ಕಪ್ ಹಿಡಿದು ಹೊರ ಬಂದ ವಿನ್ನರ್ ಜೈಲಿಗೆ; ‘ಬಿಗ್ ಬಾಸ್ ತೆಲುಗು’ನಲ್ಲಿ ಹೈಡ್ರಾಮಾ

|

Updated on: Dec 21, 2023 | 11:28 AM

ಇತ್ತೀಚೆಗೆ ತೆಲುಗು ಬಿಗ್ ಬಾಸ್​ನ ಫಿನಾಲೆ ನಡೆಯಿತು. ಇದು ಮುಗಿದ ನಂತರ ನೂರಾರು ಅಭಿಮಾನಿಗಳು ಪ್ರಶಾಂತ್ ಅವರನ್ನು ಸ್ವಾಗತಿಸಲು ಸ್ಟುಡಿಯೋಗೆ ಆಗಮಿಸಿದ್ದರು. ಈ ವೇಳೆ ರಸ್ತೆಯಲ್ಲೇ ಅವಾಂತರ ಸೃಷ್ಟಿಸಿದರು. ಪ್ರಶಾಂತ್ ಅಭಿಮಾನಿಗಳು ಕಾರು ಹಾಗೂ ಬಸ್​ಗಳ ಗಾಜನ್ನು ಒಡೆದು ದಾಂಧಲೆ ನಡೆಸಿದ್ದರು.

ಕಪ್ ಹಿಡಿದು ಹೊರ ಬಂದ ವಿನ್ನರ್ ಜೈಲಿಗೆ; ‘ಬಿಗ್ ಬಾಸ್ ತೆಲುಗು’ನಲ್ಲಿ ಹೈಡ್ರಾಮಾ
ಪ್ರಶಾಂತ್
Follow us on

‘ಬಿಗ್ ಬಾಸ್ ತೆಲುಗು ಸೀಸನ್ 7’ರ ವಿನ್ನರ್ ಪಲ್ಲವಿ ಪ್ರಶಾಂತ್ (Pallavi Prashanth) ಅವರನ್ನು ಪೊಲೀಸರು ಬಂಧಿಸಿದ್ದಾರೆ. ಬುಧವಾರ (ಡಿಸೆಂಬರ್ 20) ರಾತ್ರಿ ಜುಬಿಲಿ ಹಿಲ್ಸ್ ಪೊಲೀಸರು ಪ್ರಶಾಂತ್ ಅವರನ್ನು ಅರೆಸ್ಟ್ ಮಾಡಿದ್ದಾರೆ.  ಪ್ರಶಾಂತ್ ಜೊತೆಗೆ ಅವರ ಸಹೋದರ ಮನೋಹರ್ ಅವರನ್ನು ಕೂಡ ಪೊಲೀಸರು ಬಂಧಿಸಿ ಠಾಣೆಗೆ ಕರೆದೊಯ್ದಿದ್ದಾರೆ. ವಿಧ್ವಂಸಕ ಕೃತ್ಯ ಹಾಗೂ ಅಶಾಂತಿಗೆ ಕಾರಣ ಆಗಿದ್ದಕ್ಕೆ ಇವರನ್ನು ಬಂಧಿಸಲಾಗಿದೆ. ಸುಮಾರು ಆರು ಗಂಟೆಗಳ ಕಾಲ ಪೊಲೀಸರು ಪಲ್ಲವಿ ಪ್ರಶಾಂತ್​ ಅವರ ವಿಚಾರಣೆ ನಡೆಸಿದ್ದಾರೆ.

ಇತ್ತೀಚೆಗೆ ತೆಲುಗು ಬಿಗ್ ಬಾಸ್​ನ ಫಿನಾಲೆ ನಡೆಯಿತು. ಇದು ಮುಗಿದ ನಂತರ ನೂರಾರು ಅಭಿಮಾನಿಗಳು ಪ್ರಶಾಂತ್ ಅವರನ್ನು ಸ್ವಾಗತಿಸಲು ಸ್ಟುಡಿಯೋಗೆ ಆಗಮಿಸಿದ್ದರು. ಈ ವೇಳೆ ರಸ್ತೆಯಲ್ಲೇ ಅವಾಂತರ ಸೃಷ್ಟಿಸಿದರು. ಪ್ರಶಾಂತ್ ಅಭಿಮಾನಿಗಳು ಕಾರು ಹಾಗೂ ಬಸ್​ಗಳ ಗಾಜನ್ನು ಒಡೆದು ದಾಂಧಲೆ ನಡೆಸಿದ್ದರು. ಆ ಬಳಿಕ ಪಲ್ಲವಿ ಪ್ರಶಾಂತ್ ವಿರುದ್ಧ ಜುಬಿಲಿ ಹಿಲ್ಸ್ ಪೊಲೀಸರು ಸುಮೋಟೋ ಕೇಸ್ ದಾಖಲಿಸಿಕೊಂಡಿದ್ದರು.

ಈ ಪ್ರಕರಣದಲ್ಲಿ ಪಲ್ಲವಿ ಪ್ರಶಾಂತ್ ಅವರನ್ನು ಪ್ರಮುಖ ಆರೋಪಿಯನ್ನಾಗಿ ಮಾಡಲಾಗಿದೆ. ಈ ಪ್ರಕರಣದಲ್ಲಿ ಪಲ್ಲವಿ ಪ್ರಶಾಂತ್ ಎ1 ಆರೋಪಿ ಆಗಿದ್ದಾರೆ. ಅವರ ಸಹೋದರನನ್ನು ಎ2 ಆರೋಪಿ ಆಗಿ ಹೆಸರಿಸಲಾಗಿದೆ. ಎ4 ಮತ್ತು ಎ5 ಆರೋಪಿಯನ್ನೂ ಬಂಧಿಸಲಾಗಿದೆ. ಪ್ರಶಾಂತ್ ವಿರುದ್ಧ ಒಟ್ಟು 9 ಪ್ರಕರಣಗಳು ದಾಖಲಾಗಿವೆ. ಪೊಲೀಸರು ಈಗಾಗಲೇ ಪಲ್ಲವಿ ಪ್ರಶಾಂತ್ ಹಾಗೂ ಮನೋಹರ್ ಅವರನ್ನು ನ್ಯಾಯಾಧೀಶರ ಎದುರು ಹಾಜರು ಪಡಿಸಿದ್ದು, 14 ದಿನಗಳ ನ್ಯಾಯಾಂಗ ಬಂಧನ ವಿಧಿಸಲಾಗಿದೆ. ಸದ್ಯ ಅವರನ್ನು ಚಂಚಲಗುಡ ಜೈಲಿಗೆ ಸ್ಥಳಾಂತರಿಸಲಾಗಿದೆ.

ಇದನ್ನೂ ಓದಿ: ‘ನಂಬಿ ಕುರಿ ಆದೆವು’; ಹಣದ ವ್ಯವಹಾರದಿಂದ ಬಿಗ್ ಬಾಸ್​ ಮನೆ ಅಲ್ಲೋಲ ಕಲ್ಲೋಲ

‘ಬಿಗ್ ಬಾಸ್ ಸೀಸನ್ 7’ ಬಂದ ಪಲ್ಲವಿ ಪ್ರಶಾಂತ್ ರೈತನ ಮಗ ಎಂದ ಕಾರಣಕ್ಕೆ ಗಮನ ಸೆಳೆದರು. ಅವರು ಕಾಮನ್ ಮ್ಯಾನ್ ಆಗಿ ಎಂಟ್ರಿ ಕೊಟ್ಟು ಕಪ್ ಗೆದ್ದಿದ್ದಾರೆ. ಈ ಸೀಸನ್​ನಲ್ಲಿ ಅಮರ್ ದೀಪ್ ಮತ್ತು ಪ್ರಶಾಂತ್ ನಡುವೆ ಮಾತಿನ ಚಕಮಕಿ ನಡೆದಿತ್ತು. ರೈತನ ಮಗನಾಗಿ ಪ್ರಶಾಂತ್‌ ಅವರ ಕಾರ್ಯವೈಖರಿ ನೋಡಿ ಹಲವರು ಬೆಂಬಲ ವ್ಯಕ್ತಪಡಿಸಿದ್ದರು. 105 ದಿನಗಳ ಕಾಲ ನಡೆದ ಬಿಗ್ ಬಾಸ್ ಜರ್ನಿಯಲ್ಲಿ ಪ್ರಶಾಂತ್ ವಿನ್ ಆದರು. ಈಗ ಅವರು ಜೈಲು ಸೇರಿದ್ದು ದುರದೃಷ್ಟಕರ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ