ರಮೋಲಾ ‘ಕನ್ನಡತಿ’ ಧಾರಾವಾಹಿ ತೊರೆದಿದ್ದೇಕೆ? ಸಾನಿಯಾ ಪಾತ್ರ ಮಾಡೋರು ಯಾರು? ಇಲ್ಲಿದೆ ಉತ್ತರ

‘ಕನ್ನಡತಿ’ ಧಾರಾವಾಹಿ ಪ್ರಸಾರ ಪ್ರಾರಂಭಿಸಿ ಕೆಲವು ವರ್ಷ ಕಳೆದಿದೆ. ಈ ಧಾರಾವಾಹಿಯಲ್ಲಿ ಆರಂಭದಿಂದಲೂ ಸಾನಿಯಾ ಪಾತ್ರವನ್ನು ರಮೋಲಾ ನಿರ್ವಹಿಸುತ್ತಿದ್ದರು. ಈಗ ಅವರು ಧಾರಾವಾಹಿ ತೊರೆದಿದ್ದಾರೆ.

ರಮೋಲಾ ‘ಕನ್ನಡತಿ’ ಧಾರಾವಾಹಿ ತೊರೆದಿದ್ದೇಕೆ? ಸಾನಿಯಾ ಪಾತ್ರ ಮಾಡೋರು ಯಾರು? ಇಲ್ಲಿದೆ ಉತ್ತರ
ರಮೋಲಾ-ಆರೋಹಿ
Updated By: ರಾಜೇಶ್ ದುಗ್ಗುಮನೆ

Updated on: Dec 25, 2021 | 2:53 PM

‘ಕನ್ನಡತಿ’ ಧಾರಾವಾಹಿಯಲ್ಲಿ (Kannadathi Serial) ಖಡಕ್​ ವಿಲನ್​ ಆಗಿ ಕಾಣಿಸಿಕೊಂಡಿದ್ದರು ರಮೋಲಾ (Ramola). ಸಾನಿಯಾ ಹೆಸರಿನ ಪಾತ್ರವನ್ನು ಅವರು ಅದ್ಭುತವಾಗಿ ನಿರ್ವಹಿಸುತ್ತಿದ್ದರು. ಅವರ ಗತ್ತು, ಅವರು ಮಾಡುತ್ತಿದ್ದ ಮಾಸ್ಟರ್​ ಮೈಂಡ್​ ಪ್ಲಾನ್​ಗಳು, ಅವರೇ ಮಾಡಿದ ಪ್ಲಾನ್​ನಿಂದ ಅವರೇ ಪೇಚಿಗೆ ಸಿಲುಕುವುದು ಹೀಗೆ ಅವರ ಪಾತ್ರ ಇಷ್ಟ ಆಗೋಕೆ ಹಲವು ಕಾರಣ ಇತ್ತು. ಆದರೆ, ಈಗ ‘ಕನ್ನಡತಿ’ ಧಾರಾವಾಹಿಯನ್ನು ಅವರು ತೊರೆದಿದ್ದಾರೆ. ಈ ಸೀರಿಯಲ್​ ಮಹತ್ವದ ಘಟ್ಟ ತಲುಪಿರುವಾಗಲೇ ಅವರು ತಂಡವನ್ನು ಬಿಟ್ಟು ಹೋಗಿದ್ದು ವೀಕ್ಷಕರಿಗೆ ಬೇಸರ ತರಿಸಿದೆ.

‘ಕನ್ನಡತಿ’ ಧಾರಾವಾಹಿ ಪ್ರಸಾರ ಪ್ರಾರಂಭಿಸಿ ಕೆಲವು ವರ್ಷ ಕಳೆದಿದೆ. ಈ ಧಾರಾವಾಹಿಯಲ್ಲಿ ಆರಂಭದಿಂದಲೂ ಸಾನಿಯಾ ಪಾತ್ರವನ್ನು ರಮೋಲಾ ನಿರ್ವಹಿಸುತ್ತಿದ್ದರು. ರತ್ನಾಮಾಲಾ ಅವರ ಕುಟುಂಬದ ಸೊಸೆಯಾಗಿ, ಮಾಲಾ ಶಿಕ್ಷಣ ಸಂಸ್ಥೆಯ ಎಂ.ಡಿ. ಆಗಿ ಅವರು ಕಾಣಿಸಿಕೊಂಡಿದ್ದರು. ಈ ಕ್ಯಾರೆಕ್ಟರ್​ ದಿನಕಳೆದಂತೆ ಮಹತ್ವ ಪಡೆದುಕೊಳ್ಳುತ್ತಾ ಸಾಗಿತ್ತು. ಈಗ ರಮೋಲಾ ಧಾರಾವಾಹಿ ತಂಡ ತೊರೆದಿದ್ದಾರೆ.

ರಮೋಲಾ ‘ಕನ್ನಡತಿ’ಯಿಂದ ಹೊರ ನಡೆದಿರುವ ವಿಚಾರ ಅಭಿಮಾನಿಗಳಿಗೆ ಸಾಕಷ್ಟು ಬೇಸರ ತರಿಸಿದೆ. ಅವರ ನಟನೆ ಅನೇಕರಿಗೆ ಇಷ್ಟವಾಗಿತ್ತು. ಅವರು ಪಾತ್ರಕ್ಕೆ ಸಂಪೂರ್ಣ ನ್ಯಾಯ ಒದಗಿಸುತ್ತಿದ್ದರು. ಈಗ ಈ ಸ್ಥಾನವನ್ನು ‘ಹೂ ಮಳೆ’ ಖ್ಯಾತಿಯ ಆರೋಹಿ ನೈನಾ ತುಂಬಿದ್ದಾರೆ. ಬೇರೆ ಭಾಷೆಯಿಂದ ಆಫರ್​ ಬಂದ ಕಾರಣ ಸಾನಿಯಾ ಈ ಧಾರಾವಾಹಿ ತೊರೆದಿದ್ದಾರೆ ಎಂದು ಮೂಲಗಳು ತಿಳಿಸಿವೆ.

‘ಬಿಗ್​ ಬಾಸ್​ ಸೀಸನ್​ 8’ ಪೂರ್ಣಗೊಳ್ಳುತ್ತಿದ್ದಂತೆ ಮಿನಿ ಬಿಗ್​ ಬಾಸ್​ ಆರಂಭವಾಗಿತ್ತು. ಕಲರ್ಸ್​ ಕನ್ನಡ ವಾಹಿನಿ ಸೀರಿಯಲ್​ನಲ್ಲಿ ನಟಿಸುತ್ತಿರುವ ಕಲಾವಿದರು ಬಿಗ್​ ಬಾಸ್​ ಮನೆ ಪ್ರವೇಶ ಮಾಡಿದ್ದರು. ಇದರಲ್ಲಿ ರಮೋಲಾ ಕೂಡ ಇದ್ದರು. ರಮೋಲಾ ತೆರೆಮೇಲೆ ಮಾಡುತ್ತಿರುವ ಪಾತ್ರಕ್ಕೂ ಅವರ ನಿಜ ಜೀವನಕ್ಕೂ ಸ್ವಲ್ಪವೂ ಸಾಮ್ಯತೆ ಇಲ್ಲ ಎಂಬುದು ಬಿಗ್​ ಬಾಸ್​ ಮನೆಗೆ ಬಂದ ನಂತರ ಪ್ರೇಕ್ಷಕರಿಗೆ ಅರ್ಥವಾಗಿತ್ತು.

‘ನಾನು ದೊಡ್ಡ ಕಷ್ಟ ಎಂಬುದನ್ನು ನೋಡಿಲ್ಲ. ಯಾವ ವಿಚಾರದಲ್ಲೂ ಜವಾಬ್ದಾರಿ ಹೊತ್ತುಕೊಳ್ಳುವ ಪರಿಸ್ಥಿತಿ ಬಂದಿಲ್ಲ. ಓದುವ ಹಾಗೂ ಇಷ್ಟದ ಕೆಲಸ ಮಾಡುವ ಅವಕಾಶವನ್ನು ಕುಟುಂಬದವರು ನೀಡಿದ್ದರು. ಹೀಗಾಗಿ ಯಾವುದು ಕೂಡ ಸಮಸ್ಯೆ ಎಂದು ನನಗೆ ಅನಿಸೇ ಇಲ್ಲ’ ಎಂದು ರಮೋಲಾ ಬಿಗ್​ ಬಾಸ್​ ಮನೆಯಲ್ಲಿ ಹೇಳಿಕೊಂಡಿದ್ದರು.

ಇದನ್ನೂ ಓದಿ: ‘ಕನ್ನಡತಿ’ ರಮೋಲಾ ಕೊಟ್ಟ ಖಡಕ್​ ಕೌಂಟರ್​ಗೆ ಸೈಲೆಂಟ್​ ಆದ ನಿರಂಜನ್​

‘ಕನ್ನಡತಿ’ ರಮೋಲಾ ಸೊಂಟ ಬಳುಕಿಸುವ ಪರಿಗೆ ಅಭಿಮಾನಿಗಳು ಫಿದಾ