‘ಚಿರು ನನಗೋಸ್ಕರ ಕಟ್ಟಿಕೊಟ್ಟ ಕುಟುಂಬ ಇದು’; ‘ಗೋಲ್ಡನ್​ ಗ್ಯಾಂಗ್​’ ಶೋನಲ್ಲಿ ಮೇಘನಾ ಭಾವುಕ ಮಾತು

Edited By:

Updated on: Feb 10, 2022 | 1:41 PM

ಜೀ ಕನ್ನಡ ವಾಹಿನಿಯ ‘ಗೋಲ್ಡನ್​ ಗ್ಯಾಂಗ್​’ ಕಾರ್ಯಕ್ರಮದಲ್ಲಿ ಮೇಘನಾ ರಾಜ್​ ಭಾಗವಹಿಸಿದ್ದಾರೆ. ಫೆ.12 ಮತ್ತು ಫೆ.13ರ ಶನಿವಾರ ಹಾಗೂ ಭಾನುವಾರ ಈ ಎಪಿಸೋಡ್​ಗಳು ಪ್ರಸಾರ ಆಗಲಿವೆ.

1 / 6
ಸೆಲೆಬ್ರಿಟಿಗಳು ತಮ್ಮ ರಿಯಲ್​ ಲೈಫ್​ ಸ್ನೇಹಿತರ ಬಗ್ಗೆ ಮಾತನಾಡುವ ಕಾರ್ಯಕ್ರಮವೇ ‘ಗೋಲ್ಡನ್​ ಗ್ಯಾಂಗ್​’. ನಟ ಗಣೇಶ್​ ಈ ಶೋ ನಿರೂಪಣೆ ಮಾಡುತ್ತಿದ್ದಾರೆ. ಅದರಲ್ಲಿ ಮೇಘನಾ ಮತ್ತು ಅವರ ಸ್ನೇಹಿತರು ಭಾಗವಹಿಸಿದ್ದಾರೆ.

ಸೆಲೆಬ್ರಿಟಿಗಳು ತಮ್ಮ ರಿಯಲ್​ ಲೈಫ್​ ಸ್ನೇಹಿತರ ಬಗ್ಗೆ ಮಾತನಾಡುವ ಕಾರ್ಯಕ್ರಮವೇ ‘ಗೋಲ್ಡನ್​ ಗ್ಯಾಂಗ್​’. ನಟ ಗಣೇಶ್​ ಈ ಶೋ ನಿರೂಪಣೆ ಮಾಡುತ್ತಿದ್ದಾರೆ. ಅದರಲ್ಲಿ ಮೇಘನಾ ಮತ್ತು ಅವರ ಸ್ನೇಹಿತರು ಭಾಗವಹಿಸಿದ್ದಾರೆ.

2 / 6

ಮೇಘನಾ ರಾಜ್​ ಪತಿ ಚಿರಂಜೀವಿ ಸರ್ಜಾ ಅವರು ಸ್ನೇಹಜೀವಿ ಆಗಿದ್ದರು. ಅವರ ನೆನಪುಗಳನ್ನು ಈ ಕಾರ್ಯಕ್ರಮದಲ್ಲಿ ಮೆಲುಕು ಹಾಕಲಾಗಿದೆ. ಈ ವೇಳೆ ಪತಿಯ ಕುರಿತು ಅನೇಕ ಮಾತುಗಳನ್ನು ಮೇಘನಾ ರಾಜ್​ ಹಂಚಿಕೊಂಡಿದ್ದಾರೆ.

3 / 6

‘ಸ್ನೇಹಿತರ ಗ್ರೂಪ್​ ಬಗ್ಗೆ ಚಿರುಗೆ ಯಾವಾಗಲೂ ಒಂದು ಕಾನ್ಫಿಡೆನ್ಸ್​ ಇತ್ತು. ತಮಗೆ ಏನೇ ಕಷ್ಟಬಂದರೂ ಫ್ರೆಂಡ್ಸ್​ ಬರುತ್ತಾರೆ ಅಂತ ಅವರು ಹೇಳಿದ್ದರು. ಚಿರು ನನಗೋಸ್ಕರ ಕಟ್ಟಿಕೊಟ್ಟ ಕುಟುಂಬ ಇದು’ ಎಂದು ಮೇಘನಾ ಹೇಳಿದ್ದಾರೆ.

4 / 6

ಮೇಘನಾ ರಾಜ್​ ಜೊತೆ ಪ್ರಜ್ವಲ್​ ದೇವರಾಜ್​, ರಾಗಿಣಿ ಚಂದ್ರನ್​, ಪನ್ನಗ ಭರಣ ಕೂಡ ‘ಗೋಲ್ಡನ್​ ಗ್ಯಾಂಗ್​’ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದಾರೆ. ಇದರ ಪ್ರೋಮೋ ಈಗಾಗಲೇ ವೈರಲ್​ ಆಗಿದ್ದು, ಪೂರ್ತಿ ಎಪಿಸೋಡ್​ ನೋಡಲು ಫ್ಯಾನ್ಸ್​ ಕಾಯುತ್ತಿದ್ದಾರೆ.

5 / 6

‘ನಮ್ಮ ಜೀವನದ ಒಂದು ಭಾಗವೇ ಇಲ್ಲ ಎಂಬಂತಾಗಿದೆ. ಆ ಜಾಗವನ್ನು ಬೇರೆ ಯಾರೂ ತುಂಬಿಸೋಕೆ ಆಗಲ್ಲ’ ಎಂದು ಪ್ರಜ್ವಲ್ ದೇವರಾಜ್​​ ಹೇಳಿದ್ದಾರೆ. ಅದೇ ರೀತಿ ಪನ್ನಗ ಭರಣ ಕೂಡ ತಮ್ಮ ಗೆಳೆಯನ ನೆನಪುಗಳನ್ನು ಹಂಚಿಕೊಂಡಿದ್ದಾರೆ.

6 / 6

ಜೀವನದ ನೋವುಗಳನ್ನೆಲ್ಲ ಬದಿಗಿಟ್ಟು ನಟಿ ಮೇಘನಾ ಅವರು ಮತ್ತೆ ಬಣ್ಣದ ಲೋಕದಲ್ಲಿ ಸಕ್ರಿಯರಾಗಿದ್ದಾರೆ. ಸಿನಿಮಾಗಳಲ್ಲಿ ನಟಿಸುವುದರ ಜೊತೆಗೆ ಕಿರುತೆರೆ ಕಾರ್ಯಕ್ರಮಗಳಲ್ಲೂ ಅವರು ಭಾಗವಹಿಸುತ್ತಿದ್ದಾರೆ.

Loading...
Unable to load recommendations.
Follow Us