Lakshana Serial: ಮಗಳ ಸಂತೋಷಕ್ಕಾಗಿ ಶ್ವೇತಾಳಿಗೆ ಆಸ್ತಿಯಲ್ಲಿ ಪಾಲು ನೀಡಲು ನಿರ್ಧರಿಸಿದ ಚಂದ್ರಶೇಖರ್-ಆರತಿ

TV9kannada Web Team

TV9kannada Web Team | Edited By: ಅಕ್ಷಯ್​ ಕುಮಾರ್​​

Updated on: Nov 04, 2022 | 10:31 AM

ತಮ್ಮ ಆಸ್ತಿಯ ಒಂದಿಷ್ಟು ಭಾಗವನ್ನು ಶ್ವೇತಾಳಿಗೆ ಕೊಡಬೇಕೆಂದು ತೀರ್ಮಾಣ ಮಾಡಿ, ಶ್ವೇತಾಳಿಗೆ ಫೋನ್ ಮಾಡುತ್ತಾಳೆ ಆರತಿ. ಆರತಿಯ ಫೋನ್ ಕರೆ ಬಂದಿದ್ದನ್ನು ಕಂಡು ಈ ಹೆಂಗಸು ಈ ರಾತ್ರಿಯಲ್ಲಿ ನನಗೆ ಯಾಕೆ ಕಾಲ್ ಮಾಡಿದ್ದಾರೆ ಎಂದು ಶ್ವೇತಾ ಯೋಚಿಸುತ್ತಾಳೆ.

Lakshana Serial: ಮಗಳ ಸಂತೋಷಕ್ಕಾಗಿ ಶ್ವೇತಾಳಿಗೆ ಆಸ್ತಿಯಲ್ಲಿ ಪಾಲು ನೀಡಲು ನಿರ್ಧರಿಸಿದ ಚಂದ್ರಶೇಖರ್-ಆರತಿ
Lakshana Serial

ಧಾರಾವಾಹಿ: ಲಕ್ಷಣ

ಪ್ರಸಾರ: ಕಲರ್ಸ್ ಕನ್ನಡ

ತಾಜಾ ಸುದ್ದಿ

ಸಮಯ: ರಾತ್ರಿ 8.30

ನಿರ್ದೇಶನ: ಶಿವರಾಮ್ ಮಾಗಡಿ

ಪಾತ್ರವರ್ಗ: ಜಗನ್.ಸಿ, ವಿಜಯಲಕ್ಷ್ಮೀ, ಸುಕೃತ ನಾಗ್ ಹಾಗೂ ಇತರರು

ಹಿಂದಿನ ಎಪಿಸೋಡ್​ನಲ್ಲಿ ಏನಾಗಿತ್ತು?

ವೈಷ್ಣವಿ ಮಾಡಿರೋದು ಪ್ರಾಂಕ್ ಎಂದು ಗೊತ್ತಾಗಿ ಮನೆಯವರೆಲ್ಲರ ಮನಸ್ಸು ನಿರಾಳವಾಗಿದೆ. ವೈಷ್ಣವಿ ನಕ್ಷತ್ರ ಮನಸ್ಸು ತುಂಬಾ ಮೃದು ಎಂದೆಲ್ಲ ಹೋಗಲಿ ಹೋಗುತ್ತಾಳೆ.

ನಕ್ಷತ್ರಳ ತಂದೆ ತಾಯಿಗೆ ಮನದಲ್ಲಿ ಏನೋ ದುಗುಡ

ನಕ್ಷತ್ರಳ ತಂದೆ ತಾಯಿಗೆ ಮನದಲ್ಲಿ ಏನೋ ದುಗುಡ ಉಂಟಾಗಿದೆ. ಮನೆಹಾಳಿ ಶ್ವೇತಾ ಭೂಪತಿಯ ಮನೆ ಬಂದಿರುವ ಕಾರಣ ಮಗಳ ಸಂಸಾರಕ್ಕೆ ಹಾನಿ ಉಂಟಾಗಬಹುದು ಎಂಬ ಚಿಂತೆಯಲ್ಲಿ ಮುಳುಗಿದ್ದಾರೆ. ರಾತ್ರಿಯೆಲ್ಲ ಕುಳಿತು ಶ್ವೇತಾಳನ್ನು ಹೇಗೆ ನಕ್ಷತ್ರಳ ಜೀವನದಿಂದ ಹೊರ ಕಳುಹಿಸುವುದು ಎಂದು ಯೋಚನೆ ಮಾಡುತ್ತಿದ್ದಾಗ ಆರತಿಗೆ ಒಂದು ಪ್ಲಾನ್ ಹೊಳೆಯುತ್ತದೆ.

ಆ ಮನೆಹಾಳಿ ಯಾವತ್ತಿದ್ರೂ ದುಡ್ಡಿಗಾಗಿ ಆಸೆ ಪಡುವವಳು ಅಲ್ವಾ. ಅವಳಿಗೆ ದುಡ್ಡಿನ ಆಸೆ ತೋರಿಸಿಯೇ ನಕ್ಷತ್ರಳ ಬಾಳಿನಿಂದ ಆಕೆಯನ್ನು ದೂರ ಮಾಡಬೇಕು ಎಂದು ನಿರ್ಧಾರ ಮಾಡುತ್ತಾರೆ. ಆರತಿಯ ಈ ನಿರ್ಧಾರಕ್ಕೆ ಚಂದ್ರಶೇಖರ್ ಕೂಡಾ ಒಪ್ಪಿಗೆ ಸೂಚಿಸುತ್ತಾರೆ.

ತಮ್ಮ ಆಸ್ತಿಯ ಒಂದಿಷ್ಟು ಭಾಗವನ್ನು ಶ್ವೇತಾಳಿಗೆ ಕೊಡಬೇಕೆಂದು ತೀರ್ಮಾಣ ಮಾಡಿ, ಶ್ವೇತಾಳಿಗೆ ಫೋನ್ ಮಾಡುತ್ತಾಳೆ ಆರತಿ. ಆರತಿಯ ಫೋನ್ ಕರೆ ಬಂದಿದ್ದನ್ನು ಕಂಡು ಈ ಹೆಂಗಸು ಈ ರಾತ್ರಿಯಲ್ಲಿ ನನಗೆ ಯಾಕೆ ಕಾಲ್ ಮಾಡಿದ್ದಾರೆ ಎಂದು ಶ್ವೇತಾ ಯೋಚಿಸುತ್ತಾಳೆ. ಫೋನ್ ಕರೆ ಸ್ವೀಕರಿಸಿದವಳೇ ಏರು ಧ್ವನಿಯಲ್ಲಿ ಮಾತನಾಡುತ್ತಾಳೆ ಶ್ವೇತಾ. ಈಕೆಯ ಮಾತಿಗೆ ತಲೆಕೊಡಿಸಿಕೊಳ್ಳದೆ, ನಿನಗೆ ದುಡ್ಡು ತಾನೆ ಬೇಕಾಗಿರುವುದು ನಾಳೆ ಮನೆಗೆ ಬಾ ನಿನಗೆ ಕೈತುಂಬಾ ದುಡ್ಡು ಕೊಡುತ್ತೇವೆ, ಆದರೆ ನಕ್ಷತ್ರಳ ಜೀವನದಿಂದ ದೂರ ಹೋಗಬೇಕು ಎಂದು ತಾಕೀತು ಮಾಡಿ ಫೋನ್ ಕಟ್ ಮಾಡುತ್ತಾರೆ.

ಇದನ್ನು ಓದಿ: Lakshana Serial: ನಕ್ಷತ್ರಳ ನೋವನ್ನು ನೋಡಲಾರದೆ ಇದು ಪ್ರಾಂಕ್ ಎಂದ ವೈಷ್ಣವಿ

ನನಗೆ ಬೇಕಾಗಿರುವುದು ದುಡ್ಡು ತಾನೆ, ನಾಳೆ ಹೋದರಾಯಿತು ಎಂದು ಶ್ವೇತಾ ಖುಷಿ ಪಡುತ್ತಾಳೆ. ಆದರೆ ಇತ್ತ ಕಡೆ ಶ್ವೇತಾಳಿಗೆ ಆಸ್ತಿಯಲ್ಲಿ ಪಾಲು ಕೊಡುತ್ತಾರೆ ಎಂಬುದನ್ನು ಕೇಳಿ ಭಾರ್ಗವಿಗೆ ಎಲ್ಲಿಲ್ಲದ ಸಿಟ್ಟು ಬರುತ್ತದೆ. ಶ್ವೇತಾ ಖಂಡಿತವಾಗಿಯೂ ಬೆಳಗ್ಗೆ ಮನೆಗೆ ಬಂದೇ ಬರುತ್ತಾಳೆ ಎನ್ನುವ ನಂಬಿಕೆಯಿಂದ ರಾತ್ರಿಯೇ ಲಾಯರ್‌ಗೆ ಕರೆ ಮಾಡಿ ನಾಳೆ ಬೆಳಗ್ಗೆ ಮನೆಗೆ ಬರುವಂತೆ ಆರತಿ ಹೇಳುತ್ತಾಳೆ.

ಬೆಳಗಾಗುತ್ತಿದ್ದಂತೆಯೇ ಶ್ವೇತಾ ಚಂದ್ರಶೇಖರ್ ಮನೆಗೆ ಹೋಗಲು ತಯಾರಾಗುತ್ತಾಳೆ. ಈಕೆ ಅಲ್ಲಿಗೆ ಹೋಗುವುದನ್ನು ತಡೆಯಲು ಮಿಲ್ಲಿಯು ಫೋನ್ ಮಾಡಿ ಶ್ವೇತಾಳಿಗೆ ಇಲ್ಲಸಲ್ಲದ ವಿಚಾರವನ್ನು ತಲೆಗೆ ತುಂಬುತ್ತಾಳೆ. ಆದರೆ ಇದಕ್ಕೆಲ್ಲಾ ಡೊಂಟ್ ಕೇರ್ ಎನ್ನದ ಶ್ವೇತಾ, ಅವರೇನು ಎಂಬುದು ನನಗೆ ಗೊತ್ತು, ಬೆನ್ನಿಗೆ ಚೂರಿ ಹಾಕುವ ಬುದ್ಧಿ ಅವರಿಗೆ ಇಲ್ಲ. ನಿನಗೆ ಯಾಕೆ ಹೊಟ್ಟೆ ಉರಿ. ಒಂದು ಸಲ ಆಸ್ತಿ ನನ್ನ ಕೈಗೆ ಬರಲಿ, ನಿನಗೂ ಆ ನಕ್ಷತ್ರಳಿಗೂ ಒಂದು ಗತಿ ಕಾಣಿಸುತ್ತೇನೆ ಎಂದು ಮಿಲ್ಲಿಗೆ ಬೈದು ಫೋನ್ ಕರೆ ಕಟ್ ಮಾಡಿ ನೇರವಾಗಿ ಚಂದ್ರಶೇಖರ್ ಮನೆಗೆ ಹೋಗುತ್ತಾಳೆ.

ಮನೆಗೆ ಕಾಲಿಡುತ್ತಿದ್ದಂತೆ ಶ್ವೇತಾಳಿಗೆ ತನ್ನ ಹಿಂದಿನ ಐಷಾರಾಮಿ ಜೀವನದ ನೆನಪಾಗುತ್ತದೆ. ಆದರೂ ಮನೆಯ ಹೊಸ್ತಿಲೊಳಗೆ ಕಾಲಿಡಲು ಒಂದು ಬಾರಿ ಯೋಚಿಸುತ್ತಾಳೆ. ನಂತರ ಆರತಿಯೇ ಮನೆಯೊಳಗಡೆ ಆಕೆಯನ್ನು ಕರೆದು ಲಾಯರ್ ಬಂದ ಮೇಲೆ ಆಸ್ತಿ ಪತ್ರವನ್ನು ಸಹಿ ಮಾಡಲು ಕೊಡುತ್ತಾರೆ. ಶ್ವೇತಾ ಸಹಿ ಮಾಡುವ ಮೊದಲೇ ಭಾರ್ಗವಿ ಓಡಿ ಬಂದು ಆಸ್ತಿ ಪತ್ರವನ್ನು ಕಸಿದು ಯಾರ ಆಸ್ತಿ ಅಂತಾ ಬೀದಿಲಿ ಹೋಗೋರಿಗೆಲ್ಲ ಕೊಡುತ್ತೀರಿ ಎಂದು ಹೇಳುತ್ತಾ ಆಸ್ತಿ ಪತ್ರವನ್ನೇ ಹರಿದು ಹಾಕುತ್ತಾಳೆ.

ಭಾರ್ಗವಿಯ ಈ ನಡೆಗೆ ಆರತಿ ಮತ್ತು ಚಂದ್ರಶೇಖರ್‌ಗೆ ಒಮ್ಮೆಲೆ ಆಘಾತ ಉಂಟಾಗಿದೆ. ಆಕೆ ಯಾಕೆ ಆಸ್ತಿ ಪತ್ರ ಹರಿದು ಹಾಕಿದ್ದು, ಇದಕ್ಕೆ ಏನು ಸಮಜಾಯಷಿ ಕೊಡುತ್ತಾಳೆ ಎಂದು ಮುಂದಿನ ಸಂಚಿಕೆಯಲ್ಲಿ ನೋಡಬೇಕಾಗಿದೆ.

ಮಧುಶ್ರೀ

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada