ಬಾಯ್​​ಫ್ರೆಂಡ್ ಬಿಗ್​​ಬಾಸ್ ಗೆಲ್ಲಲೆಂದು ಮೊಣಕಾಲಲ್ಲಿ ತಿರುಪತಿ ಮೆಟ್ಟಿಲು ಹತ್ತಿದ ನಟಿ

ಕೆಲ ಭಾಷೆಗಳಲ್ಲಿ ಸೀಸನ್ ಕ್ಲೈಮ್ಯಾಕ್ಸ್​​ಗೆ ಬಂದಿದೆ. ಸ್ಪರ್ಧಿಗಳು ಮನೆಯ ಒಳಗೆ ಗೆಲ್ಲಲು ನಾನಾ ಪ್ರಯತ್ನ ಮಾಡುತ್ತಿದ್ದಾರೆ. ಹೊರಗೆ ಸ್ಪರ್ಧಿಗಳ ಆಪ್ತರು ಪಿಆರ್ ಏಜೆನ್ಸಿಗಳ ಮೂಲಕ ಪ್ರಚಾರದಲ್ಲಿ ತೊಡಗಿದ್ದಾರೆ. ಅಭಿಮಾನಿಗಳು ಸಹ ತಮ್ಮ ನೆಚ್ಚಿನ ಸ್ಪರ್ಧಿಗಳಿಗೆ ಮತ ಹಾಕುತ್ತಾ, ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್​​ಗಳನ್ನು ಹಂಚಿಕೊಳ್ಳುತ್ತಿದ್ದಾರೆ. ಇದರ ನಡುವೆ ಬಿಗ್​​ಬಾಸ್ ಸ್ಪರ್ಧಿಯ ಪ್ರೇಯಸಿ ಒಬ್ಬರು, ತನ್ನ ಬಾಯ್​​ಫ್ರೆಂಡ್ ಬಿಗ್​ಬಾಸ್ ಗೆಲ್ಲಬೇಕೆಂದು ಹರಕೆ ಹೊತ್ತು ಮೊಣಕಾಲಲ್ಲಿ ತಿರುಪತಿ ಮೆಟ್ಟಿಲು ಏರಿದ್ದಾರೆ.

ಬಾಯ್​​ಫ್ರೆಂಡ್ ಬಿಗ್​​ಬಾಸ್ ಗೆಲ್ಲಲೆಂದು ಮೊಣಕಾಲಲ್ಲಿ ತಿರುಪತಿ ಮೆಟ್ಟಿಲು ಹತ್ತಿದ ನಟಿ
Bigg Boss Kannada 13

Updated on: Nov 26, 2026 | 9:39 PM

ಬಿಗ್​​ಬಾಸ್ ಸೀಸನ್ ಚಾಲ್ತಿಯಲ್ಲಿದೆ. ಕನ್ನಡ ಮಾತ್ರವೇ ಅಲ್ಲದೆ ಬೇರೆ ಬೇರೆ ಭಾಷೆಗಳಲ್ಲಿಯೂ ಬಿಗ್​​ಬಾಸ್ ಶೋ ನಡೆಯುತ್ತಿದೆ. ಕೆಲ ಭಾಷೆಗಳಲ್ಲಿ ಸೀಸನ್ ಕ್ಲೈಮ್ಯಾಕ್ಸ್​​ಗೆ ಬಂದಿದೆ. ಸ್ಪರ್ಧಿಗಳು ಮನೆಯ ಒಳಗೆ ಗೆಲ್ಲಲು ನಾನಾ ಪ್ರಯತ್ನ ಮಾಡುತ್ತಿದ್ದಾರೆ. ಹೊರಗೆ ಸ್ಪರ್ಧಿಗಳ ಆಪ್ತರು ಪಿಆರ್ ಏಜೆನ್ಸಿಗಳ ಮೂಲಕ ಪ್ರಚಾರದಲ್ಲಿ ತೊಡಗಿದ್ದಾರೆ. ಅಭಿಮಾನಿಗಳು ಸಹ ತಮ್ಮ ನೆಚ್ಚಿನ ಸ್ಪರ್ಧಿಗಳಿಗೆ ಮತ ಹಾಕುತ್ತಾ, ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್​​ಗಳನ್ನು ಹಂಚಿಕೊಳ್ಳುತ್ತಿದ್ದಾರೆ. ಇದರ ನಡುವೆ ಬಿಗ್​​ಬಾಸ್ ಸ್ಪರ್ಧಿಯ ಪ್ರೇಯಸಿ ಒಬ್ಬರು, ತನ್ನ ಬಾಯ್​​ಫ್ರೆಂಡ್ ಬಿಗ್​ಬಾಸ್ ಗೆಲ್ಲಬೇಕೆಂದು ಹರಕೆ ಹೊತ್ತು ಮೊಣಕಾಲಲ್ಲಿ ತಿರುಪತಿ ಮೆಟ್ಟಿಲು ಏರಿದ್ದಾರೆ.

ತೆಲುಗು ಬಿಗ್​​ಬಾಸ್​​ನಲ್ಲಿ ಶಿವಕುಮಾರ್ ಅವರು ಸ್ಪರ್ಧಿಯಾಗಿ ಭಾಗಿ ಆಗಿದ್ದಾರೆ. ಅವರ ಗರ್ಲ್​​ಫ್ಫ್ರೆಂಡ್, ನಟಿ ಪ್ರಿಯಾಂಕಾ ಜೈನ್ ಅವರು ಶಿವಕುಮಾರ್ ಗೆಲ್ಲಬೇಕೆಂದು ತಿರುಪತಿ ದೇವಾಲಯಕ್ಕೆ ಭೇಟಿ ನೀಡಿ ಮೊಣಕಾಲಿನಲ್ಲಿ ತಿರುಪತಿ ದೇವಾಲಯದ ಬಳಿಯ ಅಲಿಪಿರಿ ಮೆಟ್ಟಿಲುಗಳನ್ನು ಮೊಣಕಾಲಿನಲ್ಲಿ ಹತ್ತಿದ್ದಾರೆ.

Loading...

ಶಿವಕುಮಾರ್ ಅವರ ತಾಯಿಯ ಜೊತೆಗೆ ಪ್ರಿಯಾಂಕಾ ಜೈನ್ ತಿರುಪತಿಗೆ ಭೇಟಿ ನೀಡಿದ್ದು, ಅಲ್ಲಿ ಶಿವಕುಮಾರ್ ಬಿಗ್​​ಬಾಸ್ ಗೆಲ್ಲಬೇಕೆಂದು ಮೊಣಕಾಲಿನಲ್ಲಿ ಬೆಟ್ಟ ಹತ್ತಿ ದೇವರ ದರ್ಶನ ಮಾಡಿದ್ದಾರೆ. ವಿಡಿಯೋ ಅನ್ನು ನಟಿ ಪ್ರಿಯಾಂಕಾ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು, ಎಲ್ಲರೂ ಶಿವ ಅವರಿಗಾಗಿ ವೋಟ್ ಮಾಡಿ ಎಂದು ಮನವಿ ಮಾಡಿದ್ದಾರೆ. ಈ ಹಿಂದೆ ಪ್ರಿಯಾಂಕಾ ಜೈನ್ ಸಹ ಬಿಗ್​​ಬಾಸ್ ಮನೆಯಲ್ಲಿದ್ದಾಗ, ಶಿವಕುಮಾರ್, ಅವರಿಗಾಗಿ ತಿರುಪತಿ ಮೆಟ್ಟಿಲುಗಳನ್ನು ಮೊಣಕಾಲಿನಲ್ಲಿ ಏರಿ ಅವರಿಗಾಗಿ ಪ್ರಾರ್ಥಿಸಿದ್ದರು.

ಇದನ್ನೂ ಓದಿ:ಅತಿಥಿಯಾಗಿ ಬಿಗ್​​ಬಾಸ್ ಮನೆಗೆ ಮರಳಿದ್ದ ಮಂಜ, ಮತ್ತೆ ಹೊರಕ್ಕೆ

ಪ್ರಿಯಾಂಕಾ ಜೈನ್ ಮತ್ತು ಶಿವ ಇಬ್ಬರೂ ‘ಮೌನರಾಗಂ’ ತೆಲುಗು ಧಾರಾವಾಹಿಯಲ್ಲಿ ನಟಿಸುತ್ತಿದ್ದರು. ಅದೇ ವೇಳೆ ಪರಿಚಯವಾಗಿ ಪರಸ್ಪರ ಪ್ರೀತಿಸಿದ್ದು ಇದೀಗ ಇಬ್ಬರೂ ವಿವಾಹವಾಗಲಿದ್ದಾರೆ. ಕೆಲ ವಾರಗಳ ಹಿಂದೆ ಪ್ರಿಯಾಂಕಾ ಜೈನ್, ಬಿಗ್​​ಬಾಸ್ ಮನೆಗೆ ಸಹ ಎಂಟ್ರಿ ಕೊಟ್ಟಿದ್ದರು. ಅಲ್ಲಿಯೇ ಶಿವಕುಮಾರ್​​ ಬೆರಳಿಗೆ ಉಂಗುರವನ್ನೂ ತೊಡಿಸಿದ್ದರು. ಬಿಗ್​​ಬಾಸ್ ಮನೆಯಲ್ಲೇ ಇವರ ನಿಶ್ಚಿತಾರ್ಥವೂ ನಡೆದಿತ್​ತು.

ಅಂದಹಾಗೆ ತೆಲುಗು ಬಿಗ್​​ಬಾಸ್​​ ಮನೆಯಲ್ಲಿ ಮೂವರು ಕನ್ನಡಿಗರು ಈ ಬಾರಿ ಸ್ಪರ್ಧಿಗಳಾಗಿ ಎಂಟ್ರಿ ಕೊಟ್ಟಿದ್ದರು. ಮುಖೇಶ್ ಗೌಡ, ಕರಾವಳಿ ಚೆಲುವೆ ಚೈತ್ರಾ ಮತ್ತು ತ್ರಿದೇವ್. ಚೈತ್ರಾ ಮೊದಲ ವಾರದಲ್ಲೇ ಹೊರಗೆ ಹೋಗಿದ್ದಾರೆ. ಆದರೆ ಮುಖೇಶ್ ಮತ್ತು ತ್ರಿದೇವ್ ಫಿನಾಲೆಯತ್ತ ದಾಪುಗಾಲು ಹಾಕಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 9:30 pm, Thu, 26 November 26

ಮಂಜುನಾಥ ಸಿ.

ಮಂಜುನಾಥ ಸಿ, ಬೆಂಗಳೂರು ಗ್ರಾಮಾಂತರ, ವಿಜಯರಪುರ ಪಟ್ಟಣ ನಿವಾಸಿ. ಕಳೆದ ಏಳು ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಸಕ್ರಿಯನಾಗಿದ್ದೇನೆ. ಕಳೆದ ಐದು ವರ್ಷದಿಂದ ಡಿಜಿಟಲ್ ಪತ್ರಿಕೋದ್ಯಮದಲ್ಲಿ ತೊಡಗಿಕೊಂಡಿದ್ದೇನೆ. ಈ ಹಿಂದೆ ಪ್ರಜಾವಾಣಿ, ಒನ್ ಇಂಡಿಯಾ ಕನ್ನಡ ಸಂಸ್ಥೆಗಳ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡಿದ್ದೇನೆ. ಪ್ರಸ್ತುತ ಟಿವಿ9 ಕನ್ನಡ ಡಿಜಿಟಲ್​ನ ಸಿನಿಮಾ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಮೆಚ್ಚಿನ ಹವ್ಯಾಸ ಸಿನಿಮಾ ವೀಕ್ಷಣೆ, ಪುಸ್ತಕಗಳನ್ನು ಓದುವುದು.

Read More
Loading...
Unable to load recommendations.
Follow Us