‘ಮುದ್ದು ಸೊಸೆ’ ಧಾರಾವಾಹಿ: ತ್ರಿವಿಕ್ರಂ-ಪ್ರತಿಮಾ ವಯಸ್ಸಿನ ಅಂತರ ಇಷ್ಟೊಂದಾ?

ಕಲರ್ಸ್ ಕನ್ನಡದ ಹೊಸ ಧಾರಾವಾಹಿ ‘ಮುದ್ದು ಸೊಸೆ’ ತ್ರಿವಿಕ್ರಂ ಮತ್ತು ಪ್ರತಿಮಾ ಠಾಕೂರ್ ಅವರ ಅಭಿನಯದಿಂದ ಸುದ್ದಿಯಲ್ಲಿದೆ. ತ್ರಿವಿಕ್ರಂ ‘ಬಿಗ್ ಬಾಸ್’ ಮೂಲಕ ಜನಪ್ರಿಯರಾದ ನಟ. ಈ ಧಾರಾವಾಹಿ ಅವರ ವೃತ್ತಿಜೀವನದಲ್ಲಿ ಹೊಸ ತಿರುವನ್ನು ತರುತ್ತದೆಯೇ ಎಂಬುದನ್ನು ಕಾದು ನೋಡಬೇಕಿದೆ .

‘ಮುದ್ದು ಸೊಸೆ’ ಧಾರಾವಾಹಿ: ತ್ರಿವಿಕ್ರಂ-ಪ್ರತಿಮಾ ವಯಸ್ಸಿನ ಅಂತರ ಇಷ್ಟೊಂದಾ?
ತ್ರಿವಿಕ್ರಂ-ಪ್ರತಿಮಾ
Edited By:

Updated on: Apr 15, 2025 | 8:29 AM

ಕಲರ್ಸ್ ಕನ್ನಡದಲ್ಲಿ ‘ಮುದ್ದು ಸೊಸೆ’ ಹೆಸರಿನ (Muddu Sose Serial) ಧಾರಾವಾಹಿ ಪ್ರಸಾರ ಕಾಣುತ್ತಿದೆ. ಈ ಧಾರಾವಾಹಿ ಮೊದಲ ದಿನ ವೀಕ್ಷಕರಿಂದ ಮೆಚ್ಚುಗೆ ಪಡೆದಿದೆ. ‘ಬಿಗ್ ಬಾಸ್’ ಮೂಲಕ ಫೇಮಸ್ ಆದ ತ್ರಿವಿಕ್ರಂ ಅವರು ಈ ಚಿತ್ರಕ್ಕೆ ಹೀರೋ ಆದರೆ, ಪ್ರತಿಮಾ ಠಾಕೂರ್ ಅವರು ಚಿತ್ರಕ್ಕೆ ನಾಯಕಿ. ಇಬ್ಬರ ಮಧ್ಯೆ ವಯಸ್ಸಿನ ಅಂತರ ಸಾಕಷ್ಟಿದೆ. ಇದಕ್ಕೆ ಕಾರಣ ಆಗಿದ್ದು ಧಾರಾವಾಹಿಯ ಕಥೆ ಎನ್ನಲಾಗಿದೆ. ಆ ಬಗ್ಗೆ ಇಂದು ನಾವು ನಿಮಗೆ ಹೇಳುತ್ತಾ ಇದ್ದೇವೆ.

‘ಮುದ್ದು ಸೊಸೆ’ ಧಾರಾವಾಹಿಯಲ್ಲಿ ತ್ರಿವಿಕ್ರಂ ಅವರು ಹೀರೋ ಆಗಿ ನಟಿಸಿದರೆ, ಪ್ರತಿಮಾ ಠಾಕೂರ್ ಅವರು ನಾಯಕಿ. ಈ ಚಿತ್ರದಲ್ಲಿ ತ್ರಿವಿಕ್ರಂ ಅವರು ಊರಿನ ಚಿಕ್ಕ ಗೌಡ ಭದ್ರೇ ಗೌಡನಾಗಿ ಕಾಣಿಸಿಕೊಂಡಿದ್ದಾರೆ. ಇಡೀ ಊರಿಗೆ ಅವರನ್ನು ಕಂಡರೆ ಎಲ್ಲಿಲ್ಲದ ಪ್ರೀತಿ. ಈ ಕಾರಣಕ್ಕೆ ಅವರು ಯಾರಿಗೇ ಸಿಕ್ಕರೂ ಎಲ್ಲರೂ ಪ್ರೀತಿಯಿಂದ ಮಾತನಾಡಿಸುತ್ತಾರೆ.

ಇದನ್ನೂ ಓದಿ
ಸೋಲು ಮರೆತು ವರ್ಕೌಟ್ ಶುರು ಮಾಡಿದ ಸಲ್ಮಾನ್ ಖಾನ್; ಈ ವಯಸ್ಸಲ್ಲೂ ಎಂಥಾ ಬಾಡಿ
ಸದ್ದಿಲ್ಲದೆ ನಿಶ್ಚಿತಾರ್ಥ ಮಾಡಿಕೊಂಡ ವೈಷ್ಣವಿ ಗೌಡ; ಹುಡುಗ ಯಾರು?
ಮಗನಿಗಾಗಿ ಮುಡಿಕೊಟ್ಟು ತಿರುಪತಿಯಲ್ಲಿ ದೇವರ ದರ್ಶನ ಮಾಡಿದ ಪವನ್ ಪತ್ನಿ
860 ಸಿನಿಮಾ ಮಾಡಿದರೂ ಬ್ಯಾಂಕ್ ಬ್ಯಾಲೆನ್ಸ್ ಇಲ್ಲ; ಮರುಗಿದ್ದ ನಟ

ಕಥಾ ನಾಯಕ ಭದ್ರೇ ಗೌಡ ಮದುವೆ ಬಗ್ಗೆ ಆಸಕ್ತಿ ಎಂಬುದೇ ಇಲ್ಲ. ಈ ಕಾರಣದಿಂದಲೇ ಆ ಬಗ್ಗೆ ಆಲೋಚಿಸುವುದೇ ಇಲ್ಲ. ಆದರೆ, ಮನೆಯವರ ಒತ್ತಾಯಕ್ಕೆ ಕಥಾ ನಾಯಕ ಮದುವೆ ಆಗಲು ಒಪ್ಪುತ್ತಾನೆ. ಆತ ಮದುವೆ ಆಗೋದು ಶಿಕ್ಷಣ ಪಡೆಯುತ್ತಿರುವ ಹುಡುಗಿ ವಿದ್ಯಾಳನ್ನು (ಪ್ರತಿಮಾ ಠಾಕೂರ್). ಇಬ್ಬರ ಮಧ್ಯೆ ಸಾಕಷ್ಟು ವಯಸ್ಸಿನ ಅಂತರ ಇರುತ್ತದೆ. ಅದನ್ನೂ ಲೆಕ್ಕಿಸದೇ ವಿವಾಹ ನಡೆಯುತ್ತದೆ. ಈ ಕಾರಣಕ್ಕೆ ಇಬ್ಬರ ಮಧ್ಯೆ ನಿಜವಾಗಲೂ ವಯಸ್ಸಿನ ಅಂತರ ಇರುವವರನ್ನೇ ಕರೆದುಕೊಂಡು ಬರಲಾಗಿದೆ ಎಂದು ಹೇಳಲಾಗುತ್ತಿದೆ.

ತ್ರಿವಿಕ್ರಮ್​ಗೆ ಈಗ 33 ವರ್ಷ ಎನ್ನಲಾಗಿದೆ. ಅವರು ಜನಿಸಿದ್ದು 1992ರಲ್ಲಿ. ಅದೇ ಕಥಾ ನಾಯಕಿ ಪ್ರತಿಮಾಗೆ ಈಗ 20 ವರ್ಷ. ಅಂದರೆ ಇಬ್ಬರ ಮಧ್ಯೆ 13 ವರ್ಷಗಳ ಅಂತರ ಇದೆ. ಧಾರಾವಾಹಿಯ ಕಥೆಯೂ ಇದೇ ರೀತಿ ಇರುವುದರಿಂದ ಈ ರೀತಿ ವಯಸ್ಸಿನ ಅಂತರ ಇಡಲಾಗಿದೆ ಎಂದು ಹೇಳಲಾಗುತ್ತಿದೆ.

ಇದನ್ನೂ ಓದಿ: ‘ಕೊಳಕು ಅಂಟದ ಬಿಳಿ ಹಾಳೆ ನೀನು’; ಧನರಾಜ್​ಗೆ ಕೈಯಲ್ಲೇ ಪತ್ರ ಬರೆದು ಬರ್ತ್​ಡೇ ವಿಶ್ ತಿಳಿಸಿದ ತ್ರಿವಿಕ್ರಂ

ತ್ರಿವಿಕ್ರಂ ಅವರು ಈ ಮೊದಲು ಕೆಲವು ಧಾರಾವಾಹಿಗಳನ್ನು ಮಾಡಿದ್ದರು. ಆ ಬಳಿಕ ಬಿಗ್ ಬಾಸ್ ಆಫರ್ ಬಂತು. ಅವರು ರನ್ನರ್​ ಅಪ್ ಆದರು. ಆದರೆ, ಅವರಿಗೆ ಸಿಕ್ಕ ಖ್ಯಾತಿ ಅಪಾರ. ಈ ಧಾರಾವಾಹಿಯಿಂದ ಅವರ ಅದೃಷ್ಟ ಬದಲಾಗುತ್ತದೆಯೇ ಎಂಬುದನ್ನು ಕಾದು ನೋಡಬೇಕಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On - 7:43 am, Tue, 15 April 25

Shreelaxmi H

ಪತ್ರಕರ್ತೆ ಆಗಬೇಕು ಅಂದುಕೊಂಡವಳು. ಮನೆಯವರ ಒತ್ತಾಯಕ್ಕೆ ಅಕೌಂಟ್ ತೆಗೆದುಕೊಂಡೆ. ಈಗ ಬ್ಯಾಂಕ್ ಎಕ್ಸಾಂಗಳನ್ನು ಬರೆಯುತ್ತಿದ್ದೇನೆ. ಸಮಯ ಸಿಕ್ಕಾಗ ಸುತ್ತಾಡುತ್ತೇನೆ. ಓದಿನ ಬಗ್ಗೆ ಅತೀವ ಆಸಕ್ತಿ. ರವಿ ಬೆಳಗೆರೆ, ತೇಜಸ್ವಿ ನೆಚ್ಚಿನವರು. ಅವರ ಪುಸ್ತಕಗಳನ್ನು ಮತ್ತೆ ಮತ್ತೆ ಓದುತ್ತೇನೆ. ಸಮಯ ಸಿಕ್ಕಾಗ ಪತ್ರಿಕೆಗಳಿಗೆ ಕಥೆಗಳನ್ನು ಬರೆಯುತ್ತೇನೆ. ಸಿನಿಮಾ ಬಗ್ಗೆ ಅತೀವ ಆಸಕ್ತಿ. ಈಗ ಟಿವಿ9 ಕನ್ನಡಕ್ಕೆ ಸಿನಿಮಾ ಸುದ್ದಿಗಳನ್ನು ಬರೆಯುತ್ತಿದ್ದೇನೆ.

Read More
Follow Us