‘ಬಿಗ್ ಬಾಸ್ ಕನ್ನಡ ಸೀಸನ್ 11’ ಶೋನಲ್ಲಿ ಈಗ ಇಬ್ಬರು ಕ್ಯಾಪ್ಟನ್ ಆಗಿದ್ದಾರೆ. ತ್ರಿವಿಕ್ರಮ್ ಮತ್ತು ಐಶ್ವರ್ಯಾ ಸಿಂಧೋಗಿ ಅವರು ಕ್ಯಾಪ್ಟನ್ ಸ್ಥಾನ ಅಲಂಕರಿಸಿದ್ದಾರೆ. ಈ ವಾರದ ನಾಮಿನೇಷನ್ಗೆ ಅವರಿಬ್ಬರು ಇನ್ನಿಬ್ಬರನ್ನು ನೇರವಾಗಿ ನಾಮಿನೇಟ್ ಮಾಡಬೇಕಿತ್ತು. ಅದಕ್ಕೆ ಉಗ್ರಂ ಮಂಜು ಮತ್ತು ಮಾನಸಾ ಅವರ ಹೆಸರನ್ನು ನಾಮಿನೇಟ್ ಮಾಡಿದ್ದಾರೆ. ಆದರೆ ಮಾನಸಾ ಅವರು ಈ ನಾಮಿನೇಷನ್ ಅನ್ನು ಒಪ್ಪಿಕೊಂಡಿಲ್ಲ. ತಮ್ಮ ನಾಮಿನೇಷನ್ಗೆ ಐಶ್ವರ್ಯಾ ನೀಡಿದ ಕಾರಣಗಳನ್ನು ಮಾಸನಾ ವಿರೋಧಿಸಿದ್ದಾರೆ. ಈ ಸಂದರ್ಭದಲ್ಲಿ ಅವರಿಬ್ಬರ ನಡುವೆ ಜಗಳ ನಡೆದಿದೆ.
ಮಾನಸಾ ಅವರು ಅವಕಾಶ ಸಿಕ್ಕಾಗಲೆಲ್ಲ ಜಗಳ ಮಾಡುತ್ತಾರೆ. ಆ ಗುಣ ಕೆಲವರಿಗೆ ಇಷ್ಟ ಆಗುತ್ತಿಲ್ಲ. ಇನ್ನೂ ಕೆಲವೊಮ್ಮೆ ಅವರು ಅಳುತ್ತಾ ಕೂತಿರುತ್ತಾರೆ. ಆ ಸಂದರ್ಭದಲ್ಲಿ ಅವರನ್ನು ಸಮಾಧಾನ ಮಾಡಲು ಹೋದವರಿಗೆ ಸರಿಯಾಗಿ ಸ್ಪಂದಿಸುವುದಿಲ್ಲ ಎಂದು ಐಶ್ವರ್ಯಾ ಹೇಳಿದ್ದಾರೆ. ಈ ಹಿಂದೆ ಮಾಸನಾ ಅವರಿಗೆ ವಹಿಸಿದ ಕೆಲಸಗಳನ್ನು ಸರಿಯಾಗಿ ಮಾಡಿಲ್ಲ ಎಂದು ಕೂಡ ಹೇಳಲಾಗಿದೆ. ಈ ಕಾರಣವನ್ನು ಕೂಡ ಮಾನಸಾ ಅವರು ವಿರೋಧಿಸಿದ್ದಾರೆ.
ನಾಮಿನೇಷನ್ ಪ್ರಕ್ರಿಯೆ ಮುಗಿದ ಬಳಿಕ ಮಾನಸಾ ಮತ್ತು ಐಶ್ವರ್ಯಾ ನಡುವೆ ಮಾತಿನ ಚಕಮಕಿ ಜೋರಾಯಿತು. ‘ನಾನು ಅಳುವಾಗ ಸಮಾಧಾನ ಮಾಡೋಕೆ ನೀನು ಯಾವಳು’ ಎಂದರು ಮಾನಸಾ. ಅದರಿಂದ ಐಶ್ವರ್ಯಾ ಅವರಿಗೆ ಸಿಕ್ಕಾಪಟ್ಟೆ ಸಿಟ್ಟು ಬಂದಿದೆ. ‘ಯಾವಳು ಅಂತೆಲ್ಲ ಈ ರೀತಿ ಮಾತನಾಡಬೇಡಿ. ನೀವು ಹೊರಗಡೆ ಚೆನ್ನಾಗಿ ಕಾಣಿಸಲ್ಲ’ ಎಂದು ಮಾನಸಾಗೆ ಐಶ್ವರ್ಯಾ ಹೇಳಿದ್ದಾರೆ. ‘ಕಾಣಿಸೋದು ಬೇಡ ಬಿಡು’ ಎಂದು ಮಾನಸಾ ಇನ್ನಷ್ಟು ಕೂಗಾಡಿದ್ದಾರೆ.
ಇದನ್ನೂ ಓದಿ: ಅಭಿಷೇಕ್ ಬಚ್ಚನ್ ಹಾಗೂ ಐಶ್ವರ್ಯಾ ನಡುವಿನ ವಯಸ್ಸಿನ ಅಂತರವೆಷ್ಟು? ಅಭಿಷೇಕ್ ಹಿರಿಯರಲ್ಲ
ಈ ವಾರದ ಎಲಿಮಿನೇಷನ್ಗೆ ಗೋಲ್ಡ್ ಸುರೇಶ್, ಮೋಕ್ಷಿತಾ ಪೈ, ಚೈತ್ರಾ ಕುಂದಾಪುರ, ಗೌತಮಿ ಜಾಧವ್, ಭವ್ಯಾ ಗೌಡ, ಹಂಸಾ, ಶಿಶಿರ್, ಉಗ್ರಂ ಮಂಜ ಹಾಗೂ ಮಾನಸಾ ಅವರು ನಾಮಿನೇಟ್ ಆಗಿದ್ದಾರೆ. ‘ಎಂಟರ್ಟೇನ್ಮೆಂಟ್ ನೀಡುತ್ತಿಲ್ಲ’ ಎಂದು ಕಾರಣವನ್ನು ನೀಡಿ ತಮ್ಮನ್ನು ನಾಮಿನೇಟ್ ಮಾಡಿದ್ದಕ್ಕೆ ಉಗ್ರಂ ಮಂಜು ಕೂಡ ಕೂಗಾಡಿದ್ದಾರೆ. ನಾನು ಇನ್ಮೇಲೆ ಮನೆಯ ಕೆಲಸ ಮಾಡಲ್ಲ, ಬರೀ ಮನರಂಜನೆ ನೀಡುತ್ತೇನೆ ಎಂದು ಅವರು ಹೇಳಿದ್ದಾರೆ. ಇದರಿಂದ ಮನೆಯ ಕ್ಯಾಪ್ಟನ್ ತ್ರಿವಿಕ್ರಮ್ ಮತ್ತು ಮಂಜು ನಡುವೆ ಕಿರಿಕ್ ಆಗುವ ಸಾಧ್ಯತೆ ಇದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.