AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮೋಕ್ಷಿತಾ ಮೇಲೆ ಕಪ್ಪು ಮಸಿ ಎರಚಿದ ಗೌತಮಿ; ಜಾಸ್ತಿ ಆಯಿತು ಮನಸ್ತಾಪ

ಬಿಗ್ ಬಾಸ್ ಮನೆಯಲ್ಲಿ ಗೌತಮಿ ಜಾದವ್​ ಮತ್ತು ಮೋಕ್ಷಿತಾ ಪೈ ನಡುವೆ ಉಂಟಾದ ಮನಸ್ತಾಪ ಇನ್ನಷ್ಟು ಜಾಸ್ತಿ ಆಗುತ್ತಿದೆ. ಹೊಸ ಸಂಚಿಕೆಯಲ್ಲಿ ಮೋಕ್ಷಿತಾ ಮೇಲೆ ಗೌತಮಿ ಮಸಿ ಎರಚಿದ್ದಾರೆ. ನಾಮಿನೇಷನ್​ ಪ್ರತಿಕ್ರಿಯೆ ಭಾಗವಾಗಿ ಅವರು ಈ ರೀತಿ ನಡೆದುಕೊಂಡಿದ್ದಾರೆ. ಕಾರ್ತಿಕ್ ಮಹೇಶ್​ ಬಿಗ್ ಬಾಸ್ ಮನೆಗೆ ಎಂಟ್ರಿ ನೀಡಿದ್ದಾಗ ಈ ಘಟನೆ ನಡೆಯಿತು.

ಮೋಕ್ಷಿತಾ ಮೇಲೆ ಕಪ್ಪು ಮಸಿ ಎರಚಿದ ಗೌತಮಿ; ಜಾಸ್ತಿ ಆಯಿತು ಮನಸ್ತಾಪ
ಗೌತಮಿ ಜಾದವ್, ಮೋಕ್ಷಿತಾ ಪೈ
ಮದನ್​ ಕುಮಾರ್​
|

Updated on: Dec 10, 2024 | 11:03 PM

Share

‘ಬಿಗ್ ಬಾಸ್​ ಕನ್ನಡ ಸೀಸನ್​ 10’ ಶೋನಲ್ಲಿ ಕಾರ್ತಿಕ್ ಮಹೇಶ್ ಅವರು ವಿನ್ ಆಗಿದ್ದರು. ಈಗ ಅವರು ಗೆಸ್ಟ್ ಆಗಿ ದೊಡ್ಮನೆಗೆ ಬಂದಿದ್ದಾರೆ. ಸ್ಪರ್ಧಿಗಳಿಂದ ಈ ವಾರದ ನಾಮಿನೇಷನ್​ ಪ್ರಕ್ರಿಯೆ ಮಾಡಿಸಿ ಅವರು ಮರಳಿದ್ದಾರೆ. ಇದರ ನಡುವೆ ಒಂದು ಘಟನೆ ಆಯಿತು. ನಾಮಿನೇಷನ್​ ಮಾಡುವಾಗ ಗೌತಮಿ ಜಾದವ್ ಅವರು ಮೋಕ್ಷಿತಾ ಮೇಲೆ ಕಪ್ಪು ಮಸಿ ಎರಚಿದರು. ಇದರಿಂದಾಗಿ ಅವರಿಬ್ಬರ ನಡುವಿನ ಮನಸ್ತಾಪ ಇನ್ನಷ್ಟು ಜಾಸ್ತಿ ಆಗುವುದು ಖಚಿತವಾಗಿದೆ.

ಈ ವಾರ ಗೌತಮಿ ಕ್ಯಾಪ್ಟನ್ ಆಗಿದ್ದಾರೆ. ‘ಕ್ಯಾಪ್ಟನ್ ಆದವರು ನೇರವಾಗಿ ಒಬ್ಬರನ್ನು ನಾಮಿನೇಟ್ ಮಾಡಬೇಕು’ ಎಂದು ಕಾರ್ತಿಕ್ ಮಹೇಶ್ ಹೇಳಿದರು. ಆಗ ಗೌತಮಿ ಅವರು ಮೋಕ್ಷಿತಾರನ್ನು ನಾಮಿನೇಟ್ ಮಾಡಿದರು. ಮೋಕ್ಷಿತಾ ಹೆಸರನ್ನೇ ಗೌತಮಿ ಹೇಳುತ್ತಾರೆ ಎಂಬುದು ಎಲ್ಲರ ಊಹೆ ಆಗಿತ್ತು. ಅದು ಹಾಗೆಯೇ ನಡೆಯಿತು. ಕಳೆದ ವಾರ ಕ್ಯಾಪ್ಟೆನ್ಸಿ ಆಟವನ್ನು ಮೋಕ್ಷಿತಾ ಬಿಟ್ಟುಕೊಟ್ಟಿದ್ದನ್ನೇ ಕಾರಣವಾಗಿ ಇಟ್ಟುಕೊಂಡು ಗೌತಮಿ ಅವರು ಮೋಕ್ಷಿತಾರನ್ನು ನಾಮಿನೇಟ್ ಮಾಡಿದರು. ಬಳಿಕ ಕಪ್ಪು ಮಸಿಯನ್ನು ಮೋಕ್ಷಿತಾ ಮೇಲೆ ಗೌತಮಿ ಎರಚಿದರು.

ಗೌತಮಿ ಜೊತೆ ಮಾತನಾಡಲು ಕೂಡ ಮೋಕ್ಷಿತಾ ಇಷ್ಟಪಡುತ್ತಿಲ್ಲ. ಹಾಗಾಗಿ ನಾಮಿನೇಷನ್​ಗೆ ತಮ್ಮ ಹೆಸರನ್ನು ಸೂಚಿಸಿದರು ಕೂಡ ಮೋಕ್ಷಿತಾ ಅವರು ವಾದ ಮಾಡಲಿಲ್ಲ. ಗೌತಮಿ ಜಾದವ್ ಮತ್ತು ಮೋಕ್ಷಿತಾ ಪೈ ಅವರು ಮತ್ತೆ ಒಂದಾಗಲಿ ಎಂಬ ಆಸೆ ಕೆಲವು ಪ್ರೇಕ್ಷಕರಿಗೆ ಇದೆ. ಆದರೆ ಅದಕ್ಕೆ ಮೋಕ್ಷಿತಾ ಸಿದ್ಧರಿಲ್ಲ. ತಮ್ಮ ಸ್ವಾಭಿಮಾನವನ್ನು ಬದಿಗಿಟ್ಟು ಗೌತಮಿ ಜೊತೆ ತಾವು ಕೈ ಜೋಡಿಸಲ್ಲ ಎಂದು ಈಗಾಗಲೇ ಮೋಕ್ಷಿತಾ ಅವರು ಸ್ಪಷ್ಟಪಡಿಸಿದ್ದಾರೆ.

ಇದನ್ನೂ ಓದಿ: ಗೌತಮಿಯ ಖುಷಿ ಸಹಿಸದೇ ಬಾತ್​ ರೂಮ್​ ಸೇರಿಕೊಂಡ ಮೋಕ್ಷಿತಾ

ಶೋ ಶುರುವಾದ ಕೆಲವೇ ದಿನಗಳಲ್ಲಿ ಉಗ್ರಂ ಮಂಜು, ಗೌತಮಿ ಜಾದವ್ ಹಾಗೂ ಮೋಕ್ಷಿತಾ ಪೈ ಅವರು ಆಪ್ತವಾಗಿದ್ದರು. ಆದರೆ ಬರುಬರುತ್ತಾ ಮೋಕ್ಷಿತಾ ಅವರಿಗೆ ಈ ಗುಂಪು ಸರಿ ಎನಿಸಲಿಲ್ಲ. ನಂತರ ಅವರು ಪ್ರತ್ಯೇಕವಾಗಿ ಆಟವಾಡುವ ನಿರ್ಧಾರಕ್ಕೆ ಬಂದರು. ತಮಗೆ ಇರುವ ಭಿನ್ನಾಭಿಪ್ರಾಯ ಏನು ಎಂಬುದನ್ನು ನೇರವಾಗಿ ಹೇಳಲು ಮೋಕ್ಷಿತಾ ಆರಂಭಿಸಿದರು. ಗೌತಮಿ ಜೊತೆ ಅವರಿಗೆ ಇರುವ ಕಿರಿಕ್ ಹೆಚ್ಚಾಗಲು ಅದು ಕಾರಣ ಆಯಿತು. ಈ ವಾರ ಮೋಕ್ಷಿತಾ ಜೊತೆ ತ್ರಿವಿಕ್ರಮ್, ಭವ್ಯಾ, ಧನರಾಜ್, ಶಿಶಿರ್, ರಜತ್, ಹನುಮಂತ, ಚೈತ್ರಾ ಕುಂದಾಪುರ ಕೂಡ ನಾಮಿನೇಟ್ ಆಗಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Follow Us
Madan Kumar
Madan Kumar

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More
ರಜನಿ-ಕಮಲ್ ಸಿನಿಮಾದಲ್ಲಿ ನಟಿಸಲು ತ್ರಿಶಾಗೆ 12 ಕೋಟಿ ರೂಪಾಯಿ ಆಫರ್?
ರಜನಿ-ಕಮಲ್ ಸಿನಿಮಾದಲ್ಲಿ ನಟಿಸಲು ತ್ರಿಶಾಗೆ 12 ಕೋಟಿ ರೂಪಾಯಿ ಆಫರ್?
ಕಿಡ್ನಿ ಆರೋಗ್ಯವಾಗಿರಬೇಕು ಅಂದ್ರೆ ಈ ಸಲಹೆಗಳನ್ನು ತಪ್ಪದೆ ಪಾಲಿಸಬೇಕು
ಕಿಡ್ನಿ ಆರೋಗ್ಯವಾಗಿರಬೇಕು ಅಂದ್ರೆ ಈ ಸಲಹೆಗಳನ್ನು ತಪ್ಪದೆ ಪಾಲಿಸಬೇಕು
ಶೇ. 55 ಅಂಕ ಪಡೆದ ಮಗನಿಗೆ ಅಪ್ಪ-ಅಮ್ಮ ಮಾಡಿದ್ದೇನು?
ಶೇ. 55 ಅಂಕ ಪಡೆದ ಮಗನಿಗೆ ಅಪ್ಪ-ಅಮ್ಮ ಮಾಡಿದ್ದೇನು?
ಮಂಗಳೂರು: ವಿಮಾನಗಳನ್ನ ಆಕಾಶದಲ್ಲೇ ಅಲೆದಾಡಿಸುತ್ತಿರುವ ಮಳೆರಾಯ!
ಮಂಗಳೂರು: ವಿಮಾನಗಳನ್ನ ಆಕಾಶದಲ್ಲೇ ಅಲೆದಾಡಿಸುತ್ತಿರುವ ಮಳೆರಾಯ!
‘ಲವ್ ಮಾಕ್ಟೆಲ್’ ಸೆಟ್​ನಲ್ಲಿ ದಿಲೀಪ್: ವಿಡಿಯೋ ಹಂಚಿಕೊಂಡ ಡಾರ್ಲಿಂಗ್ ಕೃಷ್ಣ
‘ಲವ್ ಮಾಕ್ಟೆಲ್’ ಸೆಟ್​ನಲ್ಲಿ ದಿಲೀಪ್: ವಿಡಿಯೋ ಹಂಚಿಕೊಂಡ ಡಾರ್ಲಿಂಗ್ ಕೃಷ್ಣ
ಮಧ್ಯಪ್ರದೇಶದ ದೇವಾಸ್ ಪಟಾಕಿ ಕಾರ್ಖಾನೆಯಲ್ಲಿ ಸ್ಫೋಟ; ಮೂವರು ಸಾವು
ಮಧ್ಯಪ್ರದೇಶದ ದೇವಾಸ್ ಪಟಾಕಿ ಕಾರ್ಖಾನೆಯಲ್ಲಿ ಸ್ಫೋಟ; ಮೂವರು ಸಾವು
ಕೇಸರಿ ಶಾಲು ನಿಷೇಧಿಸುವ ಅಧಿಕಾರ ಕೊಟ್ಟಿದ್ಯಾರು? ಪ್ರಲ್ಹಾದ್​ ಜೋಶಿ ಕಿಡಿ
ಕೇಸರಿ ಶಾಲು ನಿಷೇಧಿಸುವ ಅಧಿಕಾರ ಕೊಟ್ಟಿದ್ಯಾರು? ಪ್ರಲ್ಹಾದ್​ ಜೋಶಿ ಕಿಡಿ
ಗ್ರೇಟರ್ ಬೆಂಗಳೂರು ಪ್ರಾಧಿಕಾರ ಚುನಾವಣೆ ಮೇಲೂ SIR ನೆರಳು!
ಗ್ರೇಟರ್ ಬೆಂಗಳೂರು ಪ್ರಾಧಿಕಾರ ಚುನಾವಣೆ ಮೇಲೂ SIR ನೆರಳು!
ಯುವಕರಿಂದ ಸಮುದ್ರದಲ್ಲಿ ಮುಳುಗುತ್ತಿದ್ದ ಇಬ್ಬರು ಪ್ರವಾಸಿಗರ ರಕ್ಷಣೆ
ಯುವಕರಿಂದ ಸಮುದ್ರದಲ್ಲಿ ಮುಳುಗುತ್ತಿದ್ದ ಇಬ್ಬರು ಪ್ರವಾಸಿಗರ ರಕ್ಷಣೆ
ವಚನಾನಂದಶ್ರೀಗಳ ವೈದ್ಯಕೀಯ ಪರೀಕ್ಷೆ ಬಗ್ಗೆ ಡಾಕ್ಟರ್ ಸ್ಫೋಟಕ ಹೇಳಿಕೆ
ವಚನಾನಂದಶ್ರೀಗಳ ವೈದ್ಯಕೀಯ ಪರೀಕ್ಷೆ ಬಗ್ಗೆ ಡಾಕ್ಟರ್ ಸ್ಫೋಟಕ ಹೇಳಿಕೆ