
ಬಿಗ್ ಬಾಸ್ ಮನೆಯಲ್ಲಿರೋ ರಕ್ಷಿತಾ ಶೆಟ್ಟಿ ಅವರು ಸಾಕಷ್ಟು ಆ್ಯಕ್ಟಿವ್ ಆಗಿದ್ದಾರೆ. ಅವರು ಒಮ್ಮೊಮ್ಮೆ ಆಡುವ ರೀತಿ ಸಾಕಷ್ಟು ಚರ್ಚೆಗಳನ್ನು ಹುಟ್ಟುಹಾಕುತ್ತದೆ. ಈಗ ರಕ್ಷಿತಾ ಶೆಟ್ಟಿ ಅವರು ತಮ್ಮ ಮನಸ್ಸಿನ ಭಾವನೆ ಹೇಳಿಕೊಂಡಿದ್ದಾರೆ. ಅವರಿಗೆ ಗಿಲ್ಲಿ ರೀತಿಯ ಹುಡುಗ ಬೇಕೆಂತೆ! ಆದರೆ, ಗಿಲ್ಲಿಯೇ ಆಗಬೇಕು ಎಂದು ಅವರು ಹೇಳಿಲ್ಲ. ಈ ವಿಡಿಯೋ ಸಾಕಷ್ಟು ವೈರಲ್ ಆಗಿ ಗಮನ ಸೆಳೆದಿದೆ. ಇದರ ಬಗ್ಗೆ ನಾನಾ ರೀತಿಯ ಚರ್ಚೆಗಳು ನಡೆದಿವೆ.
‘ಬಿಗ್ ಬಾಸ್ ಕನ್ನಡ ಸೀಸನ್ 12’ರಲ್ಲಿ ಕಳೆದ ವಾರ ಸುದೀಪ್ ಅವರು ಗೈರಾಗಿದ್ದರು. ಹೀಗಾಗಿ, ಅನೇಕ ಅತಿಥಿಗಳು ಬಿಗ್ ಬಾಸ್ ಮನೆ ಒಳಗೆ ಪ್ರವೇಶ ಮಾಡಿದ್ದರು. ಇವರ ಪೈಕಿ ‘ಗೌರಿ ಕಲ್ಯಾಣ’ ಧಾರಾವಾಹಿ ತಂಡ ಕೂಡ ಒಂದು. ಬಿಗ್ ಬಾಸ್ ಪೂರ್ಣಗೊಂಡ ಬಳಿಕ ಕಲರ್ಸ್ನಲ್ಲಿ ಈ ಧಾರಾವಾಹಿ ಪ್ರಸಾರ ಕಾಣಲಿದೆ. ಈ ಧಾರಾವಾಹಿ ಬಗ್ಗೆ ತಂಡ ಮಾಹಿತಿ ನೀಡಿದೆ. ಈ ವೇಳೆ ಗಿಲ್ಲಿಗೆ ಸ್ವಯಂವರ ಮಾಡಲಾಗಿದೆ.
Rakshita knows the pain of one side feelings, because she has expressed it in the show long back,
“It hurts.”
Now,
“Gilli Haage, Aadre Gilli Alla.”
Because,
She knows – Gilli’s choice is in the show. She has always respected his feelings. #Gilli | #GilliNata pic.twitter.com/LhbjGWVZil
— Cinema Premi✍🏻 (@karansharmain) December 28, 2025
ಸ್ವಯಂವರದ ಬಳಿಕ ರಕ್ಷಿತಾ ಅವರ ಹುಡುಗ ಯಾವ ರೀತಿ ಇರಬೇಕು ಎಂಬ ಚರ್ಚೆ ಬಂದಿದೆ. ಇದಕ್ಕೆ ರಕ್ಷಿತಾ ಅವರು, ‘ನನ್ನ ಹುಡುಗ ಗಿಲ್ಲಿ ರೀತಿಯೇ ಇರಬೇಕು’ ಎಂದು ನೇರವಾಗಿ ಹೇಳಿದ್ದಾರೆ. ಇದು ಚರ್ಚೆಗೆ ಕಾರಣ ಆಗಿದೆ. ಆ ಬಳಿಕ ‘ಗಿಲ್ಲಿಯನ್ನೇ ಮದುವೆ ಆಗಬಹುದಲ್ಲ’ ಎಂದು ಮನೆಯವರು ಪ್ರಶ್ನೆ ಹೇಳಿದರು. ‘ನನಗೆ ಗಿಲ್ಲಿ ಬೇಡ. ಗಿಲ್ಲಿಯ ರೀತಿಯ ಗುಣ ಇರೋ ಹುಡುಗ ಸಿಕ್ಕರೆ ಸಾಕು. ನಾನು ಅವನು ಬೆಸ್ಟ್ ಫ್ರೆಂಡ್ಸ್’ ಎಂದು ಸ್ಪಷ್ಟನೆ ಕೊಟ್ಟರು.
ಇದನ್ನೂ ಓದಿ: ಕಾವ್ಯಾ ಜತೆ ಮದುವೆ ಬಗ್ಗೆ ಮನಸಾರೆ ಮಾತಾಡಿದ ಗಿಲ್ಲಿ: ಆ ಕಡೆಯಿಂದ ಬಂದ ಉತ್ತರ ಏನು?
ಕಾವ್ಯಾ ಅವರನ್ನು ಕಂಡರೆ ರಕ್ಷಿತಾಗೆ ಸ್ವಲ್ಪವೂ ಆಗೋದಿಲ್ಲ. ಅವರ ವಿರುದ್ಧ ರಕ್ಷಿತಾ ಸಿಟ್ಟನ್ನು ತೋರಿಸುತ್ತಾ ಇರುತ್ತಾರೆ. ಇದಕ್ಕೆ ಕಾರಣ ಕಾವ್ಯಾ ಹಾಗೂ ಗಿಲ್ಲಿ ನಡುವಿನ ಗೆಳೆತನ ಎಂಬ ಮಾತೂ ಇದೆ. ಗಿಲ್ಲಿ ಸದಾ ಕಾವ್ಯಾನ ಜಪ ಮಾಡೋದನ್ನು ರಕ್ಷಿತಾಗೆ ಸಹಿಸಿಕೊಳ್ಳೋಕೆ ಸಾಧ್ಯವಾಗುವುದಿಲ್ಲ ಎನ್ನಲಾಗಿದೆ. ಗಿಲ್ಲಿ ಬಗ್ಗೆ ರಕ್ಷಿತಾಗೆ ವಿಶೇಷ ಭಾವನೆ ಇದೆ ಎಂಬ ಮಾತುಗಳು ಚರ್ಚೆಯಲ್ಲಿ ಇವೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.