ಬಿಗ್ ಬಾಸ್ ಮನೆಗೆ ಬಂದು ಸ್ಪರ್ಧಿಗಳ ಬಳಿ ವಿಶೇಷ ಮನವಿ ಮಾಡಿದ ನಮ್ರತಾ ಗೌಡ

|

Updated on: Dec 11, 2024 | 7:26 AM

‘ಬಿಗ್ ಬಾಸ್ ಕನ್ನಡ ಸೀಸನ್ 11’ರಲ್ಲಿ ನಮ್ರತಾ ಗೌಡ ಅವರು ಅತಿಥಿಯಾಗಿ ಆಗಮಿಸಿ ನಾಮಿನೇಷನ್ ಪ್ರಕ್ರಿಯೆಯನ್ನು ನಡೆಸಿಕೊಟ್ಟಿದ್ದಾರೆ. ಅವರು ಸ್ಪರ್ಧಿಗಳಿಂದ ಹೆಚ್ಚಿನ ಮನರಂಜನೆಯನ್ನು ನಿರೀಕ್ಷಿಸಿ ಮನವಿ ಮಾಡಿದ್ದಾರೆ. ಕಳೆದ ಸೀಸನ್‌ನ ಇತರ ಸ್ಪರ್ಧಿಗಳಾದ ಕಾರ್ತಿಕ್, ಪ್ರತಾಪ್, ಮತ್ತು ಇತರರು ಸಹ ಅತಿಥಿಗಳಾಗಿ ಆಗಮಿಸಿದ್ದಾರೆ.

ಬಿಗ್ ಬಾಸ್ ಮನೆಗೆ ಬಂದು ಸ್ಪರ್ಧಿಗಳ ಬಳಿ ವಿಶೇಷ ಮನವಿ ಮಾಡಿದ ನಮ್ರತಾ ಗೌಡ
ಬಿಗ್ ಬಾಸ್ ಮನೆಯಲ್ಲಿ ನಮ್ರತಾ
Follow us on

‘ಬಿಗ್ ಬಾಸ್ ಕನ್ನಡ ಸೀಸನ್ 11’ರಲ್ಲಿ ಈ ವಾರ ಅತಿಥಿಗಳ ಆಗಮನ ಆಗುತ್ತಿದೆ. ಕಳೆದ ಸೀಸನ್ ಸ್ಪರ್ಧಿಗಳು ಎಂಟ್ರಿ ಕೊಟ್ಟು ಮನರಂಜನೆ ನೀಡುವ ಕೆಲಸ ಮಾಡುತ್ತಿದ್ದಾರೆ. ಇದು ಸಖತ್ ಫನ್ ಆಗಿದೆ. ನಮ್ರತಾ ಗೌಡ ಅವರು ದೊಡ್ಮನೆ ಒಳಗೆ ಬಂದಿದ್ದಾರೆ. ಅವರು ಸ್ಪರ್ಧಿಗಳ ಬಳಿ ವಿಶೇಷ ಮನವಿ ಒಂದನ್ನು ಮಾಡಿಕೊಂಡಿದ್ದಾರೆ. ಇದನ್ನು ಮನೆಯವರು ನಡೆಸಿಕೊಡುತ್ತಾರಾ ಎನ್ನುವ ಪ್ರಶ್ನೆ ಮೂಡಿದೆ.

‘ಬಿಗ್ ಬಾಸ್ ಕನ್ನಡ ಸೀಸನ್ 10’ರ ಸ್ಪರ್ಧಿಗಳಾದ ನಮ್ರತಾ ಗೌಡ, ಕಾರ್ತಿಕ್, ಪ್ರತಾಪ್, ವರ್ತೂರು ಸಂತೋಷ್, ತುಕಾಲಿ ಸಂತೋಷ್, ತನಿಷಾ ಕುಪ್ಪಂಡ ದೊಡ್ಮನೆ ಒಳಗೆ ಅತಿಥಿಗಳಾಗಿ ಬಂದಿದ್ದಾರೆ. ಅವರುಗಳು ನಾಮಿನೇಷನ್ ಪ್ರಕ್ರಿಯೆ ನಡೆಸಿಕೊಟ್ಟಿದ್ದಾರೆ. ಸ್ಪರ್ಧಿಗಳಿಗೆ ನಾಮಿನೇಟ್ ಅಧಿಕಾರ ನೀಡಿ ಅವರುಗಳಿಂದ ನಾಮಿನೇಷನ್ ಪ್ರಕ್ರಿಯೆಯನ್ನು ಇವರು ಮಾಡಿದ್ದಾರೆ.

ನಮ್ರತಾ ಗೌಡ ಅವರು ಬಂದು ಕೆಲ ಹೊತ್ತು ಸ್ಪರ್ಧಿಗಳ ಜೊತೆ ಇದ್ದರು. ಅವರು ನಾಮಿನೇಷನ್ ಪ್ರಕ್ರಿಯೆಯ ನೇತೃತ್ವ ವಹಿಸಿಕೊಂಡರು. ದೊಡ್ಮನೆಯಿಂದ ಹೋಗುವಾಗ ಅವರು ಮನವಿ ಒಂದನ್ನು ಮಾಡಿದರು. ‘ಎಲ್ಲರೂ ಚೆನ್ನಾಗಿ ಆಡುತ್ತಿದ್ದೀರಿ. ದಯವಿಟ್ಟು ಮನರಂಜನೆ ಕೊಡಿ’ ಎಂದು ಕೋರಿಕೊಂಡಿದ್ದಾರೆ. ಮಂಜು ಅವರ ಬಳಿ ಬಂದ ನಮ್ರತಾ, ‘ನಾನು ನಿಮ್ಮ ನಟನೆಗೆ ದೊಡ್ಡ ಅಭಿಮಾನಿ’ ಎಂದು ಹೇಳಿದ್ದಾರೆ.

ನಮ್ರತಾ ಗೌಡ ಅವರು ದೊಡ್ಮನೆಯಿಂದ ಹೊರ ಹೋಗುತ್ತಿದ್ದಂತೆ ಹನುಮಂತ ಅವರು, ‘ಬನ್ನಿ ಮನರಂಜನೆ ನೀಡೋಣ’ ಎಂದು ಜೋರು ಧ್ವನಿಯಲ್ಲಿ ಕೂಗಿದ್ದಾರೆ. ಇದಕ್ಕೆ ಕೆಲ ಸ್ಪರ್ಧಿಗಳು ಪಾಸಿಟಿವ್ ಆಗಿ ಸ್ಪಂದಿಸಿದ್ದಾರೆ. ನಮ್ರತಾ ಗೌಡ ಅವರು ಯಾವ ಕಾರಣಕ್ಕೆ ಈ ರೀತಿ ಹೇಳಿದರು ಎನ್ನುವ ಪ್ರಶ್ನೆ ಅನೇಕರಿಗೆ ಮೂಡಿದೆ.

ಇದನ್ನೂ ಓದಿ: ‘ಈ ಇಂಡಸ್ಟ್ರಿ ಗೆಳೆಯರನ್ನು ಮಾಡಿಕೊಳ್ಳೋ ಜಾಗವಲ್ಲ, ಅವರೇ ತುಳಿಯುತ್ತಾರೆ’; ನಮ್ರತಾ ಗೌಡ

ನಮ್ರತಾ ಗೌಡ ‘ಬಿಗ್ ಬಾಸ್ ಕನ್ನಡ ಸೀಸನ್ 10’ರ ಕೊನೆಯವರೆಗೂ ಇದ್ದರೂ. ಅವರು ಫಿನಾಲೆ ವಾರದ ಹಿಂದಿನ ದಿನ ಎಲಿಮಿನೇಟ್ ಆದರು. ಇದು ಅವರಿಗೆ ಸಾಕಷ್ಟು ಬೇಸರ ಮೂಡಿಸಿತ್ತು. ಈ ವಾರ ಟಾಪ್ ಐದರಲ್ಲಿ ಇರೋ ಸ್ಪರ್ಧಿಗಳು ಯಾರ್ಯಾರು ಎನ್ನುವ ಕುತೂಹಲ ಮೂಡಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.