AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಗೌತಮಿ ಎದುರು ಮೋಕ್ಷಿತಾಗೆ ದೊಡ್ಡ ಸೋಲು; ಎಚ್ಚರಿಕೆ ನೀಡಿದ ಬಿಗ್ ಬಾಸ್

ಮೋಕ್ಷಿತಾ ಪೈ ಮತ್ತು ಗೌತಮಿ ಜಾದವ್ ನಡುವೆ ಇರುವ ಮನಸ್ತಾಪ ದೊಡ್ಡದಾಗಿದೆ. ಸ್ವಾಭಿಮಾನವನ್ನು ಬಿಟ್ಟು ಗೌತಮಿ ಎದುರು ಸಹಾಯ ಪಡೆಯಲ್ಲ ಎಂದು ಮೋಕ್ಷಿತಾ ಅವರು ದಿಟ್ಟ ನಿರ್ಧಾರ ತೆಗೆದುಕೊಂಡಿದ್ದಾರೆ. ಅವರ ಈ ನಿರ್ಧಾರದಿಂದ ಕ್ಯಾಪ್ಟೆನ್ಸಿ ಟಾಸ್ಕ್​ ಆಟದ ಅವಕಾಶ ಅವರಿಗೆ ಮಿಸ್​ ಆಗಿದೆ. ವೀಕ್ಷಕರ ವೋಟ್​ಗೆ ಬೆಲೆ ನೀಡಿಲ್ಲ ಎಂಬ ಕಾರಣಕ್ಕೆ ಬಿಗ್ ಬಾಸ್ ಮೋಕ್ಷಿತಾಗೆ ಎಚ್ಚರಿಕೆ ನೀಡಿದ್ದಾರೆ.

ಗೌತಮಿ ಎದುರು ಮೋಕ್ಷಿತಾಗೆ ದೊಡ್ಡ ಸೋಲು; ಎಚ್ಚರಿಕೆ ನೀಡಿದ ಬಿಗ್ ಬಾಸ್
ಗೌತಮಿ ಜಾದವ್, ಮೋಕ್ಷಿತಾ ಪೈ
ಮದನ್​ ಕುಮಾರ್​
|

Updated on: Dec 05, 2024 | 10:56 PM

Share

ಆರಂಭದಲ್ಲಿ ಗೌತಮಿ ಜಾದವ್ ಮತ್ತು ಮೋಕ್ಷಿತಾ ಪೈ ಅವರು ತುಂಬಾ ಕ್ಲೋಸ್​ ಆಗಿದ್ದರು. ಆದರೆ ನಂತರದ ದಿನಗಳಲ್ಲಿ ಅವರಿಬ್ಬರ ನಡುವೆ ವೈಮನಸ್ಸು ಮೂಡಿತು. ಜಗಳ ಆದ ಬಳಿಕ ಮೋಕ್ಷಿತಾ ಅವರು ಹಠ ಸಾಧಿಸುತ್ತಿದ್ದಾರೆ. ಅದಕ್ಕಾಗಿ ಅವರು ತಮಗೆ ಸಿಕ್ಕಿರುವ ಕೆಲವು ದೊಡ್ಡ ಅವಕಾಶಗಳನ್ನು ಕೂಡ ಕೈ ಚೆಲ್ಲಿದ್ದಾರೆ. ಬಿಗ್​ ಬಾಸ್​ ಮನೆಯಲ್ಲಿ ಕ್ಯಾಪ್ಟನ್ ಆಗುವ ಅವಕಾಶವನ್ನು ಕೂಡ ಮೋಕ್ಷಿತಾ ಅವರು ಕಳೆದುಕೊಂಡಿದ್ದಾರೆ. ಗೌತಮಿಯ ಸಹಾಯ ಪಡೆಯುವುದಕ್ಕಿಂತ ತಾವು ಬಿಗ್ ಬಾಸ್ ಮನೆಯಿಂದ ಹೊರಗೆ ಹೋಗುವುದೇ ವಾಸಿ ಎಂದು ಮೋಕ್ಷಿತಾ ಅವರು ಕಠಿಣ ನಿರ್ಧಾರ ತೆಗೆದುಕೊಂಡಿದ್ದಾರೆ.

ಈ ವಾರ ಎರಡು ಟೀಮ್​ಗಳಲ್ಲಿ ಪೈಪೋಟಿ ಏರ್ಪಟ್ಟಿತ್ತು. ಧನರಾಜ್​ ನಾಯಕತ್ವದ ಟೀಮ್​ ಹೆಚ್ಚು ಅಂಕಗಳನ್ನು ಗಳಿಸಿತು. ಹಾಗಾಗಿ ಅವರ ತಂಡದ ಹನುಮಂತ, ಮೋಕ್ಷಿತಾ, ರಜತ್, ಚೈತ್ರಾ ಕುಂದಾಪುರ ಅವರಿಗೆ ಕ್ಯಾಪ್ಟೆನ್ಸಿ ಟಾಸ್ಕ್ ಆಡುವ ಅವಕಾಶ ಸಿಕ್ಕಿತು. ಆದರೆ ಅದರಲ್ಲಿ ಒಂದು ಟ್ವಿಸ್ಟ್​ ಕೂಡ ಇತ್ತು. ಆ ಆಟಕ್ಕಾಗಿ ಎದುರಾಳಿ ತಂಡದ ಒಂದೊಂದು ಸ್ಪರ್ಧಿಯ ಸಹಾಯ ಪಡೆಯಬೇಕು ಎಂದು ಬಿಗ್ ಬಾಸ್ ಆದೇಶಿಸಿದರು. ಆದರೆ ಗೌತಮಿಯಿಂದ ಸಹಾಯ ಪಡೆಯಲು ಮೋಕ್ಷಿತಾಗೆ ಕಿಂಚಿತ್ತೂ ಇಷ್ಟ ಇರಲಿಲ್ಲ.

ಗೌತಮಿಯ ಸಹಾಯ ಪಡೆಯಲು ಮೋಕ್ಷಿತಾ ಅವರು ಒಪ್ಪಲಿಲ್ಲ. ಅವರ ಜೊತೆ ಆಟ ಆಡುವ ಬೇರೆ ಯಾವುದೇ ಸದಸ್ಯರು ಕೂಡ ಇರಲಿಲ್ಲ. ಹಾಗಾಗಿ ಈ ಆಟವನ್ನು ಬಿಟ್ಟುಕೊಡಲು ಮೋಕ್ಷಿತಾ ಮುಂದಾದರು. ಅವರ ಈ ನಿರ್ಧಾರದಿಂದ ಬಿಗ್ ಬಾಸ್ ಕೋಪಗೊಂಡರು. ಯಾಕೆಂದರೆ, ಪ್ರೇಕ್ಷಕರ ವೋಟ್​ಗೆ ಮೋಕ್ಷಿತಾ ಬೆಲೆ ನೀಡುತ್ತಿಲ್ಲ. ಹಾಗಾಗಿ ಈ ನಿರ್ಧಾರಕ್ಕೆ ಪರಿಣಾಮ ಎದುರಿಸಬೇಕಾಗುತ್ತದೆ ಎಂಬ ಎಚ್ಚರಿಕೆ ಸಂದೇಶ ಕೂಡ ಬಂತು. ಹಾಗಿದ್ದರೂ ಕೂಡ ಮೋಕ್ಷಿತಾ ಅವರು ತಮ್ಮ ನಿರ್ಧಾರವನ್ನು ಬದಲಾಯಿಸಲಿಲ್ಲ.

ಇದನ್ನೂ ಓದಿ: ‘ನನ್ನ ವರ್ತನೆಗೆ ಕ್ಷಮೆ ಕೇಳುತ್ತೇನೆ’; ಅಚ್ಚರಿ ಮೂಡಿಸಿದ ಮೋಕ್ಷಿತಾ ನಡೆ

ಮೋಕ್ಷಿತಾ ಅವರು ಕ್ಯಾಪ್ಟೆನ್ಸಿ ಆಟದ ಅವಕಾಶವನ್ನು ಕೈಚೆಲ್ಲಿದ ಬಳಿಕ ಬಿಗ್ ಬಾಸ್ ಒಂದು ಟ್ವಿಸ್ಟ್ ನೀಡಿದರು. ಎದುರಾಳಿ ತಂಡದ ಒಬ್ಬರಿಗೆ ಕ್ಯಾಪ್ಟೆನ್ಸಿ ಟಾಸ್ಕ್ ಆಡುವ ಅವಕಾಶ ನೀಡಲಾಗುತ್ತದೆ ಎಂದು ಘೋಷಿಸಲಾಯಿತು. ಆಗ ಆ ಅವಕಾಶವು ಗೌತಮಿ ಜಾದವ್ ಅವರಿಗೆ ಸಿಕ್ಕಿತು. ಅಂದರೆ, ಮೋಕ್ಷಿತಾ ಬಿಟ್ಟುಕೊಟ್ಟ ಚಾನ್ಸ್​ ತಾನಾಗಿಯೇ ಗೌತಮಿಗೆ ಒಲಿಯಿತು. ಈ ಎಲ್ಲ ಘಟನೆಗಳ ಬಗ್ಗೆ ಕಿಚ್ಚ ಸುದೀಪ್ ಅವರು ವೀಕೆಂಡ್​ ಸಂಚಿಕೆಯಲ್ಲಿ ಏನು ಮಾತನಾಡುತ್ತಾರೆ ಎಂಬುದನ್ನು ಕಾದು ನೋಡಬೇಕು. ಮೋಕ್ಷಿತಾ ಈ ವಾರ ನಾಮಿನೇಟ್ ಆಗಿದ್ದಾರೆ. ಹಾಗಾಗಿ ಅವರು ಎಲಿಮಿನೇಟ್​ ಆದರೂ ಅಚ್ಚರಿ ಏನಿಲ್ಲ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Follow Us
Madan Kumar
Madan Kumar

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More
ಸಚಿವರಾಗಿ ಪ್ರಮಾಣದ ಬೆನ್ನಲ್ಲೇ ತಂದೆ ಸಿದ್ದರಾಮಯ್ಯ ಆಶೀರ್ವಾದ ಪಡೆದ ಯತೀಂದ್ರ
ಸಚಿವರಾಗಿ ಪ್ರಮಾಣದ ಬೆನ್ನಲ್ಲೇ ತಂದೆ ಸಿದ್ದರಾಮಯ್ಯ ಆಶೀರ್ವಾದ ಪಡೆದ ಯತೀಂದ್ರ
ಡಿಕೆಶಿ ಪದಗ್ರಹಣದ ಬೆನ್ನಲ್ಲೇ ವಿಧಾನಸೌಧದಲ್ಲಿ ಬದಲಾದ ಸಿಎಂ ಕಚೇರಿ ನಾಮಫಲಕ
ಡಿಕೆಶಿ ಪದಗ್ರಹಣದ ಬೆನ್ನಲ್ಲೇ ವಿಧಾನಸೌಧದಲ್ಲಿ ಬದಲಾದ ಸಿಎಂ ಕಚೇರಿ ನಾಮಫಲಕ
ಡಿಸಿಎಂ ಆಗಿ ಪರಮೇಶ್ವರ್ ಪ್ರಮಾಣವಚನ, ಇಲ್ಲಿದೆ ಇವರ ರಾಜಕೀಯ ಜರ್ನಿ
ಡಿಸಿಎಂ ಆಗಿ ಪರಮೇಶ್ವರ್ ಪ್ರಮಾಣವಚನ, ಇಲ್ಲಿದೆ ಇವರ ರಾಜಕೀಯ ಜರ್ನಿ
ಸಂವಿಧಾನ ಹಿಡಿದು, ಅಜ್ಜಯ್ಯನ ಹೆಸರಲ್ಲಿ ಪ್ರಮಾಣವಚನ ಸ್ವೀಕರಿಸಿದ ಡಿಕೆಶಿ
ಸಂವಿಧಾನ ಹಿಡಿದು, ಅಜ್ಜಯ್ಯನ ಹೆಸರಲ್ಲಿ ಪ್ರಮಾಣವಚನ ಸ್ವೀಕರಿಸಿದ ಡಿಕೆಶಿ
ಕಾರಿನಲ್ಲಿ ಕುಳಿತೇ ಅಭಿಮಾನಿಗಳಿಗೆ ಫ್ಲೈಯಿಂಗ್ ಕಿಸ್ ಕೊಟ್ಟ ರಾಹುಲ್ ಗಾಂಧಿ
ಕಾರಿನಲ್ಲಿ ಕುಳಿತೇ ಅಭಿಮಾನಿಗಳಿಗೆ ಫ್ಲೈಯಿಂಗ್ ಕಿಸ್ ಕೊಟ್ಟ ರಾಹುಲ್ ಗಾಂಧಿ
ಡಿಕೆ ಶಿವಕುಮಾರ್ ಪ್ರಮಾಣ ವಚನಕ್ಕೆ ಖುಷಿಯಿಂದ ಆಗಮಿಸಿದ ನಟಿ ರಮ್ಯಾ: ವಿಡಿಯೋ
ಡಿಕೆ ಶಿವಕುಮಾರ್ ಪ್ರಮಾಣ ವಚನಕ್ಕೆ ಖುಷಿಯಿಂದ ಆಗಮಿಸಿದ ನಟಿ ರಮ್ಯಾ: ವಿಡಿಯೋ
Live: ಸಿಎಂ ಆಗಿ ಡಿಕೆ ಶಿವಕುಮಾರ್ ಪದಗ್ರಹಣ; ಲೈವ್​​ ನೋಡಿ
Live: ಸಿಎಂ ಆಗಿ ಡಿಕೆ ಶಿವಕುಮಾರ್ ಪದಗ್ರಹಣ; ಲೈವ್​​ ನೋಡಿ
ಡಿಸಿಎಂ ಆಗಿ ಆಯ್ಕೆ ಬೆನ್ನಲ್ಲೇ ಪರಮೇಶ್ವರ್​​ ಫಸ್ಟ್​​ ರಿಯಾಕ್ಷನ್​​
ಡಿಸಿಎಂ ಆಗಿ ಆಯ್ಕೆ ಬೆನ್ನಲ್ಲೇ ಪರಮೇಶ್ವರ್​​ ಫಸ್ಟ್​​ ರಿಯಾಕ್ಷನ್​​
ಸಿಎಂ ಆಗುವ ಮುನ್ನವೇ ಡಿಕೆಶಿ ರಾಜಕೀಯ ತಂತ್ರಗಾರಿಕೆ
ಸಿಎಂ ಆಗುವ ಮುನ್ನವೇ ಡಿಕೆಶಿ ರಾಜಕೀಯ ತಂತ್ರಗಾರಿಕೆ
ಡಿಕೆಶಿ ಜೊತೆಗಿನ 25 ವರ್ಷದ ಆತ್ಮೀಯತೆ ಹಂಚಿಕೊಂಡ ಕಡಲೆಕಾಯಿ ವ್ಯಾಪಾರಿ
ಡಿಕೆಶಿ ಜೊತೆಗಿನ 25 ವರ್ಷದ ಆತ್ಮೀಯತೆ ಹಂಚಿಕೊಂಡ ಕಡಲೆಕಾಯಿ ವ್ಯಾಪಾರಿ