನ ಸಭೆ ಯಶಸ್ವಿ: ಮುನಿಸು ಮರೆತು ಪರಸ್ಪರ ಕೈಲುಕಿದ ಹಾಸನ ಡಿಸಿ-ಎಸ್ಪಿ
ಸಂಧಾನ ಸಭೆ ಯಶಸ್ವಿ: ಮುನಿಸು ಮರೆತು ಪರಸ್ಪರ ಕೈಲುಕಿದ ಹಾಸನ ಡಿಸಿ-ಎಸ್ಪಿ
ನಮ್ಮ ಮೆಟ್ರೋದಲ್ಲಿ ಮತ್ತೊಂದು ಜೀವಂತ ಹೃದಯ ಸಾಗಣೆ: ವಿಡಿಯೋ ನೋಡಿ
ನಮ್ಮ ಮೆಟ್ರೋದಲ್ಲಿ ಮತ್ತೊಂದು ಜೀವಂತ ಹೃದಯ ಸಾಗಣೆ: ವಿಡಿಯೋ ನೋಡಿ
ಯಲಹಂಕ ಬಳಿ ನಿಂತಿದ್ದ ರೈಲು ಬೋಗಿಗಳು ಬೆಂಕಿಗೆ ಆಹುತಿ
ಯಲಹಂಕ ಬಳಿ ನಿಂತಿದ್ದ ರೈಲು ಬೋಗಿಗಳು ಬೆಂಕಿಗೆ ಆಹುತಿ
ಈ ಬಾರಿ ಬಿಗ್​​ಬಾಸ್ ಫಿನಾಲೆಗೆ ಬರುವವರು ಯಾರು? ಮಂಜನ ಉತ್ತರ ಹೀಗಿತ್ತು
ಈ ಬಾರಿ ಬಿಗ್​​ಬಾಸ್ ಫಿನಾಲೆಗೆ ಬರುವವರು ಯಾರು? ಮಂಜನ ಉತ್ತರ ಹೀಗಿತ್ತು
ಅಂಬಾರಿ ಹೊರುವ ಆನೆಯ ಆಯ್ಕೆ ಹೇಗೆ ನಡೆಯುತ್ತದೆ?
ಅಂಬಾರಿ ಹೊರುವ ಆನೆಯ ಆಯ್ಕೆ ಹೇಗೆ ನಡೆಯುತ್ತದೆ?
ರಮೇಶ್​​ ಜಾರಕಿಹೊಳಿ ಭೇಟಿ ರಹಸ್ಯ ಬಿಚ್ಚಿಟ್ಟ ಸಿದ್ದರಾಮಯ್ಯ
ರಮೇಶ್​​ ಜಾರಕಿಹೊಳಿ ಭೇಟಿ ರಹಸ್ಯ ಬಿಚ್ಚಿಟ್ಟ ಸಿದ್ದರಾಮಯ್ಯ
ಪರಿಣಾಮ ನೆಟ್ಟಗೆ ಇರಲ್ಲ: ಕಿಚ್ಚ ಸುದೀಪ್ ಅಭಿಮಾನಿಗಳಿಗೆ ಉಗ್ರಪ್ಪ ಎಚ್ಚರಿಕೆ
ಪರಿಣಾಮ ನೆಟ್ಟಗೆ ಇರಲ್ಲ: ಕಿಚ್ಚ ಸುದೀಪ್ ಅಭಿಮಾನಿಗಳಿಗೆ ಉಗ್ರಪ್ಪ ಎಚ್ಚರಿಕೆ
ಕುಟುಂಬದ ಹಿನ್ನೆಲೆ ಬಗ್ಗೆ ಮಾತನಾಡಿದ ‘ಬಿಗ್ ಬಾಸ್ ಕನ್ನಡ 13’ ಸ್ಪರ್ಧಿ ಮಂಜ
ಕುಟುಂಬದ ಹಿನ್ನೆಲೆ ಬಗ್ಗೆ ಮಾತನಾಡಿದ ‘ಬಿಗ್ ಬಾಸ್ ಕನ್ನಡ 13’ ಸ್ಪರ್ಧಿ ಮಂಜ