‘ನಿಮ್ಮನ್ನು ಹೊರಹಾಕಿಯೇ ನಾನು ಹೋಗೋದು’; ಅಶ್ವಿನಿ ವಿರುದ್ಧದ ಚಾಲೆಂಜ್​​ನಲ್ಲಿ ಗೆದ್ದ ರಕ್ಷಿತಾ

ರಕ್ಷಿತಾ ಶೆಟ್ಟಿ ಬಿಗ್ ಬಾಸ್ ಕನ್ನಡ ಸೀಸನ್ 12ರ ರನ್ನರ್ ಅಪ್. ಕಿರಿಯ ಸ್ಪರ್ಧಿಯಾಗಿದ್ದ ರಕ್ಷಿತಾ, ಅಶ್ವಿನಿ ಗೌಡ ವಿರುದ್ಧದ ಚಾಲೆಂಜ್‌ನಲ್ಲಿ ಗೆದ್ದು, ‘ನಿಮ್ಮನ್ನು ಹೊರಹಾಕಿಯೇ ನಾನು ಹೋಗೋದು’ ಎಂಬ ಸವಾಲನ್ನು ಪೂರ್ಣಗೊಳಿಸಿದ್ದಾರೆ. ಅಶ್ವಿನಿ ಅವರ ಕಿತ್ತಾಟಗಳು ರಕ್ಷಿತಾಗೆ ಮತ್ತಷ್ಟು ಪ್ರಚಾರ ತಂದುಕೊಟ್ಟವು. ಬಿಗ್ ಬಾಸ್ ಮನೆಯಲ್ಲಿ ರಕ್ಷಿತಾ ಅವರ ಪಯಣ ಅತ್ಯಂತ ಗಮನ ಸೆಳೆಯುವಂತದ್ದಾಗಿತ್ತು.

‘ನಿಮ್ಮನ್ನು ಹೊರಹಾಕಿಯೇ ನಾನು ಹೋಗೋದು’; ಅಶ್ವಿನಿ ವಿರುದ್ಧದ ಚಾಲೆಂಜ್​​ನಲ್ಲಿ ಗೆದ್ದ ರಕ್ಷಿತಾ
ಅಶ್ವಿನಿ-ರಕ್ಷಿತಾ

Updated on: Jan 19, 2026 | 10:12 AM

ರಕ್ಷಿತಾ ಶೆಟ್ಟಿ ಅವರು ಬಿಗ್ ಬಾಸ್ ಕನ್ನಡ ಸೀಸನ್ 12ರಲ್ಲಿ ರನ್ನರ್ ಅಪ್ ಆಗಿದ್ದಾರೆ. ಗಿಲ್ಲಿ ನಟನ (Gilli Nata) ಪಕ್ಕ ಅವರು ನಿಂತಿದ್ದರು. ಅಂತಿಮವಾಗಿ ಗಿಲ್ಲಿಗಿಂತ ಕಡಿಮೆ ವೋಟ್ ಪಡೆದು ಮೊದಲ ರನ್ನರ್ ಅಪ್ ಆದರು. ರಕ್ಷಿತಾ ಶೆಟ್ಟಿಗೆ ಬಿದ್ದ ವೋಟ್​​​ಗಳನ್ನು ರಿವೀಲ್ ಮಾಡಿಲ್ಲ. ಗಿಲ್ಲಿಗೆ 40 ಕೋಟಿಗೂ ಅಧಿಕ ವೋಟ್​ಗಳು ಬಿದ್ದಿವೆ ಎನ್ನಲಾಗಿದೆ. ಈಗ ರಕ್ಷಿತಾ ಶೆಟ್ಟಿ ಅವರು ಅಶ್ವಿನಿ ವಿರುದ್ಧದ ಚಾಲೆಂಜ್​​ನಲ್ಲಿ ಗೆಲುವು ಕಂಡಿದ್ದಾರೆ. ‘ನಿಮ್ಮನ್ನು ಹೊರಹಾಕಿಯೇ ನಾನು ಹೋಗೋದು’ ಎಂದು ಅಶ್ವಿನಿಗೆ ರಕ್ಷಿತಾ ಚಾಲೆಂಜ್ ಮಾಡಿದ್ದರು.

ರಕ್ಷಿತಾ ಶೆಟ್ಟಿ ಅವರು ಈ ಸೀಸನ್​​ನ ಅತ್ಯಂತ ಕಿರಿಯ ಸ್ಪರ್ಧಿ. ಅವರಿಗೆ ಸಾಕಷ್ಟು ಹೈಪ್ ಬರಲು ಅಶ್ವಿನಿ ಗೌಡ ಕಾರಣ ಎಂದರೂ ತಪ್ಪಾಗಲಾರದು. ಅಶ್ವಿನಿ ಗೌಡ ಹಾಗೂ ರಕ್ಷಿತಾ ಶೆಟ್ಟಿ ಮಧ್ಯೆ ಸಾಕಷ್ಟು ಕಿತ್ತಾಟ ನಡೆದವು.ರಕ್ಷಿತಾನ ಕೆಳ ಹಾಕುವ ಪ್ರಯತ್ನವನ್ನು ಅಶ್ವಿನಿ ಗೌಡ ಮಾಡಿದ್ದರು. ಹೀಗೆ ಪ್ರತಿ ಬಾರಿ ನಡೆದಾಗಲೂ ರಕ್ಷಿತಾ ಮತ್ತಷ್ಟು ಮೇಲಕ್ಕೆ ಏರುತ್ತಿದ್ದರು.

ಇದನ್ನೂ ಓದಿ: ಏರಿದ ಏಣಿಯನ್ನು ಒದೆಯಲಿಲ್ಲ ಗಿಲ್ಲಿ ನಟ; ಬಿಗ್ ಬಾಸ್ ವಿನ್ನರ್ ನಡೆಗೆ ಮೆಚ್ಚುಗೆ

ರಕ್ಷಿತಾ ಶೆಟ್ಟಿ ಅವರು ಈ ಮೊದಲು ಅಶ್ವಿನಿ ಜೊತೆ ಜಗಳ ಆಡುವಾಗ ಚಾಲೆಂಜ್ ಒಂದನ್ನು ಮಾಡಿದ್ದರು. ‘ಬಿಗ್ ಬಾಸ್ ಮನೆಯಿಂದ ನಾನು ನಿಮ್ಮನ್ನು ಹೊರಹಾಕಿಯೇ ಹೋಗೋದು’ ಎಂದು ಹೇಳಿದ್ದರು. ಇಬ್ಬರ ಮಧ್ಯೆ ಸಾಕಷ್ಟು ದೊಡ್ಡ ಮಟ್ಟದ ಕಿತ್ತಾಟ ನಡೆದಿತ್ತು. ಈಗ ಆ ಚಾಲೆಂಜ್​​ನ ಅವರು ಪೂರ್ಣಗೊಳಿಸಿದಂತೆ ಆಗಿದೆ.

ಟಾಪ್ 6ರಲ್ಲಿ ಅಶ್ವಿನಿ ಗೌಡ, ರಕ್ಷಿತಾ ಶೆಟ್ಟಿ, ಗಿಲ್ಲಿ ನಟ, ಕಾವ್ಯಾ, ರಘು ಹಾಗೂ ಧನುಷ್ ಇದ್ದರು. ಮೊದಲು ಧನುಷ್ ಎಲಿಮಿನೇಟ್ ಆದರೆ, ನಂತರ ರಘು ಹೊರ ಹೋದರು. ಆ ಬಳಿಕ ಕಾವ್ಯಾ ಔಟ್ ಆದರು. ಟಾಪ್ 3ನಲ್ಲಿ ರಕ್ಷಿತಾ, ಅಶ್ವಿನಿ ಹಾಗೂ ಗಿಲ್ಲಿ ಇದ್ದರು. ಟಾಪ್ 2ರಲ್ಲಿ ನಾನೇ ಇರಬಹುದು ಎಂಬ ಊಹೆ ಅಶ್ವಿನಿ ಅವರದ್ದಾಗಿತ್ತೇನೋ. ಆದರೆ, ಕೊನೆಯಲ್ಲಿ ಈ ಚಾಲೆಂಜ್​​​ನಲ್ಲಿ ಗೆದ್ದಿದ್ದು ರಕ್ಷಿತಾ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On - 10:02 am, Mon, 19 January 26