- Kannada News Entertainment Mokshitha Pai Ask Sorry to Everyone after Bigg Boss Task cinema News in Kannada
‘ನನ್ನ ವರ್ತನೆಗೆ ಕ್ಷಮೆ ಕೇಳುತ್ತೇನೆ’; ಅಚ್ಚರಿ ಮೂಡಿಸಿದ ಮೋಕ್ಷಿತಾ ನಡೆ
ಈ ವಾರ ಮೋಕ್ಷಿತಾ ಪೈ ಅವರು ಯುವರಾಣಿ ಆದರೆ, ಮಂಜು ಅವರು ರಾಜನಾಗಿದ್ದರು. ರಾಜ ಹಾಗೂ ಯುವರಾಣಿ ಮಧ್ಯದ ಕಿತ್ತಾಟದಿಂದ ಇಡೀ ರಾಜ್ಯಕ್ಕೆ ಸಮಸ್ಯೆ ಆಗಿತ್ತು. ಆಟವೇ ರದ್ದಾಗಿ ಹೋಗಿತ್ತು. ಈ ವಿಚಾರದಲ್ಲಿ ಮೋಕ್ಷಿತಾ ಮಾತನಾಡಿದ್ದಾರೆ.
Updated on: Nov 30, 2024 | 7:25 AM

ಬಿಗ್ ಬಾಸ್ ಮನೆಯಲ್ಲಿ ಈ ವಾರ ಮೋಕ್ಷಿತಾ ಅವರು ಬೇರೆಯದೇ ರೀತಿಯ ಜವಾಬ್ದಾರಿಯನ್ನು ನಿರ್ವಹಿಸಿದ್ದರು. ಇದು ಅಷ್ಟು ಸುಲಭದಲ್ಲಿ ಇರಲಿಲ್ಲ. ಈ ಮಧ್ಯೆ ಅವರು ಎಲ್ಲರ ಬಳಿ ಕ್ಷಮೆ ಕೇಳಿ ಅಚ್ಚರಿ ಮೂಡಿಸಿದ್ದಾರೆ.

ಈ ವಾರ ಮೋಕ್ಷಿತಾ ಪೈ ಅವರು ಯುವರಾಣಿ ಆದರೆ, ಮಂಜು ಅವರು ರಾಜನಾಗಿದ್ದರು. ರಾಜ ಹಾಗೂ ಯುವರಾಣಿ ಮಧ್ಯದ ಕಿತ್ತಾಟದಿಂದ ಇಡೀ ರಾಜ್ಯಕ್ಕೆ ಸಮಸ್ಯೆ ಆಗಿತ್ತು. ಆಟವೇ ರದ್ದಾಗಿ ಹೋಗಿತ್ತು. ಈ ವಿಚಾರದಲ್ಲಿ ಮೋಕ್ಷಿತಾ ಮಾತನಾಡಿದ್ದಾರೆ.

ಟಾಸ್ಕ್ ಮುಗಿದ ಬಳಿಕ ಅವರು ಎಲ್ಲರ ಬಳಿ ಕ್ಷಮೆ ಕೇಳಿದ್ದಾರೆ. ‘ನನ್ನಿಂದ ನೋವಾಗಿದ್ದರೆ ಕ್ಷಮೆ ಕೇಳುತ್ತೇನೆ. ಈ ವಾರದ ಟಾಸ್ಕ್ ಮಾದರಿಯೇ ಆ ರೀತಿಯಲ್ಲಿ ಇತ್ತು. ಹೀಗಾಗಿ, ನಾನು ಆ ರೀತಿಯಲ್ಲಿ ವರ್ತಿಸಬೇಕಾಯಿತು’ ಎಂದು ಮೋಕ್ಷಿತಾ ಹೇಳಿದ್ದಾರೆ.

ಮೋಕ್ಷಿತಾ ಅವರು ಆಟ ಆಡಿದ ರೀತಿಗೆ ಕೆಲವರಿಗೆ ಬೇಸರ ಆಗಿದ್ದು ಇದೆ. ಮೋಕ್ಷಿತಾ ಅವರು ತ್ರಿವಿಕ್ರಂ ಅವರನ್ನು ಕ್ಯಾಪ್ಟನ್ಸಿ ಟಾಸ್ಕ್ನಿಂದ ಹೊರಕ್ಕೆ ಇಟ್ಟಿದ್ದರು. ಇದು ಚರ್ಚೆಗೆ ಕಾರಣ ಆಗಿತ್ತು. ತ್ರಿವಿಕ್ರಂ ಅವರಿಗೆ ಇದರಿಂದ ಬೇಸರ ಆಯಿತು.

ಮೋಕ್ಷಿತಾ ಹಾಗೂ ಮಂಜು ಮಧ್ಯೆ ಯಾವುದೂ ಸರಿ ಇಲ್ಲ. ಇಬ್ಬರೂ ಕಿತ್ತಾಡಿಕೊಳ್ಳುತ್ತಿದ್ದಾರೆ. ಅದೇ ರೀತಿ ಮೋಕ್ಷಿತಾ ಹಾಗೂ ತ್ರಿವಿಕ್ರಂ ಮಧ್ಯೆಯೂ ಯಾವುದೂ ಸರಿ ಇಲ್ಲ.




