ಬಿಗ್ ಬಾಸ್ ಕಾರ್ಯಕ್ರಮಕ್ಕೆ ದೊಡ್ಡ ವೀಕ್ಷಕ ವರ್ಗ ಇದೆ. ‘ಬಿಗ್ ಬಾಸ್ ಕನ್ನಡ’ (Bigg Boss Kannada) ಶೋ ಈಗಾಗಲೇ 10 ಸೀಸನ್ಗಳನ್ನು ಪೂರೈಸಿದೆ. ಅದೇ ರೀತಿ ಬೇರೆ ಬೇರೆ ಭಾಷೆಯಲ್ಲಿ ಕೂಡ ಈ ಕಾರ್ಯಕ್ರಮ ಜನಪ್ರಿಯತೆ ಪಡೆದುಕೊಂಡಿದೆ. ಮರಾಠಿ ಬಿಗ್ ಬಾಸ್ ಈಗ ಹೊಸ ಸೀಸನ್ ಆರಂಭಿಸುತ್ತಿದೆ. ‘ಬಿಗ್ ಬಾಸ್ ಮರಾಠಿ 5’ (Bigg Boss Marathi 5) ಪ್ರಸಾರಕ್ಕೆ ದಿನಗಣನೆ ಆರಂಭ ಆಗಿದೆ. ವಿಶೇಷ ಏನೆಂದರೆ, ಈ ಕಾರ್ಯಕ್ರಮದ ನಿರೂಪಕರ ಬದಲಾವಣೆ ಆಗಿದೆ. ಹೊಸ ನಿರೂಪಕನಾಗಿ ಬಾಲಿವುಡ್ ನಟ ರಿತೇಶ್ ದೇಶಮುಖ್ (Riteish Deshmukh) ಎಂಟ್ರಿ ನೀಡಿದ್ದಾರೆ. ‘ಬಿಗ್ ಬಾಸ್ ಮರಾಠಿ ಸೀಸನ್ 5’ ಹೊಸ ಪ್ರೋಮೋ ಬಿಡುಗಡೆ ಮಾಡಲಾಗಿದೆ.
ಈವರೆಗೂ ಮಹೇಶ್ ಮಂಜ್ರೇಕರ್ ಅವರು ‘ಬಿಗ್ ಬಾಸ್ ಮರಾಠಿ’ ಕಾರ್ಯಕ್ರಮವನ್ನು ನಡೆಸಿಕೊಡುತ್ತಿದ್ದರು. ಆದರೆ ಈಗ ಅವರ ಸ್ಥಾನಕ್ಕೆ ರಿತೇಶ್ ದೇಶಮುಖ್ ಬಂದಿದ್ದಾರೆ. ರಿತೇಶ್ ದೇಶಮುಖ್ ಅವರ ಅಭಿಮಾನಿಗಳಿಗೆ ಈ ಸುದ್ದಿ ಕೇಳಿ ಸಖತ್ ಖುಷಿ ಆಗಿದೆ. ಈ ಬಾರಿ ಬಿಗ್ ಬಾಸ್ ಶೋಗೆ ಹೊಸ ಕಳೆ ಬರಲಿದೆ ಎಂದು ಫ್ಯಾನ್ಸ್ ಕಮೆಂಟ್ ಮಾಡುತ್ತಿದ್ದಾರೆ. ವೀಕ್ಷಕರ ನಿರೀಕ್ಷೆ ಜಾಸ್ತಿ ಆಗಿದೆ.
ಈ ಬಿಗ್ ಬಾಸ್ ಚೆಲುವೆಯ ಅಂದಕ್ಕೆ ಮನ ಸೋಲದವರೇ ಇಲ್ಲ
‘ಕಲರ್ಸ್ ಮರಾಠಿ’ ವಾಹಿನಿಯಲ್ಲಿ ‘ಬಿಗ್ ಬಾಸ್ ಮರಾಠಿ ಸೀಸನ್ 5’ ಪ್ರಸಾರ ಆಗಲಿದೆ. ‘ನಾವು ಮಹೇಶ್ ಮಂಜ್ರೇಕರ್ ಅವರನ್ನು ಮಿಸ್ ಮಾಡಿಕೊಳ್ಳುತ್ತೇನೆ’ ಎಂದು ಕೆಲವರು ಕಮೆಂಟ್ ಮಾಡಿದ್ದಾರೆ. ಜೊತೆಗೆ ರಿತೇಶ್ ದೇಶಮುಖ್ ಅವರಿಗೆ ಸ್ವಾಗತ ಕೋರಿದ್ದಾರೆ. ‘ಇವರಿಗೆ ನಿಜವಾದ ನಿರೂಪಕ ಅನ್ನೋದು’ ಎಂಬ ಕಮೆಂಟ್ ಕೂಡ ಬಂದಿದೆ. ಒಟ್ಟಿನಲ್ಲಿ ಈ ಬಾರಿ ಬಿಗ್ ಬಾಸ್ ಮರಾಠಿ ಹೊಸ ಸೀಸನ್ ಆರಂಭಕ್ಕೂ ಮುನ್ನ ಸದ್ದು ಮಾಡುತ್ತಿದೆ.
ಬಾಲಿವುಡ್ನಲ್ಲಿ ರಿತೇಶ್ ದೇಶಮುಖ್ ಅವರು ಹಲವಾರು ಸೂಪರ್ ಹಿಟ್ ಸಿನಿಮಾಗಳನ್ನು ನೀಡಿದ್ದಾರೆ. ವಿಶೇಷವಾಗಿ ಕಾಮಿಡಿ ಸಿನಿಮಾಗಳನ್ನು ಮಾಡಿ ಜನಮನ ಗೆದ್ದಿದ್ದಾರೆ. ‘ಏಕ್ ವಿಲನ್’ ರೀತಿಯ ಥ್ರಿಲ್ಲರ್ ಸಿನಿಮಾವನ್ನು ಕೂಡ ಅವರು ನೀಡಿದ್ದಾರೆ. ಹಿಂದಿ ಮಾತ್ರವಲ್ಲದೇ ಮರಾಠಿ ಚಿತ್ರರಂಗದ ಜೊತೆಗೆ ಅವರು ವಿಶೇಷ ನಂಟು ಹೊಂದಿದ್ದಾರೆ. ಮರಾಠಿ ಸಿನಿಮಾಗಳನ್ನು ನಿರ್ಮಾಣ ಮಾಡಿದ್ದಾರೆ ಹಾಗೂ ನಟಿಸಿದ್ದಾರೆ ಕೂಡ. ಹಾಗಾಗಿ ಅವರು ಬಿಗ್ ಬಾಸ್ ಮರಾಠಿ ಶೋಗೆ ನಿರೂಪಕನಾಗಿರುವುದು ಅಭಿಮಾನಿಗಳಿಗೆ ಖುಷಿ ನೀಡಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.