‘ನಂಬಿ ಕುರಿ ಆದೆವು’; ಹಣದ ವ್ಯವಹಾರದಿಂದ ಬಿಗ್ ಬಾಸ್ ಮನೆ ಅಲ್ಲೋಲ ಕಲ್ಲೋಲ
‘ಒಂದು ಟೀಂ ಎಂದಾಗ ಯಾರ ಬಳಿ ಎಷ್ಟು ಹಣ ಇದೆ ಎಂಬುದು ಗೊತ್ತಾಗಬೇಕು. ಇಲ್ಲದಿದ್ದರೆ ಏನು ಪ್ರಯೋಜನ. ನಾನು ಆಟ ಆಡಲ್ಲ. ತನಿಷಾ ಜೊತೆ ಸೇರಿ ಕುರಿ ಆದೆವು ಅನಿಸ್ತಿದೆ’ ಎಂದಿದ್ದಾರೆ ತುಕಾಲಿ ಸಂತೋಷ್.
ಬಿಗ್ ಬಾಸ್ (Bigg Boss) ಮನೆಗೆ ಹೊರ ಜಗತ್ತಿನ ಸಂಪರ್ಕ ಇರುವುದಿಲ್ಲ. ಎಲ್ಲಾ ಸ್ಪರ್ಧಿಗಳು ಇಲ್ಲಿ ತಮ್ಮದೇ ಆದ ಲೋಕ ಸೃಷ್ಟಿ ಮಾಡಿಕೊಳ್ಳಬೇಕು. ಏನಾದರೂ ಕೊಂಡುಕೊಳ್ಳೋಣ ಎಂದರೆ ಯಾವುದೇ ಶಾಪ್ ಇರುವುದಿಲ್ಲ. ಬಿಗ್ ಬಾಸ್ ಏನು ನೀಡುತ್ತಾರೋ ಅದನ್ನೇ ಸ್ವೀಕರಿಸಬೇಕು. ಈಗ ಬಿಗ್ ಬಾಸ್ನಲ್ಲಿ ಹಣದ ವ್ಯವಹಾರ ಚಾಲ್ತಿಗೆ ಬಂದಿದೆ. ಇದರಿಂದ ಬಿಗ್ ಬಾಸ್ನಲ್ಲಿ ಕಿತ್ತಾಟಗಳು ನಡೆಯುತ್ತಿವೆ. ಸ್ಪರ್ಧಿಗಳ ಮಧ್ಯೆಯೇ ಜಗಳ ಏರ್ಪಡುತ್ತಿದೆ. ಸಂತೋಷ್ ಅವರು ಟೀಂ ಲೀಡರ್ ವಿರುದ್ಧವೇ ತಿರುಗಿ ಬಿದ್ದಿದ್ದಾರೆ.
ಬಿಗ್ ಬಾಸ್ನಲ್ಲಿ ಎರಡು ಟೀಂ ಮಾಡಲಾಗಿದೆ. ಒಂದು ತಂಡಕ್ಕೆ ತನಿಷಾ ಮತ್ತೊಂದು ತಂಡಕ್ಕೆ ಸಂಗೀತಾ ಲೀಡರ್. ಪ್ರತಿ ತಂಡಕ್ಕೆ 11 ಸಾವಿರ ರೂಪಾಯಿ ನೀಡಲಾಗುತ್ತದೆ. ತಮ್ಮಿಷ್ಟದ ಆಟಗಾರರನ್ನು ಅವರು ಖರೀದಿ ಮಾಡಬಹುದು. ಸಂಗೀತಾ ಅವರು ಮೈಕಲ್, ಅವಿನಾಶ್, ನಮ್ರತಾ ಹಾಗೂ ಪ್ರತಾಪ್ನ ಖರೀದಿ ಮಾಡಿದರು. ತನಿಷಾ ಅವರು ಕಾರ್ತಿಕ್, ವಿನಯ್, ತುಕಾಲಿ ಸಂತೋಷ್ ಹಾಗೂ ವರ್ತೂರು ಸಂತೋಷ್ನ ಖರೀದಿ ಮಾಡಿದರು. ಆದರೆ, ಯಾರಿಗೆ ಎಷ್ಟು ಹಣ ನೀಡಿ ಖರೀದಿಸಲಾಗಿದೆ ಎನ್ನೋ ಗುಟ್ಟನ್ನು ಬಿಟ್ಟುಕೊಟ್ಟಿಲ್ಲ.
ತನಿಷಾ ಅವರು ಗೆಳೆಯ ಎನ್ನುವ ಕಾರಣಕ್ಕೆ ಕಾರ್ತಿಕ್ಗೆ ಅತಿ ಹೆಚ್ಚು ಅಂದರೆ 4,300 ರೂಪಾಯಿ ನೀಡಿ ಖರೀದಿ ಮಾಡಿದರು. ತುಕಾಲಿ ಸಂತೋಷ್ಗೆ ಕೇವಲ ಒಂದು ಸಾವಿರ ರೂಪಾಯಿ ನೀಡಲಾಗಿದೆ. ಕಾರ್ತಿಕ್ಗೆ ಎಷ್ಟು ಹಣ ನೀಡಲಾಗಿದೆ ಎಂಬುದನ್ನು ತಿಳಿದುಕೊಳ್ಳಲು ಸಂತೋಷ್ ಹೆಚ್ಚು ಆಸಕ್ತಿ ತೋರಿಸಿದ್ದಾರೆ. ಆದರೆ, ಇದಕ್ಕೆ ತನಿಷಾ ಅವಕಾಶ ನೀಡಲೇ ಇಲ್ಲ. ಈ ಬಗ್ಗೆ ಸಂತೋಷ್ ಅವರು ವಿನಯ್ ಬಳಿ ಚರ್ಚೆ ಮಾಡಿದ್ದಾರೆ.
ಇದನ್ನೂ ಓದಿ: ‘ನಾವು ಜೋಡೆತ್ತುಗಳು’: ಬಿಗ್ ಬಾಸ್ ಮನೆಯಲ್ಲಿ ದ್ವೇಷ ಮರೆತು ಒಂದಾದ ವಿನಯ್-ಕಾರ್ತಿಕ್
‘ಒಂದು ಟೀಂ ಎಂದಾಗ ಯಾರ ಬಳಿ ಎಷ್ಟು ಹಣ ಇದೆ ಎಂಬುದು ಗೊತ್ತಾಗಬೇಕು. ಇಲ್ಲದಿದ್ದರೆ ಏನು ಪ್ರಯೋಜನ. ನಾನು ಆಟ ಆಡಲ್ಲ. ತನಿಷಾ ಜೊತೆ ಸೇರಿ ಕುರಿ ಆದೆವು ಅನಿಸ್ತಿದೆ’ ಎಂದಿದ್ದಾರೆ ತುಕಾಲಿ ಸಂತೋಷ್.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ