
‘ನಾ ನಿನ್ನ ಬಿಡಲಾರೆ’ ಹಾಗೂ ‘ಅಮೃತಧಾರೆ’ ಧಾರಾವಾಹಿ ದೊಡ್ಡ ಮಟ್ಟದಲ್ಲಿ ಜನಪ್ರಿಯತೆ ಪಡೆದಿವೆ. ಈ ಎರಡೂ ಧಾರಾವಾಹಿಗಳು ಜೀ ಕನ್ನಡದಲ್ಲಿ ಪ್ರಸಾರ ಕಾಣುತ್ತಾ ಇವೆ ಎಂಬುದು ಗೊತ್ತಿರುವ ವಿಚಾರ. ಈಗ ಈ ಎರಡೂ ಧಾರಾವಾಹಿಗಳಲ್ಲಿ ದೊಡ್ಡ ತಿರುವು ಒಂದೇ ದಿನ ಬಂದಿದೆ ಎಂದೇ ಹೇಳಬಹುದು. ‘ನಾ ನಿನ್ನ ಬಿಡಲಾರೆ’ ಧಾರಾವಾಹಿಯಲ್ಲಿ ದುರ್ಗಾ ಪ್ರಾಣಕ್ಕೆ ಕುತ್ತು ಬಂದಿದೆ. ಅತ್ತ ‘ಅಮೃತಧಾರೆ’ ಧಾರಾವಾಹಿಯಲ್ಲಿ ಗೌತಮ್ ಬಾಳು ಸಂಪೂರ್ಣ ಬದಲಾಗಿದೆ.
‘ಅಮೃತಧಾರೆ’ ಧಾರಾವಾಹಿಯಲ್ಲಿ ಹೊಸ ಹೊಸ ತಿರುವುಗಳು ಎದುರಾಗಿವೆ. ಗೌತಮ್ ದೀವಾನ್ ಅವರು ದೊಡ್ಡ ಬಿಸ್ನೆಸ್ಮೆನ್ ಆಗಿದ್ದರು. ಆದರೆ, ಈಗ ಎಲ್ಲವನ್ನೂ ಬಿಟ್ಟು ಆತ ಕಾರ್ ಡ್ರೈವರ್ ಆಗಿದ್ದಾನೆ. ಇದಕ್ಕೆ ಕಾರಣ ಭೂಮಿಕಾ ಮನೆ ಬಿಟ್ಟು ಹೋಗಿರೋದು. ಈಗ ಆತ ಕಾರ್ ಚಾಲಕ ಆಗಲೂ ಇದೇ ಕಾರಣವೂ ಇರಬಹುದು. ಆತನಿಗೆ ಭೂಮಿಕಾಳನ್ನು ಹುಡುಕೋದು ಒಂದೇ ಉದ್ದೇಶ.
ಗೌತಮ್ ಕಾರು ಬಾಡಿಗೆ ಓಡಿಸಿಕೊಂಡು ವಿವಿಧ ಕಡೆ ತೆರಳುತ್ತಿದ್ದಾನೆ. ಅಲ್ಲಿ ಭೂಮಿಕಾಳನ್ನು ಹುಡುಕುವ ಪ್ರಯತ್ನದಲ್ಲಿ ಇದ್ದಾನೆ. ಈಗ ಆತ ಕುಶಾಲನಗರಕ್ಕೆ ಹೋಗುವ ಪರಿಸ್ಥಿತಿ ಬರುತ್ತದೆ. ಈ ವೇಳೆ ಭೂಮಿಕಾ ಎದುರಾಗುವ ಎಲ್ಲಾ ಸಾಧ್ಯತೆ ಇದೆ.
‘ನಾ ನಿನ್ನ ಬಿಡಲಾರೆ‘ ಧಾರಾವಾಹಿಯಲ್ಲಿ ದುರ್ಗಾ ಹಾಗೂ ಶರತ್ ವಿವಾಹ ಆಗಿದೆ. ಮಾಯಾಳು ಶರತ್ನ ಮದುವೆ ಆಗಬೇಕಿತ್ತು. ಆದರೆ, ಅದು ಉಲ್ಟಾ ಆಗಿದೆ. ಮದುವೆ ಬಳಿಕ ಮಾಯಾ ಕೋಮಾ ಹೋಗಿದ್ದಳು. ಈಕ ಆಕೆಗೆ ಎಚ್ಚರ ಬಂದಿದೆ. ಆಕೆ ಎಚ್ಚರ ಬರುತ್ತಿದ್ದಂತೆ ಗನ್ ಹಿಡಿದುಕೊಂಡು ಬಂದಿದ್ದಾಳೆ. ಅಷ್ಟೇ ಅಲ್ಲ, ಬಂದು ನೇರವಾಗಿ ದುರ್ಗಾಳ ಹಣೆಗೆ ಹಿಡಿದಿದ್ದಾಳೆ. ‘ನಾನು ಏನೇ ಆದರೂ ಒಂದಿಚೂ ಕದಲಲ್ಲ’ ಎಂದಿದ್ದಾಳೆ ಮಾಯಾ.
ಈ ವೇಳೆ ಮಾಯಾ ಗುಂಡು ಹಾರಿಸುತ್ತಾಳಾ? ಹಾರಿಸಿದರೂ ಅಂಬಿಕಾ ತನ್ನ ಶಕ್ತಿಯಿಂದ ಅದನ್ನು ತಡೆಯುತ್ತಾಳಾ ಎಂಬುದನ್ನು ಕಾದು ನೋಡಬೇಕಿದೆ. ಹಾಗಾದಲ್ಲಿ, ಅಂಬಿಕಾ ಇರುವಿಕೆ ಎಲ್ಲರಿಗೂ ತಿಳಿಯಲಿದೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ