ಬಿಗ್ ಬಾಸ್ ಬಳಿಕ ಧಾರಾವಾಹಿ ಆಫರ್ ಪಡೆದ ನಟಿ ಮಂಜು ಭಾಷಿಣಿ

ನಟಿ ಮಂಜು ಭಾಷಿಣಿ ಬಿಗ್ ಬಾಸ್ ನಂತರ ಇದೀಗ ಕಲರ್ಸ್ ಕನ್ನಡದ ಜನಪ್ರಿಯ ಧಾರಾವಾಹಿ ‘ಶ್ರೀ ಗಂಧದಗುಡಿ’ಗೆ ಸೇರ್ಪಡೆಯಾಗಿದ್ದಾರೆ. ಕಿರುತೆರೆ ವೀಕ್ಷಕರಿಗೆ ಅವರ ಹೊಸ ಪಾತ್ರದ ಬಗ್ಗೆ ಕುತೂಹಲ ಹೆಚ್ಚಿದೆ. ಇದು ಅತಿಥಿ ಪಾತ್ರವೇ ಅಥವಾ ಮುಖ್ಯ ಪಾತ್ರವೇ ಎಂಬುದು ಸದ್ಯಕ್ಕೆ ನಿಗೂಢ. ಪ್ರತಿ ರಾತ್ರಿ 8 ಗಂಟೆಗೆ ಪ್ರಸಾರವಾಗುವ ಈ ಧಾರಾವಾಹಿಯಲ್ಲಿ ಮಂಜು ಭಾಷಿಣಿ ಅವರ ಅಭಿನಯ ನೋಡಲು ಅಭಿಮಾನಿಗಳು ಕಾತುರರಾಗಿದ್ದಾರೆ.

ಬಿಗ್ ಬಾಸ್ ಬಳಿಕ ಧಾರಾವಾಹಿ ಆಫರ್ ಪಡೆದ ನಟಿ ಮಂಜು ಭಾಷಿಣಿ
ಮಂಜು
Edited By:

Updated on: Nov 24, 2025 | 10:29 AM

ನಟಿ ಮಂಜು ಭಾಷಿಣಿ ಅವರ ಬಗ್ಗೆ ಯಾರಿಗೆ ತಾನೇ ಗೊತ್ತಿಲ್ಲ ಹೇಳಿ. ಕಿರುತೆರೆ ವೀಕ್ಷಕರಿಗೆ ಅವರ ಪರಿಚಯ ಇದ್ದೇ ಇರುತ್ತದೆ. ಮಂಜು ಭಾಷಿಣಿ ಅವರು ಈ ಬಾರಿಯ ಬಿಗ್ ಬಾಸ್​ಗೆ ಬಂದಿದ್ದರು. ಈಗ ಅವರು ಕಲರ್ಸ್ ಕನ್ನಡದ ಧಾರಾವಾಹಿ ‘ಶ್ರೀ ಗಂಧದಗುಡಿ’ಯಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಈ ವಿಷಯ ಅವರ ಅಭಿಮಾನಿಗಳಿಗೆ ಖುಷಿ ನೀಡಿದೆ. ಪ್ರತಿ ರಾತ್ರಿ 8 ಗಂಟೆಗೆ ‘ಶ್ರೀ ಗಂಧದಗುಡಿ’ ಧಾರಾವಾಹಿ ಪ್ರಸಾರ ಕಾಣುತ್ತಿದೆ.

‘ಶ್ರೀ ಗಂಧದಗುಡಿ’ ಮನೆಗೆ ಮಂಜು ಭಾಷಿಣಿಬರುತ್ತಿದ್ದಾರೆ. ಈ ಬಗ್ಗೆ ಕಲರ್ಸ್ ಕನ್ನಡದಿಂದಲೇ ಮಾಹಿತಿ ಸಿಕ್ಕಿದೆ. ಅವರದ್ದು ಅತಿಥಿ ಪಾತ್ರವೋ ಅಥವಾ ಧಾರಾವಾಹಿ ಉದ್ದಕ್ಕೂ ಅವರ ಪಾತ್ರ ಇರಲಿದೆಯೇ ಎಂಬ ಪ್ರಶ್ನೆ ಮೂಡಿದೆ. ಅದಕ್ಕೆ ಧಾರಾವಾಹಿಯಲ್ಲೇ ಉತ್ತರ ಸಿಗಬೇಕಿದೆ.

ಮಂಜು ಭಾಷಿಣಿ ಅವರು ಈ ಮೊದಲು ‘ಸಿಲ್ಲಿ ಲಲ್ಲಿ’ ಧಾರಾವಾಹಿಯಲ್ಲಿ ‘ಸಮಾಜ ಸೇವಕಿ ಲಲಿತಾಂಬ’ ಹೆಸರಿನ ಪಾತ್ರ ಮಾಡಿದ್ದರು. ಆ ಬಳಿಕ ಅವರು ‘ಪುಟ್ಟಕ್ಕನ ಮಕ್ಕಳು’ ಧಾರಾವಾಹಿಯಲ್ಲಿ ಬಡ್ಡಿ ಬಂಗಾರಮ್ಮನ ಪಾತ್ರದಲ್ಲಿ ಕಾಣಿಸಿಕೊಂರು. ಈ ಪಾತ್ರ ಕೊನೆಯಾಗಿದೆ. ಅವರು ಬಿಗ್ ಬಾಸ್​ನಲ್ಲಿ ಕಾಣಿಸಿಕೊಂಡರು. ಇದ್ದಿದ್ದು ಕೆಲವೇ ದಿನವಾದರೂ ಸಾಕಷ್ಟು ಜನಪ್ರಿಯತೆ ಪಡೆದರು.

‘ಬಿಗ್ ಬಾಸ್’ ನಂತರ ಇದೇ ಮೊದಲ ಬಾರಿಗೆ ಅವರು ಧಾರಾವಾಹಿಯಲ್ಲಿ ಕಾಣಿಸಿ ಕೊಳ್ಳುತ್ತಿರೋದು ವಿಶೇಷವಾಗಿದೆ. ಅವರನ್ನು ಯಾವ ಪಾತ್ರದಲ್ಲಿ ತೋರಿಸುತ್ತಾರೆ ಅನ್ನೋದು ಸದ್ಯಕ್ಕೆ ಸಸ್ಪೆನ್ಸ್. ಸಂಜನಾ ಬುರ್ಲಿ ಮೊದಲಾದವರು ಧಾರಾವಾಹಿಯಲ್ಲಿ ನಟಿಸಿದ್ದಾರೆ.

ಇದನ್ನೂ ಓದಿ: 3 ಲಕ್ಷ ರೂ. ಬಟ್ಟೆ ಖರೀದಿಸಿದ್ದೆ ಎನ್ನುತ್ತಲೇ ಸಂಭಾವನೆ ಬಗ್ಗೆಯೂ ಹೇಳಿದ ಮಂಜು ಭಾಷಿಣಿ

ಮಂಜು ಭಾಷಿಣಿ ಅವರು ಬಿಗ್ ಬಾಸ್​ ಮನೆಯಲ್ಲಿ ಇನ್ನೂ ಹಲವು ದಿನ ಇರುವ ಉದ್ದೇಶ ಹೊಂದಿದ್ದರು. ಆದರೆ ಕಡಿಮೆ ವೋಟ್ ಪಡೆದು ಅವರು ಹೊರ ಬಂದರು. ಅವರಿಗೆ ಇದು ಬೇಸರ ಮೂಡಿಸಿತ್ತು. ಅವರು ಬಿಗ್ ಬಾಸ್ ಮನೆಗೆ ತೆರಳಲು ಲಕ್ಷಾಂತರ ರೂಪಾಯಿಯ ಬಟ್ಟಯನ್ನು ಖರೀದಿ ಮಾಡಿದ್ದರು. ಅಶ್ವಿನಿ ಗೌಡ ಅವರು ರಕ್ಷಿತಾ ಮೇಲೆ ತೋರಿದ ದಬ್ಬಾಳಿಕೆಯನ್ನು ಅವರು ಖಂಡಿಸಿದ್ದರು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.