ಬಿಗ್​ ಬಾಸ್​ ಮನೆಯ ಬೆಡ್​ನಲ್ಲಿ ಮಹಿಳಾ ಸ್ಪರ್ಧಿಗೆ ಕಿಸ್​ ಮಾಡಲು ಬಂದ ನಟ; ಈ ವೇಳೆ ಬಂತು ಖಡಕ್​ ಎಚ್ಚರಿಕೆ

ನಟ ಕರಣ್​ ಕುಂದ್ರಾ ಹಾಗೂ ತೇಜಸ್ವಿ ಪ್ರಕಾಶ್​ ಬಿಗ್​ ಬಾಸ್​ ಮನೆಯಲ್ಲಿದ್ದಾರೆ. ಇಬ್ಬರೂ ಸಾಕಷ್ಟು ವಿಚಾರಕ್ಕೆ ಕಿತ್ತಾಡಿಕೊಳ್ಳುತ್ತಿದ್ದಾರೆ. ಆದರೆ, ಇಬ್ಬರ ನಡುವಣ ಕೆಮೆಸ್ಟ್ರಿ ವೀಕ್ಷಕರಿಗೆ ಹೆಚ್ಚು ಇಷ್ಟವಾಗುತ್ತಿದೆ. ಅ

ಬಿಗ್​ ಬಾಸ್​ ಮನೆಯ ಬೆಡ್​ನಲ್ಲಿ ಮಹಿಳಾ ಸ್ಪರ್ಧಿಗೆ ಕಿಸ್​ ಮಾಡಲು ಬಂದ ನಟ; ಈ ವೇಳೆ ಬಂತು ಖಡಕ್​ ಎಚ್ಚರಿಕೆ
ಕರಣ್​-ತೇಜಸ್ವಿ
Follow us
TV9 Web
| Updated By: ರಾಜೇಶ್ ದುಗ್ಗುಮನೆ

Updated on: Dec 25, 2021 | 4:48 PM

‘ಹಿಂದಿ ಬಿಗ್​ ಬಾಸ್ 15’ನೇ ಸೀಸನ್​ ಶುರುವಾಗಿ ಕೆಲವು ತಿಂಗಳು ಕಳೆದಿದೆ. ಕೊವಿಡ್​ ಹೆಚ್ಚುವ ಆತಂಕ ಎದುರಾಗಿದ್ದು, ಇನ್ನು ಕೆಲವೇ ವಾರಗಳಲ್ಲಿ ಈ ಶೋ ಪೂರ್ಣಗೊಳ್ಳಲಿದೆ ಎನ್ನಲಾಗುತ್ತಿದೆ. ಇನ್ನು, ಬಿಗ್​ ಬಾಸ್​ ಮನೆಯಲ್ಲಿ ನಿತ್ಯ ಹೊಸಹೊಸ ಬೆಳವಣಿಗೆ ನಡೆಯುತ್ತಿದೆ. ದೊಡ್ಮನೆಯಲ್ಲಿ ಪ್ರೇಮ್​ ಕಹಾನಿ, ಜಗಳಗಳು ಹೆಚ್ಚು ಸದ್ದು ಮಾಡುತ್ತಿವೆ. ಈಗ ಬಿಗ್​ ಬಾಸ್​ ಮನೆಯಲ್ಲಿ ನಡೆದ ಘಟನೆ ಹೈಲೈಟ್​ ಆಗುತ್ತಿದೆ.

ನಟ ಕರಣ್​ ಕುಂದ್ರಾ ಹಾಗೂ ತೇಜಸ್ವಿ ಪ್ರಕಾಶ್​ ಬಿಗ್​ ಬಾಸ್​ ಮನೆಯಲ್ಲಿದ್ದಾರೆ. ಇಬ್ಬರೂ ಸಾಕಷ್ಟು ವಿಚಾರಕ್ಕೆ ಕಿತ್ತಾಡಿಕೊಳ್ಳುತ್ತಿದ್ದಾರೆ. ಆದರೆ, ಇಬ್ಬರ ನಡುವಣ ಕೆಮೆಸ್ಟ್ರಿ ವೀಕ್ಷಕರಿಗೆ ಹೆಚ್ಚು ಇಷ್ಟವಾಗುತ್ತಿದೆ. ಅವರಿಬ್ಬರ ಕಿತ್ತಾಟವನ್ನೂ ವೀಕ್ಷಕರು ಇಷ್ಟಪಡುತ್ತಿದ್ದಾರೆ. ಈ ಮಧ್ಯೆ ಕರಣ್​ ಅವರು ತೇಜಸ್ವಿಗೆ ಕಿಸ್​ ಮಾಡೋಕೆ ಮುಂದಾಗಿದ್ದರು. ಆಗ ತೇಜಸ್ವಿ ಕಠಿಣ ಎಚ್ಚರಿಕೆ ಒಂದನ್ನು ನೀಡಿದ್ದಾರೆ.

ಕರಣ್​ ಹಾಗೂ ತೇಜಸ್ವಿ ಇಬ್ಬರೂ ಬೆಡ್​ ಮೇಲೆ ಮಲಗಿದ್ದರು. ಆಗ ತೇಜಸ್ವಿ ಬಳಿಗೆ ಕರಣ್​ ಬಂದಿದ್ದಾರೆ. ಈ ವೇಳೆ ಕ್ಯಾಮೆರಾವನ್ನು ಜೂಮ್​ ಮಾಡಲಾಯಿತು. ಕರಣ್​ ಕಿಸ್​ ಮಾಡೋಕೆ ಬಂದಿದ್ದಾನೆ ಎಂಬುದು ತೇಜಸ್ವಿಗೆ ಗೊತ್ತಾಗಿತ್ತು. ಆಗ ಅವರು ‘ಆ ಬಗ್ಗೆ ಯೋಚನೆಯನ್ನೂ ಮಾಡಬೇಡ’ ಎಂದು ಎಚ್ಚರಿಸಿದ್ದಾರೆ. ರಾಖಿ ಸಾವಂತ್​ ಬೆಡ್​ ಪಕ್ಕದಲ್ಲೇ ಇದ್ದರು. ಅವರು ಬೆಡ್​ನಲ್ಲಿ ಏನಾಗುತ್ತಿದೆ ಎಂಬುದನ್ನು ನೋಡೋಕೆ ಬಂದರು. ಆಗ ಕರಣ್​ ಹೆದರಿದಂತೆ ಕಂಡುಬಂತು.

ಬಿಗ್​ ಬಾಸ್ ಮನೆಯಲ್ಲಿ ಕ್ರಿಸಮಸ್​ ಆಚರಣೆ ಮಾಡಲಾಗುತ್ತಿತ್ತು. ಈ ವೇಳೆ ತೇಜಸ್ವಿ ಹಾಗೂ ಕರಣ್​ ಇಬ್ಬರೂ ಗ್ಲಾಸ್​ ತಡಗೋಡೆಯ ಎರಡು ಕಡೆಗಳಲ್ಲಿ ನಿಂತಿದ್ದರು. ಆಗ ಅವರು ಕಿಸ್​ ಮಾಡಿಕೊಳ್ಳಲು ಪ್ರಯತ್ನಿಸಿದ್ದರು. ಇವರ ಮಧ್ಯದಲ್ಲಿ ಗ್ಲಾಸ್​ ಇತ್ತು. ಈ ವಿಡಿಯೋ ಕೂಡ ಸಾಕಷ್ಟು ವೈರಲ್​ ಆಗಿತ್ತು.

ಜನವರಿ ವೇಳೆಗೆ ‘ಬಿಗ್​ ಬಾಸ್​ 15’ ಪೂರ್ಣಗೊಳ್ಳಲಿದೆ ಎನ್ನಲಾಗುತ್ತಿದೆ. ಈ ಬಾರಿ ಕೊವಿಡ್​ ಭಯ ಕಾಡುತ್ತಿರುವುದರಿಂದ ವಾಹಿನಿಯವರು ಈ ಶೋ ಅನ್ನು ಬಹುಬೇಗ ಪೂರ್ಣಗೊಳಿಸಲು ನಿರ್ಧರಿಸಿದ್ದಾರೆ ಎನ್ನಲಾಗುತ್ತಿದೆ. ಈ ಬಗ್ಗೆ ವಾಹಿನಿ ಕಡೆಯವರಿಂದ ಅಧಿಕೃತ ಮಾಹಿತಿ ಹೊರ ಬರಬೇಕಿದೆ.

ಇದನ್ನೂ ಓದಿ: ಈ ಏಳು ಸ್ಟಾರ್​ ನಟರ ಬಳಿ ಇದೆ ಪ್ರೈವೇಟ್​ ಜೆಟ್​; ಯಾರ್ಯಾರು? ಇಲ್ಲಿದೆ ಮಾಹಿತಿ

Bigg Boss 5 Winner: ‘ಬಿಗ್​ ಬಾಸ್​ ತೆಲುಗು 5’ ವಿನ್ನರ್​ ಯಾರು? ಇಲ್ಲಿದೆ ಮಾಹಿತಿ

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ