ರಾಮಾಚಾರಿ ಪಾತ್ರ ಕೊನೆ; ಕೊಲೆಯಲ್ಲಿ ಅಂತ್ಯವಾಯ್ತು ಕ್ಯಾರೆಕ್ಟರ್

ಕಲರ್ಸ್ ಕನ್ನಡದ ಜನಪ್ರಿಯ ಧಾರಾವಾಹಿ ರಾಮಾಚಾರಿಯಲ್ಲಿ ಆಘಾತಕಾರಿ ತಿರುವು ಎದುರಾಗಿದೆ. ಕಥಾ ನಾಯಕ ರಾಮಾಚಾರಿಯನ್ನೇ ಕೊಲ್ಲಲಾಗುವುದು. ಮಾನ್ಯತಾ, ರುಕ್ಕು, ನವದೀಪ್ ಮತ್ತು ಜಿಕೆ ಯೋಜಿಸಿದ ಕೊಲೆ ಯಶಸ್ವಿಯಾಗುತ್ತದೆ. ರಾಮಾಚಾರಿ ಹೋರಾಡಿದರೂ, ಅವನನ್ನು ಚೂರಿಯಿಂದ ಕೊಲ್ಲಲಾಗುತ್ತದೆ. ಈ ಟ್ವಿಸ್ಟ್ ಗೆ ಅಭಿಮಾನಿಗಳು ವಿಭಿನ್ನ ರೀತಿಯಲ್ಲಿ ಪ್ರತಿಕ್ರಿಯಿಸುತ್ತಿದ್ದಾರೆ.

ರಾಮಾಚಾರಿ ಪಾತ್ರ ಕೊನೆ; ಕೊಲೆಯಲ್ಲಿ ಅಂತ್ಯವಾಯ್ತು ಕ್ಯಾರೆಕ್ಟರ್
ರಾಮಾಚಾರಿ
Updated By: ರಾಜೇಶ್ ದುಗ್ಗುಮನೆ

Updated on: Jul 24, 2025 | 8:15 AM

ಕಲರ್ಸ್ ಕನ್ನಡದಲ್ಲಿ ಹಲವು ಸಮಯದಿಂದ ‘ರಾಮಾಚಾರಿ’ ಧಾರಾವಾಹಿ (Kannada Serial) ಪ್ರಸಾರ ಕಾಣುತ್ತಿದೆ. ಈ ಧಾರಾವಾಹಿ ಹಲವು ಟ್ವಿಸ್ಟ್​ಗಳನ್ನು ಪಡೆದು ಸಾಗುತ್ತಿದೆ. ಕಲರ್ಸ್ ಕನ್ನಡದ ಜನಪ್ರಿಯ ಧಾರಾವಾಹಿಗಳಲ್ಲಿ ಇದು ಕೂಡ ಒಂದು. ಈ ಧಾರಾವಾಹಿ ಒಳ್ಳೆಯ ಪ್ರಚಚಾರ ಪಡೆದುಕೊಂಡಿದೆ. ಈ ಧಾರಾವಾಹಿ  ಈಗ ಒಂದು ರೋಚಕ ಘಟ್ಟವನ್ನು ತಲುಪಿದೆ. ಕಥಾ ನಾಯಕ ರಾಮಾಚಾರಿಯ ಹತ್ಯೆಯೇ ನಡೆದು ಹೋಗುತ್ತದೆ. ಇದರಿಂದ ಕಥೆಯ ಪ್ರಭಾವದ ಮೇಲೆ ಸಾಕಷ್ಟು ಪ್ರಭಾವ ಬೀರುವ ಸೂಚನೆ ಸಿಕ್ಕಿದೆ.

‘ರಾಮಾಚಾರಿ’ ಧಾರಾವಾಹಿ ಚೂರಿ ಚುಚ್ಚಿ ಕೊಲ್ಲುವ ಮತ್ತು ಆ ನಂತರದ ದಿನಗಳಲ್ಲಿ ರಾಮಾಚಾರಿಯ ಸಾವಿನ ಪರಿಣಾಮದಿಂದ ಆಗುವ ಎಪಿಸೋಡ್​ಗಳು ಪ್ರಸಾರವಾಗಲಿವೆ. ಈ ಟ್ವಿಸ್ಟ್​ನ ಯಾರೆಂದರೆ ಯಾರೂ ಊಹಿಸಿರಲಿಲ್ಲ. ಇದನ್ನು ಅನೇಕರು ಒಪ್ಪಲು ರೆಡಿ ಇಲ್ಲ. ಇದಕ್ಕೆ ಫ್ಯಾನ್ಸ್ ನಾನಾ ರೀತಿಯಲ್ಲಿ ಪ್ರತಿಕ್ರಿಯಿಸುವುದನ್ನು ನೋಡಬಹುದು.

ಇದನ್ನೂ ಓದಿ
ಗೌತಮ್-ಭೂಮಿಕಾ ಮಗನಿಗೆ ನಾಮಕರಣ ಶಾಸ್ತ್ರ; ಇಟ್ಟ ಹೆಸರೇನು?
‘ವಿಂಟೇಜ್ ಪವನ್ ಕಲ್ಯಾಣ್’; ‘ಹರಿ ಹರ ವೀರ ಮಲ್ಲು’ ವಿಮರ್ಶೆ ಕೊಟ್ಟ ಫ್ಯಾನ್ಸ್
ಆರೇ ದಿನಕ್ಕೆ 150 ಕೋಟಿ ಕಲೆಕ್ಷನ್ ಮಾಡಿದ ‘ಸೈಯಾರಾ’; ಹರಿಯುತ್ತಲೇ ಇದೆ ಹಣ
ಈ ದಿನಂದು ‘ಕಣ್ಣಪ’ ಸಿನಿಮಾ ಒಟಿಟಿಯಲ್ಲಿ ರಿಲೀಸ್ ಆಗಲಿದೆ?

ರಾಮಾಚಾರಿ ವಿರುದ್ಧ ನಿಂತರವರು ಮಾನ್ಯತಾ, ರುಕ್ಕು ನವದೀಪ್ ಹಾಗೂ ಜಿಕೆ. ಇವರು ರಾಮಾಚಾರಿಯನ್ನು ಕೊಲ್ಲಲು ಪ್ಲ್ಯಾನ್ ಮಾಡುತ್ತಲೇ ಇದ್ದರು. ಈಗ ಯೋಜನೆ ಕೊನೆಗೂ ಫಲಿಸುವ ಸೂಚನೆ ಸಿಕ್ಕಿದೆ ಎಂದೇ ಹೇಳಬಹುದು. ರಾಮಾಚಾರಿಯನ್ನು ಮೋಸದಿಂದ ಕಟ್ಟಡ ಒಂದಕ್ಕೆ ಕರೆಸಲಾಗುತ್ತದೆ. ಈ ವೇಳೆ ವಿಲನ್ ಗ್ಯಾಂಗ್ ರಾಮಾಚಾರಿ ಮೇಲೆ ಮುಗಿ ಬೀಳುತ್ತದೆ.

ಕಲರ್ಸ್ ಕನ್ನಡ ಪೋಸ್ಟ್

ರಾಮಾಚಾರಿ ಸುಮ್ಮನಿರುವವನು ಅಲ್ಲವೇ ಅಲ್ಲ. ಅವನು ವಿಲನ್​ಗಳ ವಿರುದ್ಧ ಫೈಟ್ ಮಾಡುತ್ತಾನೆ. ಎಲ್ಲರನ್ನೂ ಸದೆ ಬಡಿಯುವಲ್ಲಿ ಯಶಸ್ವಿ ಆಗುತ್ತಾನೆ. ರಾಮಾಚಾರಿ ಎಷ್ಟೇ ಹೋರಾಟ ಮಾಡಿದರೂ ಈ ಗ್ಯಾಂಗ್ ಸುಮ್ಮನೆ ಇರೋದಿಲ್ಲ. ರಾಮಾಆರಿಗೆ ಚೂರಿ ಚುಚ್ಚಿ ಕೊಲ್ಲಲು ಯಶಸ್ವಿಯಾಗುತ್ತದೆ. ತಮ್ಮ ಶತ್ರುವನ್ನು ನಾಶ ಪಡಿಸಿದ ಖುಷಿಯಲ್ಲಿ ಅವರು ಸಂಭ್ರಮಿಸುತ್ತಾರೆ. ನಂತರ ಆತನ ಹೆಣವನ್ನು ರಸ್ತೆಯಲ್ಲಿ ಎಸೆಯಲಾಗುತ್ತದೆ. ಈ ನಡುವೆ ಚಾರು, ಉಳಿದ ಕುಟುಂಬ ಮತ್ತು ಅಗ್ರಹಾರದ ಜನರು ತಮ್ಮ ಪ್ರೀತಿಯ ರಾಮಾಚಾರಿಯ ಸಾವಿನ ಶೋಕಾಚರಣೆಯಲ್ಲಿರುತ್ತಾರೆ. ಈ ರೀತಿ ಆಗುತ್ತದೆ ಎಂದು ಅವರು ಯಾರೂ ಊಹಿಸಿರಲಿಲ್ಲ.

ಇದನ್ನೂ ಓದಿ: ಅಮೃತಧಾರೆ: ಗೌತಮ್-ಭೂಮಿಕಾ ಮಗನಿಗೆ ನಾಮಕರಣ ಶಾಸ್ತ್ರ; ಇಟ್ಟ ಹೆಸರೇನು?

ಸದ್ಯ ಈ ಟ್ವಿಸ್ಟ್​ಗೆ ವಿವಿಧ ರೀತಿಯ ಕಮೆಂಟ್​ಗಳು ಬರುತ್ತಿವೆ. ಇದು ನಿಜವಲ್ಲ, ಕನಸಲ್ಲ ಎಂದಷ್ಟೇ ಕೆಲವರು ಹೇಳಿದ್ದಾರೆ. ಇನ್ನೂ ಕೆಲವರು ಇದು ರಾಮಾಚಾರಿ ಅಲ್ಲ ಕಿಟ್ಟಿ ಎಂದು ಕೆಲವರು ಹೇಳಿದ್ದಾರೆ. ಮುಂದಿನ ದಿನಗಳಲ್ಲಿ ಈ ಬಗ್ಗೆ ಸ್ಪಷ್ಟತೆ ಸಿಗಬೇಕಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.