ಸೈಕೋ ತರ ಆಡಿದ ವರುಧಿನಿ; ಭುವಿ ತಂಗಿಯ ಕಾಲು-ಕೈ ಕಟ್ಟಿ, ಬಾಯಿಗೆ ಬಟ್ಟೆ ತುರುಕೇ ಬಿಟ್ಟಳು
ವರುಧಿನಿಗೆ ವಿಲ್ ವಿಚಾರ ಗೊತ್ತಾಗಿದೆ. ಹೀಗಾಗಿ, ಭುವಿ ಮನೆಗೆ ನುಗ್ಗಿದ ಅವಳು ಆಸ್ತಿ ಯಾರ ಹೆಸರಲ್ಲಿದೆ ಎಂಬುದನ್ನು ತಿಳಿದುಕೊಳ್ಳುವ ಹಠಕ್ಕೆ ಬಿದ್ದಿದ್ದಾಳೆ.
ಧಾರಾವಾಹಿ: ಕನ್ನಡತಿ
ಪ್ರಸಾರ: ಕಲರ್ಸ್ ಕನ್ನಡ
ಸಮಯ: ರಾತ್ರಿ 7.30
ನಿರ್ದೇಶನ: ಯಶ್ವಂತ್ ಪಾಂಡು
ಪಾತ್ರವರ್ಗ: ಕಿರಣ್ ರಾಜ್, ರಂಜನಿ ರಾಘವನ್, ಚಿತ್ಕಲಾ ಬೀರಾದಾರ್ ಹಾಗೂ ಇತರರು
ಹಿಂದಿನ ಎಪಿಸೋಡ್ನಲ್ಲಿ ಏನಾಗಿತ್ತು?
ರತ್ನಮಾಲಾ ಬರೆದ ವಿಲ್ ವಿಚಾರ ವರುಧಿನಿಗೆ ಗೊತ್ತಾಗಿದೆ. ಸಂಪೂರ್ಣ ಆಸ್ತಿಯನ್ನು ರತ್ನಮಾಲಾಳು ಸೌಪರ್ಣಿಕಾ (ಭುವಿ) ಹೆಸರಿಗೆ ಬರೆದಿದ್ದಾಳೆ ಎನ್ನುವ ವಿಚಾರ ಆಕೆಗೆ ಗೊತ್ತಾಗಿ ಹೋಗಿದೆ. ಭುವಿಯ ಮನೆಗೆ ಬಂದ ಅವಳು ಹುಡುಕಾಟಕ್ಕೆ ಇಳಿದಿದ್ದಾಳೆ. ಶೋಧಕಾರ್ಯ ನಡೆಸದಂತೆ ವರುಧಿನಿಯನ್ನು ತಡೆದಿದ್ದಾಳೆ ಭುವಿ ತಂಗಿ ಸುಚಿತ್ರಾ. ಇತ್ತ ರತ್ನಮಾಲಾ ಚೇತರಿಸಿಕೊಳ್ಳುತ್ತಿದ್ದಾಳೆ ಎಂಬ ಸಿಹಿ ಸುದ್ದಿ ಸಿಕ್ಕಿದೆ.
ವರುಗೆ ಸಿಕ್ಕೇ ಬಿಡ್ತು ವಿಲ್ ಪತ್ರ
ರತ್ನಮಾಲಾ ಬರೆದಿಟ್ಟ ವಿಲ್ ಪತ್ರವನ್ನು ಭುವಿಗೆ ನೀಡಿದ್ದಳು. ಆದರೆ, ಒಳಗೆ ಏನಿದೆ ಎಂಬ ವಿಚಾರವನ್ನು ರಿವೀಲ್ ಮಾಡಿರಲಿಲ್ಲ. ಸಮಯ ಬಂದಾಗ ಇದನ್ನು ತೆಗೆಯಲು ರತ್ನಮಾಲಾ ಸೂಚಿಸಿದ್ದಳು. ಈ ಕಾರಣಕ್ಕೆ ಭುವಿ ಅದನ್ನು ಜೋಪಾನವಾಗಿ ಇಟ್ಟುಕೊಂಡಿದ್ದಳು. ಈಗ ವರುಧಿನಿಗೆ ವಿಲ್ ವಿಚಾರ ಗೊತ್ತಾಗಿದೆ. ಹೀಗಾಗಿ, ಭುವಿ ಮನೆಗೆ ನುಗ್ಗಿದ ಅವಳು ಆಸ್ತಿ ಯಾರ ಹೆಸರಲ್ಲಿದೆ ಎಂಬುದನ್ನು ತಿಳಿದುಕೊಳ್ಳುವ ಹಠಕ್ಕೆ ಬಿದ್ದಿದ್ದಾಳೆ.
ಭುವಿ ಮನೆಗೆ ಬಂದ ವರುಧಿನಿ ಶೋಧ ಕಾರ್ಯಕ್ಕೆ ಮುಂದಾಗಿದ್ದಾಳೆ. ಆದರೆ, ಇದನ್ನು ತಡೆಯೋಕೆ ಸುಚಿ ಪ್ರಯತ್ನಿಸಿದ್ದಾಳೆ. ಇದರಿಂದ ಸಿಟ್ಟಾದ ವರುಧಿನಿ ಸೈಕೋ ರೀತಿ ಆಡಿದ್ದಾಳೆ. ಸುಚಿಯನ್ನು ಕುರ್ಚಿಯ ಮೇಲೆ ಕೂರಿಸಿ ಕಾಲಿಗೆ ಹಾಗೂ ಕೈಗೆ ಬಟ್ಟೆಯಿಂದ ಕಟ್ಟಿದ್ದಾಳೆ. ಬಾಯಿಗೂ ಬಟ್ಟೆ ತುರುಕಿದ್ದಾಳೆ. ವರುಧಿನಿ ಆಡುತ್ತಿರುವ ರೀತಿ ನೋಡಿ ಸುಚಿ ಶಾಕ್ ಆಗಿದ್ದಾಳೆ.
ಸುಚಿಯಿಂದ ಕೀ ತೆಗೆದುಕೊಂಡ ವರುಧಿನಿ ಕಬೋರ್ಡ್ ಒಳಗೆ ಹುಡುಕಿದ್ದಾಳೆ. ಆಗ ಅವಳಿಗೆ ಲಕೋಟೆ ಒಂದು ಸಿಕ್ಕಿದೆ. ಇದರಲ್ಲಿ ನಿಜಕ್ಕೂ ವಿಲ್ ಪತ್ರ ಇದೆಯೇ? ಇದ್ದಿದ್ದೇ ಆದಲ್ಲಿ ಅಸಲಿ ವಿಚಾರವನ್ನು ವರುಧಿನಿ ಎಲ್ಲರಿಗೂ ಹೇಳುತ್ತಾಳಾ ಎಂಬುದು ಸದ್ಯದ ಕುತೂಹಲ. ಮುಂದಿನ ಎಪಿಸೋಡ್ನಲ್ಲಿ ಇದಕ್ಕೆ ಉತ್ತರ ಸಿಗಬೇಕಿದೆ.
ಸುಚಿಗೆ ನೆತ್ತಿಗೇರಿತು ಕೋಪ
ಸುಚಿಗೆ ವರುಧಿನಿ ನಡೆದುಕೊಳ್ಳುತ್ತಿರುವ ರೀತಿ ಸಿಟ್ಟು ತರಿಸಿದೆ. ತನ್ನ ಕೈ ಕಾಲನ್ನು ವರುಧಿನಿ ಕಟ್ಟುವುದಕ್ಕೂ ಮೊದಲು ಸುಚಿ ಹಲವು ಬಾರಿ ಭುವಿಗೆ ಕರೆ ಮಾಡಿದ್ದಳು. ಆದರೆ, ಆಕೆ ಕರೆ ಸ್ವೀಕರಿಸಲಿಲ್ಲ. ಈಗ ವರುಧಿನಿ ಕೈ-ಕಾಲು ಕಟ್ಟಿದ್ದನ್ನು ನೋಡಿ ಆಕೆಗೆ ಸಿಟ್ಟು ಬಂದಿದೆ. ವರುಧಿನಿ ಈ ರೀತಿ ನಡೆದುಕೊಂಡಳು ಎಂಬ ವಿಚಾರವನ್ನು ಆಕೆ ಹರ್ಷನ ಮುಂದೆ ಹೇಳಬಹುದು. ಹಾಗಾದಲ್ಲಿ ವರುಧಿನಿಗೆ ಸಮಸ್ಯೆ ಆಗಲಿದೆ.
ಮನೆ ಸೇರಿದ ರತ್ನಮಾಲಾ
ರತ್ನಮಾಲಾ ಕೋಮಾಗೆ ಹೋಗಿದ್ದಳು. ಈ ಕಾರಣಕ್ಕೆ ಆಕೆಯನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಪದೇಪದೇ ರತ್ನಮಾಲಾ ಆಸ್ಪತ್ರೆಗೆ ದಾಖಲು ಆಗುತ್ತಿರುವ ವಿಚಾರ ವೀಕ್ಷಕರಿಗೆ ಇಷ್ಟವಾಗಿರಲಿಲ್ಲ. ಈ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಅಪಸ್ವರ ತೆಗೆದಿದ್ದರು. ಈಗ ರತ್ನಮಾಲಾ ಮರಳಿ ಮನೆ ಸೇರಿದ್ದಾಳೆ. ಆಕೆ ಇನ್ನಾದರೂ ಚೇತರಿಕೆ ಕಾಣುತ್ತಾರಾ ಅಥವಾ ನಿರ್ದೇಶಕರು ಪದೇಪದೇ ಆಸ್ಪತ್ರೆಯ ವಿಚಾರವನ್ನೇ ಹೈಲೈಟ್ ಮಾಡುತ್ತಾರಾ ಎಂಬುದನ್ನು ಕಾದು ನೋಡಬೇಕಿದೆ.
ಸಾನಿಯಾ ಕೆಲಸದಿಂದ ವಜಾ
ಸಾನಿಯಾಳನ್ನು ಮ್ಯಾನೇಜಿಂಗ್ ಡೈರೆಕ್ಟರ್ ಪಟ್ಟದಿಂದ ತೆಗೆಯಲಾಗಿದೆ. ಈ ವಿಚಾರ ಆಕೆಗೂ ಗೊತ್ತಿದೆ. ಈ ಮಧ್ಯೆ ಈ ಪ್ರಕ್ರಿಯೆಯನ್ನು ಮುಗಿಸಲು ಕಚೇರಿಯಿಂದ ಕರೆ ಮಾಡಿ ಬರಲು ಸೂಚಿಸುತ್ತಿದ್ದಾರೆ. ಇದರಿಂದ ಸಾನಿಯಾ ಸಿಟ್ಟಾಗಿದ್ದಾಳೆ. ಈ ಸಿಟ್ಟಿನಲ್ಲಿ ಇರುವಾಗಲೇ ಮಾವ ಸುದರ್ಶನ್ ಎದುರಾಗಿದ್ದಾನೆ. ಆಸ್ತಿಯಲ್ಲಿ ಪಾಲು ಕೇಳೋಣ ಎಂದು ಹೇಳಿದ್ದಾನೆ. ಇದಕ್ಕೆ ಸಿಟ್ಟಾದ ಸಾನಿಯಾ, ‘ಇದು ರತ್ನಮಾಲಾ ಅವರೇ ಗಳಿಸಿದ ಆಸ್ತಿ. ನಿಮಗೆ ಬಿಡಿಗಾಸೂ ಸಿಗಲ್ಲ. ಕಾಫಿ ತರಿಸಿಕೊಂಡು ಕುಡಿಯಿರಿ, ಇಲ್ಲ ನೀವೇ ಮಾಡಿಕೊಂಡು ಕುಡಿಯಿರಿ. ಅದಿಷ್ಟೇ ನಿಮ್ಮ ಬಳಿ ಆಗೋದು’ ಎಂದು ಟೀಕಿಸಿದ್ದಾಳೆ.
ಶ್ರೀಲಕ್ಷ್ಮಿ ಎಚ್.