AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮತ್ತೆ ಸಿಟ್ಟಿಗೆದ್ದ ವಿನಯ್: ಈ ಬಾರಿ ಅವಿನಾಶ್ ಗುರಿ

Bigg Boss: ಬಿಗ್​ಬಾಸ್ ಕನ್ನಡ ಸೀಸನ್ 10ರಲ್ಲಿ ವಿನಯ್ ಮತ್ತೆ ತಮ್ಮ ಕೋಪ ಪ್ರದರ್ಶಿಸಿದರು. ಈ ಬಾರಿ ಅವಿನಾಶ್ ಅವರನ್ನು ತಮ್ಮ ಗುರಿ ಮಾಡಿಕೊಂಡರು.

ಮತ್ತೆ ಸಿಟ್ಟಿಗೆದ್ದ ವಿನಯ್: ಈ ಬಾರಿ ಅವಿನಾಶ್ ಗುರಿ
ವಿನಯ್
ಮಂಜುನಾಥ ಸಿ.
|

Updated on: Dec 20, 2023 | 11:27 PM

Share

ಕಳೆದ ಕೆಲ ವಾರಗಳಿಂದ ಬಿಸಿ ಬುಗ್ಗೆಯಂತಾಗಿದ್ದ ಬಿಗ್​ಬಾಸ್ (BiggBoss) ಮನೆ ಕಳೆದ ವಾರ ತುಸು ತಣ್ಣಗಾಗಿತ್ತು. ಶಾಲೆಯ ವಾತಾವರಣ ಮರುಸೃಷ್ಟಿ ಮಾಡುವ ಟಾಸ್ಕ್ ನೀಡಿದ್ದ ಕಾರಣ ವಿನಯ್ ಸೇರಿದಂತೆ ಎಲ್ಲ ಸ್ಪರ್ಧಿಗಳು ತುಸು ತಣ್ಣಗೆ ಆಟವಾಡಿದರು. ಆದರೆ ಈ ವಾರ ಮತ್ತೆ ಬಿಗ್​ಬಾಸ್ ಮನೆ ಬಿಸಿ ಏರಿದೆ. ಮತ್ತೆ ಸಂಗೀತಾ ಹಾಗೂ ವಿನಯ್ ಎದುರು ಬದರಾಗಿದ್ದಾರೆ. ಯಾರ ಮೇಲೂ ಅಗ್ರೆಷನ್ ತೋರಲಾರದೆ ಕೈ ಕಟ್ಟಿದಂತಾಗಿದ್ದ ವಿನಯ್, ಅವಕಾಶ ಸಿಗುತ್ತಲೆ ತಮ್ಮ ವಿಲನ್ ಗುಣ ಹೊರಹಾಕಿದ್ದಾರೆ.

ಕೊಳೆ ಒಳ್ಳೆಯದಲ್ಲ ಎಂಬ ಟಾಸ್ಕ್​ ಅನ್ನು ಬಿಗ್​ಬಾಸ್ ಸ್ಪರ್ಧಿಗಳಿಗೆ ನೀಡಿದ್ದರು. ಆ ಟಾಸ್ಕ್​ನ ಪ್ರಕಾರ, ಎರಡು ಗುಂಪುಗಳವರು ಎದುರಾಳಿ ಗುಂಪಿನ ಬಳಿ ಇರುವ ಬಟ್ಟೆಯನ್ನು ಬಣ್ಣಗಳಿಂದ ಕೊಳೆ ಮಾಡಬೇಕು, ಆ ಕೊಳೆಯಾದ ಬಟ್ಟೆಯನ್ನು ಒಗೆದು ಮತ್ತೆ ಒಣಗಿ ಹಾಕಬೇಕು, ಬಜರ್ ಆದಾಗ ಯಾರ ಬಟ್ಟೆಗಳು ಕಡಿಮೆ ಕೊಳೆಯಾಗಿರುತ್ತವೆಯೋ ಆ ತಂಡ ಗೆಲ್ಲುತ್ತದೆ.

ಎರಡೂ ತಂಡಗಳು ಮೊದಲ ಸುತ್ತನ್ನು ಆರಾಮವಾಗಿ ಆಡಿದರು. ಮೊದಲ ಸುತ್ತಿನಲ್ಲಿ ಸಂಗೀತಾರ ತಂಡ ಗೆದ್ದಿತು. ಅವರಿಗೆ 1000 ಪಾಯಿಂಟ್ಸ್ ದೊರಕಿತು. ಆ ಬಳಿಕ ಸುತ್ತಿನಲ್ಲಿ ತನಿಷಾರ ತಂಡದ ಕಾರ್ತಿಕ್ ಹಾಗೂ ವಿನಯ್ ತುಸು ಅಗ್ರೆಸಿವ್ ಆಗಿ ಆಡಲು ಆರಂಭಿಸಿದರು. ವಿನಯ್​, ಎದುರಾಳಿ ತಂಡದ ಬಟ್ಟೆಯನ್ನು ಕೊಳೆ ಮಾಡುತ್ತಿದ್ದಾಗ, ಅವಿನಾಶ್ ಅವರನ್ನು ಅಡ್ಡಗಟ್ಟಿ ಎತ್ತಿ ಪಕ್ಕಕ್ಕಿಟ್ಟರು. ಇದರಿಂದ ಸಿಟ್ಟಾದ ವಿನಯ್, ಅವಿನಾಶ್ ಅವರನ್ನು ಎಳೆದು ಕೆಳಗೆ ಬೀಳಿಸಿ ಅವರ ಮೇಲೆ ಕುಳಿತು, ಜೋರು ಧ್ವನಿಯಲ್ಲಿ ಬೆದರಿಕೆ ಹಾಕಿದರು.

ಇದನ್ನೂ ಓದಿ:ತೆಲುಗು ಬಿಗ್​ಬಾಸ್ ಗೆದ್ದ ಪ್ರಶಾಂತ್​ಗೆ ಸಿಕ್ಕ ಮೊತ್ತವೆಷ್ಟು? ರನ್ನರ್ ಅಪ್​ಗೆ ಸಿಕ್ಕಿದ್ದೆಷ್ಟು?

ಅವಿನಾಶ್ ಸಹ ಜೋರು ದನಿಯಲ್ಲಿ ನೀನೊಬ್ಬನೆ ವಿಲನ್ ಅಲ್ಲ ಎನ್ನುತ್ತಾ ವಿನಯ್ ಮೇಲೆ ಏರಿ ಹೋದರು. ಉಸ್ತುವಾರಿಯಾಗಿದ್ದ ಸಿರಿ ಅವರು ತಡೆಯುವ ಪ್ರಯತ್ನ ಮಾಡಿದರಾದರೂ ವಿನಯ್ ಸುಮ್ಮನಾಗಲಿಲ್ಲ. ಮತ್ತೆ ಮತ್ತೆ ಅವಿನಾಶ್ ಮೇಲೆ ಏರಿ ಹೋಗಿ, ನಾನು ಇನ್ನು ಮುಂದೆ ಅಗ್ರೆಸ್ಸಿವ್ ಆಗಿ ಆಡುತ್ತೇನೆ ಎನ್ನುತ್ತಾ ಮುಂದೆ ಹೋದರು ಅವರಿಗೆ ಮೈಖಲ್ ಅಡ್ಡ ನಿಂತರು ಅವರನ್ನು ಜೋರಾಗಿ ತಳ್ಳಿ ಬೀಳಿಸಿದರು ವಿನಯ್. ಆಗ ಅಖಾಡಕ್ಕೆ ಇಳಿದ ಸಂಗೀತಾ, ವಿನಯ್ ಆಟವನ್ನು ಜೋರು ದನಿಯಲ್ಲಿ ಟೀಕಿಸಿದರು. ಅಲ್ಲಿ ಮತ್ತೊಮ್ಮೆ ವಿನಯ್ ಹಾಗೂ ಸಂಗೀತಾ ನಡುವೆ ತುಸು ಮಾತಿನ ಚಕಮಕಿ ನಡೆಯಿತು.

ಬಜರ್ ಆದ ಬಳಿಕ ವಿನಯ್ ರ ಕೈಬೆರಳಿಗೆ ಏಟಾಗಿರುವುದು ಗೊತ್ತಾಗಿ ಅವರಿಗೆ ಚಿಕಿತ್ಸೆ ಕೊಡಿಸಲಾಯ್ತು, ಮೈಖಲ್ ಜೊತೆ ತಳ್ಳಾಟದಲ್ಲಿ ನಿರತವಾಗಿದ್ದ ಕಾರ್ತಿಕ್​ಗೂ ಸಹ ಏಟಾಗಿತ್ತು. ಅವರು ಸಹ ತಾವು ಆಡುವುದಿಲ್ಲ ಎಂದು ಆಟದಿಂದ ಹೊರಗೆ ಉಳಿದರು.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ