‘ಕರ್ಣ’ ಧಾರಾವಾಹಿ ಅಲ್ಲ; ಈ ಮೊದಲೇ ಆಗಿತ್ತು ಕಿರಣ್-ಭವ್ಯಾ ಭೇಟಿ
ಕಿರಣ್ ರಾಜ್ ಮತ್ತು ಭವ್ಯಾ ಗೌಡ ಅವರು 'ಕರ್ಣ' ಧಾರಾವಾಹಿಯಲ್ಲಿ ನಟಿಸುತ್ತಿದ್ದು, ಅವರ ಜೋಡಿ ಜನಪ್ರಿಯತೆಯನ್ನು ಗಳಿಸಿದೆ. ಇವರಿಬ್ಬರೂ ಮೊದಲು ಶೋ ಒಂದರಲ್ಲಿ ಭೇಟಿಯಾಗಿದ್ದರು. ಈಗ 'ಕರ್ಣ' ಧಾರಾವಾಹಿಯ ಯಶಸ್ಸಿಗೆ ಅವರ ಕೆಮಿಸ್ಟ್ರಿ ಕಾರಣವಾಗಿದೆ. ಧಾರಾವಾಹಿಯಲ್ಲಿ ಕರ್ಣ ಮತ್ತು ನಿಧಿ ಪಾತ್ರಗಳ ನಡುವಿನ ಪ್ರೇಮಕಥೆ ಪ್ರೇಕ್ಷಕರನ್ನು ಆಕರ್ಷಿಸಿದೆ.

ಕಿರಣ್ ರಾಜ್ ಹಾಗೂ ಭವ್ಯಾ ಗೌಡ ಅವರು ‘ಕರ್ಣ’ (Karna) ಧಾರಾವಾಹಿಯಲ್ಲಿ ನಟಿಸುತ್ತಿದ್ದಾರೆ. ಈ ಧಾರಾವಾಹಿ ಮೆಚ್ಚುಗೆ ಪಡೆಯುತ್ತಿದೆ. ಕಿರಣ್ ರಾಜ್ ಅವರು ಕರ್ಣನಾಗಿಯೂ, ಭವ್ಯಾ ಗೌಡ ಅವರು ನಿಧಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಈ ಧಾರಾವಾಹಿ ಸಾಕಷ್ಟು ಮೆಚ್ಚುಗೆ ಪಡೆಯುತ್ತಿದೆ. ಕಿರಣ್ ರಾಜ್ ಹಾಗೂ ಭವ್ಯಾ ಗೌಡ ಈ ಧಾರಾವಾಹಿಯಲ್ಲಿ ಮೊದಲ ಬಾರಿಗೆ ಭೇಟಿ ಆಗಿದ್ದಲ್ಲ, ಅವರ ಭೇಟಿ ಈ ಮೊದಲೇ ಆಗಿತ್ತು.
ಕಥಾ ನಾಯಕ, ನಾಯಕಿ ಕೆಮಿಸ್ಟ್ರಿ ವರ್ಕ್ ಆದರೆ ಮಾತ್ರ ಧಾರಾವಾಹಿ ಪ್ರೇಕ್ಷಕರಿಗೆ ಇಷ್ಟ ಆಗುತ್ತದೆ. ಇಲ್ಲವಾದಲ್ಲಿ ಧಾರಾವಾಹಿ ಫ್ಲಾಪ್ ಆಗುತ್ತದೆ. ಕರ್ಣ ಧಾರಾವಾಹಿ ಎಲ್ಲರಿಂದ ಮೆಚ್ಚುಗೆ ಪಡೆಯುತ್ತಿದೆ. ಇದಕ್ಕೆ ಕಾರಣ ಕರ್ಣ ಹಾಗೂ ನಿಧಿ ಕೆಮಿಸ್ಟ್ರಿ. ಈ ಕೆಮಿಸ್ಟ್ರಿ ಮೊದಲೇ ಬಿಲ್ಡ್ ಆಗಿತ್ತು ಎಂದು ಅನೇಕರು ಪೋಸ್ಟ್ ಮಾಡುತ್ತಾ ಇದ್ದಾರೆ.
ಬಿಗ್ ಬಾಸ್ ಪೂರ್ಣಗೊಂಡ ಬಳಿಕ ಧಾರಾವಾಹಿ ಕಲಾವಿದರಿಗಾಗಿ, ‘ಮಿನಿ ಬಿಗ್ ಬಾಸ್’ ನಿರ್ಮಾಣ ಮಾಡಲಾಗಿತ್ತು. ಒಂದು ವಾರ ಮಾತ್ರ ಈ ಎಪಿಸೋಡ್ ನಡೆದಿತ್ತು. ಆ ಸಮಯದಲ್ಲಿ ಕಿರಣ್ ರಾಜ್ ಅವರು ಕನ್ನಡತಿ ಧಾರಾವಾಹಿಯಲ್ಲೂ, ಭವ್ಯಾ ಗೌಡ ಅವರು ‘ಗೀತಾ’ ಧಾರಾವಾಹಿಯಲ್ಲಿ ನಟಿಸುತ್ತಿದ್ದರು. ಇವರಿಬ್ಬರು ಬಿಗ್ ಬಾಸ್ಗಾಗಿ ಒಂದೇ ವೇದಿಕೆ ಏರಿದ್ದರು.
View this post on Instagram
ಆ ಸಮಯದಲ್ಲಿ ಅನೇಕ ಬಾರಿ ಕಿರಣ್ ರಾಜ್ ಹಾಗೂ ಭವ್ಯಾ ಗೌಡ ಅವರು ಒಟ್ಟಾಗಿ ಕಾಣಿಸಿಕೊಂಡಿದ್ದು ಇದೆ. ಆ ಸಮಯದಲ್ಲಿ ಇವರ ಜೋಡಿ ಅನೇಕರಿಗೆ ಇಷ್ಟ ಆಗಿತ್ತು. ಈಗ ಇವರನ್ನು ತೆರೆಮೇಲೆ ಮತ್ತೆ ನೋಡಿ ಫ್ಯಾನ್ಸ್ ಖುಷಿಪಟ್ಟಿದ್ದಾರೆ. ಇವರ ರೀಯೂನಿಯನ್ ಒಳ್ಳೆಯ ರೀತಿಯಲ್ಲಿ ಆಗಿದೆ ಎಂದು ಅನೇಕರು ಹೇಳುತ್ತಾ ಇದ್ದಾರೆ.
ಇದನ್ನೂ ಓದಿ: ಟಾಪ್ನಲ್ಲಿ ಯಾರೂ ಊಹಿಸದ ಸೀರಿಯಲ್; ‘ಅಮೃತಧಾರೆ’ಗೆ ಎಷ್ಟನೇ ಸ್ಥಾನ?
ಧಾರಾವಾಹಿ ವಿಚಾರಕ್ಕೆ ಬರೋದಾದರೆ ಕರ್ಣ ಹಾಗೂ ನಿಧಿ ಮಧ್ಯೆ ಪ್ರೀತಿ ಮೂಡಿದೆ. ನಿಧಿ ಈ ಪ್ರೀತಿಯನ್ನು ಈಗಾಗಲೇ ವ್ಯಕ್ತಪಡಿಸಿಯಾಗಿದೆ. ಆದರೆ, ಕರ್ಣ ಈ ವಿಚಾರವನ್ನು ಮುಚ್ಚಿಟ್ಟಿದ್ದಾನೆ. ಅದನ್ನು ಶೀಘ್ರವೇ ಹೇಳಿದರೂ ಅಚ್ಚರಿ ಏನಿಲ್ಲ. ಈ ಧಾರಾವಾಹಿ ಟಿಆರ್ಪಿಯಲ್ಲಿ ಒಳ್ಳೆಯ ರೇಟಿಂಗ್ ಪಡೆದು ಮುಂದಕ್ಕೆ ಸಾಗುತ್ತಾ ಇದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಟ್ವಿಸ್ಟ್ಗಳನ್ನು ನಿರೀಕ್ಷಿಸಬಹುದು.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.







