ನಾನು ಬಿಗ್ ಬಾಸ್​​ಗೆ ಹೋಗ್ತೀನಿ: ಜನರ ಎದುರು ಸೀಕ್ರೇಟ್ ಬಿಚ್ಚಿಟ್ಟ ಮಾಸ್ಕ್ ಮ್ಯಾನ್

ಎಲ್ಲ ಕಡೆಗಳಲ್ಲೂ ಮಾಸ್ಕ್ ಮ್ಯಾನ್ ಸುದ್ದಿ ಜೋರಾಗಿದೆ. ಬಿಗ್ ಬಾಸ್​ನಲ್ಲೂ ಆತನದ್ದೇ ಸುದ್ದಿ. ಮಾಸ್ಕ್ ಧರಿಸಿದ ವ್ಯಕ್ತಿಯೊಬ್ಬನು ಜನರ ಬಳಿ ಹೋಗಿ ‘ನಾನು ಬಿಗ್ ಬಾಸ್ ಸ್ಪರ್ಧಿ’ ಎಂದಿದ್ದಾನೆ. ಆತ ಯಾರು ಎಂಬುದು ಸದ್ಯಕ್ಕೆ ಬಹಿರಂಗ ಆಗಿಲ್ಲ. ಸೆಪ್ಟೆಂಬರ್ 28ರಂದು ಎಲ್ಲವೂ ಗೊತ್ತಾಗಲಿದೆ.

ನಾನು ಬಿಗ್ ಬಾಸ್​​ಗೆ ಹೋಗ್ತೀನಿ: ಜನರ ಎದುರು ಸೀಕ್ರೇಟ್ ಬಿಚ್ಚಿಟ್ಟ ಮಾಸ್ಕ್ ಮ್ಯಾನ್
Mask Man

Updated on: Sep 26, 2025 | 7:06 PM

‘ಬಿಗ್ ಬಾಸ್ ಕನ್ನಡ ಸೀಸನ್ 12’ (Bigg Boss Kannada Season 12) ರಿಯಾಲಿಟಿ ಶೋ ಸೆಪ್ಟೆಂಬರ್ 28ರಂದು ಶುರು ಆಗಲಿದೆ. ಈ ಬಾರಿ ಯಾವೆಲ್ಲ ಸ್ಪರ್ಧಿಗಳು ಬರುತ್ತಾರೆ ಎಂಬುದನ್ನು ತಿಳಿಯಲು ವೀಕ್ಷಕರು ಕಾದಿದ್ದಾರೆ. ‘ಕಲರ್ಸ್ ಕನ್ನಡ’ ವಾಹಿನಿ ಈಗಾಗಲೇ ಪ್ರೋಮೋಗಳ ಮೂಲಕ ಕೌತುಕ ಹೆಚ್ಚಿಸುತ್ತಿದೆ. ಈಗ ಒಂದು ಹೊಸ ಪ್ರೋಮೋ ಹಂಚಿಕೊಳ್ಳಲಾಗಿದೆ. ಇದರಲ್ಲಿ ಓರ್ವ ಮಾಸ್ಕ್ ಮ್ಯಾನ್ (Mask Man) ಕಾಣಿಸಿಕೊಂಡಿದ್ದಾನೆ. ‘ನಾನು ಈ ಬಾರಿ ಬಿಗ್​ ಬಾಸ್ ಮನೆಗೆ ಹೋಗ್ತೀನಿ’ ಎಂದು ನೇರವಾಗಿ ಜನರ ಬಳಿ ಹೇಳಿಕೊಂಡಿದ್ದಾನೆ. ಆದರೆ ಆತ ಯಾರು ಎಂಬುದು ಸಧ್ಯಕ್ಕೆ ನಿಗೂಢವಾಗಿಯೇ ಇದೆ. ಈ ಪ್ರೋಮೋ ವೈರಲ್ ಆಗುತ್ತಿದೆ.

ಮಾಸ್ಕ್ ಧರಿಸಿದ ವ್ಯಕ್ತಿಯೊಬ್ಬನು ಕ್ಯಾಮೆರಾ, ಮೈಕ್ ಹಿಡಿದುಕೊಂಡು ಜನರ ಬಳಿ ಹೋಗಿ ಮಾತನಾಡಿದ್ದಾನೆ. ಈ ರೀತಿ ಆಗಿರುವುದು ಬಿಗ್ ಬಾಸ್ ಇತಿಹಾಸದಲ್ಲೇ ಮೊದಲು. ತನ್ನ ನಿಜವಾದ ಗುರುತು ಏನೆಂಬುದನ್ನು ಆತ ಬಿಟ್ಟುಕೊಟ್ಟಿಲ್ಲ. ಬೇರೆ ಬೇರೆ ಹೆಸರು ಮತ್ತು ವೃತ್ತಿಯಿಂದ ತನ್ನನ್ನು ಪರಿಚಯಿಸಿಕೊಂಡಿದ್ದಾನೆ. ಆತ ಯಾರು ಎಂಬುದನ್ನು ತಿಳಿಯುವ ಕೌತುಕ ಹೆಚ್ಚಾಗಿದೆ.

‘ನೀವು ಬಿಗ್ ಬಾಸ್​​ಗೆ ಹೋಗ್ತೀರಾ ಎಂದರೆ ನಾವು ನಂಬಲ್ಲ’ ಎಂದು ಕೆಲವರು ಹೇಳಿದ್ದಾರೆ. ಮಾಸ್ಕ್ ಮ್ಯಾನ್​​ಗೆ ಕೆಲವರು ಸಲಹೆ ನೀಡಿದ್ದಾರೆ. ‘ಸರಿಯಾಗಿ ತಂತ್ರಗಾರಿಕೆ ಬಳಸಿ ಗೆಲ್ಲಬೇಕು. ಈಕಡೆ ಒಂದು ಹುಡುಗಿ, ಆ ಕಡೆ ಒಂದು ಹುಡುಗಿ ಹಾಕಿಕೊಳ್ಳಿ. ನಿಯತ್ತಾಗಿ ಆಡಿದವರೇ ಗೆಲ್ಲೋದು. ನೀನು ಕಪ್ ಗೆದ್ದು ತೋರಿಸಬೇಕು’ ಎಂಬಿತ್ಯಾದಿ ಪ್ರತಿಕ್ರಿಯೆಗಳನ್ನು ಜನರು ನೀಡಿದ್ದಾರೆ.

ಮಾಸ್ಕ್ ಮ್ಯಾನ್ ಪ್ರೋಮೋ:

ಮಾತಿನ ಶೈಲಿ ಮತ್ತು ಧ್ವನಿಯನ್ನು ಗಮನಿಸಿದ ಅನೇಕರಿಗೆ ಕೊಂಚ ಅನುಮಾನ ಬಂದಿದೆ. ನಟ ಕಾಕ್ರೋಚ್ ಸುಧಿ ಇರಬಹುದು ಎಂದು ಕೆಲವರು ಕಮೆಂಟ್ ಮಾಡಿದ್ದಾರೆ. ಕಾಕ್ರೋಚ್ ಸುಧಿ ಹೌದೋ ಅಲ್ಲವೋ ಎಂಬುದು ಸೆಪ್ಟೆಂಬರ್ 28ರಂದು ಬಿಗ್ ಬಾಸ್ ಗ್ರ್ಯಾಂಡ್ ಓಪನಿಂಗ್ ವೇದಿಕೆಯಲ್ಲಿ ಗೊತ್ತಾಗಲಿದೆ. ಈ ಬಾರಿ ಸಾಕಷ್ಟು ಹೊಸತನವನ್ನು ಪರಿಚಯಿಸಲಾಗುತ್ತಿದೆ.

ಇದನ್ನೂ ಓದಿ: ಬಿಗ್ ಬಾಸ್​ಗೆ ಶಾಕ್; ಬಿತ್ತು ಎರಡು ಕೋಟಿ ರೂಪಾಯಿ ಕೇಸ್

ನಟ ಕಿಚ್ಚ ಸುದೀಪ್ ಅವರು ‘ಬಿಗ್ ಬಾಸ್ ಕನ್ನಡ ಸೀಸನ್ 12’ ನಿರೂಪಣೆಗೆ ಸಜ್ಜಾಗಿದೆ. ಈಗಾಗಲೇ ಬಿಡುಗಡೆ ಆಗಿರುವ ಪ್ರೋಮೋದಲ್ಲಿ ಅವರ ಗೆಟಪ್ ನೋಡಿ ಅಭಿಮಾನಿಗಳಿಗೆ ಖುಷಿ ಆಗಿದೆ. ವರ್ಷದಿಂದ ವರ್ಷಕ್ಕೆ ಬಿಗ್ ಬಾಸ್ ಕಾರ್ಯಕ್ರಮದ ಕ್ರೇಜ್ ಹೆಚ್ಚಾಗುತ್ತಲೇ ಇದೆ. ಈ ಬಾರಿ ಇನ್ನಷ್ಟು ಗ್ರ್ಯಾಂಡ್ ಆಗಿ ಇರಲಿದೆ. ‘ಕಲರ್ಸ್ ಕನ್ನಡ’ ವಾಹಿನಿ ಮತ್ತು ‘ಜಿಯೋ ಹಾಸ್​ಸ್ಟಾರ್’ ಒಟಿಟಿ ಮೂಲಕ ಬಿಗ್ ಬಾಸ್ ಪ್ರಸಾರ ಆಗಲಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.