AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕೋಲ್ಕತ್ತಾದಲ್ಲೂ ಪುನೀತ್​ನ ಮುತ್ತಿಕೊಂಡಿದ್ದ ಫ್ಯಾನ್ಸ್; ಇಲ್ಲಿದೆ ಅಪರೂಪದ ಸಂಗತಿ

ನಟ, ಆರ್​ಸಿಬಿ ಇನ್​ಸೈಡರ್ ದ್ಯಾನಿಶ್ ಸೇಟ್ ಹಾಗೂ ಪುನೀತ್ ರಾಜ್​ಕುಮಾರ್ ಮಧ್ಯೆ ಒಳ್ಳೆಯ ಒಡನಾಟ ಇತ್ತು. ಪುನೀತ್ ನಿರ್ಮಾಣದ ಸಿನಿಮಾದಲ್ಲಿ ದ್ಯಾನಿಶ್ ಅವರು ನಟಿಸಿದ್ದರು. ಅದು ನಿಜಕ್ಕೂ ಸುಂದರ ನೆನಪು ಎನ್ನುತ್ತಾರೆ ದ್ಯಾನಿಶ್.

ಕೋಲ್ಕತ್ತಾದಲ್ಲೂ ಪುನೀತ್​ನ ಮುತ್ತಿಕೊಂಡಿದ್ದ ಫ್ಯಾನ್ಸ್; ಇಲ್ಲಿದೆ ಅಪರೂಪದ ಸಂಗತಿ
ಪುನೀತ್ ರಾಜ್​ಕುಮಾರ್
 ಶ್ರೀಲಕ್ಷ್ಮೀ ಎಚ್
| Updated By: ರಾಜೇಶ್ ದುಗ್ಗುಮನೆ|

Updated on:Nov 30, 2024 | 7:56 AM

Share

ಪುನೀತ್ ರಾಜ್​ಕುಮಾರ್ ಅವರು ಪ್ಯಾನ್ ಇಂಡಿಯಾ ಸಿನಿಮಾಗಳನ್ನು ಮಾಡಿದವರಲ್ಲ. ಅವರು ನಟಿಸಿದ ಸಿನಿಮಾಗಳು ಕನ್ನಡದಲ್ಲಿ ಮಾತ್ರ ರಿಲೀಸ್ ಆಗಿದ್ದವು. ಇಷ್ಟೇ ಅಲ್ಲ, ಅವರು ಪರಭಾಷೆಯ ಸಿನಿಮಾಗಳಲ್ಲಿ ನಟಿಸಲು ಅಷ್ಟು ಆಸಕ್ತಿ ತೋರಿಸುತ್ತಿರಲಿಲ್ಲ. ಆದಾಗ್ಯೂ ಪುನೀತ್​ಗೆ ಪರಭಾಷೆಯಲ್ಲಿ ದೊಡ್ಡ ಅಭಿಮಾನಿ ಬಳಗ ಇತ್ತು. ಈ ಬಗ್ಗೆ ದ್ಯಾನಿಶ್ ಸೇಟ್ ಅವರು ಈ ಮೊದಲು ಹೇಳಿಕೊಂಡಿದ್ದರು. ಆ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ನಟ, ಆರ್​ಸಿಬಿ ಇನ್​ಸೈಡರ್ ದ್ಯಾನಿಶ್ ಸೇಟ್ ಹಾಗೂ ಪುನೀತ್ ರಾಜ್​ಕುಮಾರ್ ಮಧ್ಯೆ ಒಳ್ಳೆಯ ಒಡನಾಟ ಇತ್ತು. ಪುನೀತ್ ನಿರ್ಮಾಣದ ಸಿನಿಮಾದಲ್ಲಿ ದ್ಯಾನಿಶ್ ಅವರು ನಟಿಸಿದ್ದರು. ಅದು ನಿಜಕ್ಕೂ ಸುಂದರ ನೆನಪು ಎನ್ನುತ್ತಾರೆ ದ್ಯಾನಿಶ್. ‘ಅವರು ನಿಜಕ್ಕೂ ಒಳ್ಳೆಯ ಗೆಳೆಯ, ಅಣ್ಣನ ರೀತಿ’ ಎಂದು ದ್ಯಾನಿಶ್ ಅವರು ಪುನೀತ್ ಬಗ್ಗೆ ಹೇಳಿಕೊಂಡಿದ್ದರು.

‘ಪುನೀತ್ ರಾಜ್​ಕುಮಾರ್ ಅವರು ಕೋಲ್ಕತ್ತಾಗೆ ಬಂದಿದ್ದರು. ಅಲ್ಲಿ ನನ್ನ ಶೋ ಇತ್ತು. ಹೀಗಾಗಿ, ಕೆಲವು ಕಡೆ ದೊಡ್ಡದಾಗಿ ಫ್ಲೆಕ್ಸ್ ಹಾಕಲಾಗಿತ್ತು. ಇದನ್ನು ನೋಡಿ ಅವರು ಕರೆ ಮಾಡಿದರು. ನೀವು ಕೋಲ್ಕತ್ತಾದಲ್ಲೂ ಫೇಮಸ್ ಇದೀರಲ್ಲ ಎಂದು ಹೇಳಿದರು. ನಾನು ಶೂಟಿಂಗ್​ಗಾಗಿ ಇಲ್ಲಿ ಬಂದಿದ್ದೆ ಎಂದರು. ನಾನು ಶೋಗೆ ಬರುವಂತೆ ಹೇಳಿದೆ. ಅವರು ಖುಷಿಯಿಂದ ಆಗಮಿಸಿದರು’ ಎಂದು ಹಳೆಯ ಘಟನೆ ಹೇಳಿದ್ದಾರೆ ದ್ಯಾನಿಶ್ ಅವರು.

‘ಪುನೀತ್ ಅವರು ಬಂದರು. ಅಲ್ಲಿ ಅವರ ಜೊತೆ ಸಾಕಷ್ಟು ಜನರು ಇದ್ದರು. ಇವರೆಲ್ಲ ನಿಮ್ಮ ಗೆಳೆಯರಾ ಎಂದು ಕೇಳಿದೆ. ಇಲ್ಲ, ಅವರು ಫ್ಯಾನ್ಸ್. ನನ್ನ ಜೊತೆ ನಡೆದು ಬರುತ್ತಿದ್ದಾರೆ ಎಂದರು. ನೀವು ಇಲ್ಲಿ ಹೇಗೆ ಗೊತ್ತು ಎಂದು ಕೇಳಿದೆ’ ಎಂದಿದ್ದಾರೆ ದ್ಯಾನಿಶ್.

ಇದನ್ನೂ ಓದಿ: ದರ್ಶನ್ ಮೊದಲ ಸಿನಿಮಾಕ್ಕೆ ಸಹಾಯ ಮಾಡಿದ್ದ ಪುನೀತ್ ರಾಜ್​ಕುಮಾರ್ 

ಪುನೀತ್ ರಾಜ್​ಕುಮಾರ್ ಸಿನಿಮಾಗಳು ಹಿಂದಿಗೆ ಡಬ್ ಆಗಿ ರಿಲೀಸ್ ಆದ ಸಾಕಷ್ಟು ಉದಾಹರಣೆ ಇದೆ. ಈ ಸಿನಿಮಾಗಳನ್ನು ಕೋಲ್ಕತ್ತಾದ ಮಂದಿ ವೀಕ್ಷಣೆ ಮಾಡಿದ್ದಾರೆ. ಈ ಕಾರಣಕ್ಕೆ ಅವರಿಗೆ ಪುನೀತ್ ಪರಿಚಯ ಇತ್ತು. ಈಗ ಪುನೀತ್ ನಮ್ಮ ಜೊತೆ ಇಲ್ಲ ಎಂಬುದು ಬೇಸರದ ವಿಚಾರ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On - 7:56 am, Sat, 30 November 24