ಭುವಿ ಮನೆಯ ಶೋಧಕ್ಕೆ ಇಳಿದ ವರುಧಿನಿ; ಸಿಗಬಹುದೇ ರತ್ನಮಾಲಾ ವಿಲ್ ಪತ್ರ?
ಆಸ್ಪತ್ರೆಯಲ್ಲಿ ವರುಧಿನಿಗೆ ರತ್ನಮಾಲಾ ಹೇಳಿದ ಮಾತುಗಳೇ ತಲೆಯಲ್ಲಿ ಕೊರೆಯುತ್ತಿದೆ. ‘ಹರ್ಷ ನಾನು ನಿನಗೆ ಮೋಸ ಮಾಡಿಲ್ಲ. ನಿನ್ನ ಒಳ್ಳೆಯದಕ್ಕೆ ಮಾಡಿದ್ದು. ವಿಲ್..’ ಎಂದು ರತ್ನಮಾಲಾ ಮಾತು ನಿಲ್ಲಿಸಿದ್ದಾಳೆ. ಆಗ ವರುಧಿನಿಗೆ ಅಸಲಿ ವಿಚಾರ ಗೊತ್ತಾಗಿದೆ.
ಧಾರಾವಾಹಿ: ಕನ್ನಡತಿ
ಪ್ರಸಾರ: ಕಲರ್ಸ್ ಕನ್ನಡ
ಸಮಯ: ರಾತ್ರಿ 7.30
ನಿರ್ದೇಶನ: ಯಶ್ವಂತ್ ಪಾಂಡು
ಪಾತ್ರವರ್ಗ: ಕಿರಣ್ ರಾಜ್, ರಂಜನಿ ರಾಘವನ್, ಚಿತ್ಕಲಾ ಬೀರಾದಾರ್ ಹಾಗೂ ಇತರರು
ಹಿಂದಿನ ಎಪಿಸೋಡ್ನಲ್ಲಿ ಏನಾಗಿತ್ತು?
ರತ್ನಮಾಲಾ ಆಸ್ಪತ್ರೆಗೆ ದಾಖಲಾಗಿದ್ದಾಳೆ. ಆಕೆ ಕೋಮಾ ಸ್ಥಿತಿಯಲ್ಲಿದ್ದಳು. ರತ್ನಮಾಲಾ ಇರುವ ಕೊಠಡಿಗೆ ತೆರಳಿದ ವರುಧಿನಿ ಕೃತಕ ಉಸಿರಾಟ ವ್ಯವಸ್ಥೆಯನ್ನು ನಿಲ್ಲಿಸಿದ್ದಳು. ಅಚ್ಚರಿ ಎಂಬಂತೆ ರತ್ನಮಾಲಾ ಕೋಮಾದಿಂದ ಹೊರ ಬಂದಳು. ಆಗ ವಿಲ್ ವಿಚಾರ ರಿವೀಲ್ ಮಾಡಿದ್ದಾಳೆ ರತ್ನಮಾಲಾ. ಇದನ್ನು ಕೇಳಿ ವರುಧಿನಿಗೆ ಶಾಕ್ ಆಗಿದೆ. ಎಲ್ಲಾ ಆಸ್ತಿಯನ್ನು ರತ್ನಮಾಲಾಳು ಭುವಿಗೆ ಹೆಸರಿಗೆ ಬರೆದಿಟ್ಟಿದ್ದಾಳೆ ಎಂಬ ವಿಚಾರ ಖಚಿತವಾಗಿದೆ.
ಮನೆ ಶೋಧಕ್ಕೆ ಹೊರಟ ವರು:
ಆಸ್ಪತ್ರೆಯಲ್ಲಿ ವರುಧಿನಿಗೆ ರತ್ನಮಾಲಾ ಹೇಳಿದ ಮಾತುಗಳೇ ತಲೆಯಲ್ಲಿ ಕೊರೆಯುತ್ತಿದೆ. ‘ಹರ್ಷ ನಾನು ನಿನಗೆ ಮೋಸ ಮಾಡಿಲ್ಲ. ನಿನ್ನ ಒಳ್ಳೆಯದಕ್ಕೆ ಮಾಡಿದ್ದು. ವಿಲ್..’ ಎಂದು ರತ್ನಮಾಲಾ ಮಾತು ನಿಲ್ಲಿಸಿದ್ದಾಳೆ. ಆಗ ವರುಧಿನಿಗೆ ಅಸಲಿ ವಿಚಾರ ಗೊತ್ತಾಗಿದೆ. ಜತೆಗೆ ಹಳೆಯ ಘಟನೆ ನೆನಪಾಗಿದೆ. ಭುವಿಗೆ ರತ್ನಮಾಲಾ ಒಂದು ಡಾಕ್ಯುಮೆಂಟ್ ನೀಡಿದ್ದಳು. ಈ ಡಾಕ್ಯುಮೆಂಟ್ನ ಹಿಡಿದುಕೊಂಡು ಬಂದಾಗ ಅದನ್ನು ತೆಗೆದುನೋಡಲು ವರುಧಿನಿ ಮುಂದಾಗಿದ್ದಳು. ಆದರೆ, ಭುವಿ ಇದಕ್ಕೆ ಅವಕಾಶ ನೀಡಿರಲಿಲ್ಲ. ಅದು ವಿಲ್ ಪತ್ರ ಆಗಿತ್ತು ಅನ್ನೋದು ವರುಗೆ ಈಗ ಖಚಿತವಾಗಿದೆ.
ಭುವಿಯ ತಂಗಿ ಸುಚಿತ್ರಾ ಈ ಮೊದಲು ಉಳಿದುಕೊಂಡಿದ್ದ ಮನೆಯಲ್ಲೇ ಇದ್ದಾಳೆ. ವರುಧಿನಿ ಅಲ್ಲಿಗೆ ಸುಚಿಯನ್ನು ಕರೆದುಕೊಂಡು ಹೊರಟಿದ್ದಾಳೆ. ಅಲ್ಲಿ ಹೋದ ತಕ್ಷಣ ಮನೆ ಜಾಲಾಡಲು ಮುಂದಾಗಿದ್ದಾಳೆ. ‘ನಿನ್ನ ಅಕ್ಕ ಯಾವುದೋ ಡಾಕ್ಯುಮೆಂಟ್ ಇಟ್ಟಿದ್ದಾಳೆ. ಅದು ಎಲ್ಲಿದೆ ಎಂಬುದನ್ನು ಹೇಳು. ರತ್ನಮಾಲಾ ಅವರು ಆ ಡಾಕ್ಯುಮೆಂಟ್ ಬೇಕು ಎಂದು ಕೇಳುತ್ತಿದ್ದಾಳೆ. ದಯವಿಟ್ಟು ಹೇಳು’ ಎಂದು ವರು ಕೋರಿದ್ದಾಳೆ. ಇದರಿಂದ ಸುಚಿಗೆ ಅನುಮಾನ ಶುರುವಾಗಿದೆ. ಆ ಡಾಕ್ಯುಮೆಂಟ್ನಲ್ಲಿ ಏನೋ ಇತ್ತು ಎಂಬುದು ಪಕ್ಕಾ ಆಗಿದೆ.
‘ಆ ಡಾಕ್ಯುಮೆಂಟ್ ಇಲ್ಲ. ಅಕ್ಕ ಅದನ್ನು ಜೋಪಾನವಾಗಿ ಇಟ್ಟಿದ್ದಳು. ಈಗ ಅದು ಇಲ್ಲಿ ಇಲ್ಲ’ ಎಂದು ಸುಚಿ ಹೇಳಿದರೂ ಕೇಳದೇ ವರು ಮನೆಯ ಕೋಣೆಯನ್ನು ಹುಡುಕಾಡಲು ಹೊರಟಿದ್ದಾಳೆ. ವರು ಎಷ್ಟೇ ಹುಡುಕಿದರೂ ಆ ದಾಖಲೆ ಸಿಗುವುದಿಲ್ಲ. ಅದಕ್ಕೆ ಕಾರಣವೂ ಇದೆ.
ವಿಲ್ ಪತ್ರದ ವಿಚಾರದಲ್ಲಿ ರತ್ನಮಾಲಾಗೆ ಆತಂಕ ಇತ್ತು. ಹೀಗಾಗಿ, ವಿಲ್ ಪತ್ರ ಭುವಿಯ ಮನೆಯಲ್ಲಿ ಇದ್ದರೆ ಸೇಫ್ ಅಲ್ಲ ಎಂದು ಆಕೆಗೆ ಅನಿಸಿದೆ. ಈ ಕಾರಣಕ್ಕೆ ಭುವಿಗೆ ನೀಡಿದ್ದ ಡಾಕ್ಯುಮೆಂಟ್ ಅನ್ನು ರತ್ನಮಾಲಾ ಮರಳಿ ಪಡೆದುಕೊಂಡಿದ್ದಳು. ಹೀಗಾಗಿ, ವರುಧಿನಿ ಎಷ್ಟೇ ಹುಡುಕಿದರೂ ಆ ದಾಖಲೆ ಸಿಗೋದು ಮಾತ್ರ ಅನುಮಾನವೇ.
ಚೇತರಿಸಿಕೊಂಡ ರತ್ನಮಾಲಾ
ರತ್ನಮಾಲಾ ಚೇತರಿಸಿಕೊಳ್ಳುತ್ತಿದ್ದಾಳೆ. ಆಕೆಗೆ ಪ್ರಜ್ಞೆ ಬಂದಿರುವ ವಿಚಾರ ಮನೆ ಮಂದಿಗೆ ಖುಷಿ ನೀಡಿದೆ. ಆಕೆಯನ್ನು ಶೀಘ್ರದಲ್ಲೇ ಮನೆಗೆ ಕರೆದುಕೊಂಡು ಹೋಗಲು ಹರ್ಷ ಹಾಗೂ ಭುವಿ ಪ್ಲ್ಯಾನ್ ಮಾಡಿದ್ದಾರೆ. ಆಕೆ ಮನೆಗೆ ಬರುತ್ತಿರುವ ವಿಚಾರ ಕೇಳಿ ಆದಿಯ ತಂದೆ ಸುದರ್ಶನ್ ಹೈ ಅಲರ್ಟ್ ಆಗಿದ್ದಾನೆ. ಜತೆಗೆ ಮನೆಗೆ ಬಂದ ಕೂಡಲೇ ಆಸ್ತಿ ವಿಚಾರವನ್ನು ಪ್ರಸ್ತಾಪಿಸಲೇ ಬೇಕು ಎಂದುಕೊಂಡಿದ್ದಾನೆ.
ರತ್ನಮಾಲಾ ನಿದ್ರೆ ಮಾಡಿದ್ದಾಗ ಕೆಟ್ಟ ಕನಸೊಂದು ಬಿದ್ದಿತ್ತು. ಭುವಿಗೆ ಆಸ್ತಿ ಬರೆದಿಟ್ಟ ವಿಚಾರ ರಿವೀಲ್ ಆದಂತೆ, ಎಲ್ಲರೂ ಭುವಿ ವಿರುದ್ಧ ತಿರುಗಿ ಬಿದ್ದಂತೆ ಕಂಡಿತ್ತು. ಈ ಕಾರಣಕ್ಕೆ ರತ್ನಮಾಲಾಗೆ ಈ ಬಗ್ಗೆ ಆತಂಕ ಇದೆ. ಆದಷ್ಟು ಬೇಗ ಅಸಲಿ ವಿಚಾರವನ್ನು ಹರ್ಷನಿಗೆ ಹೇಳಬೇಕು ಎಂದು ಆಕೆ ಅಂದುಕೊಳ್ಳುತ್ತಿದ್ದಾಳೆ. ಆದರೆ, ಅದು ಸಾಧ್ಯವಾಗುತ್ತಿಲ್ಲ.
ಶ್ರೀಲಕ್ಷ್ಮಿ ಎಚ್.