‘ಡ್ರೋನ್ ನಿರ್ಮಾಣ ಎಲ್ಲಾ ಸುಳ್ಳು’; ಮತ್ತೆ ಹಿಂದಿನಿಂದ ಮಾತನಾಡಲು ಶುರು ಮಾಡಿದ ವಿನಯ್

|

Updated on: Dec 30, 2023 | 12:53 PM

ಮೈಕಲ್, ವಿನಯ್, ನಮ್ರತಾ ಹಾಗೂ ಕಾರ್ತಿಕ್ ಒಂದು ಕಡೆ ನಿಂತು ಮಾತನಾಡುತ್ತಿದ್ದರು. ಈ ವೇಳೆ ಮೈಕಲ್ ಅವರು ಡ್ರೋನ್ ವಿಚಾರ ತೆಗೆದರು. ವಿನಯ್ ತಮ್ಮ ಅಭಿಪ್ರಾಯ ತಿಳಿಸಿದರು.

‘ಡ್ರೋನ್ ನಿರ್ಮಾಣ ಎಲ್ಲಾ ಸುಳ್ಳು’; ಮತ್ತೆ ಹಿಂದಿನಿಂದ ಮಾತನಾಡಲು ಶುರು ಮಾಡಿದ ವಿನಯ್
ವಿನಯ್-ಪ್ರತಾಪ್
Follow us on

ಡ್ರೋನ್ ಪ್ರತಾಪ್ ಅವರು ಹೊರ ಜಗತ್ತಿನಲ್ಲಿ ಸಾಕಷ್ಟು ಸುಳ್ಳುಗಳನ್ನು ಹೇಳಿದ್ದರು. ಬಿಗ್ ಬಾಸ್​ಗೆ ಹೋದ ಬಳಿಕ ಅವರು ಈ ವಿಚಾರಗಳನ್ನು ಒಪ್ಪಿಕೊಂಡರು. ಎಲ್ಲರ ಬಳಿ ಕ್ಷಮೆ ಕೂಡ ಕೇಳಿದರು. ಬಿಗ್ ಬಾಸ್ (Bigg Boss) ಆರಂಭ ಆದಾಗಿನಿಂದಲೂ ಈ ಬಗ್ಗೆ ಚರ್ಚೆ ನಡೆಯುತ್ತಲೇ ಇದೆ. ಈ ವಿಚಾರ ಇತ್ತೀಚೆಗೆ ತಣ್ಣಗಾಗಿತ್ತು. ಈಗ ಮೈಕಲ್ ಅಜಯ್ ಹಾಗೂ ವಿನಯ್ ಅವರು ಮತ್ತೆ ಈ ವಿಚಾರ ತೆಗೆದಿದ್ದಾರೆ. ಪ್ರತಾಪ್ ಸುಳ್ಳು ಹೇಳುತ್ತಿದ್ದಾರೆ ಎಂಬುದನ್ನು ಅವರು ಪುನರುಚ್ಛರಿಸಿದ್ದಾರೆ.

ಈ ವಾರ ಫ್ಯಾಮಿಲಿ ವೀಕ್ ಆಗಿತ್ತು. ಎಲ್ಲಾ ಸ್ಪರ್ಧಿಗಳಿಂದ ಕುಟುಂಬದವರು ಬಂದಿದ್ದರು. ಪ್ರತಾಪ್ ತಂದೆ ತಾಯಿ ಕೂಡ ಆಗಮಿಸಿದ್ದರು. ಅದಕ್ಕೂ ಮೊದಲು ಬಿಗ್ ಬಾಸ್ ಆವರಣದಲ್ಲಿ ಡ್ರೋನ್ ಹಾರಾಟ ನಡೆಸಿದೆ. ‘ನನ್ನ ಡ್ರೋನ್’ ಎಂದು ಪ್ರತಾಪ್ ಖುಷಿಯಿಂದ ಕುಣಿದಿದ್ದಾರೆ. ‘ಈ ಡ್ರೋನ್​​ನ ಹೇಗೆ ಆಪರೇಟ್ ಮಾಡೋದು’ ಎಂಬಿತ್ಯಾದಿ ಪ್ರಶ್ನೆಗಳನ್ನು ಸಂತೋಷ್ ಅವರು ಪ್ರತಾಪ್​ಗೆ ಕೇಳಿದ್ದರು. ಇದಕ್ಕೆ ಪ್ರತಾಪ್ ಕಡೆಯಿಂದ ಉತ್ತರ ಬಂದಿಲ್ಲ. ರಾತ್ರಿ ಈ ವಿಚಾರ ಚರ್ಚೆ ಆಗಿದೆ.

ಮೈಕಲ್, ವಿನಯ್, ನಮ್ರತಾ ಹಾಗೂ ಕಾರ್ತಿಕ್ ಒಂದು ಕಡೆ ನಿಂತು ಮಾತನಾಡುತ್ತಿದ್ದರು. ಈ ವೇಳೆ ಮೈಕಲ್ ಅವರು ಡ್ರೋನ್ ವಿಚಾರ ತೆಗೆದರು. ‘ಡ್ರೋನ್ ಹೇಗೆ ಪ್ಲೇ ಮಾಡೋದು ಎಂದು ಪ್ರತಾಪ್ ಬಳಿ ತುಕಾಲಿ ಕೇಳ್ತಾ ಇದಾನೆ. ಪ್ರತಾಪ್​ಗೆ ಡ್ರೋನ್​ನ ಹೇಗೆ ಆಪರೇಟ್ ಮಾಡೋದು ಅನ್ನೋದು ಗೊತ್ತಿಲ್ಲ’ ಎಂದರು ಮೈಕಲ್. ವಿನಯ್ ಇದನ್ನು ಒಪ್ಪಲಿಲ್ಲ. ‘ಆತ ಅಷ್ಟು ಮುಗ್ಧನಾ? ಬಹುಶಃ ಡ್ರೋನ್ ಆಪರೇಟ್ ಮಾಡೋಕೆ ಬರಹುದು. ಡ್ರೋನ್ ನಿರ್ಮಾಣ ಎಲ್ಲಾ ಸುಳ್ಳು’ ಎಂದರು.

ಇದನ್ನೂ ಓದಿ: ‘ನೀನು ಏನು ಅನ್ನೋದು ಇಲ್ಲಿ ಯಾರಿಗೂ ಗೊತ್ತಿಲ್ಲ, ನಿನ್ನದು ಮಗು ಮನಸ್ಸು’; ವಿನಯ್​ಗೆ​ ಪತ್ನಿಯ ಧೈರ್ಯ

ಇತ್ತೀಚೆಗೆ ವಿನಯ್ ಅವರು ಎಲ್ಲರ ಜೊತೆಯೂ ಒಳ್ಳೆಯವರ ರೀತಿ ಇರೋಕೆ ಪ್ರಯತ್ನಿಸಿದ್ದಾರೆ. ಪ್ರತಾಪ್ ಜೊತೆ ಮೊದಲಿನಿಂದಲೂ ಜಗಳ ಮಾಡುತ್ತಿದ್ದರು. ಆದರೆ, ಈಗ ಅವರು ಸೈಲೆಂಟ್ ಆಗಿದ್ದರು. ಈಗ ಮತ್ತೆ ಹಿಂದಿನಿಂದ ಮಾತನಾಡೋಕೆ ಆರಂಭಿಸಿದ್ದಾರೆ. ಕಲರ್ಸ್ ಕನ್ನಡ ಹಾಗೂ ಜಿಯೋ ಸಿನಿಮಾದಲ್ಲಿ ಬಿಗ್ ಬಾಸ್ ಪ್ರಸಾರ ಕಾಣುತ್ತಿದೆ. ಜಿಯೋ ಸಿನಿಮಾದಲ್ಲಿ 24 ಗಂಟೆ ಲೈವ್ ವೀಕ್ಷಿಸಬಹುದು.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ