
ರಕ್ಷಿತಾ ಶೆಟ್ಟಿ ಅವರನ್ನು ಈ ವಾರ ಬಿಗ್ ಬಾಸ್ ಮನೆಯಲ್ಲಿ ಸಾಕಷ್ಟು ಟಾರ್ಗೆಟ್ ಮಾಡಲಾಯಿತು. ರಕ್ಷಿತಾ ಶೆಟ್ಟಿ ಎ ಅವರು ಎಲ್ಲಾ ವಿಚಾರದಲ್ಲಿ ಮೂಗು ತೂರಿಸುತ್ತಾರೆ ಎಂದು ಅನೇಕರು ದೂರಿದ್ದಾರೆ. ಈ ವಿಚಾರವನ್ನು ಅಶ್ವಿನಿ ಗೌಡ, ರಾಶಿಕಾ ಶೆಟ್ಟಿ, ರಿಷಾ ಅವರು ಪದೇ ಪದೇ ಹೇಳಿದ್ದಾರೆ. ಈ ವಿಚಾರವಾಗಿ ವೀಕೆಂಡ್‌ನಲ್ಲಿ ಚರ್ಚೆ ನಡೆದಿದೆ. ಈ ವೇಳೆ ಸುದೀಪ್ (Sudeep) ಅವರು ರಕ್ಷಿತಾ ಶೆಟ್ಟಿ ಅವರನ್ನು ಬೆಂಬಲಿಸಿ ಮಾತನಾಡಿದ್ದಾರೆ.
ರಕ್ಷಿತಾ ಬಗ್ಗೆ ಇರುವ ದೂರುಗಳು ಏನು ಎಂದು ಸ್ಪರ್ಧಿಗಳ ಬಳಿ ಕೇಳಲಾಯಿತು. ಇದಕ್ಕೆ ಉತ್ತರಿಸಿದ ಅಶ್ವಿನಿ ಗೌಡ ಅವರು, ‘ಅವರು ಕಲಾವಿದರಿಗೆ ಅವಮಾನ ಮಾಡಿದ್ದಾರೆ. ಅವರು ಮಾಡಿದ್ದು ಸರಿ ಇಲ್ಲ’ ಎಂದರು. ರಿಷಾ ಗೌಡ ಅವರು ಕೂಡ ರಕ್ಷಿತಾ ಶೆಟ್ಟಿ ಬಗ್ಗೆ ಅಪಸ್ವರ ತೆಗೆದರು. ‘ರಕ್ಷಿತಾ ವಾರದ ದಿನ ಒಂದು ರೀತಿ ಕಾಣ್ತಾರೆ. ವೀಕೆಂಡ್‌ನಲ್ಲಿ ಮತ್ತೊಂದು ರೀತಿ ಕಾಣ್ತಾರೆ’ ಎಂದರು. ಇದಕ್ಕೆ ಸುದೀಪ್ ಉತ್ತರಿಸಿದರು.
‘ಜನ ನೋಡ್ತಾ ಇರ್ತಾರೆ. ಶನಿವಾರ ನಾನು ಬೆಸ್ಟ್ ಆಗಿ ಕಾಣಬೇಕು ಎಂದಿರುತ್ತದೆ. ಅದಕ್ಕೆ ಎಲ್ಲರೂ ಆ ರೀತಿ ಇರಬಹುದು. ಮುಖವಾಡ ಹಾಕ್ಕೊಂಡಿರ್ತಾರೆ ಎಂದೆಲ್ಲ ಹೇಳುವ ನೀವೂ ಶನಿವಾರ ಬೇರೆಯದೇ ರೀತಿ ಇರ್ತೀರಾ. ಒಳಗೆ ಹೋಗುವಾಗ ರೋಷದಲ್ಲಿ ಇದ್ದ ರಿಷಾ, ಒಳಗೆ ಹೋದಮೇಲೆ ಬೇರೆ ರೀತಿ ಆದ್ರಿ’ ಎಂದರು ಸುದೀಪ್.
ಇದನ್ನೂ ಓದಿ: Bigg Boss Promo: ರಕ್ಷಿತಾ ಶೆಟ್ಟಿ ಫೇಕ್ ಎಂದವರಿಗೆ ಕ್ಲ್ಯಾರಿಟಿ ಕೊಟ್ಟ ಸುದೀಪ್
‘ಎಲ್ಲರೂ ಬೇರೆಯವರ ಸರಿ ಮಾಡೋಕೆ ಹೋಗ್ತಾ ಇದೀರ. ಒಳ್ಳೆಯವರು, ಕೆಟ್ಟವರು ಅನ್ನೋದು ಬರಲ್ಲ. ಕೆಲವರು ನಿಮಗೆ ಹೊಂದಿಕೆ ಆಗ್ತಾರೆ, ಹೊಂದಿಕೆ ಆಗಲ್ಲ ಅನ್ನೋದು ಅಷ್ಟೇ ವಿಚಾರ. ನಿಮ್ಮ ಬಿಸ್ನೆಸ್ನಲ್ಲಿ ನೀವಿರಿ’ ಎಂದು ಸುದೀಪ್ ಅವರು ಕಿವಿಮಾತು ಹೇಳಿದರು.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.