ಬೆಂಗಳೂರು ಇಂದು ಮಹಾನಗರ ಆಗಿ ಬೆಳೆದಿದೆ. ಎಲ್ಲಿ ನೋಡಿದರೂ ಟ್ರಾಫಿಕ್. ಕೆಂಪು ದೀಪ ಹಸಿರಾಗಲಿ ಎಂದು ಕಾಯುವ ವಾಹನ ಸವಾರರು. ಧೂಳು, ಕಲುಷಿತ ವಾಯು ಸರ್ವೇ ಸಾಮಾನ್ಯ ಎಂಬಂತಾಗಿದೆ. ಅಲ್ಲಲ್ಲಿ ಮರಗಳು ಇವೆಯಾದರೂ ಬೆಂಗಳೂರಿನ ಕಲುಷಿತ ಗಾಳಿಯನ್ನು ಸಂಪೂರ್ಣವಾಗಿ ಶುದ್ಧವಾಗಿಸಲು ಅವುಗಳಿಂದ ಸಾಧ್ಯವಿಲ್ಲ. ಆದರೆ, ಕೆಲವು ದಶಕಗಳ ಹಿಂದೆ ಬೆಂಗಳೂರು ಈ ರೀತಿ ಇರಲಿಲ್ಲ. ಅದೊಂದು ಹಳ್ಳಿಯಾಗಿತ್ತು. ಈ ಬಗ್ಗೆ ನಾ ಸೋಮೇಶ್ವರ (N. Someswara) ಅವರು ಮಾಹಿತಿ ಹಂಚಿಕೊಂಡಿದ್ದಾರೆ.
‘ವೀಕೆಂಡ್ ವಿತ್ ರಮೇಶ್ ಸೀಸನ್ 5’ರಲ್ಲಿ ಅವರು ಈ ವಾರದ ಅತಿಥಿ ಆಗಿದ್ದಾರೆ. ಅವರು ಸಾಧಕರ ಸೀಟ್ನಲ್ಲಿ ಕುಳಿತಿದ್ದಾರೆ. ವೈದ್ಯರಾಗಿ, ಲೇಖಕರಾಗಿ, ‘ಥಟ್ ಅಂತ ಹೇಳಿ’ ಕಾರ್ಯಕ್ರಮದ ನಿರೂಪಕರಾಗಿ ಗಮನ ಸೆಳೆದಿದ್ದಾರೆ. ಅವರು ಈ ಬಾರಿಯ ‘ವೀಕೆಂಡ್ ವಿತ್ ರಮೇಶ್’ ಎಪಿಸೋಡ್ಗೆ ಆಗಮಿಸಿದ್ದಾರೆ. ಅವರು ತಮ್ಮ ಬಾಲ್ಯದ ಅನುಭವ ಹಂಚಿಕೊಂಡಿದ್ದಾರೆ.
ನಾ. ಸೋಮೇಶ್ವರ ಅವರು 1955ರಲ್ಲಿ ಬೆಂಗಳೂರಿನ ಮಲ್ಲೇಶ್ವರದಲ್ಲಿ ಜನಿಸಿದರು. ಅಂದು ಬೆಂಗಳೂರು ಯಾವ ರೀತಿಯಲ್ಲಿತ್ತು ಎಂಬುದನ್ನು ‘ವೀಕೆಂಡ್ ವಿತ್ ರಮೇಶ್’ ಎಪಿಸೋಡ್ನಲ್ಲಿ ಅವರು ವಿವರಿಸಿದ್ದಾರೆ. ‘ಮಲ್ಲೇಶ್ವರದಲ್ಲಿ ಪ್ರಶಾಂತ ರಸ್ತೆ ಇತ್ತು. ಮಳೆ ಬಂತು ಎಂದರೆ ಕಾಗೆ ಬಂಗಾರ ಹುಡುಕಿಕೊಂಡು ಹೋಗುತ್ತಿದ್ವಿ. ಈಡುಗಾಯಿ ಒಡೆಯೋದನ್ನು ಕಾಯುತ್ತಿದ್ದೆವು. ಮೀನು ಎಂದು ಹಿಡಿದುಕೊಂಡು ಬರುತ್ತಿದೆ. ಮರುದಿನ ಅದು ಕಪ್ಪೆ ಆಗಿರುತ್ತಿತ್ತು. ಅನೇಕ ನೆನಪುಗಳ ಸಾಲು ಬರ್ತಿದೆ’ ಎಂದು ನಾ. ಸೋಮೇಶ್ವರ ಅವರು ವಿವರಿಸಿದ್ದಾರೆ.
‘ವಿಶಾಲ ರಸ್ತೆ, ಪ್ರಶಾಂತ ವಾತಾವರಣದ ಆಗಿನ ಮಲ್ಲೇಶ್ವರದ ಚಿತ್ರಣ ಕಟ್ಟಿಕೊಟ್ಟ ನಾ.ಸೋಮೇಶ್ವರ. ವೀಕೆಂಡ್ ವಿತ್ ರಮೇಶ್ ಸೀಸನ್ 5 ಭಾನುವಾರ ರಾತ್ರಿ 9ಕ್ಕೆ’ ಎಂದು ಈ ಪ್ರೋಮೋಗೆ ಕ್ಯಾಪ್ಶನ್ ನೀಡಲಾಗಿದೆ.
ಇದನ್ನೂ ಓದಿ: Weekend With Ramesh: ವೀಕೆಂಡ್ ವಿತ್ ರಮೇಶ್ಗೆ ಬಂದ ಹೊಸ ಸಾಧಕ, ಯಾರು ಗೆಸ್ ಮಾಡಬಲ್ಲಿರಾ?
ಈ ವಾರ ಸೋಮೇಶ್ವರ ಮಾತ್ರವಲ್ಲದೆ ಡ್ಯಾನ್ಸ್ ಕೊರಿಯೋಗ್ರಫರ್ ಆಗಿರುವ ಚಿನ್ನಿ ಪ್ರಕಾಶ್ ಮಾಸ್ಟರ್ ಕೂಡ ಬರುತ್ತಿದ್ದಾರೆ. ಇಬ್ಬರನ್ನೂ ಈ ವಾರದ ಎಪಿಸೋಡ್ನಲ್ಲಿ ನೋಡಲು ಫ್ಯಾನ್ಸ್ ಕಾದಿದ್ದಾರೆ. ಒಳ್ಳೊಳ್ಳೆಯ ಸಾಧಕರನ್ನು ಕರೆಸುತ್ತಿದ್ದೀರಾ ಎನ್ನುವ ಮಾತು ಕೇಳಿ ಬಂದಿದೆ. ಮೊದಲ ಎಪಿಸೋಡ್ಗೆ ರಮ್ಯಾ ಆಗಮಿಸಿದ್ದರು. ಅವರು ಇಂಗ್ಲಿಷ್ನಲ್ಲಿ ಮಾತನಾಡಿದ್ದಕ್ಕೆ ಸಾಕಷ್ಟು ವಿರೋಧ ವ್ಯಕ್ತವಾಗಿತ್ತು. ಆದರೆ, ಈಗ ಶೋಗೆ ಎಲ್ಲ ಕಡೆಗಳಿಂದ ಮೆಚ್ಚುಗೆ ವ್ಯಕ್ತವಾಗುತ್ತಿದೆ.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ