ಹೋಗಿ ಹೋಗಿ ಹುಡ್ಗೀರ್​ಗೆ ಮಾತು ಕೊಟ್ಯಾ? ಅಣ್ಣನ ಮಾತು ಕೇಳಿ ನಕ್ಷತ್ರಾಳಿಗೆ ಮಾತುಕೊಟ್ಟ ಭೂಪತಿಗೆ ಟೆನ್ಶನ್

TV9kannada Web Team

TV9kannada Web Team | Edited By: Rakesh Nayak Manchi

Updated on: Nov 05, 2022 | 11:15 AM

ಹುಡುಗಿಯರಿಗೆ ಮಾತು ಕೊಟ್ಟು ಪಜೀತಿ ತರುತ್ತದೆ ಎಂಬ ಅಣ್ಣನ ಮಾತು ಕೇಳಿದ ಭೂಪತಿಗೆ ಟೆನ್ಷನ್ ಆರಂಭವಾಗುತ್ತದೆ. ಮುಂದೆ ಅಣ್ಣ ನೀಡಿದ ಪ್ಲಾನ್​ನಂತೆ ನಡೆದುಕೊಂಡಾಗ ನಕ್ಷತ್ರಾಳಿಗೆ ಅನುಮಾನ ಮೂಡಿ ಮಾತು ಕೊಟ್ಟಿರುವುದನ್ನು ನೆನಪಿಸುತ್ತಾಳೆ. ಇದು ಭೂಪತಿಯಲ್ಲಿನ ಟೆನ್ಷನ್ ಇನ್ನಷ್ಟು ಹೆಚ್ಚಿಸುವಂತೆ ಮಾಡಿದೆ.

ಹೋಗಿ ಹೋಗಿ ಹುಡ್ಗೀರ್​ಗೆ ಮಾತು ಕೊಟ್ಯಾ? ಅಣ್ಣನ ಮಾತು ಕೇಳಿ ನಕ್ಷತ್ರಾಳಿಗೆ ಮಾತುಕೊಟ್ಟ ಭೂಪತಿಗೆ ಟೆನ್ಶನ್
ನಕ್ಷತ್ರಳಿಗೆ ಮಾತು ಕೊಟ್ಟು ಪಜೀತಿಗೆ ಸಿಕ್ಕಿ ಹಾಕಿಕೊಂಡ ಭೂಪತಿ

ಧಾರಾವಾಹಿ: ಲಕ್ಷಣ

ಪ್ರಸಾರ: ಕಲರ್ಸ್ ಕನ್ನಡ

ಸಮಯ: ರಾತ್ರಿ 8.30

ನಿರ್ದೇಶನ: ಶಿವರಾಮ್ ಮಾಗಡಿ

ಪಾತ್ರವರ್ಗ: ಜಗನ್.ಸಿ, ವಿಜಯಲಕ್ಷ್ಮಿ, ಸುಕೃತ ನಾಗ್ ಹಾಗೂ ಇತರರು

ಹಿಂದಿನ ಸಂಚಿಕೆಯಲ್ಲಿ ಏನಾಗಿತ್ತು?

ಶ್ವೇತಾಳನ್ನು ನಕ್ಷತ್ರಳ ಬಾಳಿನಿಂದ ದೂರ ಮಾಡಲು ಚಂದ್ರಶೇಖರ್ ದಂಪತಿ ಆಸ್ತಿ ಪತ್ರವನ್ನು ಶ್ವೇತಾಳಿಗೆ ಕೊಡುತ್ತಾರೆ. ಆ ಆಸ್ತಿ ಪತ್ರವನ್ನು ಭಾರ್ಗವಿ ಹರಿದು ಚೂರು ಮಾಡುತ್ತಾಳೆ.

ಈ ಸಂಚಿಕೆಯಲ್ಲಿ ನಕ್ಷತ್ರಳ ಆಸ್ತಿಯನ್ನು ಯಾರೋ ಬೀದಿಗೆ ಹೋಗುವವಳಿಗೆ ಏಕೆ ನೀಡಬೇಕು. ನಿನ್ನ ಪ್ರಾಣಕ್ಕೆ ಕುತ್ತು ತಂದವಳಿಗೆ ಆಸ್ತಿಯನ್ನು ನೀಡುತ್ತಿಯಾ? ಅವಳು ಆಸ್ತಿ ತೆಗೆದುಕೊಂಡು ನಕ್ಷತ್ರಳಿಗೆ ತೊಂದರೆ ಕೊಡೋದಿಲ್ಲ ಅಂತ ಹೇಗೆ ನಂಬೋದು ಹೇಳು ಅಣ್ಣಾ ಎಂದು ಭಾರ್ಗವಿ ಚಂದ್ರಶೇಖರ್‌ನನ್ನು ಪ್ರಶ್ನಿಸುತ್ತಾಳೆ. ಆಗ ಅಲ್ಲೇ ಇದ್ದ ಮಿಲ್ಲಿ ಶ್ವೇತಾಳ ಜೊತೆ ಮಾತನಾಡಿದ ಕಾಲ್ ರೆಕಾರ್ಡ್​ ಅನ್ನು ಎಲ್ಲರಿಗೂ ಕೇಳಿಸುತ್ತಾಳೆ. ಅದರಲ್ಲಿ ಆಸ್ತಿ ಬಂದ ಮೇಲೆ ನಕ್ಷತ್ರಳಿಗೆ ಒಂದು ಗತಿ ಕಾಣಿಸುತ್ತೇನೆ ಎಂದು ಹೇಳಿರುತ್ತಾಳೆ. ಈ ಮಾತನ್ನು ಕೇಲಿದ ಆರತಿ ಕೋಪಗೊಂಡು ಶ್ವೇತಾಳಿಗೆ ಬೈದು ಹೊರಗೆ ಕಳುಹಿಸುತ್ತಾಳೆ.

ಇತ್ತ ಕಡೆ ಭೂಪತಿಗೆ ನಕ್ಷತ್ರ ಹೇಳುವ ಕತೆಯಿಂದ ತಪ್ಪಿಸಿಕೊಳ್ಳುವ ನೆಪದಿಂದ ಕತೆಯನ್ನು ಮಾತ್ರ ಹೇಳಬೆಡ, ನೀನು ಏನು ಹೇಳಿದರೂ ಕೇಳುತ್ತೇನೆ ಎಂದು ನಕ್ಷತ್ರಳಿಗೆ ಮಾತನ್ನು ಕೊಟ್ಟಿರುತ್ತಾನೆ. ಈಗ ಅದೇ ಮಾತು ಅವನನ್ನು ಪಜೀತಿಗೆ ಸಿಲುಕಿಸಿದೆ. ತಾನು ಮಾಡಿದ ಯಡವಟ್ಟಿನ ಬಗ್ಗೆ ಭೂಪತಿ ಆತನ ಅಣ್ಣ ಪೃಥ್ವಿಯ ಬಳಿ ಹೇಳಿಕೊಳ್ಳುತ್ತಾನೆ. ನೀನು ಹೋಗಿ ಹೋಗಿ ಹುಡುಗಿಯರಿಗೆ ಮಾತು ಕೊಟ್ಟಿದ್ದೀಯಾ, ಅವರು ಮಾಡಲು ಹೇಳುವ ಕೆಲಸ ನಮಗೆ ಪಜೀತಿ ತರುತ್ತದೆ. ಒಂದು ಸಲ ಶೆರ್ಲಿಯು ಇದೇ ರೀತಿ ಮಾಡಿದ್ದಳು. ಅವಳಿಗೆ ಕೊಟ್ಟ ಮಾತಿನ ಪ್ರಕಾರ ಇಡೀ ರೆಸ್ಟೋರೆಂಟ್‌ನಲ್ಲಿ ಇದ್ದ ಜನರೆಲ್ಲರಲ್ಲೂ ನಾನು ಶೆರ್ಲಿನಾ ಪ್ರೀತಿಸುತ್ತೇನೆ ಎಂದು ಹೇಳಿಕೊಂಡು ಬಂದಿದ್ದೆ. ಆ ಪಜೀತಿಯನ್ನೂ ಕೇಳಲೇ ಬೇಡ ಎಂದು ನಗುತ್ತಾ ಪೃಥ್ವಿ ಭೂಪತಿಗೆ ಹೇಳುತ್ತಾನೆ.

ಅಣ್ಣ ಹೇಳಿದ ಮಾತಿಗೆ ತಾನೆ ಕಲ್ಪನೆ ಮಾಡುತ್ತಾ ಬೀದಿ ಜನರ ಬಳಿ ನಾನು ನನ್ನ ಹೆಂಡತಿ ನಕ್ಷತ್ರಳನ್ನು ತುಂಬಾ ಪ್ರೀತಿಸುತ್ತೇನೆ ಎಂದು ಹೇಳಿಕೊಂಡು ಬರುವ ಹಗಲು ಕನಸು ಬೀಳುತ್ತದೆ. ಈ ನಕ್ಷತ್ರಳಿಗೆ ಕೊಟ್ಟ ಮಾತಿನಿಂದ ಹೇಗಪ್ಪಾ ತಪ್ಪಿಸಿಕೊಳ್ಳುವುದು ಎಂದು ಭೂಪತಿಗೆ ಚಿಂತೆಯಾಗಿತ್ತು. ಇವನ ಚಿಂತೆ ಹೋಗಲಾಡಿಸಲು ನಾನು ತುಂಬಾ ಬ್ಯುಸಿ ಇದ್ದೇನೆ ಎನ್ನುವ ನಾಟಕವಾಡು ಎಂದು ಪೃಥ್ವಿ ಒಂದು ಪ್ಲಾನ್ ಹೇಳಿಕೊಡುತ್ತಾನೆ.

ಅಣ್ಣ ಹೇಳಿ ಕೊಟ್ಟ ಪ್ಲಾನ್ ಪ್ರಕಾರ ನಕ್ಷತ್ರ ಕಣ್ಣ ಮುಂದೆ ಬರುವಾಗ ತುಂಬಾ ಬ್ಯುಸಿ ಇದ್ದ ಹಾಗೆ ನಾಟಕ ಮಾಡುತ್ತಿರುತ್ತಾನೆ ಭೂಪತಿ. ಇವನ ವಿಚಿತ್ರ ನಡವಳಿಕೆ ನಕ್ಷತ್ರಳಿಗೆ ಯಾಕೋ ಅನುಮಾನ ಮೂಡಿಸುತ್ತದೆ. ಶೆರ್ಲಿಯ ಮುಖಾಂತರ ಭೂಪತಿಯ ನಡವಳಿಕೆ ಏಕೆ ಬದಲಾಗಿದೆ ಎಂದು ನಕ್ಷತ್ರಳಿಗೆ ಗೊತ್ತಾಗುತ್ತದೆ. ನನಗೆ ಮಾತು ಕೊಟ್ಟಿದ್ದಿಯಾ ಅಲ್ವ ಏನು ಹೇಳಿದರೂ ಮಾಡುತ್ತೇನೆ ಅಂತ ಅದನ್ನು ಬಿಡುವುದಿಲ್ಲ ಎಂದು ನಕ್ಷತ್ರ ಭೂಪತಿಗೆ ಹೇಳುತ್ತಾಳೆ. ಈಕೆಯ ಈ ಮಾತು ಕೇಳಿ ಭೂಪತಿಗೆ ಇದ್ದ ಟೆನ್ಶನ್ ಕೂಡ ಹೆಚ್ಚಾಗುತ್ತದೆ. ಮುಂದೆ ನಕ್ಷತ್ರ ಯಾವ ಚಾಲೆಂಜ್ ಭೂಪತಿಗೆ ಕೊಡುತ್ತಾಳೆ ಎಂದು ಮುಂದಿನ ಸಂಚಿಕೆಯಲ್ಲಿ ನೋಡಬೇಕಾಗಿದೆ.

ಲೇಖನ: ಮಧುಶ್ರೀ

ಮತ್ತಷ್ಟು ಮನರಂಜನೆ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada