
ನೋಡನೋಡುತ್ತಿದ್ದಂತೆಯೇ ‘ಬಿಗ್ ಬಾಸ್ ಕನ್ನಡ ಸೀಸನ್ 12’ (Bigg Boss Kannada Season 12) ಫಿನಾಲೆ ಬಂದೇ ಬಿಟ್ಟಿದೆ. ಎಲ್ಲವೂ ನಿನ್ನೆ ಮೊನ್ನೆ ಶುರು ಆದಂತಿದೆ. ಆದರೆ ಮೂರೂವರೆ ತಿಂಗಳು ಕಳೆದುಹೋಗಿದೆ. ಹಲವಾರು ಸ್ಪರ್ಧಿಗಳಿಂದ ತುಂಬಿದ್ದ ಬಿಗ್ ಬಾಸ್ ಮನೆ ಈಗ ಕೇವಲ 6 ಮಂದಿಗೆ ಬಂದು ನಿಂತಿದೆ. ಅಶ್ವಿನಿ ಗೌಡ, ಕಾವ್ಯಾ ಶೈವ, ಮ್ಯೂಟೆಂಟ್ ರಘು, ಧನುಷ್, ರಕ್ಷಿತಾ ಶೆಟ್ಟಿ ಹಾಗೂ ಗಿಲ್ಲಿ ನಟ (Gilli Nata) ಅವರು ಫಿನಾಲೆ ತಲುಪಿದ್ದಾರೆ. ಜನವರಿ 18ರಂದು ಅದ್ದೂರಿಯಾಗಿ ‘ಬಿಗ್ ಬಾಸ್ ಕನ್ನಡ 12’ ಫಿನಾಲೆ (BBK 12 Finale) ನಡೆಯಲಿದೆ. ಫಿನಾಲೆ ತಲುಪಿದ 6 ಸ್ಪರ್ಧಿಗಳಿಗೆ ಕೆಲವು ಪ್ಲಸ್ ಮತ್ತು ಮೈಸನ್ ಅಂಶಗಳು ಇವೆ.
ಕಾವ್ಯಾ ಶೈವ: ಬಿಗ್ ಬಾಸ್ ಆಟದಲ್ಲಿ ಕಾವ್ಯಾ ಅವರು ಗಿಲ್ಲಿ ನಟ ಜೊತೆ ಜಂಟಿಯಾಗಿ ಎಂಟ್ರಿ ನೀಡಿದ್ದರು. ಅದು ಅವರಿಗೆ ಪ್ಲಸ್ ಆಯಿತು. ಆದರೆ ಅತಿಯಾಗಿ ಗಿಲ್ಲಿ ಜೊತೆ ಕಾಣಿಸಿಕೊಂಡಿದರು. ಕುಟುಂಬದವರು ಬಂದಾಗ ಹೊರಗಿನ ವಿಷಯ ಕೇಳಿ ತಿಳಿದುಕೊಂಡರು. ಗಿಲ್ಲಿ ನೆರಳಲ್ಲಿ ಕಾವ್ಯಾ ಇದ್ದಾರೆ ಎಂಬ ಟೀಕೆ ಇದೆ. ಅದರಿಂದ ಅವರಿಗೆ ಮೈನಸ್ ಆಗಿದೆ. ಎಮೋಷನಲ್ ಆಗಿ ಗಟ್ಟಿಗಿತ್ತಿ. ಟಾಸ್ಕ್ ಚೆನ್ನಾಗಿ ಆಡಿದ್ದಾರೆ. ಇವೆಲ್ಲವೂ ಅವರಿಗೆ ಪ್ಲಸ್ ಆಗಿದೆ.
ಧನುಷ್ ಗೌಡ: ಕಿರುತೆರೆ ನಟ ಧನುಷ್ ಗೌಡ ಅವರು ಎಲ್ಲರಿಗಿಂತ ಮೊದಲು ಫಿನಾಲೆ ತಲುಪಿ ಭೇಷ್ ಎನಿಸಿಕೊಂಡರು. ಯಾವುದೇ ಸಂದರ್ಭದಲ್ಲಿ ಅವರು ವ್ಯಕ್ತಿತ್ವ ಕಳೆದುಕೊಂಡಿಲ್ಲ. ಎಲ್ಲರ ಜೊತೆ ಉತ್ತಮ ಬಾಂಧವ್ಯ ಹೊಂದಿದ್ದಾರೆ. ಎಲ್ಲರಿಗಿಂತ ಚೆನ್ನಾಗಿ ಟಾಸ್ಕ್ ಆಡಿದ್ದಾರೆ. ಈ ಗುಣಗಳು ಅವರಿಗೆ ಪ್ಲಸ್ ಆಗಿದೆ. ಆದರೆ ಮನರಂಜನೆ ನೀಡುವಲ್ಲಿ ಅವರು ಹಿಂದೆ ಬಿದ್ದಿದ್ದಾರೆ. ಇದು ಅವರಿಗೆ ಮೈನಸ್ ಆಗುತ್ತದೆ.
ಮ್ಯೂಟೆಂಟ್ ರಘು: ಬಿಗ್ ಬಾಸ್ ಮನೆಯಲ್ಲಿ ರಘು ಅವರು ಹಿರಿಯ ಸ್ಪರ್ಧಿಯಾಗಿ ಘನತೆ ಕಾಪಾಡಿಕೊಂಡಿದ್ದಾರೆ. ಟಾಸ್ಕ್ ಉತ್ತಮವಾಗಿ ಆಡಿದ್ದಾರೆ. ಪ್ರತಿಸ್ಪರ್ಧಿಗಳು ತಮಗಿಂತ ಚೆನ್ನಾಗಿ ಆಟ ಆಡಿದಾಗ ಮೆಚ್ಚುಗೆ ಸೂಚಿಸಿದ್ದಾರೆ. ಇದೆಲ್ಲವೂ ಅವರಿಗೆ ಪ್ಲಸ್ ಆಗಿದೆ. ಆದರೆ ಅವರು ವೈಲ್ಡ್ ಕಾರ್ಡ್ ಸ್ಪರ್ಧಿ. ಆರಂಭದಲ್ಲಿ ಇದ್ದ ಜೋಶ್ ನಂತರದ ದಿನಗಳಲ್ಲಿ ಉಳಿಸಿಕೊಳ್ಳಲಿಲ್ಲ. ವೀಕ್ಷಕರಿಗೆ ಮನರಂಜನೆ ಕೂಡ ಹೆಚ್ಚು ನೀಡಲಿಲ್ಲ. ಇವು ರಘು ಅವರ ಮೈನಸ್ ಪಾಯಿಂಟ್.
ರಕ್ಷಿತಾ ಶೆಟ್ಟಿ: ಚಿಕ್ಕ ಹುಡುಗಿ ಎಂಬ ಕಾರಣಕ್ಕೆ ರಕ್ಷಿತಾ ಶೆಟ್ಟಿಯನ್ನು ಬೆಂಬಲಿಸುವ ವರ್ಗ ಇದೆ. ತುಳುನಾಡಿನ ಪ್ರೇಕ್ಷಕರು ರಕ್ಷಿತಾ ಶೆಟ್ಟಿಗೆ ಬೆಂಬಲ ನೀಡುತ್ತಾರೆ. ನೇರ ನಡೆ-ನುಡಿಯಿಂದ ಅವರು ಗುರುತಿಸಿಕೊಂಡಿದ್ದಾರೆ. ಇದೆಲ್ಲ ಅವರಿಗೆ ಪ್ಲಸ್ ಆಗಲಿದೆ. ಪ್ರಭುದ್ಧತೆ ಇಲ್ಲದ ಕಾರಣ ಅವರು ಕೆಲವೊಮ್ಮೆ ತಪ್ಪು ನಿರ್ಧಾರಗಳನ್ನು ತೆಗೆದುಕೊಂಡಿದ್ದರು. ಕನ್ನಡ ಸರಿಯಾಗಿ ಮಾತನಾಡಲ್ಲ. ಅದು ಅವರಿಗೆ ಮೈಸನ್ ಆಗುತ್ತದೆ.
ಅಶ್ವಿನಿ ಗೌಡ: ಆರಂಭದಲ್ಲಿ ಅಶ್ವಿನಿ ಗೌಡ ಅವರು ಏರು ಧ್ವನಿಯಲ್ಲಿ ಮಾತನಾಡುತ್ತಿದ್ದರು. ಜಾಹ್ನವಿ ಜೊತೆ ಸೇರಿಕೊಂಡು ರಕ್ಷಿತಾ ಶೆಟ್ಟಿ ವಿರುದ್ಧ ಸಂಚು ರೂಪಿಸಿದ್ದರು. ರಕ್ಷಿತಾ, ರಾಶಿಕಾ ಮುಂತಾದ ಮಹಿಳಾ ಸ್ಪರ್ಧಿಗಳ ಬಗ್ಗೆ ಕೀಳಾಗಿ ಮಾತನಾಡಿದ್ದರು. ಈ ಎಲ್ಲ ಅಂಶಗಳು ಅಶ್ವಿನಿ ಗೌಡ ಅವರಿಗೆ ಮೈನಸ್ ಆಗಿವೆ. ನಂತರದ ದಿನಗಳಲ್ಲಿ ಅಶ್ವಿನಿ ಅವರು ತಮ್ಮ ಗುಣ ಬದಲಿಸಿಕೊಂಡರು. ತಾಳ್ಮೆ ರೂಢಿಸಿಕೊಂಡರು. ಮಾಡಿದ್ದ ತಪ್ಪಿಗೆ ಕ್ಷಮೆ ಕೇಳಿದರು. ವಯಸ್ಸಿನ ಮಿತಿ ಬದಿಗಿಟ್ಟು ಟಾಸ್ಕ್ ಚೆನ್ನಾಗಿ ಆಡಿದರು. ಇವು ಅಶ್ವಿನಿ ಗೌಡ ಅವರಿಗೆ ಪ್ಲಸ್ ಆಗಿವೆ.
ಇದನ್ನೂ ಓದಿ: ಗಿಲ್ಲಿ ನಟನ ಹುಟ್ಟೂರಲ್ಲಿ ಬ್ಯಾನರ್, ಕಟೌಟ್: ಹಳ್ಳಿ ಮಂದಿ ಖುಷಿ ನೋಡಿ..
ಗಿಲ್ಲಿ ನಟ: ಕಾಮಿಡಿ ವಿಚಾರದಲ್ಲಿ ಗಿಲ್ಲಿಯೇ ಕಿಂಗ್. ವೀಕ್ಷಕರಿಗೆ ಅವರು ಭರ್ಜರಿ ಮನರಂಜನೆ ನೀಡಿದರು. ಆರಂಭದಿಂದ ಕೊನೇ ತನಕ ಎನರ್ಜಿ ಕಳೆದುಕೊಂಡಿಲ್ಲ. ಸೋಶಿಯಲ್ ಮೀಡಿಯಾದಲ್ಲಿ ಅವರಿಗೆ ಭರ್ಜರಿ ಫ್ಯಾನ್ ಫಾಲೋಯಿಂಗ್ ಇದೆ. ಪ್ರತಿ ದಿನವೂ ಗಿಲ್ಲಿ ಹೈಲೈಟ್ ಆದರು. ಇವೆಲ್ಲವೂ ಅವರಿಗೆ ಪ್ಲಸ್ ಆಗಿದೆ. ಆದರೆ ಇತರರನ್ನು ಹೀಯಾಳಿಸಿ ಅವರು ಕಾಮಿಡಿ ಮಾಡಿದ್ದು ಸರಿಯಲ್ಲ. ಟಾಸ್ಕ್ ವಿಚಾರದಲ್ಲಿ ಗಿಲ್ಲಿ ಹೆಚ್ಚು ಸ್ಕೋರ್ ಮಾಡಲಿಲ್ಲ. ಮನೆ ಕೆಲಸದಲ್ಲೂ ಅವರು ಸೋಮಾರಿತನ ತೋರಿಸಿದರು. ಹೆಚ್ಚಿನ ಸಂದರ್ಭದಲ್ಲಿ ಕಾವ್ಯಾ ಪರ ವಹಿಸಿದರು. ಇದೆಲ್ಲವೂ ಗಿಲ್ಲಿ ಅವರಿಗೆ ಮೈನಸ್ ಆಗುತ್ತವೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published On - 10:01 pm, Fri, 16 January 26