ಜೀ ಕನ್ನಡ ವಾಹಿನಿಯಲ್ಲಿ ‘ಭರ್ಜರಿ ಬ್ಯಾಚುಲರ್ಸ್’ (Bharjari Bachelors) ರಿಯಾಲಿಟಿ ಶೋ ಆರಂಭ ಆಗಿ ಎಲ್ಲರ ಗಮನ ಸೆಳೆಯುತ್ತಿದೆ. ಈ ಶೋ ಎಲ್ಲರ ಗಮನ ಸೆಳೆಯುತ್ತಿದೆ. ರಚಿತಾ ರಾಮ್, ರವಿಚಂದ್ರನ್ ಮೊದಲಾದವರು ಈ ಶೋನ ಜಡ್ಜ್ ಸ್ಥಾನದಲ್ಲಿ ಕುಳಿತಿದ್ದಾರೆ. ಈ ವಾರದ ‘ಭರ್ಜರಿ ಬ್ಯಾಚುಲರ್ಸ್’ಗೆ ಮೋಸ್ಟ್ ಎಲಿಜಬೆಲ್ ಬ್ಯಾಚುಲರ್ ರಾಜ್ ಬಿ ಶೆಟ್ಟಿ ಅವರು ಆಗಮಿಸಿದ್ದಾರೆ. ಇದರ ಪ್ರೋಮೋನ ಜೀ ಕನ್ನಡ ವಾಹಿನಿ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದೆ. ಈ ಕಾರಣದಿಂದಲೂ ಈ ವಾರದ ಎಪಿಸೋಡ್ ಕುತೂಹಲ ಮೂಡಿಸಿದೆ. ಪೂರ್ತಿ ಎಪಿಸೋಡ್ ನೋಡಲು ಫ್ಯಾನ್ಸ್ ಕಾದಿದ್ದಾರೆ.
ರಾಜ್ ಬಿ ಶೆಟ್ಟಿ ಅವರಿಗೆ ಮದುವೆ ಆಗಿಲ್ಲ. ‘ನಾನು ಸಿಂಗಲ್ ಆಗಿಯೇ ಆರಾಮಾಗಿದ್ದೇನೆ’ ಎಂದು ಅವರು ಅನೇಕ ಸಂದರ್ಶನಗಳಲ್ಲಿ ಹೇಳಿಕೊಂಡಿದ್ದರು. ಸದ್ಯಕ್ಕಂತೂ ಮದುವೆ ಆಲೋಚನೆ ಇಲ್ಲ ಎಂಬುದನ್ನು ಹಲವು ಬಾರಿ ಹೇಳಿದ್ದರು. ಸದ್ಯ ಅವರು ನಿರ್ದೇಶಿಸಿ, ನಟಿಸಿರುವ ‘ಟೋಬಿ’ ಸಿನಿಮಾ ರಿಲೀಸ್ಗೆ ರೆಡಿ ಇದೆ. ಈ ಚಿತ್ರದ ಪ್ರಚಾರಕ್ಕೆ ಅವರು ‘ಭರ್ಜರಿ ಬ್ಯಾಚುಲರ್ಸ್’ ವೇದಿಕೆ ಏರಿದ್ದಾರೆ.
‘ಹೇಗಿದೆ ಬ್ಯಾಚುಲರ್ಸ್ ಜೀವನ’ ಎಂದು ರಾಜ್ ಬಿ ಶೆಟ್ಟಿಗೆ ಅಕುಲ್ ಬಾಲಾಜಿ ಕೇಳಿದ್ದಾರೆ. ಇದಕ್ಕೆ ಉತ್ತರಿಸಿರುವ ರಾಜ್ ಶೆಟ್ಟಿ, ‘ಬ್ಯಾಚುಲರ್ಸ್ ಜೀವನವೇ ಚೆನ್ನಾಗಿದೆ ಅನ್ನಿಸಿತು. ಅದಕ್ಕೆ ಮದುವೆ ಆಗಲೇ ಇಲ್ಲ’ ಎಂದಿದ್ದಾರೆ. ಈ ಪ್ರೋಮೋಗೆ ‘ಮಾಸ್ ಆ್ಯಂಡ್ ಕ್ಲಾಸ್ ಬ್ಯಾಚುಲರ‍್ಸ್ ನಡುವೆ ಭರ್ಜರಿ ಫೈಟ್, ಎಂಟರ್ಟೈನ್ಮೆಂಟ್ ಫುಲ್ ಬ್ರೈಟ್. ಭರ್ಜರಿ ಬ್ಯಾಚುಲರ‍್ಸ್ ‘ಮಾಸ್ v/s ಕ್ಲಾಸ್’ ಶನಿ-ಭಾನು ರಾತ್ರಿ 9ಕ್ಕೆ’ ಎಂದು ಕ್ಯಾಪ್ಶನ್ ನೀಡಲಾಗಿದೆ.
ರಾಜ್ ಬಿ ಶೆಟ್ಟಿ ಅವರು ಸಖತ್ ಫನ್ನಿ ಆಗಿರುತ್ತಾರೆ. ಯಾವುದೇ ವೇದಿಕೆ ಏರಿದರೂ ಅವರು ನಗಿಸುತ್ತಾರೆ. ಹೀಗಾಗಿ, ‘ಭರ್ಜರಿ ಬ್ಯಾಚುಲರ್ಸ್’ ವೇದಿಕೆ ಮೇಲೆ ಸಾಕಷ್ಟು ಮನರಂಜನೆ ನಿರೀಕ್ಷಿಸಬಹುದು. ಅವರ ನಿರ್ದೇಶನದ ‘ಟೋಬಿ’ ಸಿನಿಮಾ ಪೋಸ್ಟರ್ ಮೂಲಕವೇ ಗಮನ ಸೆಳೆಯುತ್ತಿದೆ. ಈ ಚಿತ್ರದ ಟ್ರೇಲರ್ ಆಗಸ್ಟ್ 4ರ ಸಂಜೆ ರಿಲೀಸ್ ಆಗಲಿದೆ. ಈ ಸಿನಿಮಾ ಆಗಸ್ಟ್ 25ರಂದು ರಿಲೀಸ್ ಆಗಲಿದೆ. ‘ಟೋಬಿ’ ರಿವೇಂಜ್ ಕಥೆ ಎನ್ನಲಾಗಿದೆ.
ಇದನ್ನೂ ಓದಿ: ಜೀ ಕನ್ನಡದಲ್ಲಿ ಹೊಸ ಶೋ ‘ಭರ್ಜರಿ ಬ್ಯಾಚುಲರ್ಸ್’; ಮದುವೆ ಆಗದ ಹುಡುಗರೇ ಇಲ್ಲಿ ಕೇಳಿ..
‘ಒಂದು ಮೊಟ್ಟೆಯ ಕಥೆ’ ಮೂಲಕ ಆರಂಭವಾದ ರಾಜ್ ಬಿ. ಶೆಟ್ಟಿ ಪಯಣ ಇಲ್ಲಿಯವರೆಗೆ ಬಂದು ನಿಂತಿದೆ. ‘ಟೋಬಿ’ ಚಿತ್ರ ಯಶಸ್ಸು ಕಾಣಲಿ ಎಂದು ಎಲ್ಲರೂ ಶುಭಕೋರುತ್ತಿದ್ದಾರೆ. ‘ಸ್ವಾತಿ ಮುತ್ತಿನ ಮಳೆ ಹನಿಯೇ’ ಚಿತ್ರವನ್ನು ರಾಜ್ ಶೆಟ್ಟಿ ನಿರ್ದೇಶನ ಮಾಡಿದ್ದಾರೆ. ಈ ಚಿತ್ರಕ್ಕೆ ರಮ್ಯಾ ಬಂಡವಾಳ ಹೂಡಿದ್ದಾರೆ. ಈ ಸಿನಿಮಾದ ಶೂಟಿಂಗ್ ಬಹಳ ಹಿಂದೆಯೇ ಮುಗಿದಿದೆ. ಆದರೆ, ಈ ಸಿನಿಮಾ ರಿಲೀಸ್ ಬಗ್ಗೆ ಚಿತ್ರತಂಡದವರ ಕಡೆಯಿಂದ ಯಾವುದೇ ಅಧಿಕೃತ ಮಾಹಿತಿ ಸಿಕ್ಕಿಲ್ಲ.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ