‘ರೋಡಲ್ಲಿ ಓಡಾಡೋಕೆ ಆಗ್ತಿಲ್ಲ’; ಬಿಗ್ ಬಾಸ್​ಗೆ ಬಂದು ಸಮಸ್ಯೆ ಹೇಳಿಕೊಂಡ ಮೈಕಲ್

|

Updated on: Jan 17, 2024 | 7:34 AM

ಎಲಿಮಿನೇಟ್ ಆದ ಸ್ಪರ್ಧಿಗಳು ದೊಡ್ಮನೆಗೆ ಮರಳಿದ್ದಾರೆ. ಮೈಕಲ್ ಆಗಮಿಸುತ್ತಿದ್ದಂತೆ ಇಡೀ ಮನೆಯವರು ಖುಷಿಯಿಂದ ಕುಪ್ಪಳಿಸಿದರು. ‘ಮೈಕಲ್ ರೆಸ್ಪಾನ್ಸ್ ಹೇಗಿದೆ? ನಾರ್ಮಲ್ ಆಗಿ ಓಡಾಬಹುದಾ’ ಎಂದು ನಮ್ರತಾ ಕೇಳಿದರು. ಇದಕ್ಕೆ ಅವರು ಉತ್ತರಿಸಿದ್ದಾರೆ.

‘ರೋಡಲ್ಲಿ ಓಡಾಡೋಕೆ ಆಗ್ತಿಲ್ಲ’; ಬಿಗ್ ಬಾಸ್​ಗೆ ಬಂದು ಸಮಸ್ಯೆ ಹೇಳಿಕೊಂಡ ಮೈಕಲ್
ಮೈಕಲ್ ಅಜಯ್
Follow us on

‘ಬಿಗ್ ಬಾಸ್’ನಿಂದ ಮೈಕಲ್ ಅಜಯ್ (Michael Ajay) ಅವರು ಸಾಕಷ್ಟು ಜನಪ್ರಿಯತೆ ಪಡೆದರು. ಈ ಮೊದಲು ಅವರು ಯಾರು ಎಂಬುದು ಅನೇಕರಿಗೆ ಗೊತ್ತೇ ಇರಲಿಲ್ಲ. ಆದರೆ, ಈಗ ಅವರ ಖ್ಯಾತಿ ಕರ್ನಾಟಕದಾದ್ಯಂತ ಹಬ್ಬಿದೆ. ಅವರನ್ನು ಎಲ್ಲರೂ ಗುರುತಿಸುತ್ತಾರೆ. ಮೊದಲೆಲ್ಲ ಇವರು ಯಾವುದೋ ಆಫ್ರಿಕಾ ದೇಶದ ಪ್ರಜೆ ಇರಬಹುದು ಎಂದು ಎಲ್ಲರೂ ಅಂದುಕೊಳ್ಳುತ್ತಿದ್ದರು. ಆದರೆ, ಈಗ ‘ಮಣ್ಣಿನ ಮಗ’ ಎಂದು ಅವರನ್ನು ಪ್ರೀತಿಯಿಂದ ಕರೆಯುತ್ತಾರೆ. ಬಿಗ್ ಬಾಸ್ ಮನೆಯಲ್ಲಿ ಈ ಬಗ್ಗೆ ಮೈಕಲ್ ಅವರು ಹೇಳಿಕೊಂಡಿದ್ದಾರೆ.

ಮೈಕಲ್ ಅಜಯ್ ನೈಜೀರಿಯಾ ಕನ್ನಡಿಗ. ಅಜ್ಜಿಯಿಂದ ಕನ್ನಡ ಮಾತನಾಡುವುದನ್ನು ಕಲಿತರು. ಅವರು ಬಿಗ್ ಬಾಸ್​ಗೆ ಬಂದಾಗ ಕನ್ನಡ ಮಾತನಾಡುವುದೇ ಒಂದು ಚಾಲೆಂಜ್ ಆಗಿತ್ತು. ಆದರೆ, ಅವರು ಹಿಂಜರಿಯಲಿಲ್ಲ. ಕಷ್ಟಪಟ್ಟು ಕನ್ನಡ ಮಾತನಾಡಿದರು. ಎಲ್ಲ ಕಡೆಗಳಲ್ಲಿ ಕನ್ನಡ ಬಳಕೆ ಮಾಡಿದರು. ಇದರಿಂದ ಅವರು ಅನೇಕರಿಗೆ ಇಷ್ಟ ಆದರು. ಹಳ್ಳಿ ಟಾಸ್ಕ್​ನಲ್ಲಿ ಮೈಕಲ್ ಎದುರಾಳಿ ತಂಡದವರು ‘ಮಣ್ಣಿನ ಮಗ’ ಎಂದು ತಂಡಕ್ಕೆ ಹೆಸರು ಇಟ್ಟುಕೊಂಡಿದ್ದರು. ಈ ವೇಳೆ ಮೈಕಲ್ ‘ಅವರು ಮಣ್ಣಿನ ಮಗನೋ ಅಥವಾ ನಾನೋ’ ಎಂದು ಕೇಳಿದ್ದರು. ಅಲ್ಲಿಂದ ಎಲ್ಲರೂ ಮೈಕಲ್​ನ ಮಣ್ಣಿನ ಮಗ ಎಂದು ಕರೆಯುತ್ತಾ ಬಂದರು.

ಜನವರಿ 16ರ ಎಪಿಸೋಡ್​ನಲ್ಲಿ ಬಿಗ್ ಬಾಸ್ ಸ್ಪರ್ಧಿಗಳ ರೀಯೂನಿಯನ್ ಆಗಿದೆ. ಎಲಿಮಿನೇಟ್ ಆದ ಸ್ಪರ್ಧಿಗಳು ದೊಡ್ಮನೆಗೆ ಬಂದಿದ್ದಾರೆ. ಮೈಕಲ್ ಆಗಮಿಸುತ್ತಿದ್ದಂತೆ ಇಡೀ ಮನೆ ಖುಷಿಯಿಂದ ಕುಪ್ಪಳಿಸಿತು. ‘ಮೈಕಲ್ ರೆಸ್ಪಾನ್ಸ್ ಹೇಗಿದೆ? ನಾರ್ಮಲ್ ಆಗಿ ಓಡಾಬಹುದಾ’ ಎಂದು ನಮ್ರತಾ ಕೇಳಿದರು. ಇದಕ್ಕೆ ಮೈಕಲ್ ಉತ್ತರಿಸಿದರು. ‘ರೆಸ್ಪಾನ್ಸ್ ನೆಕ್ಸ್ಟ್​ ಲೆವಲ್ ಇದೆ. ರೋಡ್​ ಅಲ್ಲಿ ಓಡಾಡೋಕೆ ಆಗ್ತಿಲ್ಲ. ಎಲ್ಲರೂ ಮಣ್ಣಿನ ಮಗ ಅಂತಾನೇ ಕರ್ಯೋದು’ ಎಂದು ಖುಷಿಯಿಂದ ಹೇಳಿಕೊಂಡರು.

ಇದನ್ನೂ ಓದಿ: ‘ಬಿಗ್​ ಬಾಸ್​ನಲ್ಲಿ ಮೊದಲಿಗೆ ನನ್ನನ್ನು ಜಾಸ್ತಿ ತೋರಿಸಿಲ್ಲ’: ಕಾರಣ ತಿಳಿಸಿದ ಮೈಕಲ್​ ಅಜಯ್​

ಮೈಕಲ್ ಅವರಿಗೆ ಈ ಪರಿ ರೆಸ್ಪಾನ್ಸ್ ಸಿಗುತ್ತಿರುವುದು ನೋಡಿ ಎಲ್ಲರಿಗೂ ಖುಷಿ ಆಗಿದೆ. ಕಲರ್ಸ್ ಕನ್ನಡ ವಾಹಿನಿಯಲ್ಲಿ ಬಿಗ್ ಬಾಸ್ ಎಪಿಸೋಡ್ ಪ್ರಸಾರ ಕಾಣುತ್ತಿದೆ. ಜಿಯೋ ಸಿನಿಮಾದಲ್ಲಿ ಎಪಿಸೋಡ್ ಜೊತೆ 24 ಗಂಟೆ ಲೈವ್ ವೀಕ್ಷಿಸಬಹುದು.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ