ಪ್ರಶಾಂತ್ ಸಂಬರ್ಗಿ (Prashanth Sambargi) ಅವರು ಬಿಗ್ ಬಾಸ್ ಮನೆಯಲ್ಲಿ ಎಲ್ಲರ ಗಮನ ಸೆಳೆಯುತ್ತಿದ್ದಾರೆ. ಆದರೆ, ಕೆಲವೊಮ್ಮೆ ಅವರು ನಡೆದುಕೊಳ್ಳುವ ರೀತಿ ಅನೇಕರಿಗೆ ಇಷ್ಟವಾಗುವುದಿಲ್ಲ. ಮಾತನಾಡುವ ರಭಸದಲ್ಲಿ ಬಾಯಿಗೆ ಬಂದಂತೆ ಅವರು ಮಾತನಾಡಿದ ಉದಾಹರಣೆ ಸಾಕಷ್ಟು ಇದೆ. ಕನ್ನಡ ಹೋರಾಟಗಾರರನ್ನು ಕಂಡರೆ ಪ್ರಶಾಂತ್ಗೆ ಆಗುವುದಿಲ್ಲ ಎಂದು ರೂಪೇಶ್ ರಾಜಣ್ಣ (Roopesh Rajanna) ಅವರು ಈ ಮೊದಲು ಆರೋಪ ಮಾಡಿದ್ದರು. ಈಗ ಬಿಗ್ ಬಾಸ್ನಲ್ಲಿ ಪ್ರಶಾಂತ್ ಅವರು ಕನ್ನಡ ಪರ ಹೋರಾಟಗಾರರಿಗೆ ಅವಮಾನ ಮಾಡಿದ್ದರು. ಈ ಸಂಬಂಧ ಪ್ರತಿಭಟನೆಗಳು ಕೂಡ ನಡೆದಿದ್ದವು. ಈಗ ಬಿಗ್ ಬಾಸ್ ಮನೆಯಿಂದ ಪ್ರಶಾಂತ್ ಸಂಬರ್ಗಿ ಅವರು ಕ್ಷಮೆ ಕೇಳಿದ್ದಾರೆ.
ಪ್ರಶಾಂತ್ ಸಂಬರ್ಗಿ ಅವರಿಂದ ಬಿಗ್ ಬಾಸ್ ಮನೆಯಲ್ಲಿ ಸಾಕಷ್ಟು ಜಗಳಗಳು ನಡೆದಿವೆ. ಕನ್ನಡ ಪರ ಹೋರಾಟಗಾರ ರೂಪೇಶ್ ರಾಜಣ್ಣ ಅವರ ಜತೆ ಪ್ರಶಾಂತ್ ಪದೇಪದೇ ಜಗಳಕ್ಕೆ ಇಳಿಯುತ್ತಿದ್ದಾರೆ. ರೂಪೇಶ್ ರಾಜಣ್ಣ ವಿರುದ್ಧ ಕೂಗಾಡುವಾಗ ಅವರು ಕನ್ನಡಪರ ಹೋರಾಟಗಾರರಿಗೆ ಅವಮಾನ ಮಾಡಿದ್ದಾರೆ ಎಂಬ ಆರೋಪ ಎದುರಾಗಿತ್ತು.
ಪ್ರಶಾಂತ್ ಸಂಬರ್ಗಿ ಅವರನ್ನು ಕೂಡಲೇ ಬಿಗ್ ಬಾಸ್ ಮನೆಯಿಂದ ಹೊರಗೆ ಕಳಿಸಬೇಕು ಎಂದು ಕನ್ನಡಪರ ಸಂಘಟನೆಗಳ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದರು. ಬಿಗ್ ಬಾಸ್ ಸಿಬ್ಬಂದಿ ಜೊತೆಗೂ ಕನ್ನಡ ಪರ ಸಂಘಟನೆಗಳ ಕಾರ್ಯಕರ್ತರು ವಾದಕ್ಕೆ ಇಳಿದಿದ್ದರು. ಈಗ ಕನ್ನಡ ಹೋರಾಟಗಾರರ ಬಳಿ ಪ್ರಶಾಂತ್ ಸಂಬರ್ಗಿ ಕ್ಷಮೆ ಕೇಳಿದ್ದಾರೆ.
ಕನ್ನಡ ಹೋರಾಟಗಾರರನ್ನು ಕ್ಷಮೆ ಕೇಳಿದ ಪ್ರಶಾಂತ್#ಬಿಬಿಕೆ9, ದ ಬಿಗ್ಗೆಸ್ಟ್ ಸೀಸನ್ | ಇಂದು ರಾತ್ರಿ 9.30#BBK9 #ಬಿಗ್ಬಾಸ್ಕನ್ನಡ9 #ColorsKannada #ಬಣ್ಣಹೊಸದಾಗಿದೆ #ಬಂಧಬಿಗಿಯಾಗಿದೆ pic.twitter.com/hKXxhkpKgt
— Colors Kannada (@ColorsKannada) November 4, 2022
ಪ್ರಶಾಂತ್ ಸಂಬರ್ಗಿ ಅವರನ್ನು ಬಿಗ್ ಬಾಸ್ ಕನ್ಫೆಷನ್ ರೂಂಗೆ ಕರೆಸಲಾಯಿತು. ಅಲ್ಲಿ ಪ್ರಶಾಂತ್ ಮಾಡಿದ ತಪ್ಪನ್ನು ಹೇಳಲಾಯಿತು. ಈ ಬಗ್ಗೆ ಮಾತನಾಡಿದ ಪ್ರಶಾಂತ್ ಸಂಬರ್ಗಿ, ‘ನಾನು ಆಟದ ರಭಸದಲ್ಲಿ ಹೇಳಿದ್ದೇನೆ. ಕನ್ನಡ ಪ್ರೀತಿ ಮಾಡುವವರು, ಕನ್ನಡ ಹೋರಾಟಗಾರರಿಗೆ ಬೇಸರವಾಗಿದ್ದರೆ ಕ್ಷಮೆ ಕೇಳುತ್ತೇನೆ. ಇದು ಒಬ್ಬರ ವಿರುದ್ಧ ಮಾಡಿದ ಆರೋಪ. ನಾನು ಆ ರೀತಿ ಉದ್ದೇಶ ಇರಲಿಲ್ಲ. ನಾನು ಮಾತನ್ನು ಹಿಂಪಡೆಯುತ್ತೇನೆ’ ಎನ್ನುತ್ತ ಪ್ರಶಾಂತ್ ಸಂಬರ್ಗಿ ಅವರು ಕಣ್ಣೀರು ಹಾಕಿದರು.
ಇದನ್ನೂ ಓದಿ: ಸಂಬಂಧ ಇಲ್ಲದಿರುವ ಜಗಳಕ್ಕೆ ತಲೆ ಹಾಕಿದ ಪ್ರಶಾಂತ್ ಸಂಬರ್ಗಿ; ಮುಂದೇನಾಯ್ತು?
ಪ್ರಶಾಂತ್ ಸಂಬರ್ಗಿ ಅವರು ಕ್ಷಮೆ ಕೇಳಿರುವ ವಿಡಿಯೋವನ್ನು ಸೋಶಿಯಲ್ ಮೀಡಿಯಾದಲ್ಲಿ ಕಲರ್ಸ್ ಕನ್ನಡ ಪೋಸ್ಟ್ ಮಾಡಿದೆ. ಈ ವಿಡಿಯೋಗೆ ವಿವಿಧ ರೀತಿಯಲ್ಲಿ ಕಮೆಂಟ್ಗಳು ಬರುತ್ತಿವೆ. ಅನೇಕರು ಪ್ರಶಾಂತ್ ಸಂಬರ್ಗಿ ಅವರು ಕೇಳಿದ ಕ್ಷಮೆಯನ್ನು ಒಪ್ಪಿದ್ದಾರೆ. ಇನ್ನೂ ಕೆಲವರು ಪ್ರಶಾಂತ್ ಸಂಬರ್ಗಿ ಅವರನ್ನು ಮನೆಯಿಂದ ಹೊರಗೆ ಕಳುಹಿಸಬೇಕು ಎಂಬುದನ್ನು ಮುಂದುವರಿಸಿದ್ದಾರೆ.